ಕೊರೊನಾ ಸಂಕಷ್ಟದ ಸಮಯದಲ್ಲಿ ಜನ ಸಾಮಾನ್ಯರ ಸ್ಥಿತಿ ಹೇಳತೀರದ್ದು. ಹಣಕಾಸಿನ ಪರದಾಟ, ನಿರುದ್ಯೋಗ ತಾಂಡವವಾಡುತ್ತಿದೆ. ಆದರೆ ಅಮೆಜಾನ್ ಮಾತ್ರ ಕೊರೊನಾವನ್ನು ತನ್ನ ಲಾಭಕ್ಕೆ ಬಳಸಿಕೊಂಡಿದೆ. ಅಮೆಜಾನ್ ಶಾಪಿಂಗ್‌ನಲ್ಲಿ ಟಾಯ್ಲೆಟ್ ಪೇಪರ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ ಸೇರಿದಂತೆ ಹಲವು ಅಗತ್ಯ ವಸ್ತುಗಳನ್ನು ದುಪ್ಪಟ್ಟು ದರದಲ್ಲಿ ಮಾರಾಟ ಮಾಡಿದೆ ಎಂದು ಅಮರಿಕಾ ಮೂಲದ ಗ್ರಾಹಕ ಹಕ್ಕುಗಳ ಗುಂಪು ಪಬ್ಲಿಕ್ ಸಿಟಿಜನ್ ವರದಿ ತಿಳಿಸಿದೆ.
ಈ ವಾರ ಬಿಡುಗಡೆಯಾದ ವರದಿ ಪ್ರಕಾರ ಕೊರೊನಾ ಸಮಯದಲ್ಲಿ ಅಮೆಜಾನ್ ಉತ್ಪನ್ನಗಳ ಬೆಲೆಯು ದೇಶದ ಹಲವು ರಾಜ್ಯಗಳ ಬೆಲೆ ನಿಗದಿ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ತೋರಿಸಿದೆ. ಜೊತೆಗೆ ಅಮೆಜಾನ್ ನೇರವಾಗಿ ಮಾರಾಟ ಮಾಡುವ ಅಗತ್ಯ ಉತ್ಪನ್ನಗಳಲ್ಲಿಯೂ ಬೆಲೆ ಏರಿಕೆಯಾಗಿರುವ ಹಲವಾರು ಉದಾಹರಣೆಗಳಿವೆ ಎಂದಿದೆ.
ಇದನ್ನೂ ಓದಿ: KRS ಪಕ್ಷದಿಂದ ‘ಚಲಿಸು ಕರ್ನಾಟಕ’ ಅಭಿಯಾನ: 2700 ಕಿ.ಮೀ. ವಿಶೇಷ ಸೈಕಲ್ ಯಾತ್ರೆ
ಬೆಲೆ ಏರಿಕೆಯನ್ನು ತಡೆಯಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅಮೆಜಾನ್ ಹೇಳಿಕೊಂಡಿದೆ ಎಂದು ವರದಿ ತಿಳಿಸಿದೆ. ಆದರೆ ಅಮೆಜಾನ್ ನೇರವಾಗಿ ಮಾರಾಟ ಮಾಡುವ ಅಗತ್ಯ ಉತ್ಪನ್ನಗಳ ಮೇಲೆ ಬೆಲೆ ಹೆಚ್ಚಳವಾಗಿರುವುದನ್ನು ನಾವು ಗಮನಿಸಿದ್ದೇವೆ. ಜೊತೆಗೆ ಮಧ್ಯವರ್ತಿ ಮಾರಾಟಗಾರರಿಂದ ಬೆಲೆ ಏರಿಕೆಯಾಗಿದೆ ಎಂದು ವರದಿಯಲ್ಲಿದೆ.
ಪಬ್ಲಿಕ್ ಸಿಟಿಜನ್ ವರದಿ ಪ್ರಕಾರ, ಅಮೆಜಾನ್.ಕಾಂನಲ್ಲಿಇತ್ತೀಚಿನ ಬೆಲೆಗಿಂತ ಕೊರೊನಾ ಹೆಚ್ಚಿದ್ದ ಮೇ ಮತ್ತು ಆಗಸ್ಟ್ ನಡುವೆ ಬೆಲೆ ಹೆಚ್ಚಾಗಿತ್ತು. ಆ ಸಮಯದಲ್ಲಿ ಮಾರಾಟ ಮಾಡಿದ್ದ 15 ಅಗತ್ಯ ಉತ್ಪನ್ನಗಳ ಜೊತೆಗೆ ಸಮೀಕರಿಸಲಾಗಿದೆ. ಇದು ರಾಷ್ಟ್ರೀಯ ಚಿಲ್ಲರೆ ವ್ಯಾಪಾರಿಗಳ ಇತ್ತಿಚಿನ ಬೆಲೆಗಿಂತ ದುಬಾರಿಯಾಗಿದೆ. ಮೇ ಮತ್ತು ಆಗಸ್ಟ್ ನಡುವೆ ಅನೇಕ ವಸ್ತುಗಳ ಬೆಲೆಗಳು ಅನೇಕ ಪಟ್ಟು ಹೆಚ್ಚಾಗಿದೆ ಎಂದು ವರದಿ ತೋರಿಸಿದೆ.
ಇದನ್ನೂ ಓದಿ: ಕೊರೊನಾ ಲಸಿಕೆ ಮುಂದಿನ ವರ್ಷಕ್ಕೆ ಸಿದ್ಧವಾಗಬಹುದು: ಕೇಂದ್ರ ಸಚಿವ ಹರ್ಷವರ್ಧನ್
“ನಮ್ಮ ವ್ಯವಸ್ಥೆ ಗ್ರಾಹಕರಿಗೆ ಉತ್ತಮವಾದ ಆನ್‌ಲೈನ್ ಬೆಲೆಯನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಆದರೆ ಯಾವುದಾದರೂ ದೋಷ ಕಂಡರೆ, ಅದನ್ನು ಸರಿಪಡಿಸಲು ನಾವು ತ್ವರಿತವಾಗಿ ಕೆಲಸ ಮಾಡುತ್ತೇವೆ” ಎಂದು ಕಂಪನಿಯ ವಕ್ತಾರರು ಪಬ್ಲಿಕ್ ಸಿಟಿಜನ್ ವರದಿಗೆ ಪ್ರತಿಕ್ರಿಯಿಸಿದ್ದಾರೆ.
ಇ-ಕಾಮರ್ಸ್ ಬೆಲೆ ಏರಿಕೆಯನ್ನು ಸಹಿಸುವುದಿಲ್ಲ. ಜೊತೆಗೆ ದಲ್ಲಾಳಿಗಳು ಸಾಂಕ್ರಾಮಿಕ ರೋಗದ ಲಾಭವನ್ನು ಪಡೆಯುವುದನ್ನು ತಡೆಯುತ್ತೇವೆ ಎಂದು ಅಮೆಜಾನ್ ಸ್ಪಷ್ಟಪಡಿಸಿದೆ.
ದಲ್ಲಾಳಿಗಳು ಅಥವಾ ಮಧ್ಯವರ್ತಿ ಮಾರಾಟಗಾರರು ಬೆಲೆ ಏರಿಕೆಯಲ್ಲಿ ತೊಡಗಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆದರೆ ಅಮೆಜಾನ್ ತಾನೇ ಮಾರಾಟಮಾಡುವ ಅಗತ್ಯ ಉತ್ಪನ್ನಗಳ ಬೆಲೆಯನ್ನು ಗಮನಾರ್ಹ ಏರಿಕೆಯಲ್ಲಿ ಮಾರಾಟ ಮಾಡುತ್ತಿದೆ. ಇದು ಅನೇಕ ಸಂದರ್ಭಗಳಲ್ಲಿ ಇತರ ರಾಷ್ಟ್ರೀಯ ಚಿಲ್ಲರೆ ವ್ಯಾಪಾರಿಗಳಿಗಿಂತ ದುಬಾರಿ ಬೆಲೆಗೆ ಮಾರಾಟವಾಗಿದೆ ಎಂದು ಪಬ್ಲಿಕ್ ಸಿಟಿಜನ್ ವರದಿ ತಿಳಿಸಿದೆ.


