ಕೊರೊನಾ ಸೋಂಕು ದೃಢಪಟ್ಟಿದ್ದ ಜರ್ಮನ್ ಶೆಫರ್ಡ್ ಎಂಬ ಉನ್ನತ ತಳಿಯ ನಾಯಿ ಅಮೇರಿಕಾದ ನ್ಯೂಯಾರ್ಕ್ನನಲ್ಲಿ ಮೃತಪಟ್ಟಿದೆ.
ಏಪ್ರಿಲ್ ಮಧ್ಯದಲ್ಲಿ ತಮ್ಮ 7 ವರ್ಷದ ಜರ್ಮನ್ ಶೆಫರ್ಡ್ ಉಸಿರಾಟದ ತೊಂದರೆಗಳನ್ನು ಅನುಭವಿಸುತ್ತಿದ್ದ. ನಂತರ ಹಲವಾರು ವಾರಗಳವರೆಗೆ ಕೊರೊನಾ ವೈರಸ್‌ನಿಂದ ಬಳಲುತ್ತಿದ್ದ ಎಂದು ಸ್ಟೇಟನ್ ದ್ವೀಪದ ರಾಬರ್ಟ್ ಮತ್ತು ಆಲಿಸನ್ ಮಹೋನಿ ನ್ಯಾಷನಲ್ ಜಿಯಾಗ್ರಫಿಕ್‌ಗೆ ತಿಳಿಸಿದ್ದರು.
ಪಶುವೈದ್ಯರು ಮೇ ತಿಂಗಳಲ್ಲಿ ನಾಯಿಯನ್ನು ಪರೀಕ್ಷಿಸಿದ್ದರು. ನಂತರ ಸೊಂಕು ದೃಢಪಟ್ಟಿರುವುದು ಕಂಡು ಬಂದಿತ್ತು.
ನ್ಯೂಯಾರ್ಕ್ ನಲ್ಲಿ ಜರ್ಮನ್ ಶೆಫರ್ಡ್ ಕೊರೊನಾ ಸೋಂಕು ದೃಢಪಟ್ಟ ದೇಶದ ಮೊದಲ ನಾಯಿ. ಆದರೆ ಅದರ ಮಾಲೀಕರನ್ನು ಬಹಿರಂಗಗೊಳಿಸುವುದಿಲ್ಲ ಎಂದು ಅಮೇರಿಕಾ ಕೃಷಿ ಇಲಾಖೆ ಜೂನ್‌ನಲ್ಲಿ ವರದಿ ಮಾಡಿದೆ,
ಏಪ್ರಿಲ್‌ನಲ್ಲಿ ಉಸಿರಾಟದ ತೊಂದರೆ ಮತ್ತು ದಟ್ಟವಾದ ಮೂಗಿನ ಲೋಳೆಯ ಬೆಳವಣಿಗೆಯ ನಂತರ ನಾಯಿಯ ಆರೋಗ್ಯವು ಕುಸಿಯಿತು. ಹೆಪ್ಪುಗಟ್ಟಿದ ರಕ್ತವನ್ನು ವಾಂತಿ ಮಾಡಲು ಪ್ರಾರಂಭಿಸಿದ ನಂತರ ಜುಲೈ 11 ರಂದು ಅದನ್ನು ದಯಾಮರಣಗೊಳಿಸಲಾಯಿತು ಎಂದು ಮಹೋನಿ ನ್ಯಾಷನಲ್ ಜಿಯಾಗ್ರಫಿಕ್‌ಗೆ ತಿಳಿಸಿದರು.
ನ್ಯೂಯಾರ್ಕ್ ನಗರದ ಆರೋಗ್ಯ ಇಲಾಖೆಯ ವಕ್ತಾರರು, ನಾಯಿಯ ದೇಹವನ್ನು ನೆಕ್ರೋಪ್ಸಿಗಾಗಿ ತೆಗೆದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ದೇಹವನ್ನು ಈಗಾಗಲೇ ದಹನ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಯುಎಸ್‌ಡಿಎ ಡೇಟಾಬೇಸ್‌ನಲ್ಲಿ ಅಮೇರಿಕಾದಲ್ಲಿ ಇದುವರೆಗೆ ಪ್ರಾಣಿಗಳಲ್ಲಿ ಕೊರೊನಾ ವೈರಸ್ ದೃಢಪಟ್ಟ 12 ನಾಯಿಗಳು, 10 ಬೆಕ್ಕುಗಳು, ಹುಲಿ ಮತ್ತು ಸಿಂಹಗಳು ಸೇರಿವೆ.
ಕೊರೊನಾ ವೈರಸ್ ಹರಡುವಲ್ಲಿ ಪ್ರಾಣಿಗಳು ಮಹತ್ವದ ಪಾತ್ರ ವಹಿಸುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಸಂಸ್ಥೆ ಹೇಳುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ವೈರಸ್ ಜನರಿಂದ ಪ್ರಾಣಿಗಳಿಗೆ ಹರಡಬಹುದು ಎಂದು ಊಹಿಸಿದ್ದಾರೆ.
ಇದನ್ನೂ ಓದಿ: ಪ್ರಶಾಂತ್ ಭೂಷಣ್ ಪರ ನಿಂತ 8ಕ್ಕೂ ಹೆಚ್ಚು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರು


