Homeಮುಖಪುಟಸ್ವದೇಶಿ ಆಪ್‌ಗಳನ್ನು ತಯಾರಿಸಲು ಐಟಿ ಮಂದಿ ಸವಾಲು ಸ್ವೀಕರಿಸಿ: ಮೋದಿ

ಸ್ವದೇಶಿ ಆಪ್‌ಗಳನ್ನು ತಯಾರಿಸಲು ಐಟಿ ಮಂದಿ ಸವಾಲು ಸ್ವೀಕರಿಸಿ: ಮೋದಿ

- Advertisement -
- Advertisement -

ಚೀನಾ ಸಂಬಂಧಿತ 59 ಮೊಬೈಲ್ ಆ್ಯಪ್‌ಗಳನ್ನು ಭಾರತ ನಿಷೇಧಿಸಿದ ಕೆಲ ದಿನಗಳ ನಂತರ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಭಾರತದ ಐಟಿ ಕಾರ್ಯಪಡೆಗೆ ಸ್ವದೇಶಿ ಆಪ್‌ಗಳನ್ನು ತಯಾರಿಸಲು ಸವಾಲು ಸ್ವೀಕರಿಸುವಂತೆ ಒತ್ತಾಯಿಸಿದ್ದಾರೆ.

ಆತ್ಮನಿರ್ಭರ ಭಾರತಕ್ಕಾಗಿ ಕೋಡ್ ರಚಿಸಿ ಎಂದು ಕರೆಕೊಟ್ಟಿರುವ ಅವರು, ಆ ರೀತಿ ಆಪ್‌ಗಳನ್ನು ರಚಿಸಲು ನಿಮಗೆ ಮುನ್ನೋಟ ಮತ್ತು ಪರಿಣಿತಿ ಇದ್ದರೆ ಈ ಸವಾಲನ್ನು ಸ್ವೀಕರಿಸಿ ಎಂದು ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಲೆಟ್ ಲೆಸ್ ಕೋಡ್ ಫಾರ್ ಎ ಆಟ್ಮನಿರ್ಭಾರ ಭಾರತ್! ಎಂದು ಬರೆದಿದ್ದಾರೆ.

ನಮ್ಮ ಮಾರುಕಟ್ಟೆಯ ದೊಡ್ಡ ಸಾಮರ್ಥ್ಯವನ್ನು ನಾವೆಲ್ಲರೂ ತಿಳಿದಿದ್ದೇವೆ ಮತ್ತು ಮಾರುಕಟ್ಟೆಯ ಬೇಡಿಕೆಗಳನ್ನು ಪೂರೈಸಲು ದೊಡ್ಡ ಪ್ರಮಾಣದ ಉತ್ಪನ್ನಗಳನ್ನು ತಯಾರಿಸಲು ಮಹತ್ವದನ್ನು ಸಾಧಿಸಬಹುದು. ಇತ್ತೀಚಿನ ದಿನಗಳಲ್ಲಿ, ಸ್ವದೇಶಿ ಅಪ್ಲಿಕೇಶನ್‌ಗಳನ್ನು ನವೀನಗೊಳಿಸಲು, ಅಭಿವೃದ್ಧಿಪಡಿಸಲು ಮತ್ತು ಉತ್ತೇಜಿಸಲು ಸ್ಟಾರ್ಟ್ ಅಪ್ ಮತ್ತು ಟೆಕ್ ಪರಿಸರ ವ್ಯವಸ್ಥೆಯಲ್ಲಿ ನಾವು ಹೆಚ್ಚಿನ ಆಸಕ್ತಿ ಮತ್ತು ಉತ್ಸಾಹವನ್ನು ನೋಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಇಂದು, ಇಡೀ ರಾಷ್ಟ್ರವು ಆತ್ಮನಿರ್ಭರ ಭಾರತ್ ರಚಿಸುವತ್ತ ಕೆಲಸ ಮಾಡುತ್ತಿರುವಾಗ, ಅವರ ಕಠಿಣ ಪರಿಶ್ರಮಕ್ಕೆ ವೇಗ ನೀಡಲು ಮತ್ತು ಅವರ ಪ್ರಯತ್ನಗಳಿಗೆ ನಿರ್ದೇಶನ ನೀಡಲು ಭಾರತವು ಮುಂದಾಗಬೇಕು. ನಮ್ಮ ಮಾರುಕಟ್ಟೆಯನ್ನು ತೃಪ್ತಿಪಡಿಸುವ ಮತ್ತು ಪ್ರಪಂಚದೊಂದಿಗೆ ಸ್ಪರ್ಧಿಸುವಂತಹ ಅಪ್ಲಿಕೇಶನ್‌ಗಳನ್ನು ವಿಕಸಿಸಲು ಅವರ ಪ್ರತಿಭೆಗೆ ಮಾರ್ಗದರ್ಶನ ನೀಡಲು ಇದು ಒಂದು ಉತ್ತಮ ಅವಕಾಶವಾಗಿದೆ ಎಂದು ಮೋದಿ ಹೇಳಿದ್ದಾರೆ.

“ಇ-ಲರ್ನಿಂಗ್, ವರ್ಕ್-ಫ್ರಮ್ ಹೋಮ್, ಗೇಮಿಂಗ್, ಬ್ಯುಸಿನೆಸ್, ಎಂಟರ್‌ಟೈನ್‌ಮೆಂಟ್, ಆಫೀಸ್ ಯುಟಿಲಿಟಿಸ್, ಮತ್ತು ಸೋಷಿಯಲ್ ನೆಟ್‌ವರ್ಕಿಂಗ್ ವಿಭಾಗಗಳಲ್ಲಿ ಅಸ್ತಿತ್ವದಲ್ಲಿರುವ ಅಪ್ಲಿಕೇಶನ್‌ಗಳು ಮತ್ತು ಪ್ಲ್ಯಾಟ್‌ಫಾರ್ಮ್‌ಗಳ ಪ್ರಚಾರಕ್ಕಾಗಿ, ಸರ್ಕಾರವು ಮಾರ್ಗದರ್ಶನ ಮತ್ತು ಬೆಂಬಲವನ್ನು ಒದಗಿಸುತ್ತದೆ ಎಂದಿದ್ದಾರೆ.


ಪವನ್ ಖೇರಾ: ಟಿವಿಯಲ್ಲಿ ಮಿಂಚುತ್ತಿರುವ ಹೊಸ ಶೈಲಿಯ ಆಕ್ರಮಣಶೀಲ ಕಾಂಗ್ರೆಸಿಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ನ್ನು ಚುನಾವಣೆಗೆ ಮುನ್ನ ಬಂಧಿಸಿದ್ದು ಏಕೆ? EDಗೆ ಉತ್ತರಿಸುವಂತೆ ಸೂಚಿಸಿದ ಸುಪ್ರೀಂ ಕೋರ್ಟ್‌

0
ಸಾರ್ವತ್ರಿಕ ಚುನಾವಣೆಗೆ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವಂತೆ ಸುಪ್ರೀಂಕೋರ್ಟ್ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದ್ದು, ಅರವಿಂದ್ ಕೇಜ್ರಿವಾಲ್ ಅವರನ್ನು ಚುನಾವಣೆಗೂ ಮುನ್ನ ಬಂಧಿಸಿದ್ದು ಏಕೆ? ಎಂದು...