ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ತಾನು ಪ್ರತಿದಿನ ಹಸುವಿನ ಮೂತ್ರವನ್ನು ಕುಡಿಯುತ್ತೇನೆ ಎಂದು ಹೇಳಿದ್ದಾರೆ.
‘ಮ್ಯಾನ್ ವರ್ಸಸ್ ವೈಲ್ಡ್’ ಖ್ಯಾತಿಯ ವನ್ಯಜೀವಿ ಸಾಹಸಿ ಬೇರ್ ಗ್ರಿಲ್ಸ್ ಹಾಗೂ ’ಬೆಲ್‌ಬಾಟಂ’ ಚಿತ್ರದ ಅವರ ನಟಿ ಹುಮಾ ಖುರೇಷಿ ಅವರೊಂದಿಗಿನ ಇನ್ಸ್ಟಾಗ್ರಾಮ್ ಲೈವ್ ಶೋದಲ್ಲಿ ಅವರು ಮಾತನಾಡುತ್ತಿದ್ದರು.
ಈ ವಿಡಿಯೋದಲ್ಲಿ ಅಕ್ಷಯ್ ಕುಮಾರ್ ಮತ್ತು ಬೇರ್ ಗ್ರಿಲ್ಸ್ ಕಳೆದ ಜನವರಿಯಲ್ಲಿ ಮೂರು ದಿನಗಳ ಕಾಲ ಬಂಡಿಪುರ ರಾಷ್ಟ್ರೀಯ ಉದ್ಯಾನವನ ಮತ್ತು ಹುಲಿ ರಕ್ಷಿತಾರಣ್ಯದಲ್ಲಿ ಸಾಕ್ಷಚಿತ್ರ ಶೂಟಿಂಗ್‌ನಲ್ಲಿ ತಾವು ಪಾಲ್ಗೊಂಡಿದ್ದ ಬಗ್ಗೆ ಮಾತನಾಡಿದ್ದರು.
ಇದನ್ನೂ ಓದಿ: ಡಾಕ್ಟರ್ಸ್ ಸ್ಟ್ರೈಕ್ ‘ಜನಸಾಮಾನ್ಯರ ಅವೈಜ್ಞಾನಿಕ’ ನಡವಳಿಕೆ ಮತ್ತು ವೈದ್ಯಲೋಕದ ದ್ವಂದ್ವ
ಈ ಸಂದರ್ಭದಲ್ಲಿ, ಸಹನಟಿ ಹುಮಾ ಖುರೇಷಿ ಚಿತ್ರೀಕರಣದ ಸಮಯದಲ್ಲಿ ಅಕ್ಷಯ್ ಕುಮಾರ್ ಆನೆಯ ಲದ್ದಿಯ ಚಹಾ ಸೇವಿಸಿದ್ದರ ಬಗ್ಗೆ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಅಕ್ಷಯ,‘ಇದೇನೂ ನನಗೆ ದೊಡ್ಡ ವಿಷಯವಲ್ಲ. ಆಯುರ್ವೇದ ಕಾರಣಗಳಿಂದಾಗಿ ನಾನು ಪ್ರತಿದಿನ ಗೋಮೂತ್ರವನ್ನು ಸೇವಿಸುತ್ತೇನೆ’ ಎಂದು ಬಹಿರಂಗಗೊಳಿಸಿದ್ದಾರೆ.
ಬೇತ್ ಗ್ರಿಲ್ಸ್ ಜೊತೆ ಅಕ್ಷಯ್ ಕುಮಾರ್ ಅವರಲ್ಲದೆ, ಪ್ರಧಾನಿ ನರೇಂದ್ರ ಮೋದಿ, ನಟ-ರಾಜಕಾರಣಿ ರಜನಿಕಾಂತ್ ಕೂಡ ಸಾಕ್ಷ್ಯ ಚಿತ್ರದಲ್ಲಿ ನಟಿಸಿದ್ದರು.
ಅಕ್ಷಯ್ ಕುಮಾರ್ ಪಾಲ್ಗೊಂಡಿರುವ ಈ ಸಂಚಿಕೆ ಸೆಪ್ಟೆಂಬರ್ 11 ರಂದು ಡಿಸ್ಕವರಿ ಪ್ಲಸ್ ಅಪ್ಲಿಕೇಶನ್‌ನಲ್ಲಿ ಮತ್ತು ಸೆಪ್ಟೆಂಬರ್ 14 ರಂದು ಡಿಸ್ಕವರಿ ಚಾನೆಲ್‌ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.
ಇದನ್ನೂ ಓದಿ: ಕಕ್ಕಸು ಗುಂಡೀಲಿ ತರ್ಕಾರಿ ಬ್ಯೆಳ್ಕಂಡು ತಿನ್ಕಳಿ !


