Homeಅಂಕಣಗಳುಕರ್ನಾಟಕದ ಕೊರೊನಾ ಡಾಕ್ಟರ್ ಏನು ಹೇಳುತ್ತಾರೆ? ಡಾ.ಆಸಿಮ ಬಾನು ಸಂದರ್ಶನ

ಕರ್ನಾಟಕದ ಕೊರೊನಾ ಡಾಕ್ಟರ್ ಏನು ಹೇಳುತ್ತಾರೆ? ಡಾ.ಆಸಿಮ ಬಾನು ಸಂದರ್ಶನ

ದಿನಾಲು ಟಿವಿಯ ವರ್ಣರಂಜಿತ ಸುದ್ದಿಗಳನ್ನು ಕೇಳಿ - ನೋಡಿ ಭಯಭೀತಗೊಂಡಿರುವ ಜನರಿಗೆ ಆಸಿಮ ಅವರು ಮಾತುಗಳು ಖಂಡಿತಾ ಸಾಂತ್ವನ ನೀಡಬಲ್ಲವು. ಜನ ಭಯ ಬೀಳಬಾರದು ಆದರೆ ಎಚ್ಚರಿಕೆ ಇಂದ ಇರಬೇಕು. ಭಯ ಬಿದ್ದರೆ, ಪ್ಯಾನಿಕ್ ಆದರೆ ರೋಗ ನಿರೋಧಕ ಶಕ್ತಿ ಕುಂದುತ್ತದೆ ಎನ್ನುವ ವೈದ್ಯರು “ಹುಟ್ಟಿದ ನಾಲ್ಕು ದಿನ ಮಗುವಿನಿಂದ ಹಿಡಿದು ಅತಿ ಹೆಚ್ಚು ಅಂತರೆ 99 ವರ್ಷದ ಅಜ್ಜಿ ಕೂಡ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

- Advertisement -
- Advertisement -

ಒಂದು ಕಡೆ ಕೊರೊನಾ ಚಿಕಿತ್ಸೆ ಕೊಡಲು ನಿರಾಕರಿಸಿ ಸರ್ಕಾರದ ಕೆಂಗಣ್ಣಿಗೆ ಗುರಿಯಾದ ಕೆಲವು ಖಾಸಗಿ ಆಸ್ಪತ್ರೆಗಳು – ಇನ್ನೊಂದು ಕಡೆ ಇಡೀ ಆಸ್ಪತ್ರೆಯನ್ನೇ ಮುಚ್ಚಿದ ಕೆಲವರು – ಟಿಆರ್‍ಪಿ ಮಾತ್ರಕ್ಕಾಗಿ ಸಣ್ಣ ಸೆನ್ಸಾರ್ ಕೂಡ ಮಾಡಿಕೊಳ್ಳದೆ ಸಂತ್ರಸ್ತರ ಫೋಟೋಗಳನ್ನು ಪದೇ ಪದೇ ಬಿತ್ತರಿಸಿ, ಅನಗತ್ಯ ಭಯಭೀತಿ ಹುಟ್ಟಿಸಿ ಜಾಹೀರಾತಿನ ಮೂಲಕ ಇನ್ಶ್ಯುರೆನ್ಸ್ ಮಾರಲು ಮುಂದಾಗಿರುವ ಖಾಸಗಿ ಟಿವಿ ವಾಹಿನಿಗಳು – ಪಿಡುಗನ್ನು ಅವಕಾಶಕ್ಕೆ ಬಳಸಿಕೊಂಡು ಜನರ ಭೀತಿಯ ನಡುವೆಯೇ ಭ್ರಷ್ಟಾಚಾರಕ್ಕೆ ಇಳಿದಿರುವ ಆಳುವ ರಾಜಕಾರಣಿಗಳ ಬಗ್ಗೆ ಆರೋಪಗಳು – ಇಂತಹ ಪರಿಸ್ಥಿತಿಯ ನಡುವೆ ವಿವೇಕ ಕಳೆದುಕೊಂಡು ಕೊರೊನಾ ಸೋಂಕಿತರನ್ನು ಕಳಂಕಿತರನ್ನಾಗಿಸಿ, ದೂರುವುದರಿಂದ ಹಿಡಿದು ಬಹಿಷ್ಕಾರ ಹಾಕುವವರೆಗೂ ಮುಂದುವರೆದಿರುವ ಕೆಲವು ಸಾಮಾನ್ಯ ಜನ. ಮಾನವೀಯತೆ ಮರೆಯಾಗುತ್ತಿರುವ ಈ ಸನ್ನಿವೇಶದಲ್ಲಿ ನಿರಾಶೆಯ ಹೊರತೂ ಏನೂ ಇಲ್ಲವೇ ಅನ್ನಿಸಿರಲಿಕ್ಕೂ ಸಾಧ್ಯ. ಮಾನವೀಯತೆಯ ಮೇಲೆ ನಂಬಿಕೆಯೇ ಕಳೆದು ಹೋದ ಮೇಲೆ – ಕೊರೊನೋತ್ತರ ಕಾಲದಲ್ಲಿ ಈ ಟಿವಿ ಮಾಧ್ಯಮಗಳನ್ನು ಒಮ್ಮೆ ಕಲ್ಪಿಸಿಕೊಳ್ಳಿ.

ಇಲ್ಲ, ಜಗತ್ತಿನಲ್ಲಿ ಎಲ್ಲವೂ ಭರವಸೆಯನ್ನು ಕಳೆದುಕೊಳ್ಳುವುದರ ಕಡೆಗೆ ಚಲಿಸಿಲ್ಲ. ಮನುಷ್ಯತ್ವವನ್ನು ಉಸಿರಾಡುತ್ತಿರುವ ಹಲವು ಚೇತನಗಳು ನಮ್ಮ ನಡುವೆ ಇವೆ. ಕೋವಿಡ್ ಪಿಡುಗಿನ ಅಸಾಮಾನ್ಯ ಕಾಲದಲ್ಲಿ ಸಾಮಾನ್ಯ ಜನರ ನಂಬಿಕೆಗಳನ್ನು ಉಳಿಸಿಕೊಳ್ಳುವಲ್ಲಿ, ಟಿವಿ ಮಾಧ್ಯಮಗಳ ಮನಸ್ಥಿತಿಗೆ ವಿರುದ್ಧವಾಗಿ ಅಂದರೆ ಜನಪರವಾಗಿ ಕೆಲಸ ಮಾಡುತ್ತಿರುವ ದಾದಿಯರಿದ್ದಾರೆ, ವೈದ್ಯರಿದ್ದಾರೆ, ಇತರ ದಿನನಿತ್ಯದ ನೈರ್ಮಲ್ಯ ಕಾಪಾಡುವ ಕಾರ್ಮಿಕರಿದ್ದಾರೆ. ಇಂತಹ ಕೆಲವರನ್ನು ನೆನಪಿಸಿಕೊಳ್ಳುವ ಭಾಗವಾಗಿ ಮುಂದಿನ ವಾರಗಳಲ್ಲಿ ನ್ಯಾಯಪಥ ಹಲವರನ್ನು ಸಂದರ್ಶಿಸಲಿದೆ.

ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹುಟ್ಟಿ ಬೆಳೆದ ಡಾ.ಆಸಿಮ ಬಾನು ಅವರು ಚಾಮರಾಜಪೇಟೆ ಆಸುಪಾಸಿನಲ್ಲಿಯೇ ಇರುವ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ (ಬಿಎಂಸಿ ಎಂದೇ ಹೆಚ್ಚು ಪ್ರಖ್ಯಾತ) ಪದವಿ ಮತ್ತು ಪೋಸ್ಟ್ ಗ್ರಾಜುಯೇಶನ್ ಮಾಡಿದವರು. ಅಲ್ಲಿಯೇ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಆಸಿಮ ಅವರು ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮ ಮತ್ತು ತುರ್ತು ನಿಗಾ ಘಟಕದ ನೋಡಲ್ ಅಧಿಕಾರಿ. ನಿಮಗೆ ಸರ್ಕಾರಿ ಕಾಲೇಜು – ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ಯಾರು ಸ್ಪೂರ್ತಿ ಎಂದು ಪ್ರಶ್ನೆ ಮಾಡಿದರೆ “ಒಬ್ಬರು ಅಂತ ಇಲ್ಲ. ಹಲವರು ನನಗೆ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪಾಠ ಮಾಡಿದ್ದಾರೆ. ಸರ್ಕಾರ ಬಹಳ ಕಡಿಮೆ ಶುಲ್ಕದಲ್ಲಿ ನನಗೆ ವೈದ್ಯಕೀಯ ಶಿಕ್ಷಣ ನೀಡಿದೆ. ಅಂದಿನಿಂದಲೂ ಅದಕ್ಕೆ ಪ್ರತಿಯಾಗಿ ಸೇವೆ ಸಲ್ಲಿಸುವ ಮನಸ್ಸಿತ್ತು. ಇಲ್ಲಿ ಪಾಠ ಮಾಡಿದ ಎಲ್ಲರನ್ನೂ ನೆನಪಿಸಿಕೊಳ್ಳಬೇಕು” ಅನ್ನುತ್ತಾರೆ.

ಸಾಮಾನ್ಯವಾಗಿ ಕೋವಿಡ್ ಸಮಯದಲ್ಲಿ ವೈದ್ಯರು ಅತಿ ಹೆಚ್ಚು ಒತ್ತಡಕ್ಕೆ ಒಳಗಾಗಿದ್ದಾರೆ ಎಂಬ ಅಭಿಪ್ರಾಯ ಜನರಲ್ಲಿ ಒಡಮೂಡಿದೆ. ನಮ್ಮ ಜೊತೆಗಿನ ಸಂದರ್ಶನದಲ್ಲಿ ಬಹಳ ಆಹ್ಲಾದಕರವಾಗಿ ಮಾತನಾಡಿನ ಆಸಿಮ ಅವರು ರೋಗಿಗಳಲ್ಲೂ ಅದೇ ಧ್ವನಿಯಲ್ಲಿ ಭರವಸೆಯನ್ನು ಮೂಡಿಸಿ ನೋವನ್ನು ದೂರ ಮಾಡುತ್ತಿರುವ ವೈದ್ಯಾಧಿಕಾರಿ. “ನಮ್ಮ ಆಸ್ಪತ್ರೆಯಲ್ಲಿ ಕೋವಿಡ್ ಮೊದಲಿಗೂ ಅತಿ ಹೆಚ್ಚು ಪ್ರಕರಣಗಳು ಬರುತ್ತಿದ್ದವು. ಆಗಲೂ ನಾವೆಲ್ಲರೂ ಬಹಳ ಬ್ಯುಸಿಯಾಗಿ ಇರುತ್ತಿದ್ದಿವಿ. ಆಗಲೂ ಒತ್ತಡ ಇರುತ್ತಿತ್ತು. ಈಗ ಒತ್ತಡದ ಸ್ವರೂಪ ಬದಲಾಗಿದೆ. ಅಂದರೆ ರೋಗಿಗಳನ್ನು ನೋಡಿಕೊಳ್ಳುವ ವೈದ್ಯರು ಆಸ್ಪತ್ರೆಯಿಂದ ಹೊರಗೆ ಹೋಗುವಂತಿಲ್ಲ – ಪಿಪಿಇ ಕಿಟ್‍ಗಳನ್ನು ತೆಗೆದು ಬ್ರೇಕ್‍ಗಳನ್ನು ತೆಗೆದುಕೊಳುವಂತಿಲ್ಲ. ಇಂತಹ ಬೇರೆ ರೀತಿಯ ಸವಾಲುಗಳು ಹುಟ್ಟಿಕೊಂಡಿವೆ. ಆದರೆ ನಾವೆಲ್ಲರೂ ಅದನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ” ಎನ್ನುತ್ತಾರೆ.

ಇಂತಹ ಒತ್ತಡವನ್ನು ನಿಭಾಯಿಸಲು ಮನಸ್ಸನ್ನು ಹೇಗೆ ಸಿದ್ಧಪಡಿಸಿಕೊಂಡಿರಿ, ಈ ಅಸಾಮಾನ್ಯ ಸವಾಲುಗಳನ್ನು ಎದುರಿಸಲು ಹೇಗೆ ಸನ್ನದ್ಧರಾದಿರಿ. ನಿಮಗೆ ವೈಯಕ್ತಿಕವಾಗಿ ಭಯಗಳು ಇರಲಿಲ್ಲವೇ ಅಂದರೆ “ನನ್ನದು ಮೈಕ್ರೋಬಯಾಲಜಿಯಲ್ಲಿ ವಿಶೇಷ ಅಧ್ಯಯನ (ಎಂಡಿ). ವೈರಸ್ ಹರಡುವಿಕೆಯನ್ನು ತಡೆಯುವುದು, ಅದು ಸೃಷ್ಟಿಸುವ ರೋಗಗಳಿಗೆ ಚಿಕಿತ್ಸೆ ಕೊಡುವುದು ಇದರಲ್ಲೇ ನನ್ನ ಪರಿಣಿತಿ ಇರುವುದು. ಆದರೆ ಪ್ಯಾಂಡೆಮಿಕ್‍ಅನ್ನು ನೋಡುತ್ತಿರುವುದು ಇದೇ ಮೊದಲು. ಪಠ್ಯಪುಸ್ತಕದಲ್ಲಿ ಓದಿದ್ದು ಈಗ ಕಣ್ಣ ಮುಂದಿದೆ. ಇದು ಸವಾಲು. ಮತ್ತು ನಾವು ಪ್ರಮಾಣ ತೆಗೆದುಕೊಂಡಿದ್ದೇವೆ. ನಮಗೆ ಬೇರೆ ಆಯ್ಕೆಗಳು ಇರುವುದಿಲ್ಲ. ಹಿಪೋಕ್ರೇಟಿಕ್ ಓತ್ ಅದು. ವೈದ್ಯರಾಗಿ ಪ್ರಮಾಣ ಮಾಡಿದ ಮೇಲೆ ನಮ್ಮ ಕೆಲಸ ನಿಭಾಯಿಸುವುದು ಕರ್ತವ್ಯ. ಉಳಿದ ವೈದ್ಯರೂ ಕೂಡ, ಈ ಕ್ಷೇತ್ರದಲ್ಲಿ ಪರಿಣಿತಿ ಇಲ್ಲದೆ ಇದ್ದರೂ ಮೈಕ್ರೋಬಯಾಲಜಿ ಬಗ್ಗೆ ಒಂದು ವಿಷಯವನ್ನು ಅಧ್ಯಯನ ಮಾಡಿಯೇ ಇರುತ್ತಾರೆ. ಆದುದರಿಂದ ಇದನ್ನು ನಿಭಾಯಿಸಲು ನಮಗೆಲ್ಲ ಒಂದು ಮಟ್ಟದ ತರಬೇತಿ ಇತ್ತು”

“ಭಯ ಇಲ್ಲ ಎಂದಲ್ಲ. ಇದು ವೇಗವಾಗಿ ಹರಡುವ ಸಾಂಕ್ರಾಮಿಕ ರೋಗ ಆಗಿರುವುದರಿಂದ, ನಾನು ಸಾಂಕ್ರಾಮಿಕ ರೋಗ ತೆಗೆದುಕೊಂಡು ಮನೆಗೆ ಹೋದರೆ ಎಂಬ ಸಣ್ಣ ಮಟ್ಟದ ಎಚ್ಚರಿಕೆಯ ರೀತಿಯ ಭಯ ಅದು, ಆ ಕಡೆ ಮನೆಯ ಸದಸ್ಯರಿಗೆ ನನ್ನ ಬಗ್ಗೆ ಭಯ. ಈ ರೀತಿ ಭಯ ಇದ್ದರೂ ಇಂತಹ ಅಸಾಮಾನ್ಯ ಸನ್ನಿವೇಶದಲ್ಲಿ ನಮಗೆ ಬೇರೆ ಆಯ್ಕೆ ಇರುವುದಿಲ್ಲ. ಈ ಸಲುವಾಗಿ ಸ್ವಲ್ಪ ಹೆಚ್ಚು ಎಚ್ಚರಿಕೆಯಿಂದ ಇರುತ್ತೇವೆ. ಅಂತಹ ಎಚ್ಚರಿಕೆಯನ್ನು ಫೆಬ್ರವರಿಯಿಂದ ಜನಸಾಮಾನ್ಯರಿಗೂ ತಿಳಿಸಿಕೊಡಲು ನಿರಂತರವಾಗಿ ಪ್ರಯತ್ನ ಪಟ್ಟಿದ್ದೇವೆ. ಮಾಸ್ಕ್ ಹಾಕಿಕೊಳ್ಳುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದು, ಕೈಯನ್ನು ಆಗಾಗ ಶುಚಿಯಾಗಿ ತೊಳೆದುಕೊಳ್ಳುವ ಮೂಲಪಾಠಗಳೆ. ಇವುಗಳನ್ನು ಕೆಲವು ಎನ್‍ಜಿಒ ಜೊತೆ ಸೇರಿಕೊಂಡು ರೈಲ್ವೇ, ಬಸ್ ನಿಲ್ದಾಣಗಳಲ್ಲಿ ವ್ಯಾಪಕವಾಗಿ ಮಾಹಿತಿ ಹರಡಲು ಪ್ರಯತ್ನ ಪಟ್ಟಿದ್ದೇವೆ. ಅವುಗಳನ್ನು ನಾವೂ ಪಾಲಿಸಿಕೊಂಡು ಬಂದಿದ್ದೇವೆ” ಎನ್ನುತ್ತಾರೆ.

ದಿನಾಲು ಟಿವಿಯ ವರ್ಣರಂಜಿತ ಸುದ್ದಿಗಳನ್ನು ಕೇಳಿ – ನೋಡಿ ಭಯಭೀತಗೊಂಡಿರುವ ಜನರಿಗೆ ಆಸಿಮ ಅವರು ಮಾತುಗಳು ಖಂಡಿತಾ ಸಾಂತ್ವನ ನೀಡಬಲ್ಲವು. ಜನ ಭಯ ಬೀಳಬಾರದು ಆದರೆ ಎಚ್ಚರಿಕೆ ಇಂದ ಇರಬೇಕು. ಭಯ ಬಿದ್ದರೆ, ಪ್ಯಾನಿಕ್ ಆದರೆ ರೋಗ ನಿರೋಧಕ ಶಕ್ತಿ ಕುಂದುತ್ತದೆ ಎನ್ನುವ ವೈದ್ಯರು “ಹುಟ್ಟಿದ ನಾಲ್ಕು ದಿನ ಮಗುವಿನಿಂದ ಹಿಡಿದು ಅತಿ ಹೆಚ್ಚು ಅಂತರೆ 99 ವರ್ಷದ ಅಜ್ಜಿ ಕೂಡ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಧೈರ್ಯ ಹೊಂದಿರುವುದು ಕೋವಿಡ್ ಸೋಂಕಿನ ವಿರುದ್ಧ ಹೋರಾಡುವುದಕ್ಕೆ ಮುಖ್ಯ. ಸುಮಾರು 110 ಕೋವಿಡ್ ಪಾಸಿಟಿವ್ ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಲಾಗಿದೆ. ಹುಟ್ಟಿದ ಯಾವ ಮಗುವಿಗೂ ಸೋಂಕು ತಗುಲಿಲ್ಲ”. 27ನೇ ಮಾರ್ಚ್‍ನಲ್ಲಿ ನೆದರ್‍ಲ್ಯಾಂಡ್‍ನಿಂದ ಬಂದಿದ್ದ ಮೊದಲ ರೋಗಿ ದಾಖಲಾಗಿದ್ದನ್ನು ನೆನಪಿಸಿಕೊಳ್ಳುವ ವೈದ್ಯರು, ಅವರು ‘ಕಾಲು ಸೂಪಿ’ಗೆ ಬೇಡಿಕೆ ಇಟ್ಟಿದ್ದನ್ನು ನೆನಪಿಸಿಕೊಂಡು ನಗುತ್ತಾರೆ. ಇಲ್ಲಿಯವರೆಗೂ 1900ಕ್ಕೂ ಹೆಚ್ಚು ಜನ ಅಲ್ಲಿ ದಾಖಲಾಗಿ ಅವರಲ್ಲಿ ಬಹುತೇಕರು ಗುಣಮುಖರಾಗಿದ್ದಾರೆ. ಮೊದಲೇ ಮತ್ತೊಂದು ರೋಗದಿಂದ ಬಳಲುತ್ತಿದ್ದರೆ (ಕ್ಯಾನ್ಸರ್, ಕ್ರಾನಿಕ್ ಡಯಾಬೆಟಿಸ್, ಹೈ ಬಿಪಿ) ಅಂತಹ ರೋಗಿಗಳು ಅಪಾಯ ವಲಯದಲ್ಲಿ ಇರುತ್ತಾರೆ. ಅವರಿಗೂ ಚಿಕಿತ್ಸೆ ಕೊಟ್ಟು ಗುಣಪಡಿಸಿದ್ದೇವೆ. ಕೆಲವರು ತೀರಿಹೋಗಿರುವುದರ ಬಗ್ಗೆ ವಿಷಾದವನ್ನು ವ್ಯಕ್ತಪಡಿಸುತ್ತಾರೆ. ಕಡಿಮೆ ವಯಸ್ಸಿನವರು ಮೃತಪಟ್ಟ ಸನ್ನಿವೇಶವನ್ನು ವಿವರಿಸುವ ಅವರು, ಸಾಮಾನ್ಯವಾಗಿ ಅವರಿಗೂ ಡಯಾಬೆಟಿಸ್, ಬಿಪಿ ತೀವ್ರವಾಗಿ ಇರುತ್ತದೆ. ಆದರೆ ಅವರು ಅದನ್ನು ಗಮನಿಸದೆ ಹೋಗಿರುತ್ತಾರೆ. ಅದು ಗಂಭೀರ ಪರಿಣಾಮ ಉಂಟುಮಾಡುತ್ತಿದೆ ಅನ್ನುತ್ತಾರೆ. ಕೊ ಮಾರ್ಬಿಡಿಟಿ ಇದ್ದು, ತೀವ್ರ ಕೋವಿಡ್ ಲಕ್ಷಣಗಳಿದ್ದವರು ಕೂಡ ಗುಣಮುಖರಾಗಿದ್ದಾರೆ ಎಂಬುದನ್ನು ಹೇಳಲು ಆಸಿಮ ಅವರು ಮರೆಯುವುದಿಲ್ಲ.

ಸರ್ಕಾರಿ ಆಸ್ಪತ್ರೆಯ ಬಗ್ಗೆ ಜನಕ್ಕೆ ಕೆಲವೊಂದು ಪೂರ್ವಾಗ್ರಹಗಳು – ತಪ್ಪು ತಿಳಿವಳಿಕೆಗಳು ಇರುತ್ತವೆಯೆಲ್ಲ ಅದನ್ನು ಹೇಗೆ ಹೋಗಲಾಡಿಸುತ್ತೀರಿ ಎಂಬ ಪ್ರಶ್ನೆಗೆ “ಇದು ಎಷ್ಟೋ ಜನಕ್ಕೆ ತಿಳಿದಿಲ್ಲ. ನಮ್ಮ ಈ ಕೇಂದ್ರ ಭಾರತದಲ್ಲಿಯೇ ಅತ್ಯಾಧುನಿಕ ಸೌಕರ್ಯ ಉಳ್ಳದ್ದು ಮತ್ತು ಚಿಕಿತ್ಸೆಗೆ ಬಹಳ ಹೆಸರುವಾಸಿಯಾದದ್ದು. ಬಹಳ ವರ್ಷಗಳಿಂದ ಇಲ್ಲಿ ಹೈ ಸ್ಟಾಂಡರ್ಡ್ ಉಳಿಸಿಕೊಂಡು ಬರುತ್ತಿದ್ದೇವೆ. ಇದಕ್ಕೆ ಎಲ್ಲಾ ಸಿಬ್ಬಂದಿಗಳ ಹಾಗೂ ವಿಶೇಷ ಅಧಿಕಾರಿಗಳ ಸಹಕಾರ ಇದೆ. ಇದು ತಿಳಿದ ಮೇಲೆ ಎಷ್ಟೋ ಜನಕ್ಕೆ ನಮ್ಮ ಈ ಸೌಕರ್ಯಗಳ ಅರಿವಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನಾವು ಇಲ್ಲಿಯವರೆಗೂ ಕೋವಿಡ್ ಚಿಕಿತ್ಸೆ ನೀಡಿರುವ ಎಲ್ಲಾ ರೋಗಿಗಳಿಗೂ ಉಚಿತವಾಗಿ ಚಿಕಿತ್ಸೆ ನೀಡಿದ್ದೇವೆ ಎನ್ನುವುದು ಮುಖ್ಯ ಅಂಶ. ಸರ್ಕಾರ ಯಾರಿಂದಲೂ ಒಂದು ಪೈಸೆಯನ್ನೂ ತೆಗೆದುಕೊಳ್ಳುತ್ತಿಲ್ಲ” ಎನ್ನುತ್ತಾರೆ.

ಜನರು ಕೋವಿಡ್ ರೋಗಿಗಳನ್ನು ಕಳಂಕಿತರನ್ನಾಗಿ ಕಾಣುತ್ತಿರುವುದರ ಬಗ್ಗೆ ಪ್ರಶ್ನಿಸಿದಾಗ “ಇದೇ ತಿಳಿಯುತ್ತಿಲ್ಲ. ಇದೊಂದು ಶ್ವಾಸಕೋಶ ಸಂಬಂಧಿ ರೋಗ ಮತ್ತು ಬಹುತೇಕ ಎಲ್ಲರೂ ಗುಣಮುಖರಾಗುತ್ತಾರೆ. ಹಿಂದೆ ಲೈಂಗಿಕ ಸಂಬಂಧಿ ಏಡ್ಸ್ ಸೋಂಕಿಗೆ ತುತ್ತಾದವರಿಗೆ ಕಳಂಕ ಹಚ್ಚಲಾಗುತ್ತಿತ್ತು. ಆದರೆ ಅದನ್ನೂ ಬರಬರುತ್ತಾ ಮೀರಲಾಯಿತು. ಈಗ ಅನವಶ್ಯಕವಾಗಿ ಕೋವಿಡ್ ರೋಗಿಗಳನ್ನು ಕಳಂಕಿತರಾಗಿ ಕಾಣಬಾರದು. ಸೋಂಕು ಹೇಗೆ ಬರುತ್ತದೆ ಎಂದು ರೋಗಿಗಳಿಗೆ ತಿಳಿಯುವುದೇ ಇಲ್ಲ. ಹಾಗೂ ಎಷ್ಟೋ ಜನಕ್ಕೆ ಅವರಿಗೇ ಗೊತ್ತಾಗದಂತೆ ಬಂದು ಹೋಗಿರಬಹುದು. ರೋಗನಿರೋಧಕ ಈಗಾಗಲೇ ಆಕ್ಟಿವ್ ಆಗಿರಬಹುದು ಮತ್ತು ಈ ಸೋಂಕು ಯಾರಿಗೆ ಬೇಕಾದರೂ ಬರಬಹುದು. ಮತ್ತೊಬ್ಬ ಕೋವಿಡ್ ರೋಗಿಯನ್ನು ಅನುಮಾನದಿಂದ, ಕಳಂಕದಿಂದ ನೋಡುವುದು ಸರಿ ಅಲ್ಲವೇ ಅಲ್ಲ” ಎನ್ನುತ್ತಾರೆ.

ರೋಗಿಗಳ ಜೊತೆಗೆ ವಾಟ್ಸ್‍ಆಪ್ ಗ್ರೂಪ್ ಮಾಡಿಕೊಂಡು ಅವರಿಗೆ ಭರವಸೆಯನ್ನು ತುಂಬುತ್ತಿದ್ದೇನೆ, ಅಲ್ಲಿ ಸೋಂಕು ವಾಸಿಯಾದ ಬಹಳಷ್ಟು ಜನ ತಾಯಿ, ಅಕ್ಕ ಅಂತ ಹೇಳಿ ಪ್ರಶಂಸಿಸುತ್ತಾರೆ, ಇದರಿಂದ ಬಹಳ ಸಂತಸ ಆಗುತ್ತದೆ ಎಂದು ಅತಿ ನಿರಾಡಂಬರವಾಗಿ ಹೇಳುವ ಆಸಿಮ ಆವರಿಗೆ ಧನ್ಯವಾದ ಹೇಳಿ ಫೋನ್ ಕಟ್ ಮಾಡಿದೆ. ಕುತೂಹಲಕ್ಕಾಗಿ ಅವರ ಹೆಸರಿನಲ್ಲಿ ಗೂಗಲ್ ಮಾಡಿದೆ. ಇಂಡಿಯನ್ ಎಕ್ಸ್‍ಪ್ರೆಸ್ ಪತ್ರಿಕೆಯ ಒಂದು ಲಿಂಕ್ ಎದ್ದು ಬಂತು. ರೋಗಿಗಳು ಚಾಕಲೇಟ್, ಚಿಪ್ಸ್ ಇತ್ಯಾದಿ ಬಯಕೆಯ ತಿಂಡಿ ತಿನಿಸುಗಳನ್ನು ಕೇಳಿದರೆ ಸ್ವ್ವಿಗ್ಗಿ ಮೂಲಕ ಆಸಿಮ ಅವರೇ ತಮ್ಮ ಖರ್ಚಿನಲ್ಲಿ ತರಿಸಿಕೊಡುವ ಬಗ್ಗೆ ಅಲ್ಲಿ ವರದಿ ಮಾಡಿದ್ದರು. ಈ ವಿಷಯವನ್ನು ಕೇಳಲು ಮತ್ತೆ ಫೋನ್ ಮಾಡುವುದಾ ಅಂದುಕೊಳ್ಳುತ್ತಲೇ, ಅವರ ಕಾರ್ಯನಿರತ ಸಮಯವನ್ನು ಹೆಚ್ಚು ಕಸಿಯುವುದು ಬೇಡ ಅಂದುಕೊಂಡು ಮತ್ತೊಮ್ಮೆ ದೀರ್ಘವಾಗಿ ಸಂದರ್ಶನ ಮಾಡುವಾಗ ಹೆಚ್ಚಿನ ವಿಷಯ ತಿಳಿದುಕೊಂಡರೆ ಆಯಿತು ಅಂದುಕೊಂಡೆ.

ಮಾನವೀಯತೆಗೆ ಮಿಡಿಯುವ ಹಲವು ಹೃದಯಗಳು ನಮ್ಮ ನಡುವೆ ಇನ್ನೂ ಬಹಳಷ್ಟಿವೆ. ಅಂತಹ ಹೃದಯಗಳನ್ನು ಬೆಸೆಯುವ ಕೆಲಸಕ್ಕೆ ಕೈಜೋಡಿಸುವುದನ್ನಾದರೂ ನಮ್ಮಂತಹ ಮಾಧ್ಯಮಗಳು ಮಾಡಬಹುದಲ್ಲವೇ?


ಇದನ್ನು ಓದಿ: ಕೋವಿಡ್ ನಿಭಾಯಿಸಲು ರಾಜ್ಯ ಸರ್ಕಾರವು ವಿಫಲವಾಗಿದ್ದೆಲ್ಲಿ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...