ದೆಹಲಿ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಎ.ಪಿ. ಶಾ ‘ಭಾರತವು ಒಂದು ರೀತಿಯ ಚುನಾಯಿತ ಸರ್ವಾಧಿಕಾರದ ಕಡೆ ಸಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಜನರಿಗೆ ಸೂಕ್ತ ನಾಯಕತ್ವ ಒದಗಿಸಲು ಸಂಸತ್ತು ವಿಫಲವಾಗಿರುವ ಕೊರೊನಾ ಕಾಲದ ಈ ಸಂದರ್ಭವನ್ನು ಉಪಯೋಗಿಸಿ ಸರಕಾರಕ್ಕೆ ತನಗೆ ಬೇಕಿದ್ದಂತೆ ಮಾಡಲು ಸ್ವಾತಂತ್ರ್ಯ ನೀಡಿದಂತಾಗಿದೆ ಎಂದು ಅವರು ಹೇಳಿದ್ದಾರೆ.
ಸರಕಾರವನ್ನು ಹದ್ದುಬಸ್ತಿನಲ್ಲಿಡುವ ಅಧಿಕಾರ ಹೊಂದಿದ ನ್ಯಾಯಾಂಗ ಸಂಸ್ಥೆಯನ್ನು ಭಾರತದಲ್ಲಿ ವ್ಯವಸ್ಥಿತವಾಗಿ ನಾಶಗೊಳಿಸಲಾಗುತ್ತಿದೆ ಎಂದಿರುವ ಮಾಜಿ ನ್ಯಾಯಮೂರ್ತಿ, 2014 ರಿಂದ ಈ ಎಲ್ಲಾ ಯತ್ನಗಳು ನಡೆಯುತ್ತಿವೆ ಎಂದಿದ್ದಾರೆ.
ಇಂದಿರಾ ಗಾಂಧಿ ಮಾಡಿದಂತೆ ಇದು ಬಹಿರಂಗವಾಗಿ ಇಲ್ಲದಿದ್ದರು ಭಾರತದ ಪ್ರಜಾಪ್ರಭುತ್ವ ಕೋಮಾ ಸ್ಥಿತಿಯಲ್ಲಿರುವಂತೆ ಮಾಡಲಾಗುತ್ತಿದೆ ಜೊತೆಗೆ ಕಾರ್ಯಾಂಗಕ್ಕೆ ಹೆಚ್ಚಿನ ವಿಚಾರಗಳಲ್ಲಿ ಮೇಲುಗೈ ಒದಗಿಸಲಾಗಿದೆ, ಚುನಾಯಿತ ಸರ್ವಾಧಿಕಾರವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಮಾರ್ಚ್ ತಿಂಗಳಿನಿಂದ ದೇಶದ ಸಂಸತ್ತು “ಭೂತಗಳ ಪಟ್ಟಣ”ವಾಗಿದೆ ಎಂದಿರುವ ಅವರು, ಇಂತಹ ಒಂದು ಸಾಂಕ್ರಾಮಿಕ ರೋಗ ಸೃಷ್ಟಿಸಿದ ಸಮಸ್ಯೆಯ ಸಂದರ್ಭ ಜನರಿಗೆ ನಾಯಕತ್ವ ಒದಗಿಸಲು ವಿಫಲವಾಗಿರುವುದರ ಜತೆಗೆ ಉತ್ತರದಾಯಿತ್ವ ಹಾಗೂ ಪ್ರತಿನಿಧಿತ್ವವನ್ನು ದೂರವಾಗಿಸಿ ಕಾರ್ಯಾಂಗಕ್ಕೆ ತನಗೆ ಬೇಕಿದ್ದಂತೆ ಮಾಡುವ ಸ್ವಾತಂತ್ರ್ಯ ನೀಡಿದೆ’ ಎಂದಿದ್ದಾರೆ.
“ಇಂತಹ ಸಂದರ್ಭಗಳಲ್ಲಿ ಕಾರ್ಯಾಂಗದ ಉತ್ತರದಾಯಿತ್ವ ನೆನಪು ಮಾತ್ರ, ಅದರ ಕಾರ್ಯಗಳ ಕುರಿತು ಪ್ರಶ್ನೆಗಳನ್ನು ಎತ್ತಲು ಯಾರೂ ಇಲ್ಲ” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
1962 ರಲ್ಲಿ ಚೀನಾದ ಜೊತೆ ಹಾಗೂ 1971 ರಲ್ಲಿ ಪಾಕಿಸ್ತಾನದ ಜೊತೆ ಭಾರತ ಯುದ್ಧ ಮಾಡುತ್ತಿದ್ದ ಸಂದರ್ಭವೂ ಸಂಸತ್ತು ಕಾರ್ಯಾಚರಿಸುವುದನ್ನು ನಿಲ್ಲಿಸಿರಲಿಲ್ಲ. 2001ರಲ್ಲಿ ಸಂಸತ್ ಮೇಲೆ ದಾಳಿ ನಡೆದ ಮರುದಿನವೂ ಅಧಿವೇಶನ ನಡೆದಿತ್ತು ಎಂದು ಅವರು ನೆನಪಿಸಿದ್ದಾರೆ.
ಮಾರ್ಚ್ ತಿಂಗಳಲ್ಲಿ ಭಾರತದ ಸಂಸತ್ತಿನ ಬಜೆಟ್ ಅಧಿವೇಶನ ಮುಂದೂಡಲಾಗಿದೆ. ಆದರೆ ಇತರ ದೇಶಗಳು ಕೊರೊನಾ ವೈರಸ್ ಭೀತಿಯ ನಡುವೆಯೇ ವರ್ಚುವಲ್ ಆಗಿ ಕಾರ್ಯಾಚರಿಸುತ್ತಿವೆ ಎಂದು ಅವರು ಉಲ್ಲೇಖಿಸಿದ್ದಾರೆ.
ಜನರ ನಿರೀಕ್ಷೆಗಳನ್ನು ಹುಸಿಯಾಗಿಸಿದೆ ಎಂದು ನ್ಯಾಯಾಂಗವನ್ನು ಟೀಕಿಸಿದ ಎ.ಪಿ. ಶಾ, “ಕಾಶ್ಮೀರದಲ್ಲಿ ಇಂಟರ್ನೆಟ್ ಸೇವೆ ಕುರಿತಾದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತನ್ನ ಕಾರ್ಯ ನಿರ್ವಹಿಸದೆ, ಕಾರ್ಯಾಂಗ ನೇತೃತ್ವದ ಸಮಿತಿಗೆ ಈ ವಿಚಾರ ತೀರ್ಮಾನಿಸಲು ಬಿಟ್ಟಿದೆ” ಎಂದು ಅಸಮಧಾನ ವ್ಯಕ್ತಪಡಿಸಿದರು.
ಓದಿ: ಯಾರು ಕನ್ನಡಿಗರು, ಯಾರು ಕನ್ನಡಿಗರಲ್ಲ ಎಂಬುದನ್ನು ನಿರ್ಧರಿಸುವವರು ಯಾರು?



ಸತ್ಯ ನುಡಿದಿರುವ ನ್ಯಾಯಮೂರ್ತಿಗಳಿಗೆ ಧನ್ಯವಾದಗಳು.
Truth is always bitter to digest