ಕ್ರಿಕೆಟ್‌ ದಕ್ಷಿಣ
PC: DNA

ದಕ್ಷಿಣ ಆಫ್ರಿಕಾ ಸರ್ಕಾರವು ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್‌ಎ) ವನ್ನು ಅಮಾನತುಗೊಳಿಸಿ ಕ್ರೀಡೆಯ ಮೇಲೆ ನಿಯಂತ್ರಣ ಸಾಧಿಸಿದೆ. ದೇಶದ ಕ್ರಿಕೆಟ್ ಆಡಳಿತ ವರ್ಣಭೇದ ನೀತಿ ಭ್ರಷ್ಟಾಚಾರ ಸೇರಿದಂತೆ ಆರೋಪ ಹಲವಾರು ಆರೋಪಗಳನ್ನು ಎದುರಿಸುತ್ತಿದೆ.

2019 ರ ಡಿಸೆಂಬರ್‌ನಿಂದ ಭ್ರಷ್ಟಾಚಾರದ ಹಲವಾರು ನಿದರ್ಶನಗಳನ್ನು SASCOC ಸಂಸ್ಥೆ ಆರೋಪಿಸಿದೆ. ಸಂಸ್ಥೆಯು ಸಿಎಸ್‌ಎಗೆ ಬರೆದ ಪತ್ರದಲ್ಲಿ, ಸಿಎಸ್‌ಎ ಮಂಡಳಿ ಮತ್ತು ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಅಧಿಕಾರಿಗಳಿಗೆ “ಆಡಳಿತದಿಂದ ಇಳಿಯಿರಿ” ಎಂದು ಹೇಳಿದೆ.

SASCOC ಒಂದು ವಿಶೇಷ ಸಂಸ್ಥೆಯಾಗಿದ್ದು, ಇದು ಸರ್ಕಾರ ಮತ್ತು ಕ್ರೀಡಾ ಒಕ್ಕೂಟಗಳ ನಡುವಿನ ಸಂಬಂಧವನ್ನು ನೋಡಿಕೊಳ್ಳುತ್ತದೆ.

ಇದನ್ನೂ ಓದಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಮೇಲೆ FIR!

ಮಂಗಳವಾರ ನಡೆದ SASCOC ಸಭೆಯಲ್ಲಿ ತೆಗೆದುಕೊಳ್ಳಲಾದ ನಿರ್ಧಾರವನ್ನು ಸರ್ವಾನುಮತದ ಮತದಾನದಿಂದ ಅಂಗೀಕರಿಸಲಾಯಿತು.

ಕ್ರಿಕೆಟ್ ಮಂಡಳಿಯ ಕಾರ್ಯಚಟುವಟಿಕೆಯ ಮೇಲೆ ಸರಕಾರ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಐಸಿಸಿ ನಿಯಮ ಹೇಳುತ್ತದೆ. ಹೀಗೆ ಮಾಡಿದರೆ ತಂಡವು ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳಿಂದ ಹೊರಗುಳಿಯಬೇಕಾಗುತ್ತದೆ.

ತೀರಾ ಇತ್ತೀಚೆಗೆ ಜಿಂಬಾಬ್ವೆಯ ನಂತರ ಇಂತಹ ಅವಮಾನವನ್ನು ಎದುರಿಸುತ್ತಿರುವ ಎರಡನೇ ದೇಶ ಇದು.

ವಾಸ್ತವವಾಗಿ, ದಕ್ಷಿಣ ಆಫ್ರಿಕಾವು ಎರಡನೇ ಬಾರಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧಿಸಲ್ಪಟ್ಟ ಮೊದಲ ದೇಶವಾಗಲಿದೆ. ವರ್ಣಭೇದ ನೀತಿಯಿಂದಾಗಿ 1970 ಮತ್ತು 1990 ರ ನಡುವೆ ದೇಶವನ್ನು ಯಾವುದೇ ಅಂತರರಾಷ್ಟ್ರೀಯ ಕ್ರೀಡೆಯನ್ನು ಆಡದಂತೆ ನಿಷೇಧಿಸಲಾಗಿತ್ತು.


ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್‍ನಲ್ಲಿ ಭಾರತದ ಹೆಜ್ಜೆಗುರುತುಗಳು

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts