Homeಮುಖಪುಟಆರ್ಥಿಕ ಅಪರಾಧಿಗಳಿಗೆ ಕೈಕೋಳ ತೊಡಿಸಬಾರದು: ಸಂಸದೀಯ ಸಮಿತಿ ಶಿಫಾರಸು

ಆರ್ಥಿಕ ಅಪರಾಧಿಗಳಿಗೆ ಕೈಕೋಳ ತೊಡಿಸಬಾರದು: ಸಂಸದೀಯ ಸಮಿತಿ ಶಿಫಾರಸು

- Advertisement -
- Advertisement -

ಆರ್ಥಿಕ ಅಪರಾಧಗಳ ಆರೋಪ ಹೊತ್ತಿರುವ ವ್ಯಕ್ತಿಗಳಿಗೆ ಕೈಕೋಳ ತೊಡಿಸಬಾರದು ಎಂದು ಸಂಸದೀಯ ಸಮಿತಿ ಶಿಫಾರಸು ಮಾಡಿದೆ.

ಅತ್ಯಾಚಾರ ಮತ್ತು ಕೊಲೆಯಂತಹ ಘೋರ ಅಪರಾಧಗಳಿಗಾಗಿ ಬಂಧಿಸಲ್ಪಟ್ಟವರೊಂದಿಗೆ ಅವರನ್ನು ಸೇರಿಸಬಾರದು ಎಂದು ಸಮಿತಿಯು ಹೇಳಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್‌ಎಸ್‌ಎಸ್) ಗೆ ಬದಲಾವಣೆಗಳನ್ನು ಸಮಿತಿಯು ಶಿಫಾರಸು ಮಾಡಿದೆ.

ಆ.11ರಂದು ಲೋಕಸಭೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS-2023) ಮಸೂದೆಯನ್ನು ಭಾರತೀಯ ನ್ಯಾಯ ಸಂಹಿತಾ (BNS-2023) ಮತ್ತು ಭಾರತೀಯ ಸಾಕ್ಷಾ ಅಧಿನಿಯಮ (BSA-2023) ಮಸೂದೆಗಳೊಂದಿಗೆ ಪರಿಚಯಿಸಲಾಯಿತು. ಮೂರು ಪ್ರಸ್ತಾವಿತ ಕಾನೂನುಗಳು ಕ್ರಮವಾಗಿ ಕ್ರಿಮಿನಲ್ ಪ್ರೊಸೀಜರ್ ಆಕ್ಟ್ 1898, ಇಂಡಿಯನ್ ಪೀನಲ್ ಕೋಡ್ 1860 ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್ 1872ರಲ್ಲಿ ಬದಲಾವಣೆಯನ್ನು ಹೇಳುತ್ತದೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ನಿಬಂಧನೆ 43(3)ರಲ್ಲಿ ವಿವರಿಸಿರುವಂತೆ ಆಯ್ದ ಘೋರ ಅಪರಾಧಗಳ ಆರೋಪಿಗಳು ಪರಾರಿಯಾಗುವುದನ್ನು ತಡೆಯಲು ಮತ್ತು ಬಂಧನಗಳ ಸಮಯ ಪೋಲಿಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸುರಕ್ಷತೆಯನ್ನು ಖಚಿತಪಡಿಸಲು ಕೈಕೋಳಗಳ ಬಳಕೆ ಸೂಕ್ತವಾಗಿದೆ. ಆದರೆ ಈ ವರ್ಗದಲ್ಲಿ ಆರ್ಥಿಕ ಅಪರಾಧಿಗಳನ್ನು ಸೇರಿಸಬಾರದು.

ಅರ್ಥಿಕ ಅಪರಾಧಗಳು ಪದವು ಸಣ್ಣ ಅರ್ಥದಿಂದ ಹಿಡಿದು ಗಂಭೀರ ಅಪರಾಧಗಳವರೆಗೆ ವ್ಯಾಪಕ ಶ್ರೇಣಿಯನ್ನು ಒಳಗೊಂಡಿರುತ್ತದೆ ಮತ್ತು ಈ ವರ್ಗದಲ್ಲಿಯ ಎಲ್ಲ ಅಪರಾಧಗಳಲ್ಲಿ ಕೈಕೋಳಗಳ ಬಳಕೆಯು ಸೂಕ್ತವಲ್ಲ. ಹೀಗಾಗಿ ಆರ್ಥಿಕ ಅಪರಾಧಗಳು ಪದವನ್ನು ಕೈಬಿಟ್ಟು ನಿಬಂಧನೆ 43 (3)ನ್ನು ಸೂಕ್ತವಾಗಿ ತಿದ್ದುಪಡಿಗೊಳಿಸಲು ಸಮಿತಿಯು ಶಿಫಾರಸು ಮಾಡಿದೆ.

ಕೈಕೋಳಗಳ ಬಳಕೆಯ ನಿಯಮಗಳನ್ನು BNSSನ ಷರತ್ತು 43 (3) ರಲ್ಲಿ ವಿವರಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಅಪರಾಧದ ಸ್ವರೂಪ ಗಮನದಲ್ಲಿಟ್ಟುಕೊಂಡು, ಕಸ್ಟಡಿಯಿಂದ ತಪ್ಪಿಸಿಕೊಂಡ ಅಪರಾಧಿಗೆ, ಸಂಘಟಿತ ಕೃತ್ಯ ಎಸಗಿದ ಅಪರಾಧಿಗೆ, ಭಯೋತ್ಪಾದಕ ಕೃತ್ಯದ ಅಪರಾಧವನ್ನು ಮಾಡಿದ  ಅಪರಾಧಿಗೆ, ಮಾದಕವಸ್ತು ಸಂಬಂಧಿತ ಅಪರಾಧ, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಅಕ್ರಮವಾಗಿ ಹೊಂದಿರುವ ಅಪರಾಧ, ಕೊಲೆ, ಅತ್ಯಾಚಾರ, ಆಸಿಡ್ ದಾಳಿ, ನಾಣ್ಯಗಳು ಮತ್ತು ಕರೆನ್ಸಿ ನೋಟುಗಳ ನಕಲಿ, ಮಾನವ ಕಳ್ಳಸಾಗಣೆ, ಮಕ್ಕಳ ವಿರುದ್ಧ ಲೈಂಗಿಕ ಅಪರಾಧಗಳು, ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳಲ್ಲಿ ಕೈಕೋಳಗಳನ್ನು ತೊಡಿಸಬಹುದಾಗಿದೆ.

ಇದನ್ನು ಓದಿ: ವಯಸ್ಕ ಪೋಷಕರ ಆರೈಕೆ ಮಕ್ಕಳ ಹೊಣೆ: ಹೈಕೋರ್ಟ್

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಸ್ಲಿಮರ ಬಗ್ಗೆ ಅವಹೇಳನಾಕಾರಿಯಾಗಿ ಅನಿಮೇಟೆಡ್ ವೀಡಿಯೊ ಹಂಚಿಕೊಂಡ ಬಿಜೆಪಿ: ‘ಎಕ್ಸ್‌’ ಬಳಕೆದಾರರು ತರಾಟೆ

0
ಮುಸ್ಲಿಮರ ಬಗ್ಗೆ ಕೆಟ್ಟದಾಗಿ ಬಿಂಬಿಸುವ, ಮುಸ್ಲಿಮರ ಬಗ್ಗೆ ಕಾಂಗ್ರೆಸ್‌ ತುಷ್ಟೀಕರಣ ಮಾಡುತ್ತದೆ ಎಂದು ಪ್ರತಿಪಾದಿಸುವ ಅನಿಮೇಟೆಡ್ ವೀಡಿಯೊವೊಂದನ್ನು ಬಿಜೆಪಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ. ಎಚ್ಚರ..ಎಚ್ಚರ..ಎಚ್ಚರ.. ಎಂಬ...