Homeದಿಟನಾಗರಫ್ಯಾಕ್ಟ್‌‌ಚೆಕ್: ಪ್ರಣಬ್ ಮುಖರ್ಜಿ ನಿಧನಕ್ಕೆ ಪತ್ರಕರ್ತೆ ರಾಣಾ ಅಯೂಬ್ ಸಂತಸಪಟ್ಟಿದ್ದು ಸುಳ್ಳುಸುದ್ದಿ

ಫ್ಯಾಕ್ಟ್‌‌ಚೆಕ್: ಪ್ರಣಬ್ ಮುಖರ್ಜಿ ನಿಧನಕ್ಕೆ ಪತ್ರಕರ್ತೆ ರಾಣಾ ಅಯೂಬ್ ಸಂತಸಪಟ್ಟಿದ್ದು ಸುಳ್ಳುಸುದ್ದಿ

ಟ್ವಿಟ್ಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಫಾಲೋ ಮಾಡುತ್ತಿರುವ ಜ್ಯೋತ್ಸ್ನಾ ವರ್ಮಾ ಎಂಬ ಮಹಿಳೆ ರಾಣಾ ಅಯೂಬ್‌ ಅವರ ಮೇಲೆ ದಾಳಿಗೆ ಫೋಟೋಶಾಪ್ ಮಾಡಿದ ನಕಲಿ ಟ್ವೀಟ್‌ನ್ನು ಉಲ್ಲೇಖಿಸಿದ್ದಾರೆ.

- Advertisement -
- Advertisement -

ಆಗಸ್ಟ್ 31 ರಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ನಿಧನವಾಗಿದ್ದಕ್ಕೆ ಸಂಭ್ರಮಿಸಿ ಪತ್ರಕರ್ತೆ ರಾಣಾ ಅಯೂಬ್ ಟ್ವೀಟ್‌ ಮಾಡಿದ್ದಾರೆ ಎನ್ನಲಾದ ಟ್ವೀಟ್‌ನ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ವೈರಲ್ ಸ್ಕ್ರೀನ್‌ಶಾಟ್‌ನಲ್ಲಿ, ಪ್ರಣಬ್ ಮುಖರ್ಜಿ ಅವರ ಫೋಟೋ ಹಾಕಿ “ಹುತಾತ್ಮ ಅಫ್ಜಲ್ ಗುರುವಿನ ಅರ್ಜಿಯನ್ನು ನಿರಾಕರಿಸಿದವರು ಇಂದು ಸತ್ತು ಹೋದರು, ಇಂದು ಅಫ್ಜಲ್ ಗುರುವಿಗೆ ಶಾಂತಿ ಸಿಗುತ್ತದೆ” ಎಂದು ಬರೆದಿದೆ.

ಪ್ರಣಬ್ ಮುಖರ್ಜಿ ಭಾರತದ ರಾಷ್ಟ್ರಪತಿಯಾಗಿದ್ದ ಅವಧಿಯಲ್ಲಿ, 2001 ರ ಸಂಸತ್ ದಾಳಿಯ ಪ್ರಮುಖ ಆರೋಪಿ ಅಫ್ಜಲ್ ಗುರುವಿನ ಕ್ಷಮಾಪನಾ ಅರ್ಜಿಯನ್ನು ತಿರಸ್ಕರಿಸಿದ್ದರು.

ಮತ್ತಷ್ಟು ಫ್ಯಾಕ್ಟ್‌ಚೆಕ್ ಓದಲು ಇಲ್ಲಿ ಕ್ಲಿಕ್‌ ಮಾಡಿ

ಈ ಸ್ಕ್ರೀನ್‌ಶಾಟ್ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, “ಜಿಹಾದಿ ಮನಸ್ಸು ಹೇಗೆ ಕಾರ್ಯನಿರ್ವಹಿಸುತ್ತದೆ” ಎಂಬ ಶೀರ್ಷಿಕೆಯೊಂದಿಗೆ ಹರಿದಾಡುತ್ತಿದೆ.

ಇದರ ಆರ್ಕೈವ್ ಇಲ್ಲಿದೆ.
ಇದರ ಆರ್ಕೈವ್ ಇಲ್ಲಿದೆ.
ಆರ್ಕೈವ್

ಫ್ಯಾಕ್ಟ್‌‌ಚೆಕ್‌‌

ರಾಣಾ ಅಯೂಬ್ ಅವರ ಟ್ವಿಟರ್ ಟೈಮ್‌ಲೈನ್‌ನಲ್ಲಿ ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಯಾವುದೆ ಟ್ವೀಟ್‌‌ ಇಲ್ಲ. ಅಷ್ಟೇ ಅಲ್ಲದೆ ಈ ವೈರಲ್ ಸ್ಕ್ರೀನ್‌ಶಾಟ್‌ ಅನ್ನು ಸರಿಯಾಗಿ ಗಮನಿಸಿದೆರೆ ಅದು ನಕಲಿ ಟ್ವೀಟ್ (ಎಡಿಟ್ ಮಾಡಲಾದ) ಎಂದು ಗುರುತಿಸಬಹುದು. ಮುಖ್ಯವಾಗಿ ಈ ವೈರಲ್ ಟ್ವೀಟ್‌‌ನ ಸ್ಕ್ರೀನ್‌ಶಾರ್ಟ್‌ನಲ್ಲಿ ನಾವು ನಾಲ್ಕು ತಪ್ಪುಗಳನ್ನು ಗುರುತಿಸಬಹುದು.

ವೈರಲ್ ಟ್ವೀಟ್ (ಎಡ) ಮತ್ತು ರಾಣಾ ಅಯ್ಯುಬ್ (ಬಲ) ಅವರ ಮತ್ತೊಂದು ಟ್ವೀಟ್‌ನ ಹೋಲಿಕೆ ಹೋಲಿಕೆ. (ಫೋಟೋ: ದಿ ಕ್ವಿಂಟ್‌ )
  • ವೈರಲ್ ಟ್ವೀಟ್‌ನಲ್ಲಿ ಬಳಕೆದಾರ ಹೆಸರು ಮತ್ತು ಬರಹದ ನಡುವಿನ ಸ್ಥಳವು ಸಾಮಾನ್ಯ ಟ್ವೀಟ್‌ನಲ್ಲಿ ಕಾಣುವುದಕ್ಕಿಂತ ಹೆಚ್ಚಾಗಿದೆ.
  • ವೈರಲ್ ಟ್ವೀಟ್‌ನಲ್ಲಿ ಡೇಟ್‌ಲೈನ್ ಇಲ್ಲ.
  • ಟ್ವೀಟ್‌ಗಳಲ್ಲಿ ಸಾಮಾನ್ಯವಾಗಿ ಕಾಣುವಂತೆ ‘ಕಾಮೆಂಟ್‌’, ‘ರಿಟ್ವೀಟ್’ ಮತ್ತು ‘ಲೈಕ್’ ಐಕಾನ್‌ಗಳು ವೈರಲ್ ಟ್ವೀಟ್‌ನಲ್ಲಿ ಎಡಗಡೆಗೆ ಹೊಂದಿಕೊಂಡಿದೆ.
  • ವೈರಲ್ ಟ್ವೀಟ್ ‘ಶೇರ್‌’ ಆಯ್ಕೆಯ ಐಕಾನ್‌ ಹೊಂದಿಲ್ಲ.

ಇದನ್ನೂಓದಿ: ಜಿಡಿಪಿ ಪಾತಾಳದಲ್ಲಿದ್ದರೂ ಸುಳ್ಳು ಹೇಳುತ್ತಿರುವ ಕರ್ನಾಟಕ ಬಿಜೆಪಿ.

ಅಷ್ಟೇ ಅಲ್ಲದೆ ಸ್ವತಃ ರಾಣಾ ಅಯೂಬ್ ಅವರು ಕೂಡಾ ಈ ಟ್ವೀಟ್ ಅನ್ನು ನಕಲಿ ಎಂದು ಕರೆದಿದ್ದಾರೆ. “ಸಾಮಾಜಿಕ ಜಾಲತಾಣದಲ್ಲಿ ಮೋದಿ ಫಾಲೋ ಮಾಡುತ್ತಿರುವ ಜ್ಯೋತ್ಸ್ನಾ ವರ್ಮಾ ಎಂಬ ಮಹಿಳೆ, ನನ್ನ ಮೇಲೆ ದಾಳಿ ಮಾಡಲು ಫೋಟೋಶಾಪ್ ಮಾಡಿದ ನಕಲಿ ಟ್ವೀಟ್‌ನ್ನು ಉಲ್ಲೇಖಿಸುತ್ತಿದ್ದಾರೆ” ಎಂದು ಅವರು ಟ್ವಿಟ್ಟ್‌ರ್‌ ಇಂಡಿಯಾಗೆ ಟ್ಯಾಗ್‌ ಮಾಡಿ ದೂರು ನೀಡಿದ್ದಾರೆ. ಆದರೆ ಮಹಿಳೆಯು ಅದನ್ನು ಡಿಲಿಟ್ ಮಾಡಿದ್ದಾರೆ. ಅವರು ಹಾಕಿರುವ ಟ್ವೀಟ್‌ನ ಆರ್ಕೈವ್ ಇಲ್ಲಿದೆ.

ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೈರಲ್ ಸ್ಕ್ರೀನ್‌‌ಶಾರ್ಟ್ ನಕಲಿ ಎಂದು ತಿಳಿದುಕೊಳ್ಳಬಹುದು.

ಕೃಪೆ: ದಿ ಕ್ವಿಂಟ್


ಇದನ್ನೂ ಓದಿ:  ಭೂಮಿಪೂಜೆಯಂದು ಇಂಗ್ಲೆಂಡ್‌ ಪ್ರಧಾನಿ ರಾಮನ ವಿಗ್ರಹಕ್ಕೆ ಅಭಿಷೇಕ ಮಾಡಿದರೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಮಾದಕ ದ್ರವ್ಯ ಕಳ್ಳಸಾಗಣೆ, ಜುಗಾರಿ,  ಭಿಕ್ಷೆ ಬೇಡುವುದನ್ನು ‘ವೃತ್ತಿ’ ಎಂದು ಪಟ್ಟಿ ಮಾಡಿದ...

0
ಯೋಗಿ ಆದಿತ್ಯನಾಥ್‌ ನೇತೃತ್ವದ ಉತ್ತರಪ್ರದೇಶ ಸರಕಾರ ಮತ್ತೆ ಮುಜುಗರಕ್ಕೆ ಈಡಾಗಿದ್ದು, ಉತ್ತರಪ್ರದೇಶ ಪೊಲೀಸ್ ಮೊಬೈಲ್ ಅಪ್ಲಿಕೇಶನ್ UPCOPನಲ್ಲಿ ಬಾಡಿಗೆದಾರರ ಪರಿಶೀಲನೆಗಾಗಿ ವೃತ್ತಿ ಬಗ್ಗೆ ಪಟ್ಟಿ ಮಾಡಿದೆ. ಅವುಗಳಲ್ಲಿ 'ಮಾದಕ ದ್ರವ್ಯಗಳ ಕಳ್ಳಸಾಗಣೆ', 'ಜುಗಾರಿ',  ಮತ್ತು...