Homeಅಂತರಾಷ್ಟ್ರೀಯಗಾಝಾ ಪಟ್ಟಿಯಲ್ಲಿರುವ ಆಸ್ಪತ್ರೆಗಳನ್ನು ರಕ್ಷಿಸಬೇಕು: ಜೋ ಬೈಡನ್

ಗಾಝಾ ಪಟ್ಟಿಯಲ್ಲಿರುವ ಆಸ್ಪತ್ರೆಗಳನ್ನು ರಕ್ಷಿಸಬೇಕು: ಜೋ ಬೈಡನ್

- Advertisement -
- Advertisement -

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು ಇಸ್ರೇಲ್ ಸೇನೆ ಸುತ್ತುವರಿದ ಬಗ್ಗೆ ಪ್ರತಿಕ್ರಿಯಿಸಿದ ಅಮೆರಿಕದ ಅಧ್ಯಕ್ಷ ಜೋ ಬೈಡನ್‌, ಗಾಜಾ ಪಟ್ಟಿಯಲ್ಲಿರುವ ಆಸ್ಪತ್ರೆಗಳನ್ನು ರಕ್ಷಿಸಬೇಕು ಎಂದು ಹೇಳಿದ್ದಾರೆ.

ಇಸ್ರೇಲ್‌ ಯುದ್ಧ ಟ್ಯಾಂಕ್‌ಗಳು ಗಾಝಾ ನಗರದ ಮುಖ್ಯ ವೈದ್ಯಕೀಯ ಕೇಂದ್ರವಾದ ಅಲ್ ಶಿಫಾ ಆಸ್ಪತ್ರೆಯ ಹೊರಗೆ ನಿಂತಿವೆ. ಆಸ್ಪತ್ರೆಯಿಂದ ಗಾಯಾಳುಗಳನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಅಡ್ಡಿಯಾಗಿದೆ.

ಅಲ್-ಶಿಫಾ ಆಸ್ಪತ್ರೆಯನ್ನು ಇಸ್ರೇಲ್ ಸೇನೆ ಸುತ್ತುವರಿದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಆಶ್ರಯ ಪಡೆದಿದ್ದ ಸುಮಾರು 2,500 ನಾಗರಿಕರು, 650 ರೋಗಿಗಳು, 500 ಆರೋಗ್ಯಸೇವೆ ಕಾರ್ಯಕರ್ತರು ಆಸ್ಪತ್ರೆಯಿಂದ ತೆರಳಿದ್ದಾರೆ ಎಂದು ವಿಶ್ವಸಂಸ್ಥೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಮಾಸ್‌ ಸಶಸ್ತ್ರ ಗುಂಪು ಅ.7 ರಂದು ದಕ್ಷಿಣ ಇಸ್ರೇಲ್‌ ಮೇಲೆ ನಡೆಸಿದ ದಾಳಿಯಲ್ಲಿ ಸುಮಾರು 1,200 ಜನರು ಮೃತಪಟ್ಟಿದ್ದು, 240 ಜನರನ್ನು ಒತ್ತೆಯಾಳುಗಳಾಗಿ ಇರಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಇಸ್ರೇಲ್‌ ಯುದ್ಧ ಘೋಷಿಸಿ ನಡೆಸಿದ ದಾಳಿಯಲ್ಲಿ 11,100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಗಾಝಾ ವೈದ್ಯಕೀಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಮೃತರಲ್ಲಿ 40% ಮಕ್ಕಳಿದ್ದಾರೆ ಎಂದು ಪ್ಯಾಲೆಸ್ತೀನ್‌ ಸಚಿವಾಲಯವು ತಿಳಿಸಿದೆ.

ಗಾಝಾದಲ್ಲಿ ಮೂರನೇ ಎರಡರಷ್ಟು ಜನರು ಇಸ್ರೇಲ್‌ನ ಮಿಲಿಟರಿ ದಾಳಿಯಿಂದ ನಿರಾಶ್ರಿತರಾಗಿದ್ದಾರೆ. ಗಾಝಾದ ಪ್ರಜೆಗಳಿಗೆ ದಕ್ಷಿಣಕ್ಕೆ ತೆರಳಲು ಈ ಮೊದಲು ಇಸ್ರೇಲ್‌ ಪಡೆ ಸೂಚಿಸಿತ್ತು. ಇದರಿಂದಾಗಿ ಲಕ್ಷಾಂತರ ಮಂದಿ ವಲಸೆ ಹೋಗಿದ್ದಾರೆ.

ಗಾಝಾ ಆರೋಗ್ಯ ಸಚಿವಾಲಯದ ವಕ್ತಾರ ಅಶ್ರಫ್ ಅಲ್-ಕಿದ್ರಾ ಮಾತನಾಡುತ್ತಾ, ಉತ್ತರ ಗಾಝಾದಲ್ಲಿ ಆಸ್ಪತ್ರೆಯ ಮೇಲೆ ಇಸ್ರೇಲ್‌ ಪಡೆಗಳು ದಾಳಿ ನಡೆಸುತ್ತಿದೆ. ವಿದ್ಯುತ್ ಕೊರತೆಯಿಂದಾಗಿ 3 ನವಜಾತ ಶಿಶುಗಳು ಸೇರಿದಂತೆ ಹಿಂದಿನ 3 ದಿನಗಳಲ್ಲಿ 32 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.

ಇಸ್ರೇಲ್‌ ಮಿಲಿಟರಿ ಮಂಗಳವಾರ ಮುಂಜಾನೆ ಇಸ್ರೇಲ್‌ನಿಂದ ಅಲ್ ಶಿಫಾಗೆ ಇನ್‌ಕ್ಯುಬೇಟರ್‌ಗಳ ವರ್ಗಾವಣೆಗೆ ಮನವೀಯ ಪ್ರಯತ್ನವನ್ನು ಮಾಡುವುದಾಗಿ ಹೇಳಿದೆ.

ಅಲ್ ಶಿಫಾ ಆಸ್ಪತ್ರೆಯಲ್ಲಿ ಕನಿಷ್ಠ 650 ರೋಗಿಗಳು ಇನ್ನೂ ಇದ್ದಾರೆ. ಆಸ್ಪತ್ರೆಗಳಲ್ಲಿನ ಸಾವಿನ ಬಗ್ಗೆ ವರದಿ ಬಳಿಕ ಆಸ್ಪತ್ರೆಯನ್ನು ರಕ್ಷಿಸಬೇಕು ಎಂದು ಅಮೆರಿಕ ಅಧ್ಯಕ್ಷ ಬಿಡೆನ್ ಹೇಳಿದ್ದಾರೆ. ಆಸ್ಪತ್ರೆಗಳಿಗೆ ಸಂಬಂಧಿಸಿದಂತೆ ಮೃದು ನಿಲುವು ಹೊಂದಬೇಕು ಮತ್ತು ನಾವು ಇಸ್ರೇಲ್‌ನೊಂದಿಗೆ ಸಂಪರ್ಕದಲ್ಲಿರುತ್ತೇವೆ ಎಂಬುದು ನನ್ನ ಭರವಸೆ ಮತ್ತು ನಿರೀಕ್ಷೆಯಾಗಿದೆ ಎಂದು ಬಿಡೆನ್ ಸೋಮವಾರ ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಕದನ ವಿರಾಮ ಮತ್ತು ಕೈದಿಗಳ ಬಿಡುಗಡೆಗೆ ಮಾತುಕತೆ ಪ್ರಯತ್ನವು ನಡೆಯುತ್ತಿದೆ. ಆದ್ದರಿಂದ ನಾನು ಸ್ವಲ್ಪ ಭರವಸೆಯಲ್ಲಿದ್ದೇನೆ. ಆಸ್ಪತ್ರೆಗಳನ್ನು ರಕ್ಷಿಸಬೇಕು ಎಂದು ಹೇಳಿದ್ದಾರೆ.

ಹಮಾಸ್ ಆಸ್ಪತ್ರೆಗಳನ್ನು ಮಿಲಿಟರಿ ಉದ್ದೇಶಗಳಿಗಾಗಿ ಬಳಸುತ್ತದೆ ಎಂದು ಇಸ್ರೇಲ್ ಹೇಳಿದೆ ಮತ್ತು ಇಸ್ರೇಲ್‌ನ ಮಿಲಿಟರಿ ಪಡೆ ಸೋಮವಾರ ವೀಡಿಯೊ ಮತ್ತು ಫೋಟೋಗಳನ್ನು ಬಿಡುಗಡೆ ಮಾಡಿದ್ದು, ಕ್ಯಾನ್ಸರ್ ಚಿಕಿತ್ಸೆಯ  ಆಸ್ಪತ್ರೆಯಾದ ರಾಂಟಿಸ್ಸಿ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಡಲಾಗಿದೆ ಎಂದು ಆರೋಪಿಸಿದೆ.

ಹಮಾಸ್‌ನ ಸಶಸ್ತ್ರ ವಿಭಾಗವಾದ ಅಲ್-ಕಸ್ಸಾಮ್ ಬ್ರಿಗೇಡ್ಸ್ ತನ್ನ ಟೆಲಿಗ್ರಾಮ್ ಚಾನೆಲ್‌ನಲ್ಲಿ ಆಡಿಯೋ ಪೋಸ್ಟ್ ಮಾಡಿದ್ದು, 5 ದಿನಗಳ ಕದನ ವಿರಾಮಕ್ಕೆ ಪ್ರತಿಯಾಗಿ 70 ಮಹಿಳೆಯರು ಮತ್ತು ಮಕ್ಕಳ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಹಮಾಸ್‌ ಸಿದ್ಧವಾಗಿದೆ ಎಂದು ಹೇಳಿದೆ. ಈ ಪ್ರಸ್ತಾಪವನ್ನು ಇಸ್ರೇಲ್ ಸ್ವೀಕರಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನು ಓದಿ: ಆರ್ಥಿಕ ಅಪರಾಧಿಗಳಿಗೆ ಕೈಕೋಳ ತೊಡಿಸಬಾರದು: ಸಂಸದೀಯ ಸಮಿತಿ ಶಿಫಾರಸು

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆಯೂ ಯೋಚಿಸಬಹುದು: ಸುಪ್ರೀಂ ಕೋರ್ಟ್‌

0
ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅರವಿಂದ್ ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ನೀಡುವ ಬಗ್ಗೆ ಕೂಡ ನಾವು ಯೋಚಿಸಬಹುದು ಎಂದು ಸುಪ್ರೀಂ ಕೋರ್ಟ್ ನಿನ್ನೆ ಹೇಳಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ತನ್ನ...