ರಿಯಾ

ನಟ ಸುಶಾಂತ್ ಸಿಂಗ್ ರಜಪೂತ್ ಅಸಹಜ ಸಾವು ಪ್ರಕರಣ ಕುರಿತು ಮಾಧ್ಯಮಗಳು ವರದಿ ಮಾಡುವುದನ್ನು ನಿರ್ಬಂಧಿಸಬೇಕು ಎಂದು ಕೋರಿ In Pursuit of Justice ಎಂಬ ಎನ್‌ಜಿಒ ಬಾಂಬೆ ಹೈಕೋರ್ಟ್‌‌ಗೆ ಅರ್ಜಿ ಸಲ್ಲಿಸಿದೆ. ಅರ್ಜಿ ವಿಚಾರಣೆ ಹಿನ್ನೆಲೆ ಕೇಂದ್ರಕ್ಕೆ ಬಾಂಬೆ ‌ಹೈಕೋರ್ಟ್ ನೋಟಿಸ್ ನೀಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಸುಶಾಂತ್ ಪ್ರಕರಣ ಸಂಬಂಧ ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿದ ಮೂರನೇ ಅರ್ಜಿ ಇದಾಗಿದೆ. ಮುಖ್ಯ ನ್ಯಾಯಮೂರ್ತಿ ದೀಪಾಂಕರ್ ದತ್ತ ನೇತೃತ್ವದ ಪೀಠವು ಅಕ್ಟೋಬರ್ 8 ರಂದು ಎಲ್ಲಾ ಮೂರು ಮನವಿಗಳನ್ನು ವಿಚಾರಣೆಗಾಗಿ ಪಟ್ಟಿ ಮಾಡಿದೆ. ಮೊದಲ ಮನವಿಯನ್ನು ಪುಣೆ ಮೂಲದ ಚಲನಚಿತ್ರ ನಿರ್ಮಾಪಕ ನಿಲೇಶ್ ನವಲಖಾ ಮತ್ತು ಇನ್ನಿಬ್ಬರು ಸಲ್ಲಿಸಿದ್ದರೆ, ಎರಡನೆಯದನ್ನು ರಾಜ್ಯದ ಎಂಟು ಮಾಜಿ ಪೊಲೀಸ್ ಅಧಿಕಾರಿಗಳು ಸಲ್ಲಿಸಿದ್ದಾರೆ. ಮೂರನೇ ಅರ್ಜಿಯನ್ನು In Pursuit of Justice ಎನ್‌ಜಿಒ ಸಲ್ಲಿಸಿದೆ.

ಇದನ್ನೂ ಓದಿ: ಸುಶಾಂತ್ ಸಿಂಗ್ ಪ್ರಕರಣ: ರಿಯಾ ಜೊತೆ ಮಾಧ್ಯಮಗಳ ನಡೆ ಖಂಡನೀಯ

ಅರ್ಜಿಗಳ ವಿಚಾರಣೆ ಮುಗಿಯುವವರೆಗೂ ಮಾಧ್ಯಮಗಳಲ್ಲಿ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಯಾವುದೇ ಸುದ್ದಿ ಪ್ರಸಾರ ಮಾಡದಂತೆ ತಡೆ ನೀಡಲು In Pursuit of Justice ಎನ್‌ಜಿಒ ಅರ್ಜಿಯಲ್ಲಿ ಮನವಿ ಮಾಡಿದೆ.

ಮಾಧ್ಯಮಗಳು ಈಗಾಗಲೇ ಮೃತರ ವೈಯಕ್ತಿಕ ಸಂದೇಶಗಳು ಮತ್ತು ಆರೋಪಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿಗಳ ಹೇಳಿಕೆಗಳನ್ನು ಪ್ರಕಟಿಸಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಹೀಗಾಗಿ ಪ್ರಕರಣ, ವಿಚಾರಣೆ ಹಂತದಲ್ಲಿರುವಾಗಲೇ ಆರೋಪಿಗಳನ್ನು ಕೊಲೆಗಾರ, ಗೋಲ್ಡ್ ಡಿಗ್ಗರ್‌ ‍ ಎಂಬಂತ ಹೆಸರುಗಳಿಂದ ಕರೆಯುತ್ತಿವೆ.  ಇಂತಹ ವರದಿಗಳು ರಜಪೂತ್ ಸಾವಿನ ತನಿಖೆಯ ಮೇಲೆ ಪ್ರಭಾವ ಬೀರಬಹುದು ಮತ್ತು ತನಿಖೆ ಪೂರ್ವಾಗ್ರಹ ಪೀಡಿತವಾಗಬಹುದು ಎಂದು ಎನ್‌ಜಿಒ ತನ್ನ ಮನವಿಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಡ್ರಗ್ಸ್ ಕೇಸ್: ನಟ ದಿಗಂತ್, ನಟಿ ಐಂದ್ರಿತಾಗೆ ಸಿಸಿಬಿ ನೋಟಿಸ್

ಜೂನ್ 14 ರಂದು ಮುಂಬೈನ ತನ್ನ ಅಪಾರ್ಟ್ಮೆಂಟ್‌ನಲ್ಲಿ 34 ವರ್ಷದ ನಟ ಸುಶಾಂತ್ ಸಿಂಗ್ ರಜಪೂತ್ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಪ್ರಕರಣ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. ಆದರೆ ಮೃತರ ತಂದೆ ಆತ್ಮಹತ್ಯೆಗೆ ಪ್ರಚೋದನೆ, ಮೋಸ, ಕಳ್ಳತನ ಮುಂತಾದ ಆರೋಪಗಳನ್ನು ಮಾಡಿ ದೂರು ದಾಖಲಿಸಿದ್ದು, ಕೇಂದ್ರ ತನಿಖಾ ದಳ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮತ್ತು ಜಾರಿ ನಿರ್ದೇಶನಾಲಯಗಳು ತನಿಖೆ ನಡೆಸುತ್ತಿವೆ. ಅಸಹಜ ಸಾವು ಪ್ರಕರಣಕ್ಕೆ ಡ್ರಗ್ಸ್ ಕೇಸ್ ಕೂಡ ಸೇರ್ಪಡೆಯಾಗಿದೆ.

ಸದ್ಯ ನಟನ ಸಾವಿನ ತನಿಖೆಯಲ್ಲಿ ಮಾದಕವಸ್ತು ಸಂಬಂಧಿತ ಪ್ರಕರಣವೂ ಸೇರಿ ನಟಿ ರಿಯಾ ಚಕ್ರವರ್ತಿ ಸೇರಿದಂತೆ ಒಂಬತ್ತು ಜನರನ್ನು ಬಂಧಿಸಲಾಗಿದೆ. ರಿಯಾ ಚಕ್ರವರ್ತಿಗೆ ಸೆ.22ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಆಕೆಗೆ ಜಾಮೀನು ನಿರಾಕರಿಸಲಾಗಿದೆ.


ಇದನ್ನೂ ಓದಿ: ಇಂದು ರಿಯಾ ಇರುವ ಜಾಗದಲ್ಲಿ ನಾಳೆ ನಾವು-ನೀವೂ ಇರಬಹುದು.. ಮರೆಯಬೇಡಿ

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts