ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರ ಮೃತ ದೇಹದ ಫೋಟೋವೊಂದು, ’ಪಂಜಾಬ್‌ನಲ್ಲಿ ಮಹಿಳಾ ಪೊಲೀಸ್ ಒಬ್ಬರನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಲಾಗಿದೆ’ ಎಂಬ ಬರಹದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬಿಜೆಪಿ ಆಡಳಿತ ಇರುವ ಉತ್ತರ ಪ್ರದೇಶದಲ್ಲಿ ಹತ್ರಾಸ್ ಅತ್ಯಾಚಾರ ಘಟನೆಯನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್‌ಗೆ ಪ್ರತಿಕ್ರಿಯೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಇದನ್ನು ಹರಿಯಬಿಡಲಾಗುತ್ತಿದೆ. ವೈರಲ್ ಪೋಟೋದಲ್ಲಿ, ಪಂಜಾಬ್‌ನ ಅಮೃತಸರದಲ್ಲಿ ಮಹಿಳಾ ಕಾನ್‌ಸ್ಟೇಬಲ್ ಸಾವಿನ ಬಗ್ಗೆ ಕಾಂಗ್ರೆಸ್ ಏಕೆ ಮಾತನಾಡುತ್ತಿಲ್ಲ’ ಎಂದು ಆರೋಪಿಸಿ ಹಲವಾರು ಪೋಸ್ಟ್‌ಗಳು ಹರಿದಾಡುತ್ತಿವೆ.
ಇದನ್ನೂ ಓದಿ: ಬಾಲಿವುಡ್ ನಟಿ ಶ್ರೀದೇವಿಯ ಸಾವು ಸಹಜವಲ್ಲವೇ?

ಅತ್ಯಾಚಾರಕ್ಕೊಳಗಾದ ನಂತರ ಕಾನ್‌ಸ್ಟೆಬಲ್ ನೋಮಿಯನ್ನು ಕೊಲೆ ಮಾಡಲಾಗಿದೆ ಎಂದು ಪ್ರತಿಪಾದಿಸುವ ಹಲವಾರು ಪೋಸ್ಟ್‌ಗಲು ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಈ ಅತ್ಯಾಚಾರದ ಬಗ್ಗೆ ಕಾಂಗ್ರೆಸ್ ಮುಖಂಡರಾದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಮೌನವಾಗಿದ್ದಾರೆ ಎಂದು ಆರೋಪಿಸಲಾಗಿದೆ. ಅಂತಹ ಪೋಸ್ಟ್‌ಗಳ ಆರ್ಕೈವ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.
ಫ್ಯಾಕ್ಟ್‌ಚೆಕ್
ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಈ ಪೋಟೋದಲ್ಲಿರುವ ಮಹಿಳಾ ಕಾನ್‌ಸ್ಟೆಬಲ್ ವಾಸ್ತವದಲ್ಲಿ ರಸ್ತೆ ಅಫಘಾತದಿಂದಾಗಿ ಸಾವಿಗೀಡಾಗಿದ್ದಾರೆ, ಇದು ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಅಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ರಿವರ್ಸ್ ಇಮೇಜ್ ಮೂಲಕ ಈ ವೈರಲ್ ಚಿತ್ರವನ್ನು ಹುಡುಕಾಡಿದರೆ ಹಿಂದಿ ದಿನಪತ್ರಿಕೆ ದೈನಿಕ್ ಸವೆರಾ ಟೈಮ್ಸ್‌ನ ವರದಿಯೊಂದನ್ನು ನೋಡಬಹುದಾಗಿದೆ. ಅದರ ವರದಿಯಲ್ಲಿ, ”ಅಮೃತಸರದಲ್ಲಿ ಮಹಿಳಾ ಕಾನ್‌ಸ್ಟೆಬಲ್‌ನ ಶವ ಪತ್ತೆಯಾಗಿದೆ ಎಂದು ತಿಳಿಸಲಾಗಿದೆ. ಈ ಕುರಿತು ಹಲವಾರು ವರದಿಗಳನ್ನು ನೋಡಬಹುದಾಗಿದೆ.
ಇದನ್ನೂ ಓದಿ: ಪ್ರಧಾನಿ ಉದ್ಘಾಟಿಸಿದ ಅಟಲ್ ಸುರಂಗ ಎಂದು ಅಮೇರಿಕಾ ಸುರಂಗದ ಚಿತ್ರ ಹಂಚಿಕೊಂಡ ಮಾಧ್ಯಮಗಳು!
ಟ್ರಿಬ್ಯೂನ್ ಇಂಡಿಯಾದ ಅಮೃತಸರದಿಂದ ಅಕ್ಟೋಬರ್ 1 ರಂದು ಮಾಡಿದ ವರದಿಯ ಪ್ರಕಾರ, “ನೋಮಿ ಎಂಬ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಅವರ ಸ್ಕೂಟರ್‌ಗೆ ವೇಗದಿಂದ ಬಂದ ಕಾರೊಂದು ಸಂಗತ್ಪುರ ಗ್ರಾಮದ ಬಳಿ ಡಿಕ್ಕಿ ಹೊಡೆದ ಕಾರಣ ಅವರು ಮೃತಪಟ್ಟಿದ್ದಾರೆ” ಎಂದು ಹೇಳುತ್ತದೆ.
ಪೊಲೀಸ್ ಉಪ ಆಯುಕ್ತ ಮುಖ್ವಿಂದರ್ ಸಿಂಗ್ ಭುಲ್ಲರ್ ಅವರು ಮಹಿಳಾ ಕಾನ್‌ಸ್ಟೆಬಲ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ದೃಪಡಿಸಿದ್ದಾರೆಂದು ದಿ ಕ್ವಿಂಟ್ ವರದಿ ಮಾಡಿದೆ. ಅಪಘಾತದ ಕುರಿತು ಹೆಚ್ಚಿನ ತನಿಖೆ ನಡೆಸಲು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವಂತೆ ಮಹಿಳಾ ಅಧಿಕಾರಿಯ ಮೇಲೆ ಅತ್ಯಾಚಾರ ನಡೆದಿಲ್ಲ. ಅವರು ರಸ್ತೆ ಅಪಘಾತದಿಂದಾಗಿ ಮೃತಪಟ್ಟಿದ್ದಾರೆ ಎಂದು ಈ ಮೂಲಕ ಸ್ಪಷ್ಟವಾಗುತ್ತದೆ.
ಇದನ್ನೂ ಓದಿ: ನರೇಂದ್ರ ಮೋದಿ ಗುಜರಾತ್‌ನಲ್ಲಿ ಕ್ರೂಸ್ ಹಡಗು ಸೇವೆಯನ್ನು ಪ್ರಾರಂಭಿಸಿದ್ದಾರೆಯೇ? ಇಲ್ಲಿದೆ ವಿವರ


