Homeಮುಖಪುಟಇಂದು ವಿಶ್ವ ಓಝೋನ್‌ ದಿನ - ನಮ್ಮ ರಕ್ಷಕ ಓಝೋನ್‌ಗೂ ಬೇಕಿದೆ ರಕ್ಷಣೆ!

ಇಂದು ವಿಶ್ವ ಓಝೋನ್‌ ದಿನ – ನಮ್ಮ ರಕ್ಷಕ ಓಝೋನ್‌ಗೂ ಬೇಕಿದೆ ರಕ್ಷಣೆ!

ಹವಾನಿಯಂತ್ರಣ ಸಾಧನಗಳು (ಎಸಿ), ಪ್ರಿಡ್ಜ್ ಮತ್ತು ಇತರೆ ಉತ್ಪನ್ನಗಳಿಂದ ಬಿಡುಗಡೆಯಾಗುವ ಅಪಾಯಕಾರಿ ರಾಸಾಯನಿಕಗಳು ಓಝೋನ್ ಪದರ ಕ್ಷೀಣಿಸಲು ಶೇಕಡಾ 99ರಷ್ಟು ಕಾರಣ

- Advertisement -
- Advertisement -

ನಮಗೆ ಚಳಿಯಾದಾಗ ಯಾರಾದರೂ ಬೆಚ್ಚನೆಯ ಹೊದಿಕೆ ಕೊಟ್ಟರೇ, ಮಳೆಯಲ್ಲಿ ನೆನೆಯುವಾಗ, ಬಿಸಿಲಿನ ತಾಪ ತಡೆಯದಾದಾಗ ಯಾರಾದರೂ ಕೊಡೆ ಹಿಡಿದರೆ ಅದೆಷ್ಟು ಖುಷಿ, ಸುರಕ್ಷತಾ ಭಾವ ಅಲ್ಲವೇ.. ನಾವೇನೋ ಮನುಷ್ಯರು ಒಬ್ಬರಲ್ಲ ಒಬ್ಬರು ಸಹಾಯ ಮಾಡುತ್ತಾರೆ. ಕುಟುಂಬ, ಸಂಬಂಧಿಕರು, ಸ್ನೇಹಿತರು ಯಾರಾದರೂ… ಆದರೆ ಭೂಮಿಗೆ…?

ಇರುವುದೊಂದೇ ಭೂಮಿ…ಆದರೆ ನಿಮಗೆ ಗೊತ್ತೇ ಭೂಮಿಯನ್ನೂ ಕೂಡ ಒಂದು ಪದರ ಸೂರ್ಯನ ನೇರಳಾತೀತ ಕಿರಣಗಳಿಂದ ರಕ್ಷಿಸುತ್ತದೆ. ಅದೇ ಓಝೋನ್ ಪದರ. ಇಂದು ವಿಶ್ವ ಓಝೋನ್ ದಿನ. ಈ ದಿನದ ನೆಪದಲ್ಲಾದರೂ ಓಝೋನ್ ಪದರದ ಬಗ್ಗೆ ತಿಳಿದುಕೊಳ್ಳಲೇ ಬೇಕು.

ಇದನ್ನೂ ಓದಿ: ನೇಚರ್ ವಿಜ್ಞಾನ ಪತ್ರಿಕೆಯ 150 ವರ್ಷಗಳು : ಅನುರಣನ – ಡಾ.ಟಿ.ಎಸ್‌ ಚನ್ನೇಶ್‌

ವಾಯುಮಂಡಲದ ಸ್ಟ್ರಾಟೋಸ್ಫಿಯರ್‌ನ 15-20 ಕಿ.ಮೀ ಮೇಲ್ಪಟ್ಟ ಪ್ರದೇಶದಲ್ಲಿರುವ ಓಝೋನ್ ಪದರ ಭೂಮಿಯ ಮೇಲೆ ಸೂರ್ಯನಿಂದ ಹೊರಹೊಮ್ಮುವ ಅತಿನೇರಳಾತೀತ ವಿಕಿರಣಗಳನ್ನು ಹೀರಿಕೊಳ್ಳುತ್ತದೆ. ಈ ಪದರವೇ ಇಲ್ಲದಿದ್ದರೇ, ಭೂಮಿಯ ಮೇಲೆ ಜೀವ ಸಂಕುಲವೇ ನಾಶವಾಗಿರುತ್ತಿತ್ತು. ಜೀವ ಸಂಕುಲದಲ್ಲಿ ಅಷ್ಟು ಪ್ರಮುಖ ಪಾತ್ರ ಓಝೋನ್ ಪಡೆದುಕೊಂಡಿದೆ.

PC:English Exercises

ಸೂರ್ಯನ ಬೆಳಕು ಇಲ್ಲದೇ ಭೂಮಂಡಲದಲ್ಲಿ ಜೀವನ ಸಾಧ್ಯವಿಲ್ಲ ಆದರೆ, ಸೂರ್ಯನ ಹೆಚ್ಚಿನ ನೇರಳಾತೀತ ಕಿರಣಗಳು ಭೂಮಿಯನ್ನು ನೇರವಾಗಿ ಪ್ರವೇಶ ಮಾಡಿ, ಮಾನವನ ದೇಹ ಹಾಗೂ ಜಲಚರ ಸೇರಿದಂತೆ ಜೀವ ಸಂಕುಲಕ್ಕೆ ಮಾರಕವಾಗಲಿದೆ. ಹೀಗಾಗಿ ಇದನ್ನುಈ ಕಿರಣಗಳನ್ನು ತಡೆದು ಜೀವ ಸಂಕುಲಕ್ಕೆ ಸಹಾಯಕವಾಗಿದೆ.

ಇದನ್ನೂ ಓದಿ: ಸರಿಯಾದ ಮಾನದಂಡಗಳ ಮುಖಾಂತರ ನಮಗೆ ಸಹಜ ಕೃಷಿ ಬೇಕೋ, ರಾಸಾಯನಿಕ ಕೃಷಿ ಬೇಕೋ ನಿರ್ಧರಿಸೋಣ

ಆದರೆ ಮಾನವ ಮಾಡುವ ಕೆಲಸಗಳಿಂದ, ಬಳಸುವ ವಸ್ತುಗಳಿಂದ ಹವಾನಿಯಂತ್ರಣ ಸಾಧನಗಳು (ಎಸಿ), ಪ್ರಿಡ್ಜ್ ಮತ್ತು ಇತರೆ ಉತ್ಪನ್ನಗಳಿಂದ ಬಿಡುಗಡೆಯಾಗುವ ಅಪಾಯಕಾರಿ ರಾಸಾಯನಿಕಗಳು ಓಝೋನ್ ಪದರ ಸವೆಯಲು ಶೇಕಡಾ 99ರಷ್ಟು ಕಾರಣವಾಗಿದೆ.

ಹವಾಮಾನ ವೈಪರಿತ್ಯ ಹಾಗೂ ತಾಪಮಾನ ಏರಿಕೆಗೆ ಕಾರಣವಾಗುವ ಅನಿಲಗಳಾದ ಹೈಡ್ರೋಫ್ಲೋರೊಕಾರ್ಬನ್ ಅನ್ನು ಹಂತಹಂತವಾಗಿ ಕಡಿಮೆಗೊಳಿಸಬೇಕು ಇದರಿಂದ ಓಝೋನ್ ಪದರದ ಸವಕಳಿಯನ್ನು ತಡೆಯಬಹುದು.

ಪ್ರತಿ ವರ್ಷ ಸೆಪ್ಟೆಂಬರ್ 16 ರಂದು ವಿಶ್ವ ಓಝೋನ್ ದಿನವನ್ನು ಆಚರಿಸಲಾಗುತ್ತದೆ. ಓಝೋನ್ ಪದರದ ಸವಕಳಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮತ್ತು ಅದನ್ನು ಸಂರಕ್ಷಿಸಲು ತೆಗೆದುಕೊಳ್ಳಬಹುದಾದ ಪರಿಹಾರಗಳನ್ನು ಹುಡುಕಲು ಇದನ್ನು ಆಚರಿಸಲಾಗುತ್ತದೆ.

ವಿಶ್ವ ಓಝೋನ್ ದಿನದ ಇತಿಹಾಸ

ಡಿಸೆಂಬರ್ 19, 1994 ರಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸೆಪ್ಟೆಂಬರ್ 16 ರಂದು ಓಝೋನ್ ಪದರದ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ದಿನವನ್ನು ಘೋಷಿಸಿತು. ಸೆಪ್ಟೆಂಬರ್ 16, 1987 ರಂದು, ವಿಶ್ವಸಂಸ್ಥೆ ಮತ್ತು ಇತರ 45 ದೇಶಗಳು ಮಾಂಟ್ರಿಯಲ್  ಪ್ರೊಟೋಕಾಲ್‌ಗೆ ಸಹಿ ಹಾಕಿದ್ದವು.

ಪ್ರತಿ ವರ್ಷ ಈ ದಿನವನ್ನುಓಝೋನ್ ಪದರದ ಸಂರಕ್ಷಣೆಗಾಗಿ ಅಂತರರಾಷ್ಟ್ರೀಯ ದಿನವೆಂದು ಆಚರಿಸಲಾಗುತ್ತದೆ. ಓಝೋನ್ ಪದರದ ಸವಕಳಿಗೆ ಕಾರಣವಾಗುವ ವಸ್ತುಗಳ ಉತ್ಪಾದನೆಯನ್ನು ಕಡಿಮೆ ಮಾಡುವ ಮೂಲಕ ಪದರವನ್ನು ರಕ್ಷಿಸುವುದು ಇದರ ಉದ್ದೇಶವಾಗಿದೆ.

ಇದನ್ನೂ ಓದಿ: ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಯ್ತು #NoMoreBJP, #unemploymentday

‘ಓಝೋನ್ ಫಾರ್ ಲೈಫ್’ ಎಂಬುದು ವಿಶ್ವ ಓಝೋನ್ ದಿನ 2020 ರ ಘೋಷಣೆಯಾಗಿತ್ತು. ಈ ವರ್ಷದ ಓಜೋನ್‌ ದಿನದ ಘೋಷವಾಕ್ಯ, ‘ನಮ್ಮನ್ನು, ನಮ್ಮ ಆಹಾರ ಮತ್ತು ಲಸಿಕೆಗಳನ್ನು ತಂಪಾಗಿರಿಸುವುದು!’ ಎಂಬುವುದಾಗಿದೆ.

ಓಝೋನ್ ಪದರ ಕೆಲವ ಭೂಮಿಯನ್ನು ಸೂರ್ಯನ ಶಾಖದಿಂದ ರಕ್ಷಿಸುವ ಕೊಡೆ ಮಾತ್ರವಲ್ಲ. ಇಡೀ ಭೂಮಂಡಲದ ಜೀವ ಸಂಕುಲವನ್ನು ರಕ್ಷಿಸುವ ಪದರವಾಗಿ ಕೆಲಸ ಮಾಡುತ್ತಿದೆ. ನಮ್ಮನ್ನು ರಕ್ಷಿಸುತ್ತಿರುವ ಈ ರಕ್ಷಾ ಕವಚವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಮುಂದಿನ ಪೀಳಿಗೆಗೆ ಆರೋಗ್ಯಯುತ, ಬದುಕಲು ಯೋಗ್ಯವಾದ ಭೂಮಿಯನ್ನು ಕೊಡುವ ಕರ್ತವ್ಯ ನಮ್ಮದು.


ಇದನ್ನೂ ಓದಿ: ರೈತವಿರೋಧಿ ಸುಗ್ರಿವಾಜ್ಞೆಗಳು ಬೇಡ: ಕೇಂದ್ರದ ವಿರುದ್ಧ ತಿರುಗಿಬಿದ್ದ ರೈತರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....