ಹೆಣ್ಣು

ಕೇಂದ್ರ ಸರ್ಕಾರ ‘ಪ್ರಧಾನಮಂತ್ರಿ ಕನ್ಯಾ ಆಶಿರ್ವಾದ ಯೋಜನೆ’ ಎಂಬ ಹೆಸರಿನ ಯೋಜನೆಯೊಂದನ್ನು ಪ್ರಾರಂಭಿಸಿದ್ದು, ಇದರಲ್ಲಿ ದೇಶದ ಪ್ರತಿ ಹೆಣ್ಣು ಮಕ್ಕಳಿಗೂ ತಿಂಗಳಿಗೆ 2000 ರೂ ಸಹಾಯಧನ ನೀಡುತ್ತಿದೆ ಎಂಬ ಸಂದೇಶವಿರುವ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಇದರ ಆರ್ಕೈವ್ ಲಿಂಕ್ ಇಲ್ಲಿದೆ.

ಪ್ರತಿಪಾದನೆ: ‘ಪ್ರಧಾನಮಂತ್ರಿ ಕನ್ಯಾ ಆಶಿರ್ವಾದ ಯೋಜನೆ’ ಅಡಿಯಲ್ಲಿ ಭಾರತ ಸರ್ಕಾರವು ದೇಶದ ಪ್ರತಿ ಬಾಲಕಿಗೆ 2000 ರೂ. ವಿತರಿಸುತ್ತಿದೆ.

ಸತ್ಯ: ಭಾರತ ಸರ್ಕಾರದ ಯೋಜನೆಗಳಲ್ಲಿ ‘ಪ್ರಧಾನಮಂತ್ರಿ ಕನ್ಯಾ ಆಶಿರ್ವಾದ ಯೋಜನೆ’ ಎಂಬ ಹೆಸರಿನಲ್ಲಿ ಯಾವುದೇ ಯೋಜನೆ ಇಲ್ಲ. ಇಂತಹ ಯೋಜನೆಯ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಾಗ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ(ಪಿಐಬಿ) ಕೂಡ ಇಂತಹ ಯಾವುದೇ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಇದನ್ನೂಓದಿ: ಕಂಗನಾಗೆ ಬೆಂಬಲ ನೀಡಲು ಮುಂಬೈಗೆ ಆಗಮಿಸಿತೆ ಕರ್ಣಿಸೇನಾ!: ಸತ್ಯಾಸತ್ಯತೆ ಏನು..?

ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಪ್ರಾರಂಭಿಸಿರುವ ಎಲ್ಲಾ ಯೋಜನೆಗಳ ವಿವರಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ವೆಬ್‌ಸೈಟ್‌ನಲ್ಲಿ ನೋಡಬಹುದಾಗಿದೆ. ಆದರೆ, ಸಚಿವಾಲಯದ ವೆಬ್‌ಸೈಟ್‌ನಲ್ಲಿರುವ ಯಾವುದೇ ವಿಭಾಗದಲ್ಲಿಯೂ ಪ್ರಸ್ತುತ ವೈರಲಾಗುತ್ತಿರುವ ‘ಪಿಎಂ ಕನ್ಯಾ ಆಶಿರ್ವಾದ ಯೋಜನೆ’ ಹೆಸರಿನ ಯೋಜನೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ಈ ಯೋಜನೆಯ ಕುರಿತಾದ ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದಾಗ, ಈ ಎಲ್ಲಾ ಪೋಸ್ಟ್‌ಗಳು ನಕಲಿ ಮತ್ತು ಭಾರತ ಸರ್ಕಾರವು ಅಂತಹ ಯಾವುದೇ ಯೋಜನೆಯನ್ನು ಜಾರಿಗೆ ತಂದಿಲ್ಲ ಎಂದು ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಸ್ಪಷ್ಟಪಡಿಸಿದೆ.

 

ಒಟ್ಟಿನಲ್ಲಿ ಹೇಳುವುದಾದರೆ, ದೇಶದ ಪ್ರತಿ ಹೆಣ್ಣು ಮಗುವಿಗೆ 2,000 ರೂ. ಸಿಗುತ್ತದೆ ಎಂದು ಹೇಳಲಾಗಿರುವ ‘ಪಿಎಂ ಕನ್ಯಾ ಆಶಿರ್ವಾದ ಯೋಜನೆ’ ಯೂ ನಕಲಿಯಾಗಿದ್ದು ಇಂತಹ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ರೂಪಿಸಿಲ್ಲ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ವೈರಲ್ ಚಿತ್ರದಲ್ಲಿರುವ ಮಹಿಳೆ ’ಲವ್‌ ಜಿಹಾದ್’ ಪ್ರಕರಣದಲ್ಲಿ ಹತ್ಯೆ ಆಗಿದ್ದು ನಿಜವೆ?

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts