ಯುವತಿಯೊಬ್ಬಳನ್ನು ಕೊಡಲಿಯಿಂದ ಅಮಾನುಷವಾಗಿ ಹತ್ಯೆಗೈದ ವಿಡಿಯೋ  ಸಾಮಾಜಿಕ ಜಾಲತಾಣಲ್ಲಿ ಹರಿದಾಡುತ್ತಿದ್ದು, ಇದು ಭಾರತದಲ್ಲಿ ನಡೆದ ಘಟನೆಯಾಗಿದೆ ಎಂದು ವೈರಲ್‌ ಆಗಿದೆ. ವೀಡಿಯೊದಲ್ಲಿ ಯುವತಿಯೊಬ್ಬಳನ್ನು ಕಟ್ಟಿ, ಸಾಯುವವರೆಗೂ ಕೊಡಲಿಯಿಂದ ತಲೆಗೆ ಕ್ರೂರವಾಗಿ ಹೊಡೆಯುವುದು ದಾಖಲಾಗಿದೆ.

ವಿಡಿಯೋ ಅತೀ ಹಿಂಸಾತ್ಮಕ ಆಗಿರುವುದರಿಂದ ಅದನ್ನು ನಾನುಗೌರಿ.ಕಾಮ್‌ ಪ್ರಸಾರ ಮಾಡುತ್ತಿಲ್ಲ.

ಹಲವಾರು ಟ್ವಿಟ್ಟರ್ ಬಳಕೆದಾರರು ಈ ವೀಡಿಯೊವನ್ನು ಭಾರತದ್ದು ಎಂದು ಪ್ರತಿಪಾದಿಸಿ ಹಂಚಿಕೊಂಡಿದ್ದಾರೆ. ತಮ್ಮ ಪೋಸ್ಟ್‌‌ಗಳಲ್ಲಿ “ಮಾನವೀಯತೆ ಸತ್ತಿದೆ. ಇದು ಅನಾಗರಿಕ, ಆಘಾತಕಾರಿ. ಅವನನ್ನು ಕೂಡಾ ಅದೇ ರೀತಿಯಲ್ಲಿ ಶಿಕ್ಷಿಸುವಂತೆ ನಾನು ದೇಶದ ಎಲ್ಲ ಪೊಲೀಸರನ್ನು ವಿನಂತಿಸುತ್ತೇನೆ” ಎಂದು ಬರೆದಿದ್ದಾರೆ. ಟ್ವೀಟ್‌ ಅನ್ನು ಯುಪಿ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ: ಕೇರಳದ ಹಿಂದೂ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ? ಇಲ್ಲಿದೆ ಫ್ಯಾಕ್ಟ್‌ಚೆಕ್‌ ವಿವರ

ಆರ್ಕೈವ್ ಇಲ್ಲಿದೆ

ಅಷ್ಟೇ ಅಲ್ಲದೆ ಈ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಕೂಡಾ ಹಂಚಿಕೊಳ್ಳಲಾಗಿದ್ದು, ಇದು ಭಾರತ ವಿಡಿಯೋ ಆಗಿರಬಹುದು ಎಂದು ಪ್ರತಿಪಾದಿಸುತ್ತದೆ.

ಪೇಸ್‌ಬುಕ್ ಸ್ಕ್ರೀನ್‌ಶಾರ್ಟ್

ಫ್ಯಾಕ್ಟ್‌‌ಚೆಕ್‌

ವಿಡಿಯೋಗಳನ್ನು ಹಲವಾರು ಕೀಫ್ರೇಮ್‌ಗಳಾಗಿ ವಿಭಜಿಸಿ ಅವುಗಳನ್ನು ರಿವರ್ಸ್ ಸರ್ಚ್ ಮಾಡಿದಾಗ ಇದರ ಬಗೆಗಿನ ವರದಿ ರೆಡ್ಡಿಟ್‌ನಲ್ಲಿ ಕಂಡುಕೊಳ್ಳಲಾಗಿದೆ. ಬ್ರೆಜಿಲ್‌ನಲ್ಲಿ ಮಹಿಳೆಯನ್ನು ಕೊಲ್ಲಲಾಗಿದೆ ಎಂದು ತೋರಿಸಿಸುವ ಮಾಹಿತಿಯೊಂದಿಗೆ ವೀಡಿಯೊವನ್ನು ಅಲ್ಲಿ ಹಂಚಿಕೊಳ್ಳಲಾಗಿದೆ.

ಇಷ್ಟೇ ಅಲ್ಲದೆ ಕೀವರ್ಡ್‌ಗಳನ್ನು ಬಳಸಿ ಜಾಲತಾಣದಲ್ಲಿ ಮತ್ತಷ್ಟು ಹುಡುಕಾಟ ನಡೆಸಿದಾಗ ಫೇಸ್‌ಬುಕ್‌ನಲ್ಲಿ, “ಫೆಮಿನಿಕೇಡಿಯೊ – ಪ್ಯಾರೆಮ್ ಡೆ ನಾಸ್ ಮಾತಾರ್” ಎಂಬ ಪೇಜ್‌ನಲ್ಲಿ ಇದರ ಬಗ್ಗೆ ಮಾಹಿತಿ ಸಿಕ್ಕಿದೆ. ಅಲ್ಲಿ ಸೆಪ್ಟೆಂಬರ್ 1 ರ ಪೋಸ್ಟ್, ಥಾಲಿಯಾ ಟೊರೆಸ್ ಡಿ ಸೋಜಾ ಎಂಬ 23 ವರ್ಷದ ಯುವತಿಯನ್ನು ಕೊಲೆ ಮಾಡಲಾಗಿದೆ ಎಂದು ಹೇಳಿದೆ.

ಈ ಪೋಸ್ಟ್ ಪ್ರಕಾರ, ಈ ಘಟನೆ ಬ್ರೆಜಿಲ್‌ನ ಫೋರ್ಟಲೆಜಾದ ಗ್ರ್ಯಾಂಜಾ ಪೋರ್ಚುಗಲ್‌ನಲ್ಲಿ ನಡೆದಿದೆ. ಮೃತ ದೇಹವು ಅತ್ಯಂತ ಹಿಂಸಾತ್ಮಕ ಸಾವಿನ ಚಿಹ್ನೆಗಳನ್ನು ಹೊಂದಿದ್ದು, ಬಹುಶಃ ತಲೆಗೆ ಕೊಡಲಿಯಿಂದ ಹಲ್ಲೆ ನಡೆಸಲಾಗಿದೆ ಎಂದು ಬರೆಯಲಾಗಿದೆ.

ಇದನ್ನೂ ಓದಿ: ಮುಸ್ಲಿಂ ಮದುವೆಯಲ್ಲಿ ಪಾಲ್ಗೊಂಡಿದ್ದಕ್ಕೆ ಕೇರಳದ RSS ಕಾರ್ಯಕರ್ತನ ಮೇಲೆ ಹಲ್ಲೆ ಮಾಡಲಾಯಿತೇ?

ಇದಲ್ಲದೆ, ಯುವತಿಯ ಹೆಸರನ್ನು ಬಳಸಿಕೊಂಡು ಫೇಸ್‌ಬುಕ್‌ನಲ್ಲಿ ಕೀವರ್ಡ್ ಮೂಲಕ ಹುಡುಕಾಟ ನಡೆಸಿದಾಗ ಅರಾಕಟಿ ಪೋಲೇಶಿಯಾ 24 ಹೆಚ್ಎಸ್ ಎಂಬ ಪೇಜ್‌ನಲ್ಲೂ ಈ ಬಗ್ಗೆ ಬರೆಯಲಾಗಿದ್ದು, ಈ ಪೋಸ್ಟ್‌ನಲ್ಲಿ ವೈರಲ್ ವೀಡಿಯೊದಲ್ಲಿರುವ ಮಹಿಳೆಯಂತೆಯೇ ಅದೇ ಬಟ್ಟೆಗಳನ್ನು ಧರಿಸಿರುವುದನ್ನು ಕಾಣಬಹುದಾಗಿದೆ.

ಇಷ್ಟೇ ಅಲ್ಲದೆ ಗೂಗಲ್‌ನಲ್ಲಿ ಯುವತಿಯ ಹೆಸರಿನೊಂದಿಗೆ ಹುಡುಕಾಟ ನಡೆಸಿದಾಗ ಕೂಡಾ ಘಟನೆಯ ಕುರಿತು ಸಿಎನ್‌ನ್ಯೂಸ್ ವರದಿ ಮಾಡಿರುವ ಸುದ್ದಿಯನ್ನು ಓದಬಹುದಾಗಿದೆ.

ಆದ್ದರಿಂದ, ಕ್ರೂರವಾಗಿ ಕೊಲ್ಲಲ್ಪಟ್ಟ ಈ ಮಹಿಳೆಯ ವೀಡಿಯೊ ಬ್ರೆಜಿಲ್‌ನದ್ದಾಗಿದ್ದು, ಭಾರತದಲ್ಲಿ ಸಂಭವಿಸಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಸುಳ್ಳಾಗಿದೆ ಎಂದು ಈ ಮೂಲಕ ತಿಳಿದುಕೊಳ್ಳಬಹುದು.


ಇದನ್ನೂ ಓದಿ:  ಪ್ರಣಬ್ ಮುಖರ್ಜಿ ನಿಧನಕ್ಕೆ ಪತ್ರಕರ್ತೆ ರಾಣಾ ಅಯೂಬ್ ಸಂತಸಪಟ್ಟಿದ್ದು ಸುಳ್ಳುಸುದ್ದಿ

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts