ನಟ ಸುಶಾಂತ್ ಸಿಂಗ್ ರಜಪೂತ್ ನೆನಪಿಗಾಗಿ ಒಂದು ಲಕ್ಷ ಗಿಡಗಳನ್ನು ನೆಡುವ ಅಭಿಯಾನವನ್ನು ಅವರು ಅಭಿಮಾನಿಗಳು ಹಮ್ಮಿಕೊಂಡಿದ್ದು, ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ಇದರ ಪ್ರಚಾರ ಆರಂಭವಾಗಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ಅಸಹಜ ಸಾವು ಹಲವು ವಿವಾದಗಳಿಗೆ ಕಾರಣವಾಗಿದೆ. ನಟಿ ಕಂಗನಾ ರಾಣಾವತ್ ಇದೆ ವಿಚಾರಕ್ಕೆ ದೊಡ್ಡ ಸುದ್ದಿಯಾಗಿದ್ದಾರೆ. ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಪೊಲೀಸರ ವಶದಲ್ಲಿದ್ದಾರೆ. ಮಾಧ್ಯಮಗಳಿಗೆ ಈ ಸುದ್ದಿ ಕೊರೊನಾಗಿಂತ ಹೆಚ್ಚಾಗಿದ್ದು, ತಾವೇ ಪ್ರಕರಣದ ತೀರ್ಪು ನೀಡುತ್ತಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಮಧ್ಯೆಯೇ ಸಾಮಾಜಿಕ ಜಾಲತಾಣದಲ್ಲಿ #Plants4SSR ಹೆಸರಲ್ಲಿ ಗಿಡ ನೆಡುವ ಅಭಿಯಾನ ನಡೆಸಲಾಗಿದ್ದು, ಸುಶಾಂತ್ ಸಿಂಗ್ ಹೆಸರಲ್ಲಿ ಒಂದು ಲಕ್ಷಕ್ಕೂ ಅಧಿಕ ಗಿಡಗಳನ್ನು ಅವರ ಅಭಿಮಾನಿಗಳು ನೆಟ್ಟಿದ್ದಾರೆ. ಇದಕ್ಕೆ ನಟನ ಅಭಿಮಾನಿಗಳು ಸೇರಿದಂತೆ, ಸ್ನೇಹಿತರು, ಕುಟುಂಬ ವರ್ಗ, ಮಾಜಿ ಪ್ರೇಯಸಿ ಸೇರಿ ಹಲವರು ಸಾಥ್ ನೀಡಿದ್ದಾರೆ.
ಇದನ್ನೂ ಓದಿ: ಬಿಹಾರ ಚುನಾವಣೆವರೆಗೂ ಮುಂದುವರೆಯಲಿದೆ ಸುಶಾಂತ್ ಸಿಂಗ್- ಕಂಗನಾ ವಿವಾದಗಳು
ಸುಶಾಂತ್ ಸಿಂಗ್ ಒಂದು ಸಾವಿರ ಮರಗಳನ್ನು ನೆಡುವ ಕನಸು ಕಂಡಿದ್ದರು. ಆದರೆ ಒಂದು ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಡುವ ಮೂಲಕ ಕನಸನ್ನು ಸಾಕಾರಗೊಳಿಸಿದ ಎಲ್ಲರಿಗೂ ಧನ್ಯವಾದ ಎಂದು ಸುಶಾಂತ್ ಸಿಂಗ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಟ್ವಿಟ್ಟರ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
More than 1 lakh trees ?were planted across the globe. ? #Plants4SSR Thank you so much for making it happen.?❤️? pic.twitter.com/o7Gh88OeQd
— Shweta Singh Kirti (@shwetasinghkirt) September 14, 2020
ಸುಶಾಂತ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಕೂಡ ಸುಶಾಂತ್ ಹೆಸರಲ್ಲಿ ಗಿಡ ನೆಟ್ಟಿದ್ದು, ಅವನ ಕನಸನ್ನು ಈಡೇರಿಸುವ ಮೂಲಕ ಅವನನ್ನು ನೆನಪಿಟ್ಟುಕೊಳ್ಳುವ ದಾರಿ ಇದು ಎಂದಿದ್ದಾರೆ. ಜೊತೆಗೆ ಶ್ವೇತಾ ಸಿಂಗ್ ಕೀರ್ತಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋವನ್ನು ರೀಟ್ವೀಟ್ ಮಾಡಿದ್ದಾರೆ.
Hatchi and mamma ?
My partner In almost everything ❤️
Planting plants ?
It’s our way to remember him by fulfilling his dream ❤️#plants4SSR @shwetasinghkirt @jainvick @vikirti @_mallika_singh pic.twitter.com/vvr2TJkEfb— Ankita lokhande (@anky1912) September 13, 2020
ಇವರುಗಳ ಜೊತೆಗೆ ಅನೇಕ ಅಭಿಮಾನಿಗಳು ಸುಶಾಂತ್ ಹೆಸರಲ್ಲಿ ಗಿಡಗಳನ್ನು ನೆಟ್ಟಿದ್ದಾರೆ.
ಇದನ್ನೂ ಓದಿ: ಸುಶಾಂತ್ ಸಿಂಗ್ ಪ್ರಕರಣ: ಕೇಂದ್ರಕ್ಕೆ ಬಾಂಬೆ ಹೈಕೋರ್ಟ್ ನೋಟಿಸ್
Green earth n green environment is healthy environment… dream of our loving Sushant… ???? @shwetasinghkirt @nilotpalm3 #DreamsOfSSR pic.twitter.com/2J562ywYTZ
— Disha Srivastava (@DishaSr28503946) September 16, 2020
ನಟರಾದ ಅರ್ಜುನ್ ಬಿಜಲಾನಿ ಮತ್ತು ಮಹೇಶ್ ಶೆಟ್ಟಿ ಕೂಡ #Plants4SSR ಅಭಿಯಾನದಲ್ಲಿ ಭಾಗಿಯಾಗಿದ್ದು, ಗಿಡಗಳನ್ನು ನೆಟ್ಟಿದ್ದಾರೆ.
This ones for you .. #Plants4SSR .. ❤️. pic.twitter.com/QnPMK45A8G
— Arjun Bijlani (@Thearjunbijlani) September 13, 2020
Neem has been used traditionally to remove negativity and for healing.
Taking baby steps but trying to do all I can to make your dreams come true bhai !!!#plant4ssr #Plants4SSR #plantmoretrees pic.twitter.com/dyRi1y7OPm
— Mahesh Shetty (@maheshshetty) September 13, 2020
ಒಂದೆಡೆ ಸುಶಾಂತ್ ಹೆಸರಲ್ಲಿ ಮಾಧ್ಯಮಗಳು, ರಾಜಕೀಯ ಪಕ್ಷಗಳು ತಮ್ಮ ಬೆಳೆ ಬೇಯಿಸಿಕೊಳ್ಳುತ್ತಿವೆ. ಆದರೆ ಕೆಲವು ಕಡೆ ಮಾತ್ರ ಅವರ ಹೆಸರಲ್ಲಿ ಕೆಲ ಉತ್ತಮ ಕೆಲಸ ಮಾಡುತ್ತಿರುವುದೇ ಸಮಾಧಾನದ ಸಂಗತಿ.


