ಇಂಡಿಯಾ ಟುಡೆ ಪತ್ರಕರ್ತರಾದ ರಾಜ್‌ದೀಪ್ ಸರ್ದೇಸಾಯಿ ಇಂದು ರಿಪಬ್ಲಿಕ್ ಟಿವಿಯ ಸ್ಥಾಪಕ ಮತ್ತು ಪತ್ರಕರ್ತ ಅರ್ನಾಬ್ ಗೋಸ್ವಾಮಿ ಮೇಲೆ ತೀವ್ರವಾದ ವಾಗ್ದಾಳಿ ನಡೆಸಿದ್ದು, “ನಿಮ್ಮದು ಬನಾನಾ ರಿಪಬ್ಲಿಕ್ ಚಾನೆಲ್” ಎಂದು ಕಿಡಿಕಾರಿದ್ದಾರೆ.
ಇತ್ತೀಚೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಗುರಿಯಾಗಿಸಿಕೊಂಡು ಟಿವಿ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದ ಅರ್ನಾಬ್ ಗೋಸ್ವಾಮಿಗೆ “ದಿ ಕಪಿಲ್ ಶರ್ಮ ಶೋ”ನಲ್ಲಿ ಕಿಕು ಶಾರ್ದ ಹಾಗೂ ಕೃಷ್ಣ ಅಭಿಷೇಕ್ ತಿರುಗೇಟು ನೀಡಿದ ನಂತರದ ಬೆಳವಣಿಗೆಯಲ್ಲಿ ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಕೂಡ ಅರ್ನಾಬ್ ವಿರುದ್ಧ ಬಹಿರಂಗವಾಗಿ ತಮ್ಮ ಟಿವಿ ಕಾರ್ಯಕ್ರಮದಲ್ಲಿ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಅರ್ನಾಬ್ ಗೋಸ್ವಾಮಿ ವಿರುದ್ಧ ಕ್ರಮಕ್ಕೆ ಒತ್ತಾಯ: ಶಿವಸೇನೆ ಸಂಸದರಿಂದ ಗೃಹ ಸಚಿವರಿಗೆ ಪತ್ರ
Well said @sardesairajdeep , whatever Arnab is doing for his Banana Republic is just for TRPs . Republic Tv journalists are just a bunch of jokers who should be in circus and not in a studio. #RepublicTv #ArnabGoswami pic.twitter.com/By9mVQQIwv
— Rahil Mohammed (@ImRahilMohammed) October 5, 2020
ಇದನ್ನೂ ಓದಿ: ಅರ್ನಾಬ್ ಗೋಸ್ವಾಮಿ ಕೈಮುಗಿದು ಕ್ಷಮೆಯಾಚಿಸಲಿ: ಶಿವಸೇನೆ ಮುಖಂಡನ ಆಗ್ರಹ
“ಅರ್ನಾಬ್ ಗೋಸ್ವಾಮಿ ನೀವು ಬನಾನಾ ರಿಪಬ್ಲಿಕ್ ಚಾನೆಲ್ ನಡೆಸುತ್ತಿದ್ದೀರಿ. ನಿಮ್ಮ ವಿಚಾರಗಳಿಗೆ ತಕ್ಕಂತೆ ಉದ್ದೇಶಪೂರ್ವಕವಾಗಿ ವಿಷಯಗಳನ್ನು ತಿರುಚುತ್ತಿದ್ದೀರಿ. ಪತ್ರಿಕೋದ್ಯಮವನ್ನು ನೀವು ಇಷ್ಟೊಂದು ಕೀಳು ಮಟ್ಟಕ್ಕೆ ಒಯ್ಯಬೇಡಿ. ನಿಮಗೆ ಒಂದು ಸಲಹೆ ನೀಡುತ್ತಿದ್ದೇನೆ. ಪತ್ರಿಕೋದ್ಯಮವೆಂದರೆ ಇದಲ್ಲ. ಕಳೆದ ಎರಡು ತಿಂಗಳಿನಿಂದ ನೀವು ಪ್ರಸಾರ ಮಾಡುತ್ತಿದ್ದ ಅಸಹ್ಯವಾದ ವಿಚಾರವನ್ನು ಕೇಳಿಸಿಕೊಂಡು ನಾನು ಸುಮ್ಮನಿದ್ದೆ. ಟಿಆರ್‌ಪಿಗಿಂತಲೂ ಹೆಚ್ಚಾಗಿರುವುದು ಇದೆ ಗೆಳಯ, ಅದು ಟೆಲಿವಿಶನ್ ರೆಸ್ಪೆಕ್ಟ್ ಪಾಯಿಂಟ್ಸ್” ಎಂದು ‘ಇಂಡಿಯಾ ಟುಡೆ’ ಟಿವಿ ವಾಹಿನಿಯ ಕಾರ್ಯಕ್ರಮ ಪ್ರಸಾರದ ವೇಳೆ ತಮ್ಮ ತಾಳ್ಮೆ ಕಳೆದುಕೊಂಡು ರಾಜ್‌ದೀಪ್ ಸರ್ದೇಸಾಯಿ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಟಿವಿ ಡಿಬೆಟ್‌ನಲ್ಲಿ ಊಟ ಮಾಡಿದ ಪ್ಯಾನೆಲಿಸ್ಟ್; ಟ್ರೋಲ್ ಆದ ಅರ್ನಾಬ್ ಗೋಸ್ವಾಮಿ
ನಟಿ ರಿಯಾ ಚಕ್ರವರ್ತಿಯ ವಿಶೇಷ ಸಂದರ್ಶನವನ್ನು ತಮ್ಮ ಚಾನೆಲ್‍ನಲ್ಲಿ ರಾಜ್‌ದೀಪ್ ಪ್ರಸಾರ ಮಾಡಿದ ನಂತರ ಅರ್ನಾಬ್ ಗೋಸ್ವಾಮಿಯು ರಾಜ್‌ದೀಪ್ ವಿರುದ್ಧ ಕಿಡಿಕಾರುತ್ತಲೇ ಇದ್ದರು. ಸುಶಾಂತ್ ಸಿಂಗ್ ರಜಪುತ್ ಅವರದ್ದು ಕೊಲೆ ಎಂದೇ ಅರ್ನಾಬ್ ಗೋಸ್ವಾಮಿ ವಾದಿಸುತ್ತಿದ್ದರು. ಆದರೆ ಏಮ್ಸ್ ವೈದ್ಯ ಡಾ. ಸುಧೀರ್ ಗುಪ್ತಾ, ಸುಶಾಂತ್ ಅವರದ್ದು ಆತ್ಮಹತ್ಯೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಇದನ್ನೂ ಓದಿ: ರಿಪಬ್ಲಿಕ್ ಟಿವಿ ಅರ್ನಾಬ್ ಗೋಸ್ವಾಮಿ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್


