Homeದಿಟನಾಗರಫ್ಯಾಕ್ಟ್‌ಚೆಕ್: ಪ್ರಧಾನಿ ಉದ್ಘಾಟಿಸಿದ ಅಟಲ್ ಸುರಂಗ ಎಂದು ಅಮೇರಿಕಾ ಸುರಂಗದ ಚಿತ್ರ ಹಂಚಿಕೊಂಡ ಮಾಧ್ಯಮಗಳು!

ಫ್ಯಾಕ್ಟ್‌ಚೆಕ್: ಪ್ರಧಾನಿ ಉದ್ಘಾಟಿಸಿದ ಅಟಲ್ ಸುರಂಗ ಎಂದು ಅಮೇರಿಕಾ ಸುರಂಗದ ಚಿತ್ರ ಹಂಚಿಕೊಂಡ ಮಾಧ್ಯಮಗಳು!

ಈ ಚಿತ್ರವನ್ನು ಬಿಜೆಪಿ ಮುಖಂಡ ನರೇಂದ್ರ ಕುಮಾರ್ ಚಾವ್ಲಾ ಸೇರಿದಂತೆ ಹಲವಾರು ಬಳಕೆದಾರರು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ

- Advertisement -
- Advertisement -

ಮನಾಲಿ ಮತ್ತು ಲಾಹೌಲ್-ಸ್ಪಿತಿ ಕಣಿವೆಯನ್ನು ಸಂಪರ್ಕಿಸುವ 9.2 ಕಿಲೋಮೀಟರ್ ಉದ್ದದ ಅಟಲ್ ಸುರಂಗ ಮಾರ್ಗವನ್ನು ಅಕ್ಟೋಬರ್ 3, ಶನಿವಾರದಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಇಂಡಿಯಾ ಟುಡೆ, ನ್ಯೂಸ್ 18, ಟೈಮ್ಸ್ ನೌ ಡಿಜಿಟಲ್ ನಂತಹ ಮಾಧ್ಯಮ ಸಂಸ್ಥೆಗಳು ಮತ್ತು ಇಂಡಿಯಾ ಟೈಮ್ಸ್ ಮತ್ತು ಮೆನ್ಸ್‌ಎಕ್ಸ್‌ಪಿ ಯಂತಹ ವೆಬ್‌ಸೈಟ್‌ಗಳು ಪ್ರಧಾನಿ ಉದ್ಘಾಟಿಸಿದ ಸುರಂಗವನ್ನು ತೋರಿಸಲು ಈ ಚಿತ್ರವನ್ನು ಬಳಸಿವೆ.

ಈ ಚಿತ್ರವನ್ನು ಬಿಜೆಪಿ ಮುಖಂಡ ನರೇಂದ್ರ ಕುಮಾರ್ ಚಾವ್ಲಾ ಸೇರಿದಂತೆ ಹಲವಾರು ಬಳಕೆದಾರರು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ನರೇಂದ್ರ ಮೋದಿ ಗುಜರಾತ್‌ನಲ್ಲಿ ಕ್ರೂಸ್ ಹಡಗು ಸೇವೆಯನ್ನು ಪ್ರಾರಂಭಿಸಿದ್ದಾರೆಯೇ? ಇಲ್ಲಿದೆ ವಿವರ

ಫ್ಯಾಕ್ಟ್‌ಚೆಕ್:

ಮನಾಲಿ ಮತ್ತು ಲಾಹೌಲ್-ಸ್ಪಿತಿಯನ್ನು ಸಂಪರ್ಕಿಸುವ 9.2 ಕಿಲೋಮೀಟರ್ ಉದ್ದದ ಅಟಲ್ ಸುರಂಗವನ್ನು ಪ್ರಧಾನ ಮಂತ್ರಿ ಉದ್ಘಾಟಿಸಿದ ನಂತರ, ಹಲವಾರು ಮಾಧ್ಯಮ ಸಂಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿರುವ ಚಿತ್ರವು ಕ್ಯಾಲಿಫೋರ್ನಿಯಾದ ಡೆವಿಲ್ಸ್ ಸ್ಲೈಡ್ ಸುರಂಗದ ಚಿತ್ರವಾಗಿದೆ. ಇದನ್ನು ಅಟಲ್ ಸುರಂಗ ಎಂದು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್‌: ಯುವತಿಯನ್ನು ಅಮಾನುಷವಾಗಿ ಕೊಲ್ಲುತ್ತಿರುವ ಈ ವಿಡಿಯೋ ಭಾರತದ್ದಲ್ಲ

ಗೂಗಲ್ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ, ಈ ಚಿತ್ರವು ಕ್ಯಾಲಿಫೋರ್ನಿಯಾ ಮೂಲದ ಕಂಪನಿಯ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿರುವ ಚಿತ್ರ ಎಂದು ತಿಳಿದುಬಂತು. ಆದರೆ ಈ ಚಿತ್ರವನ್ನು ಬೇರೆ ಕೋನದಿಂದ ತೆಗೆದುಕೊಳ್ಳಲಾಗಿದೆ ಎಂದು ದಿ ಕ್ವಿಂಟ್ ವರದಿ ಮಾಡಿದೆ.

ವೆಬ್‌ಸೈಟ್‌ನಲ್ಲಿ ಒದಗಿಸಲಾದ ವಿವರಣೆಯ ಪ್ರಕಾರ, ಈ ಚಿತ್ರವು ಕ್ಯಾಲಿಫೋರ್ನಿಯಾದಲ್ಲಿ 2012 ರಲ್ಲಿ ನಿರ್ಮಿಸಲಾದ ಡೆವಿಲ್ಸ್ ಸ್ಲೈಡ್ ಬೈ-ಪಾಸ್ (Devil’s Slide By-Pass Tunnels) ಸುರಂಗಗಳದ್ದಾಗಿದೆ.

ಇದನ್ನೂ ಓದಿ: ಕೇರಳದ ಹಿಂದೂ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ? ಇಲ್ಲಿದೆ ಫ್ಯಾಕ್ಟ್‌ಚೆಕ್‌ ವಿವರ

ನಂತರ ಗೂಗಲ್‌ನಲ್ಲಿ Devil’s Slide By-Pass Tunnels ಎನ್ನುವ ಕೀವರ್ಡ್‌ಗಳನ್ನು ಹುಡುಕಾಡಿದಾಗ ಕ್ರೂಸರ್ ಸ್ಟೈಲ್.ಕಾಮ್ ಎಂಬ ವೆಬ್‌ಗೆ ಕರೆದೊಯ್ಯಿತು. ಇದರಲ್ಲಿ 2012 ರ ಆಗಸ್ಟ್‌ನಲ್ಲಿ ಈ ಚಿತ್ರಗಳನ್ನು ಅಪ್‌ಲೋಡ್ ಮಾಡಲಾಗಿತ್ತು. ಇದರಲ್ಲಿ ಈ ಟನಲ್‌ಗೆ ಸಂಬಂಧಸಿದಂತೆ ಹತ್ತಾರು ಚಿತ್ರಗಳನ್ನು ಪೋಸ್ಟ್ ಮಾಡಲಾಗಿದೆ.

ಟಾಮ್ ಲ್ಯಾಂಟೋಸ್ ಸುರಂಗಗಳು ಎಂದೂ ಕರೆಯಲ್ಪಡುವ ಈ ಡೆವಿಲ್ಸ್ ಸ್ಲೈಡ್ ಸುರಂಗಗಳು ಅಮೇರಿಕಾದಲ್ಲಿರುವ ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೊ ​​ಪೆನಿನ್ಸುಲಾದ ಎರಡು ಸುರಂಗಗಳಾಗಿವೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಮುಸ್ಲಿಂ ಮದುವೆಯಲ್ಲಿ ಪಾಲ್ಗೊಂಡಿದ್ದಕ್ಕೆ ಕೇರಳದ RSS ಕಾರ್ಯಕರ್ತನ ಮೇಲೆ ಹಲ್ಲೆ ಮಾಡಲಾಯಿತೇ?

ಡೆವಿಲ್ಸ್ ಸ್ಲೈಡ್ ಸುರಂಗಗಳ ಉದ್ಘಾಟನೆಯ ಯೂಟ್ಯೂಬ್ ವೀಡಿಯೊವನ್ನೂ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಹಾಗಾಗಿ ಇದರಿಂದ ತಿಳಿದುಬರುವುದೇನೆಂದರೆ ಅಮೇರಿಕಾ ಸುರಂಗವನ್ನು ಪ್ರಧಾನಿ ಉದ್ಘಾಟಿಸಿದ ಅಟಲ್ ಸುರಂಗ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಗಾಲ್ವಾನ್‌ ಕಣಿವೆಯಲ್ಲಿ ಸಾವಿಗೀಡಾದ ಚೀನಾ ಸೈನಿಕರ ಸಮಾಧಿಯೆಂದು ಹಳೆಯ ಚಿತ್ರಗಳನ್ನು ಪ್ರಸಾರ ಮಾಡಿದ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...