ಕೊರೊನಾ ವೈರಸ್ ದಾಳಿಗೆ ಇಡೀ ದೇಶವೆ ನಲುಗುತ್ತಿದೆ. ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಕರ್ನಾಟಕ ಸೇರಿ ಹಲವು ರಾಜ್ಯಗಳು ಅತಿ ಹೆಚ್ಚಿನ ಪ್ರಕರಣಗಳನ್ನು ದಾಖಲಿಸಿ ತತ್ತರಿಸುತ್ತಿವೆ. ಆದರೆ ಭಾರತದ ಕೆಲ ರಾಜ್ಯಗಳು ಕೊರೊನಾದಿಂದ ಒಂದು ಸಾವು ದಾಖಲಿಸಿದೆ ಅಚ್ಚರಿ ಹುಟ್ಟಿಸಿವೆ. ಬಹುತೇಕ ರಾಜ್ಯಗಳು ಈಶಾನ್ಯ ಭಾರತಕ್ಕೆ ಸೇರಿದ್ದು, ಅವುಗಳ ಕಿರುಪರಿಚಯ ಇಲ್ಲಿದೆ.
ಮಣಿಪುರ
1911 ಕೊರೊನಾ ಸೋಂಕು ಪ್ರಕರಣಗಳು ಇದುವರೆಗೂ ವರದಿಯಾಗಿವೆ. 1213 ಜನರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 698 ಜನ ಇನ್ನು ಚಿಕಿತ್ಸೆ ಪಡೆಯುತ್ತಾರೆ. ಯಾವುದೇ ಸಾವುಗಳು ದಾಖಲಾಗಿಲ್ಲ.
ಸಿಕ್ಕಿಂ
ಭಾರತದ ಈಶಾನ್ಯ ರಾಜ್ಯವಾದ ಸಿಕ್ಕಿಂನಲ್ಲಿ ಇದುವರೆಗೂ 283 ಪ್ರಕರಣಗಳು ದಾಖಲಾಗಿವೆ. 92 ಜನರು ಗುಣಮುಖರಾಗಿದ್ದರೆ 191 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯವು ಶೂನ್ಯ ಸಾವುಗಳನ್ನು ದಾಖಲಿಸಿದೆ.
ಮಿಜೋರಾಂ
ಇಲ್ಲಿಯೂ ಸಹ ಯಾವುದೇ ಸಾವುಗಳು ವರದಿಯಾಗಿಲ್ಲ. ಒಟ್ಟು 284 ಪ್ರಕರಣಗಳು ವರದಿಯಾಗಿದ್ದು 167 ಜನ ಗುಣಮುಖರಾದರೆ 117 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಾಗಾಲ್ಯಾಂಡ್
988 ಪ್ರಕರಣಗಳನ್ನು ದಾಖಲಿಸಿರುವ ಇಲ್ಲಿ, 543 ಸಕ್ರಿಯ ಪ್ರಕರಣಗಳಿವೆ. 445 ಜನ ಗುಣಮುಖರಾಗಿದ್ದಾರೆ. ಇಲ್ಲಿಯೂ ಸಾವಿನ ವರದಿಯಿಲ್ಲ.
ಅಂಡಮಾನ್ ಮತ್ತು ನಿಕೋಬಾರ್
ಕೇಂದ್ರಾಡಳಿತ ಪ್ರದೇಶವಾದ ಇಲ್ಲಿ ಇದುವರೆಗೂ 203 ಪ್ರಕರಣಗಳು ವರದಿಯಾಗಿವೆ. 145 ಜನರು ಗುಣಮುಖರಾಗಿದ್ದು, 58 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಡಿಮೆ ಸಾವು ದಾಖಲಿಸಿದ ರಾಜ್ಯಗಳು
ಮೇಘಾಲಯ – 02
ದಾದ್ರ ಮತ್ತು ನಗರ ಹವೇಲಿ – 02
ಲಡಾಖ್ – 03
ಅರುಣಾಚಲ ಪ್ರದೇಶ – 03
ತ್ರಿಪುರ – 05
ಹಿಮಾಚಲ ಪ್ರದೇಶ – 11
ಚಂಡೀಘಡ – 12
ಗೋವಾ – 22
ಚತ್ತೀಸ್‌ಘಡ – 24
ಪಾಂಡಿಚೇರಿ – 28
ಕೇರಳ – 42
ಜಾರ್ಖಂಡ್ – 49
ಉತ್ತರಖಂಡ – 52
ಅಸ್ಸಾಂ – 57
ಓಡಿಸ್ಸಾ – 91
ಇದನ್ನೂ ಓದಿ: ಬಿಹಾರ: ಪ್ರವಾಹ ಪೀಡಿತರಾದ ರಾಜ್ಯದ 8 ಜಿಲ್ಲೆಗಳ 3 ಲಕ್ಷ ಜನರು.


