Homeಕರ್ನಾಟಕಕಾರವಾರ: ಕಿಮ್ಸ್‌ನಲ್ಲಿ ವಿಡಿಯೋ-ಆಡಿಯೋ ಗುದುಮುರಿಗೆ!!

ಕಾರವಾರ: ಕಿಮ್ಸ್‌ನಲ್ಲಿ ವಿಡಿಯೋ-ಆಡಿಯೋ ಗುದುಮುರಿಗೆ!!

- Advertisement -
- Advertisement -

ಕಾರವಾರದ ಮೆಡಿಕಲ್ ಕಾಲೇಜು ಉರುಫ್ ಕಿಮ್ಸ್ ಗಲೀಜು-ಗಲಾಟೆ-ಗುಳುಂಗಳಿಂದ ಗಬ್ಬೆದ್ದು ನಾರುತ್ತಿದೆ. ಈ ಕಿಮ್ಸ್ ಶುರುವಾದಾಗಿಂದಲೂ ಅಲ್ಲಿ ಆಡಳಿತದಲ್ಲಿ ‘ಕಾರವಾರ ರಿಪಬ್ಲಿಕ್’ ಕಿಂಗ್‍ಗಳು ಕೈಯಾಡಿಸುತ್ತಲೇ ಬಂದಿದ್ದಾರೆ. ಆರಂಭದಲ್ಲಿ ತಮ್ಮೊಂದಿಗೆ ಹೊಂದಿಕೊಂಡಿದ್ದ, ನಂತರ ಸೆಟೆದು ನಿಂತಿದ್ದ ಡೀನ್ ಕಮ್ ಡೈರೆಕ್ಟರ್ ಡಾ| ದೊಡ್ಮನಿಯನ್ನು ಎತ್ತಗಂಡಿ ಮಾಡಿಸಿ ಅನರ್ಹ ಡಾ| ಗಜಾನನ ನಾಯಕ್‍ನನ್ನು ಇದೇ ಕಾರವಾರ್ ರಿಪಬ್ಲಿಕ್ ಪ್ರತಿಷ್ಠಾಪಿಸಿಕೊಂಡಿತ್ತು. ಆತನಿಂದ ಜಿಲ್ಲಾ ಆಸ್ಪತ್ರೆ ನಂದನವನವಾಗುತ್ತದೆ; ರೋಗಿಗಳಿಗೆ ತೊಂದರೆ-ಕೊರತೆಯೆಂಬುದೇ ಆಗುವುದಿಲ್ಲ ಎಂಬಂತೆ ರಿಪಬ್ಲಿಕ್ ಮಾಫಿಯಾ ಬಿಂಬಿಸಿತ್ತು. ಆದರೆ ಎಂದೂ ಕ್ಲಿನಿಕಲ್ ಪ್ರಾಕ್ಟೀಸ್ ಮಾಡದ ಡಾ| ಗಜಾನನ ವಕ್ಕರಿಸಿದ್ದೇ ತಡ, ಕಿಮ್ಸ್‍ನಲ್ಲಿ ಸರಣಿ ಅವಾಂತರ-ಅನಾಹುತ-ಆಧ್ವಾನ ಆಗಹತ್ತಿದೆ……..

ಕಿಮ್ಸ್‍ನ ಕೋವಿಡ್-19 ವಾರ್ಡ್‍ಂತೂ ರೌರವ ನರಕ. ವಾರ್ಡ್ ತುಂಬ ಕಸ-ಕೊಚ್ಚೆ ಶುದ್ಧ ಕುಡಿಯುವ ನೀರಿಗೂ ಗತಿಯಿಲ್ಲ. ಹೈಜೀನಿಕ್ ಊಟ-ತಿಂಡಿ ಕೇಳಲೇಬೇಡಿ. ಡಾಕ್ಟರ್-ದಾದಿಯರು ಬಂದರೆ ಬಂದರು, ಇಲ್ಲದಿದ್ದರೆ ಇಲ್ಲ. ಸ್ವಚ್ಛತಾ ಕರ್ಮಚಾರಿಗಳಂತೂ ಕಾಣುವುದೇ ಇಲ್ಲ. ಕಿಮ್ಸ್ ಡೈರೆಕ್ಟರ್ ಡಾ| ಗಜಾನನ ಮತ್ತು ವೈದ್ಯಕೀಯ ಅಧೀಕ್ಷರು, ಡಾ| ಕುಡ್ತರ್‍ಕರ್ ಪಿಪಿಇ ಕಿಟ್ ಧರಿಸಿ ವಾರ್ಡಿಗೆ ಹೋದದ್ದೇ ಇಲ್ಲ!! ರೋಗ ನಿರೋಧಕ ಶಕ್ತಿಯಿದ್ದ ರೋಗಿ ಕಿಮ್ಸ್‍ನಿಂದ ಬಚಾವಾಗಿ ಬರಬೇಕೇ ಹೊರತು ಇಲ್ಲಿಯ ಶುಶ್ರೂಷೆಯಿಂದ ಬದುಕಲು ಸಾಧ್ಯವೇ ಇಲ್ಲ. ಜಿ.ಪಂ ಕಾರ್ಯನಿರ್ವಹಣಾಧಿಕಾರಿ ಉತ್ಸಾಹಿ ಐಎಎಸ್ ಅಧಿಕಾರಿ ಮಹಮ್ಮದ್ ರೋಷನ್ ಕೋವಿಡ್ ಕೇಂದ್ರದ ಉಸ್ತುವಾರಿ ನೋಡಿಕೊಂಡಷ್ಟು ದಿನ ಯಾವುದೇ ಸಮಸ್ಯೆಯಿರಲಿಲ್ಲ.

ಕಿಮ್ಸ್ ಡೈರೆಕ್ಟರ್ ಡಾ| ಗಜಾನನ ಮತ್ತು ಸುಪರಿಂಡೆಂಟೆಂಟ್ ಡಾ| ಕುಡ್ತರ್‍ಕರ್ ಕೋವಿಡ್ ಕೇಂದ್ರದ ಯಜಮಾನಿಕೆಗಾಗಿ ಲಾಬಿ ಮಾಡುತ್ತಿದ್ದಂತೆಯೇ ಜಿಲ್ಲಾಡಳಿತ ಅಂತರ ಕಾಯ್ದುಕೊಂಡಿತು. ಕೋವಿಡ್ ಕೇಂದ್ರ ಕಬ್ಜಾ ಮಾಡಿಕೊಂಡ ಡಾ| ಗಜಾನನ ಸಿಇಓ ರೊಷನ್‍ರ ಸಾಧನೆ ಶ್ರಮವೆಲ್ಲ ತನ್ನ ಸಾಹಸವೆಂಬಂತೆ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಕಾರವಾರದ ಅವರ ಜಾತಿವಂತರ ಪತ್ರಿಕೆಯಂತೂ ‘ಮೃತ್ಯುಂಜಯ’ ಎಂಬ ಹಾಸ್ಯಾಸ್ಪದ ಬಿರುದು ಕೊಟ್ಟುಬಿಟ್ಟಿತು.

ಸೋಂಕಿತರು ಗುಣವಾಗಿ ಹೋಗುವಾಗ ಹೂವು ಕೊಟ್ಟು ಚಪ್ಪಾಳೆ ಹೊಡೆದು ಫೋಟೋ ಸೆಷನ್ ನಡೆಸಿ ಕಾಳಜಿಯ ವೈದ್ಯಾಗ್ರೇಸನ ಪೋಸು ಕೊಡುತ್ತಿದ್ದವರ ಬಣ್ಣ ಕಳೆದ 10-7-2020ರಂದು ಬಯಲಾಗಿ ಹೋಯಿತು. ಬೆಂಗಳೂರಲ್ಲಿ ಚಾರ್ಟ್‍ಟೆಡ್ ಅಕೌಂಟೆಂಟ್ ಉದ್ಯೋಗ ಮಾಡಿಕೊಂಡಿದ್ದ ಕಾರವಾರದ ನಿತಿನ್ ನಾಯಕ್ ಎಂಬ ತರುಣ ಮೂರು ದಿನಗಳ ಹಿಂದೆ ಈ ಕೋವಿಡ್ ಕೇಂದ್ರಕ್ಕೆ ದಾಖಲಾಗಿದ್ದ. ಅಲ್ಲಿದ್ದ ಸೋಂಕಿತರೆಲ್ಲ ಹೀನಾಯ ಸ್ಥಿತಿಯಲ್ಲಿದ್ದರು; ಮೂರು ದಿನ ನಿತಿನ್ ಸಹ ಹಿಂಸೆ ಅನುಭವಿಸಿದ್ದಾನೆ. ಈತ ಇಡೀ ಉದ್ದಗಲಕ್ಕೆ ಓಡಾಡುತ್ತ ಅಲ್ಲಿಯ ಅವ್ಯವಸ್ಥೆ-ಅನೈರ್ಮಲ್ಯ-ಲೋಪ-ದೋಷ ಲೈವ್ ಕಮೆಂಟರಿ ಮೂಲಕ ತೋರಿಸುತ್ತ ವಿಡಿಯೋ ಮಾಡಿಸಿಕೊಂಡಿದ್ದಾನೆ. ಆತನಿಗೆ ವಾರ್ಡ್‍ನ ಇತರ ಸೋಂಕಿತರು ಶೂಟಿಂಗ್‍ಗೆ ನೆರವಾಗಿದ್ದಾರೆ. ವಾರ್ಡಿಗೆ ಡಾಕ್ಟರ್ಸ್-ದಾದಿಯರು ಮತ್ತ ಸ್ವಚ್ಛತಾ ಕರ್ಮಚಾರಿಗಳ್ಯಾರು ಬರುತ್ತಿಲ್ಲ; ರೋಗಿಗಳ ಮೇಲೆ ಯಾರಿಗೂ ನಿಗಾಇಲ್ಲ ಎಂದಿರುವ ನಿತಿನ್ ವಾರ್ಡ್ ತುಂಬ ತುಂಬಿರುವ ಬಯೋಲಾಜಿಕಲ್ ತ್ಯಾಜ್ಯ, ನೀರು ನಿಂತು ಕೊಚ್ಚೆ ನಿರ್ಮಾಣವಾಗಿರುವುದು, ಬಿಸಿ ನೀರಿಗೂ ಗತಿಯಿಲ್ಲದಿರುವುದು, ಶೌಚಾಲಯದ ದುರವಸ್ಥೆ-ಅಸಹ್ಯ, ಅತಿ ಅವಶ್ಯವಾದ ನೀರೂ ಸರಬರಾಜಾಗದಿರುವುದು, ಸ್ವಚ್ಛತೆಯಿಲ್ಲದ ಊಟ-ಉಪಹಾರದ ಕತೆ ಹೇಳುತ್ತ ಹೊರಜಗತ್ತಿಗೆ ಕಳುಹಿಸಿದ್ದಾನೆ. ಇದಕ್ಕಿಂತ ಮುಖ್ಯವಾಗಿ 4 ದಿನಗಳ ಹಿಂದೆ ಅಸುನೀಗಿದ್ದ ಶಿರಸಿಯ ವ್ಯಕ್ತಿಗೆ ಸೇರಿದ ಹಾಸಿಗೆ-ಸಾಮಾನುಗಳು ಆತ ಜೀವ ಬಿಟ್ಟಲ್ಲೇ ಬಿದ್ದಿರುವುದು ತೋರಿಸಿದ್ದಾನೆ. ಆತ ಈ ವೀಡಿಯೋ ಶೇರ್ ಮಾಡಿದ ಹತ್ತೇ ನಿಮಿಷದಲ್ಲಿ ವೈರಲ್ ಆಗಿದೆ.

ಅಲ್ಲಿಗೆ ಡೀನ್ ಡಾ|ಗಜಾನನರ ಗ್ಯಾಂಗಿನ ಕರ್ಮಕಾಂಡ ಜಗಜ್ಜಾಹೀರಾಗಿ ಹೋಗಿದೆ. ಇದರಿಂದ ಕಂಗಾಲಾದ ಅವರ ಮರುದಿನವೇ ಗುಣಪಟ್ಟು ಬಿಡುಗಡೆಯಾದ ಸೋಂಕಿತರಿಂದ ಆಸ್ಪತ್ರೆಯಲ್ಲಿ ಅತ್ಯುತ್ತಮ ವ್ಯವಸ್ಥೆಯಿದೆ…. ಹಣ್ಣು.. ಮೊಟ್ಟೆ… ಭರ್ಜರಿ ಊಟ ಕೊಡಲಾಗುತ್ತದೆ.. ವೈದ್ಯರು-ದಾದಿಯರು ಕಾಳಜಿ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.. ಎಂದೆಲ್ಲಾ ಹೇಳಿಸಿ ವೀಡಿಯೋ ಮಾಡಿಸಿದ್ದಾರೆ. ಈ ವಿಡಿಯೋದಲ್ಲಿ ಬೇಡವೆಂದರೂ ಡಾ| ಗಜಾನನ ಮತ್ತು ಡಾ| ಕುಡ್ತರ್ಕರ್ ಕಾಣಿಸುತ್ತಾರೆ. ಪ್ರತಿದಿನ ಸಂಜೆ ನಾಲ್ಕು ಗಂಟೆಗೆ ತ್ಯಾಜ್ಯ ಹೊರಸಾಗಿಸಲಾಗುತ್ತದೆಂದು ಡಾ| ಗಜಾನನ ಹೇಳಿದ್ದಾರೆ. ಆದರೆ ವಾರ್ಡ್‍ನ ಮೂಲೆ ಮೂಲೆಯಲ್ಲಿ ನಾಲ್ಕೈದು ದಿನ ಸಂಗ್ರಹವಾಗುವಷ್ಟು ತ್ಯಾಜ್ಯ ತುಂಬಿರುವುದು ಅವರು ಹಸೀ ಸುಳ್ಳು ಹೇಳುತ್ತಿದ್ದಾರೆಂಬುದನ್ನು ಸಾಬೀತುಪಡಿಸುತ್ತದೆ.

ಇಷ್ಟಕ್ಕೇ ಅವರ ಹತಾಶೆ-ಆಕ್ರೋಶ ನಿಂತಿಲ್ಲ. ಅವ್ಯವಸ್ಥೆಯ ವಿಡಿಯೋ ಮಾಡಿದ ತರುಣ ಮತ್ತವನಿಗೆ ಸಹಾಯ ಮಾಡಿದ ಸೋಂಕಿತರನ್ನು ಆಸ್ಪತ್ರೆಯ ಬಾಗಿಲಿಗೆ ಕರೆಸಿಕೊಂಡಿದ್ದಾರೆ. ಗಾಜಿನ ಗೋಡೆಯ ಆಚೆ ನಿಂತು ಪಕ್ಕ ರೌಡಿಯಂತೆ ಹಾರಾಡಿ, ಸೋಂಕಿತರೊಂದಿಗೆ ಜಗಳವಾಡಿದ್ದಾರೆ. ವಿಡಿಯೋ ಮಾಡಿದ್ದಕ್ಕೆ ತರಾಟೆಗೆ ತೆಗೆದುಕೊಂಡಿದ್ದಾರೆ. ಇದರ ವಿಡಿಯೋ ಕೂಡ ಕ್ಷಣಾರ್ಧದಲ್ಲಿ ವೈರಲ್ ಆಗಿಹೋಗಿದೆ. ಈ ಎಲ್ಲಾ ವಿಡಿಯೋಗಳು, ಫೋಟೋಗಳು ನಮಗೆ ಲಭ್ಯವಾಗಿವೆ. ಈ ಪುರಾವೆಗಳಿಂದ ಡೀನ್ ಸಾಹೇಬರ ‘ಯೋಗ್ಯತೆ’ ಊರಿಗೆಲ್ಲ ಪಕ್ಕ ಆಗಿದೆ!! ಅವರ ಪರವಾಗಿ ಪತ್ರಕರ್ತ ಮಾಧವ ನಾಯ್ಕರೇಕೆ ವಕಾಲತ್ತು ವಹಿಸುತ್ತಿದ್ದಾರೆ ಎಂಬುದೇ ಸೋಜಿಗದ ಸಂಗತಿ.

ವಿಡಿಯೋ ಧೀರ ನಿತಿನ್ ಮಾಧವನಾಯ್ಕ್‍ರ ಜಾತಿ ಬಂಧು. ಆತನ ತಂದೆ ಕಾರವಾರದ ಪ್ರಮುಖ ರಾಜಕಾರಣಿ. ಹೀಗಾಗಿ ನಿತಿನ್‍ಗೆ ಪೂಸಿ ಹೊಡೆಯಬೇಕಾಗಿ ಬಂತು. ಮಾಧವನಾಯ್ಕ್ ನಿನಗೆ ಸಪೋರ್ಟ್ ಮಾಡ್ತೇನೆ ಎಂದು ನಿತಿನ್‍ಗೆ ಹೇಳಿದ್ದಂತೆ ಕಾಣುತ್ತಿದೆ. ಆದರೆ ಅವರೇ ಮರುದಿನ ನಿತಿನ್ ವಿಡಿಯೋ ಮಾಡಿದ್ದು ತಪ್ಪು ಎಂದು ಹೇಳಿಕೆ ಬದಲಾಯಿಸಿದ್ದರು. ಇದರಿಂದ ಕೆರಳಿದ ನಿತಿನ್ ಮಾಧವನಾಯ್ಕ್‍ರಿಗೆ ಫೋನಾಯಿಸಿ “ಇದೆಂಥ ವಿಶ್ವಾಸ ದ್ರೋಹ ಸಾರ್” ಎಂದಿದ್ದಾನೆ. ಕಕ್ಕಾಬಿಕ್ಕಿಯಾದ ಮಾಧವ ಏನೋ ಸಮಜಾಯಿಷಿ ಕೊಟ್ಟಿದ್ದಾರೆ. ನಿತಿನ್ ತನ್ನನ್ನು ನಾಲ್ಕು ದಿನದಿಂದ ಒಬ್ಬೇ ಒಬ್ಬ ಡಾಕ್ಟರ್ ಅಥವಾ ನರ್ಸ್ ಮಾತಾಡಿಸಿಲ್ಲ, ತಾನು ಕೊಳಚೆಯಲ್ಲಿದ್ದೇನೆ ಎಂದಿದ್ದಾನೆ. ಹಾಗಿದ್ದರೆ ಡಾ.ಗಜಾನನರಿಗೆ ಫೋನ್ ಸಂಪರ್ಕ ಮಡುತ್ತೇನೆ ನೀನೇ ಮಾತಾಡು ಎಂದಿದ್ದಾನೆ. ಮೂವರ ನಡುವೆ ಬರೋಬ್ಬರಿ ಮುವ್ವತ್ತಾ ಮೂರುವರೆ ನಿಮಿಷ ಕಾನ್ಫರೆನ್ಸ್ ಸಂಭಾಷಣೆ ನಡೆದಿದೆ.

ನಿತಿನ್‍ನ ಒಂದು ಪ್ರಶ್ನೆಗೂ ಉತ್ತರಿಸಲಾಗದೆ ಡಾ| ಗಜಾನನ ಮತ್ತು ಮಾಧವ ನಾಯ್ಕ್ ತಡವರಿಸಿದ್ದಾರೆ! ಈ ಆಡಿಯೋ ಸಹ ಜಿಲ್ಲೆಯಲ್ಲಿ ಹಿಟ್ ಆಗಿದೆ! ಈ ವಿಡಿಯೋ ಮತ್ತು ಆಡಿಯೋ ವಾರ್ ಜಿಲ್ಲಾಧಿಕಾರಿ ಡಾ| ಹರೀಶ್‍ಕುಮಾರ್ ಮತ್ತು ಶಾಸಕಿ ರೂಪಾಲಿ ನಾಯ್ಕ್ “ಸುಮ್ಮನೆ” ನೋಡಿದ್ದು ಅನೇಕ ಅನುಮಾನ ಮೂಡಿಸಿದೆ. ‘ಕೊರೊನಾ ಸಂಹಾರ ಸೈನ್ಯ’ದ ಸುಪ್ರೀಂ ಕಮಾಂಡರ್ ಆಗಿರುವ ಜಿಲ್ಲಾಧಿಕಾರಿ ಕಿಮ್ಸ್‍ನ ಕರ್ಮಕಾಂಡ ಕಂಡೂ ಕಾಣದಂತಿರುವುದೇಕೆ? ಕಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡ್ತೇನೆಂದು ಭರವಸೆ ನೀಡುವ ಶಾಸಕಿ ರೂಪಾಲಿಯಮ್ಮ ಕೋವಿಡ್ ರೋಗಿಗಳಿಗೆ ಕೊಡಬೇಕಾದ ಮೊಟ್ಟೆ ಸಿಗದಿದ್ದರೂ ಕೇಳುತ್ತಿಲ್ಲ! ಹೀಗಿರುವಾಗ ಅದ್ಹೇಗೆ ಕಿಮ್ಸ್‍ನ ಅವ್ಯವಹಾರ-ಅವಾಂತರ ಪ್ರಶ್ನಿಸಿಯಾರು? ಒಟ್ಟಿನಲ್ಲಿ ಸಾವಿರಾರು ರೂಪಾಯಿ ಅನುದಾನದ ಕಿಮ್ಸ್‍ನ ಕೋವಿಡ್ ವಾರ್ಡ್‍ನಲ್ಲಿ ಬೇಲಿಯೇ ಹೊಲ ಮೇಯುತ್ತಿದೆ.


ಇದನ್ನು ಓದಿ: ಕರ್ನಾಟಕದ ಕೊರೊನಾ ಡಾಕ್ಟರ್ ಏನು ಹೇಳುತ್ತಾರೆ? ಡಾ.ಆಸಿಮ ಬಾನು ಸಂದರ್ಶನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...