Homeಮುಖಪುಟಮೋದಿ ಸರ್ಕಾರದ ಮುಂದಿನ ಸರ್ಜಿಕಲ್ ಸ್ಟ್ರೈಕ್: ಭಾರತೀಯ ರೈಲ್ವೆ ಮಾರಾಟಕ್ಕೆ ಸಿದ್ಧವಾಗಿದೆ!

ಮೋದಿ ಸರ್ಕಾರದ ಮುಂದಿನ ಸರ್ಜಿಕಲ್ ಸ್ಟ್ರೈಕ್: ಭಾರತೀಯ ರೈಲ್ವೆ ಮಾರಾಟಕ್ಕೆ ಸಿದ್ಧವಾಗಿದೆ!

ಭಾರತೀಯ ರೈಲ್ವೆಯು 15 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಅತಿ ಹೆಚ್ಚು ಉದ್ಯೋಗ ನೀಡಿದ ಪ್ರಪಂಚದ 7ನೇ ಉದ್ಯಮವಾಗಿದೆ. ಈಗ ಸರ್ಕಾರದ ಖಾಸಗೀಕರಣದ ನಡೆಯಿಂದಾಗಿ ಅಲ್ಲಿನ ನೌಕರರು ಆತಂಕದ ಸ್ಥಿತಿ ಎದುರಿಸುತ್ತಿದ್ದಾರೆ.

- Advertisement -
- Advertisement -

ಭಾರತೀಯ ರೈಲ್ವೆ ದೇಶದ ಜೀವಸೆಲೆಗಳಲ್ಲಿ ಒಂದಾಗಿದೆ ಎಂದು ಹೇಳುವುದು ಅತಿಶಯೋಕ್ತಿಯಲ್ಲ. ಜನಸಂಖ್ಯೆಯ ಬಹುಪಾಲು ಜನರು ಇನ್ನೂ ತಮ್ಮ ದೈನಂದಿನ ಪ್ರಯಾಣಕ್ಕಾಗಿ ಅದರ ಮೇಲೆ ಅವಲಂಬಿತರಾಗಿದ್ದಾರೆ. ಹೆಚ್ಚಿನ ವಲಸೆ ಕಾರ್ಮಿಕರಿಗೆ ಇದು ತಮ್ಮ ಕುಟುಂಬ ಮತ್ತು ತಾವು ಕೆಲಸ ಮಾಡುವ ದೂರದ ಊರುಗಳೊಂದಿಗೆ ಸಂಪರ್ಕ ಸಾಧಿಸುವ ಏಕೈಕ ಕೈಗೆಟುಕುವ ಸಾಧನವಾಗಿದೆ.

ಇಂತಹ ಮಹತ್ವದ ರೈಲ್ವೆ ಇಲಾಖೆಯನ್ನು ಕೇಂದ್ರ ಸರ್ಕಾರ ನಿರಂತರವಾಗಿ ಮತ್ತು ವ್ಯವಸ್ಥಿತವಾಗಿ ನಿರ್ಲಕ್ಷಿಸಿದೆ. ಜೊತೆಗೆ ರಹಸ್ಯವಾಗಿ ಖಾಸಗೀಕರಣಗೊಳಿಸುತ್ತಿದೆ.

ಪ್ರಯಾಣಿಕರ ರೈಲು ಸೇವೆಗಳ ಕಾರ್ಯಾಚರಣೆಗಾಗಿ ರೈಲ್ವೆ ಸಚಿವಾಲಯವು ಖಾಸಗಿ ಕಂಪನಿಗಳಿಗೆ ಆಹ್ವಾನ ನೀಡುವ ಮೂಲಕ ಖಾಸಗೀಕರಣದತ್ತ ಮೊದಲ ಹೆಜ್ಜೆ ಇಟ್ಟಿದೆ.

ಕನಿಷ್ಠ 151 ಆಧುನಿಕ ರೈಲು‌ಗಳನ್ನು ಪರಿಚಯಿಸಲಾಗುವುದು ಮತ್ತು ಖಾಸಗಿ ರೈಲು ಕಾರ್ಯಾಚರಣೆಗಾಗಿ 109 ಜೋಡಿ ಮಾರ್ಗಗಳನ್ನು ಯೋಜಿಸಲಾಗುವುದು. ಪ್ರತಿ ರೈಲಿನಲ್ಲಿ ಕನಿಷ್ಠ 16 ಬೋಗಿಗಳು ಇರಲಿವೆ ಎಂದು ಭಾರತೀಯ ರೈಲ್ವೆ ಬುಧವಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಈ ಪ್ರಯಾಣಿಕರ ರೈಲುಗಳ ಕಾರ್ಯಾಚರಣೆಯು “ಖಾಸಗಿ ವಲಯದ ಹೂಡಿಕೆಯನ್ನು ಸುಮಾರು 30,000 ಕೋಟಿ ರೂಗೆ ಹೆಚ್ಚಿಸುವ ಯೋಜನೆಯ ಭಾಗವಾಗಿದೆ” ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

“ಭಾರತೀಯ ರೈಲ್ವೆ ಜಾಲದ ಮೂಲಕ ಪ್ರಯಾಣಿಕರ ರೈಲುಗಳನ್ನು ಓಡಿಸಲು ಖಾಸಗಿ ಹೂಡಿಕೆಯ ಮೊದಲ ಕ್ರಮ ಇದಾಗಿದೆ” ಎಂದು ಅದು ಹೇಳಿದೆ.

ಭಾರತೀಯ ರೈಲ್ವೆಯ ಖಾಸಗೀಕರಣದ ಬಗ್ಗೆ ಮೋದಿ ಸರ್ಕಾರ ಕೆಲವು ಸಮಯದಿಂದ ಗಮನ ಹರಿಸುತ್ತಿದೆ. “ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ” ಸೋಗಿನಲ್ಲಿ ಖಾಸಗಿ ಕಂಪನಿಗಳಿಗೆ ಹೊರಗುತ್ತಿಗೆ, ವಾಣಿಜ್ಯ ಮತ್ತು ಆನ್-ಬೋರ್ಡ್ ಸೇವೆಗಳನ್ನು ಪ್ರಾರಂಭಿಸುವ ಮೂಲಕ ಇದು ಈಗಾಗಲೇ 2018 ರಲ್ಲಿ ಖಾಸಗೀಕರಣದ ಬಾಗಿಲುಗಳನ್ನು ತೆರೆದಿದೆ.

“ಭಾರತೀಯ ರೈಲ್ವೆ ಯಾವಾಗಲೂ ಭಾರತದ ಮತ್ತು ಭಾರತದ ಜನರ ಆಸ್ತಿಯಾಗಿ ಮುಂದುವರಿಯುತ್ತದೆ”. ಇದು ರೈಲ್ವೆ ಸಚಿವ ಪಿಯೂಷ್ ಗೋಯಲ್ 2019 ರ ನವೆಂಬರ್‌ನಲ್ಲಿ ಮೇಲ್ಮನೆಯಲ್ಲಿ ಹೇಳಿದ ಮಾತುಗಳು. ಆದರೆ ಅದಕ್ಕೆ ವಿರುದ್ಧವಾಗಿ ಸರ್ಕಾರ ಇಂದು ನಡೆದುಕೊಳ್ಳುತ್ತಿದೆ.

ಭಾರತೀಯ ರೈಲ್ವೆ: ಶ್ರೀಮಂತ ಇತಿಹಾಸ

ಭಾರತೀಯ ರೈಲ್ವೆಯು ಅತಿದೊಡ್ಡ ಸಾರ್ವಜನಿಕ ಉದ್ಯಮವಾಗಿದೆ ಮತ್ತು ದೇಶದ ಅತಿದೊಡ್ಡ ಉದ್ಯೋಗದಾತ ಸಾರ್ವಜನಿಕ ಕ್ಷೇತ್ರವಾಗಿದೆ. ಭಾರತೀಯ ರೈಲ್ವೆ ಪ್ರತಿವರ್ಷ 810 ಕೋಟಿಗೂ ಹೆಚ್ಚು ಪ್ರಯಾಣಿಕರನ್ನು ಸಾಗಿಸುತ್ತದೆ. ಇದರ 67,000 ಕಿಲೋಮೀಟರ್ ಉದ್ದದ ಮಾರ್ಗಗಳು ದೇಶದ ದೂರದ ಭಾಗಗಳನ್ನು ಪರಸ್ಪರ ಸಂಪರ್ಕಿಸುತ್ತವೆ. ಇದು ತಮ್ಮ ಹಳ್ಳಿಗಳು ಮತ್ತು ಕೆಲಸದ ನಗರಗಳ ನಡುವೆ ಕೋಟ್ಯಂತರ ಜನರಿಗೆ ಸಂಪರ್ಕ ಕಲ್ಪಿಸುವ ಏಕೈಕ ಕೈಗೆಟುಕುವ ಮಾರ್ಗವಾಗಿದೆ.

ಭಾರತೀಯ ರೈಲ್ವೆಯು 15 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಅತಿ ಹೆಚ್ಚು ಉದ್ಯೋಗ ನೀಡಿದ ಪ್ರಪಂಚದ 7ನೇ ಉದ್ಯಮವಾಗಿದೆ. ಈಗ ಸರ್ಕಾರದ ಖಾಸಗೀಕರಣದ ನಡೆಯಿಂದಾಗಿ ಅಲ್ಲಿನ ನೌಕರರು ಆತಂಕದ ಸ್ಥಿತಿ ಎದುರಿಸುತ್ತಿದ್ದಾರೆ.

ಮೋದಿ ಸರ್ಕಾರ: ಹೂಡಿಕೆ ಹಿಂತೆಗೆತ

ಮೋದಿ ಸರ್ಕಾರವು ಸ್ಪಷ್ಟವಾಗಿ ಸಾರ್ವಜನಿಕ ಕ್ಷೇತ್ರಗಳಿಂದ ಹೂಡಿಕೆ ಹಿಂತೆಗೆದುಕೊಳ್ಳುತ್ತಿದೆ. ಬಿಎಸ್‌ಎನ್‌ಎಲ್ ಮತ್ತು ಒಎನ್‌ಜಿಸಿ ಸೇರಿದಂತೆ ಹಲವು ಕಂಪನಿಗಳ ವಿಚಾರದಲ್ಲಿ ಇದು ಸ್ಪಷ್ಟವಾಗಿದೆ. ಸದ್ಯದ ಕೋವಿಡ್ ಬಿಕ್ಕಟ್ಟು ಅವರ ಖಾಸಗೀಕರಣದ ಪ್ರಯತ್ನಗಳಿಗೆ ಒದಗಿದ ಸುವರ್ಣಾವಕಾಶವಾಗಿದೆ.

ಭಾರತದಲ್ಲಿ 339 ಸಾರ್ವಜನಿಕ ವಲಯದ ಉದ್ಯಮಗಳಿವೆ. ಅವುಗಳು ಖಾಸಗೀಕರಣಗೊಂಡರೆ ಉತ್ತಮ ಪ್ರದರ್ಶನ ನೀಡುತ್ತವೆ ಎಂಬ ವಾದವನ್ನು ಪ್ರತಿಬಾರಿ ಹೇಳಲಾಗುತ್ತದೆ. ಆದರೆ ಅಂತಹ ಉದಾಹರಣೆಗಳು ಕಾಣಸಿಗುವುದಿಲ್ಲ. ಇದರಿಂದ ಸರ್ಕಾರಕ್ಕೆ ಎಷ್ಟು ನಷ್ಟವಾಗುತ್ತದೆ ಎಂಬುದರ ಬಗ್ಗೆ ಚರ್ಚೆಗಳು ನಡೆಯುವುದಿಲ್ಲ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್) ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (ಐಡಿಬಿಐ), ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ, ಕಂಟೈನರ್ ಕಾರ್ಪೊರೇಷನ್ ಆಫ್ ಇಂಡಿಯಾ, ಟಿಎಚ್‌ಡಿಸಿ ಲಿಮಿಟೆಡ್ ಮತ್ತು ನಾರ್ತ್ ಈಸ್ಟರ್ನ್ ಎಲೆಕ್ಟ್ರಿಕ್ ಪವರ್ ಕಾರ್ಪೊರೇಶನ್ ಲಿಮಿಟೆಡ್‌ ಕಂಪನಿಗಳಲ್ಲಿನ ಸರ್ಕಾರಿ ಪಾಲನ್ನು ಖಾಸಗಿಯವರಿಗೆ ಮಾರಾಟ ಮಾಡುವ ಪ್ರಸ್ತಾಪ ಮಾಡಲಾಗಿದೆ.


ಇದನ್ನೂ ಓದಿ: ಭೂ ಸುಧಾರಣಾ ಕಾನೂನಿನ ತಿದ್ದುಪಡಿ ಮತ್ತು ಅದರ ಪರಿಣಾಮಗಳು – ಡಾ.ಎ.ಆರ್ ವಾಸವಿ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮ: ನೀವು ಭಯಪಡಬೇಕೆ? ವೈದ್ಯರು ಹೇಳುವುದೇನು?

0
ಕೋವಿಡ್ -19 ವಿರುದ್ಧದ 'ಕೋವಿಶೀಲ್ಡ್‌' ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಪರೂಪದ ಅಡ್ಡ ಪರಿಣಾಮದ ಸಾಮರ್ಥ್ಯವನ್ನು ಹೊಂದಿದೆ ಎಂದು ಬ್ರಿಟಿಷ್ ಫಾರ್ಮಾ ದೈತ್ಯ ‘ಅಸ್ಟ್ರಾಜೆನೆಕಾ’  ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಒಪ್ಪಿಕೊಂಡಿದೆ. TTS ಅಥವಾ...