ಕೆಲವು ದಿನಗಳಿಂದ ಕರ್ನಾಟಕದಲ್ಲಿ ಕೊರೊನಾ ಸಂಬಂಧಿತ ವೈದ್ಯಕೀಯ ಸಾಮಗ್ರಿಗಳ ಖರೀದಿ ವಿಚಾರದಲ್ಲಿ ಹಗರಣ ನಡೆದಿದೆ ಎಂಬ ದೊಡ್ಡ ಆರೋಪ ಭುಗಿಲೆದ್ದಿದೆ. 2200 ಕೋಟಿ ಅವ್ಯವಹಾರ ನಡೆದಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಆರೋಪಿಸಿದ್ದಾರೆ. ಈ ಕುರಿತು ಇದೀಗ #CovidScamKarnataka ಎಂಬ ಹ್ಯಾಸ್‌ಟ್ಯಾಗ್ ಟ್ರೆಂಡಿಂಗ್ ಆಗಿದೆ.
ಕರ್ನಾಟಕ ಮತ್ತು ಬೆಂಗಳೂರಿನಲ್ಲಿ ಹಲವು ಗಂಟೆಗಳ ಕಾಲ ನಂಬರ್ 1 ಸ್ಥಾನದಲ್ಲಿದ್ದು, ಭಾರತದಲ್ಲಿ 15ನೇ ಸ್ಥಾನ ಪಡೆದುಕೊಂಡಿದೆ.

ಕಳೆದ ವಾರ ಸಿದ್ಧರಾಮಯ್ಯನವರು ಅಂಕಿಅಂಶಗಳ ಸಮೇತ ಈ ಹಗರಣವನ್ನು ಬಹಿರಂಗಪಡಿಸಿದ್ದರು. ಅದರ ಮುಂದುವರಿದ ಭಾಗವಾಗಿ ನೆಟ್ಟಿಗರು ಈ ಅಭಿಯಾನವನ್ನು ಆರಂಭಿಸಿದ್ದಾರೆ.
ನಾವು ನಮ್ಮ ಜೀವವನ್ನು ಸರ್ಕಾರದ ಕೈಯಲ್ಲಿಟ್ಟೇವೆ. ಆದರೆ ಅವರು ನಮ್ಮ ನಂಬಿಕೆಯನ್ನೂ ಲೂಟಿ ಮಾಡಿದ್ದಾರೆ. ಕರ್ನಾಟಕದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆದಿದ್ದು 2008-13 ರ ಅವಧಿಯಲ್ಲಿ. ಆಗ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿತ್ತು. ಈಗಲೂ ಇರುವುದು ಅವರ ಆಡಳಿತವೇ. ಹಾಗಾಗಿ ಮತ್ತೆ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಶಾದ್ ಬಾಜಪೈ ಎಂಬುವವರು ಕಿಡಿಕಾರಿದ್ದಾರೆ.
We entrusted our lives in the hands of rulers, here rulers themselves are about to loot our trust. Karnataka has seen its worst corruption during 2008-13 term, then it was BJP ruling, now once again corruption has started to rise. @BJP4Karnataka is curse#CovidScamKarnataka pic.twitter.com/uy08TdOG2k
— Undefeated_Faith (@Shaad_Bajpe) July 8, 2020
ಕರ್ನಾಟಕದ ಲಕ್ಷಾಂತರ ಜನರ ಬೊಕ್ಕಸದ ಹಣವನ್ನು ಲೂಟಿ ಮಾಡುವುದಕ್ಕೆ ಕೊರೊನಾ ಒಳ್ಳೇಯ ಅವಕಾಶ ನೀಡಿದೆ. ರಾಜ್ಯಪಾಲರು ಸಾರ್ವಜನಿಕ ಹಣವನ್ನು ನುಂಗಿದವರ ವಿರುದ್ಧ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಟ್ರೆಂಡ್ ಸೆಟ್ಟರ್ಸ್ ಇಂಡಿಯ ಒತ್ತಾಯಿಸಿದೆ.
#Cove19 gave Karnataka government and administration a good opportunity to loot the money of tens of millions of people of Karnataka. Immediately Governor of Karnataka should take stern action against the government's arbitrariness and wasteful spending. #CovidScamKarnataka pic.twitter.com/h5hIRmUOlc
— Trend Setters India (@MediaTSI) July 8, 2020
ಜನರು ಆತಂಕದಲ್ಲಿದ್ದಾರೆ. ಸರ್ಕಾರ ಲೂಟಿಯಲ್ಲಿ ನಿರತವಾಗಿದೆ. ಹಣ ಮಾಡುವುದಕ್ಕೆ ನೂರಾರು ವಿಧಾನಗಳಿವೆ. ಆದರೆ ಪರಿಹಾರ ಹಣದಲ್ಲಿ ಲೂಟಿ ಹೊಡೆಯಬಾರದು ಎಂದು ಎಸ್‌ಡಿಪಿಐನ ಮೊಹಮ್ಮದ್ ನಾಸಿರ್ ಟ್ವೀಟ್ ಮಾಡಿದ್ದಾರೆ.
People Panic in COVID,
While
State BJP Govt.Loot the PUBLIC#CovidScamKarnataka pic.twitter.com/9esPNyRmz6— Mohammad Naseer (@MohdNaseerPfi) July 8, 2020
The government till now has made purchases worth more than Rs 3,000 crore & it looks like nearly Rs 2,200 crore might be involved in misappropriation.
The world is going through a period of crisis & the Karnataka State Govt. is busy in looting Peoples Money.#CovidScamKarnataka pic.twitter.com/aNRSNZvjYj
— Faizal Peraje ?? (@faizal_peraje) July 8, 2020
ಆದರೆ ಈ ಆರೋಪಗಳನ್ನೆಲ್ಲಾ ತಳ್ಳಿಹಾಕಿರುವ ರಾಜ್ಯ ಸರ್ಕಾರ, ಯಾವುದೇ ಹಗರಣ ನಡೆದಿಲ್ಲ ಎಂದು ಹೇಳಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಕೊರೊನಾ ವೆಚ್ಚಕ್ಕೆ ಸಂಬಂಧಿಸಿದಂತೆ ಯಾವುದೇ ವಿವರಗಳನ್ನು ಬೇಕಾದರೂ ಪಡೆದುಕೊಳ್ಳಬಹುದು. ಇದು ಪಾರದರ್ಶಕವಾಗಿರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : CAG ಗಿಲ್ಲ PM CARES ಆಡಿಟ್ : ಪಿಎಂ ಕೇರ್ಸ್ ಸುತ್ತಾ ಹಗರಣಗಳ ಹುತ್ತ


