ಫ್ಯಾಕ್ಟ್‌ಚೆಕ್: ನರೇಂದ್ರ ಮೋದಿ ಗುಜರಾತ್‌ನಲ್ಲಿ ಕ್ರೂಸ್ ಹಡಗು ಸೇವೆಯನ್ನು ಪ್ರಾರಂಭಿಸಿದ್ದಾರೆಯೇ?
PC: Daily Mail

ಪ್ರಧಾನಿ ನರೇಂದ್ರ ಮೋದಿ ಅವರು ಈ ಕ್ರೂಸ್ ಸೇವೆಯನ್ನು ಪ್ರಾರಂಭಿಸಿದ್ದಾರೆ ಎಂಬುದಾಗಿಯೂ, ಇದು ಭಾವನಗರ ಮತ್ತು ಭರೂಚ್ ನಡುವಿನ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ ಎಂದು ಟ್ವಿಟರ್ ಬಳಕೆದಾರರೊಬ್ಬರು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಹಿಂದಿಯಲ್ಲಿ ಟ್ವೀಟ್ ಮಾಡಿರುವ ರೇಣುಕಾ ಜೈನ್, “ಭಾವನಗರದಿಂದ ಭರೂಚ್‌ಗೆ ರಸ್ತೆಯ ಮೂಲಕ 350 ಕಿ.ಮೀ ದೂರವಿದೆ. ಆದರೆ ಸಮುದ್ರ ಮಾರ್ಗದಿಂದ ಕೇವಲ 32 ಕಿ.ಮೀ ದೂರವಿದೆ. ಈ ಸಮುದ್ರ ಮಾರ್ಗದ ಮೂಲಕ ಪ್ರಧಾನಮಂತ್ರಿ ಹಡಗು ಸೇವೆಯನ್ನು ಪ್ರಾರಂಭಿಸಿದ್ದಾರೆ. ಈ ಹಡಗಿನ ಸಾಮರ್ಥ್ಯವು, ಒಂದು ಟ್ರಿಪ್‌ಗೆ, 50 ಟ್ರಕ್‌ಗಳು, 60 ಬಸ್‌ಗಳು, 200 ಕಾರುಗಳು, 350 ಮೋಟರ್ ಸೈಕಲ್‌ಗಳು ಮತ್ತು 600 ಜನರನ್ನು ಕೇವಲ ಅರ್ಧಗಂಟೆಯಲ್ಲಿ ಸಾಗಿಸಬಲ್ಲದು” ಎಂದು ಬರೆದು, ವೀಡಿಯೋವೊಂದನ್ನು  ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕೇರಳದ ಹಿಂದೂ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ? ಇಲ್ಲಿದೆ ಫ್ಯಾಕ್ಟ್‌ಚೆಕ್‌ ವಿವರ

ಈ ವರದಿ ಬರೆಯುವ ವೇಳೆಗೆ, ಈ ವೀಡಿಯೋವನ್ನು ಸುಮಾರು 3 ಲಕ್ಷದ 22 ಸಾವಿರ ಜನ ವೀಕ್ಷಿಸಿದ್ದು, ಸುಮಾರು 22 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ ಮತ್ತು 9 ಸಾವಿರ ಜನ ರೀಟ್ವೀಟ್ ಮಾಡಿದ್ದಾರೆ.

ಫೇಸ್‌ಬುಕ್‌ನಲ್ಲಿಯೂ ಸಹ ಇದೇ ಹೇಳಿಕೆಯೊಂದಿಗೆ ಈ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಹೀಗೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಮುಸ್ಲಿಂ ಮದುವೆಯಲ್ಲಿ ಪಾಲ್ಗೊಂಡಿದ್ದಕ್ಕೆ ಕೇರಳದ RSS ಕಾರ್ಯಕರ್ತನ ಮೇಲೆ ಹಲ್ಲೆ ಮಾಡಲಾಯಿತೇ?

ಫ್ಯಾಕ್ಟ್‌ಚೆಕ್:

ಗೂಗಲ್ ಸರ್ಚ್ ಎಂಜಿನ್ ಮೂಲಕ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, CNN ಸುದ್ಧಿ ಸಂಸ್ಥೆಯು, 12 ಅಕ್ಟೋಬರ್ 2019 ರಂದು ಪ್ರಕಟಿಸಿದ ವರದಿಯಲ್ಲಿ ಇದರ ಸಂಪೂರ್ಣ ವಿವರ ದೊರಕಿದೆ. ಇದು ಗ್ರೀಸ್‌ನ ಕಿರಿದಾದ ಕೊರಿಂತ್ ಕಾಲುವೆಯ ಮೂಲಕ ಹಾದುಹೋಗುವ ಅತಿದೊಡ್ಡ ದೋಣಿ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಗುಜರಾತ್‌ನಲ್ಲಿ ಪ್ರಧಾನಿ ಮೋದಿ ಅವರು ಪ್ರಾರಂಭಿಸಿದ ಕ್ರೂಸ್ ಸೇವೆಯ ವಿಡಿಯೋ ಇದು ಎಂದು ಹೇಳಿಕೊಂಡು ಹಂಚಿಕೊಳ್ಳಲಾಗುತ್ತಿರುವ ವೀಡಯೋದ ವಾಸ್ತವತೆ ಇದಾಗಿದೆ.

ಹಾಗಾಗಿ ನರೇಂದ್ರ ಮೋದಿಯವರು ಗುಜರಾತ್‌ನಲ್ಲಿ ಕ್ರೂಸ್ ಸೇವೆಯನ್ನು ಆರಂಭಿಸಿದ್ದಾರೆ ಎಂಬುದು ಇದರಿಂದ ಸುಳ್ಳು ಎಂದು ತಿಳಿದುಬಂದಿದೆ.


ಇದನ್ನೂ ಓದಿ: ಭಾರತಕ್ಕಿಂತ ಅಮೆರಿಕ, ಜಪಾನ್ ಜಿಡಿಪಿ ಕುಸಿತ ಹೆಚ್ಚು?: ಸುಳ್ಳು ಹರಡುತ್ತಿರುವ ಪೋಸ್ಟ್ ಕಾರ್ಡ್

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts