Homeಸಾಮಾಜಿಕತೆರೆಮರೆ: ದೇಶಾಂಶ ಹುಡಗಿ

ತೆರೆಮರೆ: ದೇಶಾಂಶ ಹುಡಗಿ

- Advertisement -
- Advertisement -

ಭೀಮಾಶಂಕರ ಬಿರಾದಾರ |

15 ವರ್ಷಗಳ ಅವಿರತ ಶ್ರಮ ಮತ್ತು ಶ್ರದ್ಧೆಯಿಂದ ಕುರಿತು ದೇಶಾಂಶ ಹುಡಗಿಯವರು ರೂಪಿಸಿದ ‘ಬೀದರ ಕನ್ನಡ ಕೋಶ’ ಕೃತಿಯು ಸಾಂಸ್ಕೃತಿಕ, ಸಾಹಿತ್ಯ ಮತ್ತು ಭಾಷಾ ಲೋಕಕ್ಕೆ ನೀಡಿದ ಮಹತ್ವದ ಕೊಡುಗೆ.

ಕರ್ನಾಟಕದ ತುತ್ತ ತುದಿಯಲ್ಲಿ ಇರುವ ಬೀದರ್ ಹಲವು ಭಾಷೆಗಳ ಆಡುಂಬೊಲ. ವಿವಿಧ ಭಾಷೆಗಳ ಪರಸ್ಪರ ಮುಖಾಮುಖಿ, ಅನುಸಂಧಾನ, ಕೊಡುಕೊಳುವಿಕೆಯಿಂದ ಹೊಸ ಮತ್ತು ವಿಭಿನ್ನ ಭಾಷೆ-ಪದಗಳು ರೂಪುಗೊಂಡಿವೆ. ಜೊತೆಗೆ ಹಳೆಗನ್ನಡದ ಅಚ್ಚದೇಸಿ ಪದಗಳು ಕೂಡ ಇಂದಿಗೂ ಬಳಕೆಯಲ್ಲಿವೆ. ಅವುಗಳನ್ನು ಹುಡುಕಿ ತಂದು ಒಂದೆಡೆ ಸೇರಿಸಿ ನಿಘಂಟು ರಚಿಸುವ ಅನನ್ಯ ಕೆಲಸವನ್ನು ದೇಶಾಂಶ ಹುಡಗಿ ಅವರು ಮಾಡಿದ್ದಾರೆ.

ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆ ಮತ್ತು ಬದಲಾವಣೆಗಳು ಅನ್ಯ ಭಾಷೆ ಮತ್ತು ಸಾಹಿತ್ಯದ ಜತೆಗಿನ ಒಡನಾಟದೊಂದಿಗೆ ನಡೆದಿದೆ. ಒಂದು ಕಾಲಕ್ಕೆ ಸಂಸ್ಕೃತದೊಂದಿಗೆ ಮುಖಾಮುಖಿಯಾದ ಕನ್ನಡವು ಅನಂತರದಲ್ಲಿ ಅನುಸಂಧಾನ ಮತ್ತು ಆಪ್ತತೆಗಳಿಂದ ಹೊಸ ತಿಳಿವಳಿಕೆ ಪಡೆಯುತ್ತ, ತನ್ನ ಅಸ್ತಿತ್ವ ಮತ್ತು ಅಸ್ಮಿತೆಯನ್ನು ಕಾಯ್ದುಕೊಂಡಿದೆ. ಕವಿರಾಜಮಾರ್ಗಕಾರನ ಪರಿಕಲ್ಪನೆಯ ಹಲವು ಕನ್ನಡಗಳು ಇಲ್ಲಿವೆ. ಅದರಲ್ಲಿ ಬೀದರ ಕನ್ನಡವೂ ಒಂದು. ಹಿಂದಿ, ಉರ್ದು, ತೆಲಗು, ಮರಾಠಿ, ಪರ್ಷಿಯನ್, ಇಂಗ್ಲಿಷ್, ಅರೆಬಿಕ್, ಮೊದಲಾದ ಭಾಷೆಗಳ ಸಂಪರ್ಕದಿಂದ ಬೀದರ ಕನ್ನಡ ಪದ ರಚನೆಯಲ್ಲಿ ಅವೆಲ್ಲವು ಬೆರೆತುಹೋಗಿವೆ. ತೆಲಂಗಾಣಾ, ಮಹಾರಾಷ್ಟ್ರ, ಕನ್ನಡದ ಸೀಮಾಂತ ಜಿಲ್ಲೆಯಾದ ಬೀದರನ ಕನ್ನಡದಲ್ಲಿ ಅನ್ಯ ಭಾಷೆಯ ಅನೇಕ ಪದಗಳನ್ನು ಕನ್ನಡೀಕರಿಸುವ ಶಕ್ತಿ ಪಡೆದಿದೆ. ಸಂಸ್ಕೃತದಿಂದ ಕನ್ನಡಿಕರಣಗೊಂಡು ತದ್ಭವವಾಗುವಂಥ ಗುಣ ಈ ಭಾಷೆಗೆ ಇದೆ.

ಇಂಥ ಭಾಷೆಯ ಮೂಡಿಬಂದ ಈ ಕೋಶ ಬೀದರ ಕನ್ನಡದಲ್ಲಿ ಉಳಿದುಕೊಂಡ ಹಳೆಗನ್ನಡ, ನಡುಗನ್ನಡ, ಹೊಸಗನ್ನಡದ ಅಸಂಖ್ಯ ಪದಗಳನ್ನ ಪೋಷಿಸಿ ಅವನ್ನು ಅರ್ಥದ ಆವರಣಕ್ಕೆ ತಂದು ನಿಲ್ಲಿಸಿದ್ದು ವಿಶೇಷವಾಗಿದೆ.

ಕಾಲದಿಂದ ಕಾಲಕ್ಕೆ ಭಾಷೆಯ ಬಳಕೆ ಭಿನ್ನವಾಗುತ್ತಿರುತ್ತದೆ. ಈ ಸಂದರ್ಭದಲ್ಲಿ ಈ ನೆಲದ ಭಾಷೆಯ ರಚನೆ, ಅದರ ಸ್ವರೂಪ, ಈ ಬಳಕೆಯಾಗುವ ಪ್ರತ್ಯಯಗಳು, ಭಾಷಾ ಪ್ರಯೋಗದ ಬಗೆಗಳು, ಅವುಗಳ ಅರ್ಥಗ್ರಹಿಕೆ ಇವೆಲ್ಲವುದರ ಕುರಿತು ಭಾಷಾ ಅಧ್ಯಯನಕ್ಕೆ ಹೊಸ ಮಾರ್ಗವೊಂದನ್ನು ಸೃಷ್ಟಿಸಬಲ್ಲ ಕೋಶವನ್ನು ಹುಡಗಿಯವರು ಕಟ್ಟಿಕೊಟ್ಟಿದ್ದಾರೆ. ಸ್ಥಳೀಯ ಭಾಷೆ, ಸಂಪ್ರದಾಯ, ಸಂಸ್ಕೃತಿ, ಜನಪದ, ದೇವರು, ದೆವ್ವ, ನಂಬಿಕೆ, ಆಚರಣೆ, ಗಾದೆ, ಬೈಗಳು ಎಲ್ಲವು ಈ ಕೋಶದ ವ್ಯಪ್ತಿಗೆ ಸೇರಿವೆ.

1936 ನವೆಂಬರ್ 06ರಂದು ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಹುಡಗಿಯಲ್ಲಿ ಜನಿಸಿದ ಶಾಂತಪ್ಪ ದೇವರಾಯ ಅವರು ‘ದೇಶಾಂಶ ಹುಡಗಿ’ ಎಂದೇ ಸಾಹಿತ್ಯ ಲೋಕದಲ್ಲಿ ಪ್ರಖ್ಯಾತರು. ತಂದೆ ಶರಣಪ್ಪ. ತಾಯಿ ಭೀಮಾಬಾಯಿ. ಕೃಷಿ ಹಿನ್ನಲೆಯ ಕುಟುಂಬದವರು. 1952ರಿಂದ ಕವಿತೆಗಳು ಬರೆಯುತ್ತಿರುವ ಹುಡಗಿಯವರು 1980ರಲ್ಲಿ ‘ಗ್ರಾಮಶಿಲ್ಪಿಗಳು’ ಕೃತಿಯನ್ನು ಮೊದಲಿಗೆ ಪ್ರಕಟಿಸಿದರು. ಕನ್ನಡದ ಜೊತೆಗೆ ಹಿಂದಿ, ಮರಾಠಿ, ಉರ್ದು, ಇಂಗ್ಲೀಷ ಮೊದಲಾದ ಬಹುಭಾಷೆಗಳಲ್ಲಿ ಪ್ರಾವಿಣ್ಯ ಹೊಂದಿದ ದೇಶಾಂಶ ಹುಡಗಿಯವರು ಕವಿ, ಕತೆಗಾರ, ಸಂಪಾದಕ, ಚರಿತ್ರೆಕಾರ, ನಿಘಂಟುತಜ್ಞ, ಅನುವಾದಕ, ಸಂಘಟಕರಾಗಿ ಸಾಹಿತ್ಯ ಜಗತ್ತಿನಲ್ಲಿ ಮಹತ್ವ ಪಡೆದಿದ್ದಾರೆ.

‘ಬದುಕಿನ ಸುತ್ತ’ (1988),’ಅಕ್ಷರಜ್ಯೋತಿ’ (1992), ಕವನ ಸಂಕಲನಗಳನ್ನು ಬರೆದ ಇವರು, ವ್ಯಕ್ತಿ ಮತ್ತು ವ್ಯಕ್ತಿತ್ವದ ಕನ್ನಡಿಯಾಗಿ ‘ಬೀದರ ಜಿಲ್ಲೆಯ ಬರಹಗಾರರು’, ‘ಬೀದರ ಜಿಲ್ಲೆಯಲ್ಲಿ ಕನ್ನಡ ಕಟ್ಟಿದವರು’, ‘ಗ್ರಾಮಶಿಲ್ಪಿಗಳು’ ಕೃತಿಗಳನ್ನು ಬರೆದಿದ್ದಾರೆ. ಸಾವಿರ ರುಬಾಯಿಗಳ ಸಂಗ್ರಹ ‘ಪ್ರಚಲಿತ’, ‘ಬಚ್ಚನ್ನನ ಮಧುಶಾಲಾ’ (ಹರಿವಂಶರಾಯ್ ಬಚ್ಚನ್), ‘ಆಧ್ಯಾತ್ಮವಾದಿ ವಿಶ್ವವಿಭೂತಿ ಮಹಾತ್ಮ ಬಸವೇಶ್ವರರು’ (ಡಾ.ಭಗವಾನದಾಸ ತಿವಾರಿ) ಅನುವಾದಿತ ಶ್ರೀ ಚನ್ನಬಸವ ಚರಿತ್ರೆ (2014 ಮಹಾಕಾವ್ಯ) ಕೃತಿಗಳಾಗಿವೆ.

ಬಿ.ಎ, ಬಿ.ಇಡಿ. ಪದವೀಧರರಾದ ಶಾಂತಪ್ಪನವರು ಪ್ರೌಢಶಾಲಾ ಶಿಕ್ಷಕರಾಗಿ, ಸಾಕ್ಷರತಾ ಶಿಕ್ಷಣ ಯೋಜನಾಧಿಕಾರಿಯಾಗಿ, ಶಾಲಾ ತನಿಖಾಧಿಕಾರಿಯಾಗಿ 40 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ರಂಗಭೂಮಿಯ ನಂಟಿನಿಂದ 25 ನಾಟಕಗಳಲ್ಲಿ ಅಭಿನಯಿಸಿದ್ದು, 20 ನಾಟಕಗಳನ್ನು ನಿರ್ದೇಶಿಸಿದ್ದಾರೆ. 1999ರಲ್ಲಿ ಧರಿನಾಡು ಕನ್ನಡ ಸಂಘ ಹುಟ್ಟು ಹಾಕಿ, ಹೊಸ ಪೀಳಿಗೆಯ ಕನ್ನಡ ಓದುಗ ಮತ್ತು ಬರಹಗಾರರನ್ನು ಬೆಳೆಸಿ ಪ್ರೋತ್ಸಾಹಿಸುತ್ತಿದ್ದಾರೆ. ಧರಿನಾಡು ಕನ್ನಡ ಸಂಘದ ಅಡಿಯಲ್ಲಿ ಪುಸ್ತಕ ಪ್ರಕಟಣೆ, ಕವಿಗೋಷ್ಠಿ, ವಿಚಾರ ಸಂಕಿರಣ, ಗಡಿನಾಡು ಕನ್ನಡ ಸಾಹಿತ್ಯ ಸಮ್ಮೇಳನಗಳು ನಿರಂತರವಾಗಿ ಮಾಡುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಿದ ‘ಕೆ.ಜಿ.ಕುಂದಣಗಾರ ಗಡಿಕನ್ನಡ ಸಾಹಿತ್ಯ ಪ್ರಶಸ್ತಿ’, ಕನಾಟಕ ಜಾನಪದ ಅಕಾಡೆಮಿಯಿಂದ ಜಾನಪದತಜ್ಞ (2012), ಪಿ.ಎಚ್. ಜವರಪ್ಪ ಸಮಾಜಮುಖಿ ಪ್ರಶಸ್ತಿ, ಕಾಯಕ ಸಮ್ಮಾನ ಪ್ರಶಸ್ತಿ ಸೇರಿ ಅನೇಕ ಪುರಸ್ಕಾರಗಳು ದೇಶಾಂಶರ ಸಾಹಿತ್ಯ ಸೇವೆಗೆ ಸಂದಿವೆ.

ದೇಶಾಂಶರ ಬಹುಮುಖ ಪ್ರತಿಭೆ, ಕ್ರಿಯಾಶೀಲ ವ್ಯಕ್ತಿತ್ವ, ಸೃಜನ ಮತ್ತು ಸೃಜನೇತರ ಸಾಹಿತ್ಯವು ಕನ್ನಡದ ಒಂದುತಲೆಮಾರಿನ ಓದುಗರಲ್ಲಿ ಗ್ರಾಮ್ಯಪ್ರಜ್ಞೆ ಮತ್ತು ಲೋಕಪ್ರಜ್ಞೆಯನ್ನು ಮೂಡಿಸಿ, ಸಾಂಸ್ಕೃತಿಕ ಪರಕೀಯತೆಯನ್ನು ಹೋಗಲಾಡಿಸಿ, ದೇಶಿಯತೆ ಹಾಗೂ ಸ್ಥಳೀಯತೆಯ ಸಂಗಡ ನಿಕಟ ಸಂಬಂಧವೊಂದನ್ನು ಬೆಳೆಸಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...