Homeಅಂತರಾಷ್ಟ್ರೀಯಅಮೆರಿಕ ತೊರೆಯಿರಿ, ಇಲ್ಲ ಶೂಟ್ ಮಾಡುತ್ತೇವೆ: ಭಾರತ, ಚೀನಿ ಟೆಕ್ಕಿಗಳಿಗೆ ಬೆದರಿಕೆ

ಅಮೆರಿಕ ತೊರೆಯಿರಿ, ಇಲ್ಲ ಶೂಟ್ ಮಾಡುತ್ತೇವೆ: ಭಾರತ, ಚೀನಿ ಟೆಕ್ಕಿಗಳಿಗೆ ಬೆದರಿಕೆ

ಹಿಂತಿರುಗಿ ಹೋಗದೆ ಇದ್ದಲ್ಲಿ, ಕೆಲಸದ ಸ್ಥಳಗಳು, ಆಟದ ಮೈದಾನಗಳು ಮತ್ತು ಪೂಲ್‌ಗಳಲ್ಲಿ “ನಿರ್ದಯವಾಗಿ ಶೂಟ್” ಮಾಡದೇ ನಮಗೆ ಬೇರೆ ದಾರಿಯಿಲ್ಲ ಎಂದು ಪತ್ರದಲ್ಲಿ ತಿಳಿಸಿದೆ.

- Advertisement -
- Advertisement -

ಅಮೆರಿಕದಲ್ಲಿ ಮತ್ತೆ ಭಾರತೀಯರ ಮೇಲೆ ಜನಾಂಗೀಯ ದ್ವೇಷ ಆರಂಭವಾಗಿದೆ. ಟೆಕ್ಸಾಸ್‌ನ ಇರ್ವಿಂಗ್‌ನಲ್ಲಿ ವಾಸವಿರುವ ಭಾರತೀಯರು ಮತ್ತು ಚೀನಿಯರಿಗೆ ಅನಾಮಧೇಯ ಬೆದರಿಕೆ ಪತ್ರ ಬಂದಿದ್ದು, ತಮ್ಮ ದೇಶಗಳಿಗೆ ತೆರಳುವಂತೆ ಆದೇಶಿಸಲಾಗಿದೆ. ಇಲ್ಲದಿದ್ದರೇ ನಿರ್ದಯವಾಗಿ ಗುಂಡು ಹಾರಿಸುವುದಾಗಿ ಬೆದರಿಸಲಾಗಿದೆ.

ದಪ್ಪ ಅಕ್ಷರಗಳಲ್ಲಿ “ರಿಟರ್ನ್ ಬ್ಯಾಕ್ ಟು ಯುವರ್ ಕಂಟ್ರಿ”  ಎಂದು ಬರೆದಿರುವ ಈ ಪತ್ರವು  ಐಟಿ ಉದ್ಯಮ ಮತ್ತು ಇತರ ವೃತ್ತಿಪರ ಕ್ಷೇತ್ರಗಳಲ್ಲಿ ಉದ್ಯೋಗ ಪಡೆದಿರುವ ಭಾರತೀಯರು ಮತ್ತು ಚೀನೀಯರನ್ನು ಗುರಿಯಾಗಿಸಿಕೊಂಡಿದೆ. ಹಿಂತಿರುಗಿ ಹೋಗದೆ ಇದ್ದಲ್ಲಿ, ಕೆಲಸದ ಸ್ಥಳಗಳು, ಆಟದ ಮೈದಾನಗಳು ಮತ್ತು ಪೂಲ್‌ಗಳಲ್ಲಿ “ನಿರ್ದಯವಾಗಿ ಶೂಟ್” ಮಾಡದೇ ನಮಗೆ ಬೇರೆ ದಾರಿಯಿಲ್ಲ ಎಂದು ಪತ್ರದಲ್ಲಿ ತಿಳಿಸಿದೆ.

image courtesy: Thenewsminute

ಇರ್ವಿಂಗ್‌ನಲ್ಲಿರುವ ಪೊಲೀಸ್ ಇಲಾಖೆ ಭಾರತೀಯ ಮತ್ತು ಚೀನಾದ ಟೆಕ್ಕಿಗಳಿಗೆ ಬೆದರಿಕೆ ಹಾಕುವ ಜನಾಂಗೀಯ ಪತ್ರದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಬೆದರಿಕೆ ಪತ್ರವನ್ನು ಸಮುದಾಯದ ಸದಸ್ಯರೊಬ್ಬರು ಸ್ವೀಕರಿಸಿದ್ದು, ನಾವು ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಪೊಲೀಸರು ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಇನ್ನು ಪತ್ರವನ್ನು ಟೆಕ್ಸಾಸ್‌ನ ಇರ್ವಿಂಗ್ ನಿವಾಸಿಯೊಬ್ಬರಿಗೆ ಕಳುಹಿಸಿದ್ದು, ಇದನ್ನು ಪ್ರತ್ಯೇಕ ಪ್ರಕರಣ ಎಂದೇ ಪರಿಗಣಿಸುತ್ತೇವೆ ಎಂದಿದ್ದಾರೆ.  ಪತ್ರದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದ್ದರೆ ತನಿಖಾ ಅಧಿಕಾರಿಯನ್ನು ಸಂಪರ್ಕಿಸುವಂತೆ ಪೊಲೀಸರು ಸಾರ್ವಜನಿಕರನ್ನು ಕೋರಿದ್ದಾರೆ.

ಕೊರೋನಾ ಹಿನ್ನೆಯಲ್ಲಿ ಅಮೆರಿಕದಲ್ಲಿ ನಿರುದ್ಯೋಗ ಹೆಚ್ಚಾಗಿದ್ದು, H-1B ವೀಸಾ ಹೊಂದಿದವರ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಹೊಸ ವೀಸಾಗಳ ವಿತರಣೆಯನ್ನು ನಿಲ್ಲಿಸಲು ಅಧ್ಯಕ್ಷ ಟ್ರಂಪ್ ಆದೇಶಿಸಿದ್ದರು. ವೀಸಾಗಳ ನವೀಕರಣ ಇಲ್ಲದೆ ಭಾರತಕ್ಕೆ ಮರಳಿದ್ದ ಅನೇಕ ಭಾರತೀಯರು ಇಲ್ಲೇ ಸಿಲುಕಿದ್ದರು. ಹೀಗಾಗಿ ಕೆಲ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. H-1B ವೀಸಾ ಹೊಂದಿದವರಲ್ಲಿ ಹೆಚ್ಚಿನವರು ಭಾರತೀಯರೇ ಆಗಿದ್ದಾರೆ.

ಸದ್ಯ ಬೆದರಿಕೆ ಪತ್ರವನ್ನು ಗಮನದಲ್ಲಿಇರಿಸಿಕೊಂಡು ನೋಡುವುದಾದರೇ, ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲೇ ಪತ್ರ ಬರೆಯಲಾಗಿದೆ ಎನ್ನಬಹುದು. ಅಮೆರಿಕದಲ್ಲಿನ ಐಟಿ ವಿಭಾಗದ ಅತಿಹೆಚ್ಚು ಉದ್ಯೋಗಗಳು ಭಾರತೀಯರು ಮತ್ತು ಚೀನಿಯರ ಪಾಲಾಗಿವೆ.

ಈ ಹಿಂದೆಯೂ ಕೂಡ ಯುಎಸ್‌ಎನಲ್ಲಿ ಭಾರತೀಯರನ್ನು ಗುರಿಯಾಗಿಸಿ ಜನಾಂಗೀಯ ಕೃತ್ಯ ನಡೆಸಲಾಗಿದೆ. 2017ರ ಫೆಬ್ರವರಿ 22 ರಂದು ಕಾನ್ಸಾಸ್‌ನ ಓಲಾಥೆಯ ಭಾರತೀಯ ನಿವಾಸಿ ಶ್ರೀನಿವಾಸ್ ಕುಚಿಭೋಟ್ಲಾ ಅವರನ್ನು ಆಡಮ್ ಪ್ಯೂರಿಂಟನ್ ಎಂಬುವವನು ಗುಂಡಿಕ್ಕಿ ಹತ್ಯೆ ಮಾಡಿದ್ದನು. ಜೊತೆಯಲ್ಲಿದ್ದ ಅಲೋಕ್ ಮದಾಸಾನಿ ಮೇಲೂ ದಾಳಿ ಮಾಡಿ ’ನನ್ನ ದೇಶ ಬಿಟ್ಟು ಹೊರಟುಹೋಗಿ’ ಮತ್ತು ಭಯೋತ್ಪಾದಕರು ಎಂದು ಕೂಗಿ ಗುಂಡು ಹಾರಿಸಲಾಗಿತ್ತು ಎಂದು ವರದಿಯಾಗಿದೆ.

ಇನ್ನು ನಿನ್ನೆಯ ಘಟನೆ ಮತ್ತೆ ಅಮೆರಿಕದಲ್ಲಿ ಭಾರತೀಯರ ಮೇಲೆ ದಾಳಿಗಳು ನಡೆಯುವ ಸಂಭವವನ್ನು ಸೂಚಿಸುತ್ತಿದೆ. ಪೊಲೀಸರು ಈ ಬಗ್ಗೆ ಕ್ರಮ ಕೈಗೊಳುವ ಭರವಸೆ ನೀಡಿದ್ದರೂ, ಟೆಕ್ಸಾಸ್‌ನ ಇರ್ವಿಂಗ್‌ನಲ್ಲಿ ವಾಸವಿರುವ ಭಾರತೀಯರು ಮತ್ತು ಚೀನಿಯರಲ್ಲಿ ಆತಂಕ ಕಡಿಮೆಯಾಗಿಲ್ಲ.


ಇದನ್ನೂ ಓದಿ:H-1B ವೀಸಾ: ಷರತ್ತುಗಳೊಂದಿಗೆ ನಿಯಮ ಸಡಿಲಿಸಿದ ಅಮೆರಿಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...