ಅಂತರ್-ಧರ್ಮೀಯ ಕುಟುಂಬಗಳ ನಡುವಿನ ಸೌಹಾರ್ದತೆ ಬಿಂಬಿಸುವ ಟೈಟನ್ ಗ್ರೂಪ್‍ನ ತನಿಷ್ಕ್ ಜುವೆಲ್ಲರಿಯ ಏಕತ್ವಂ’ ಜಾಹೀರಾತು ಬಹುಚರ್ಚಿತ ಸುದ್ದಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಯ ನಡುವೆ ಕಂಪನಿಯು ಜಾಹೀರಾತನ್ನು ತೆಗೆದುಹಾಕಲಾಗಿದೆ.
ಟ್ವಿಟ್ಟರ್‌ನಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆಯಲ್ಲದೆ ನಿನ್ನೆ #BoycottTanishq ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿ, ಈ ನಿರ್ದಿಷ್ಟ ತನಿಷ್ಕ್ ಜಾಹೀರಾತನ್ನು ನಿಷೇಧಿಸಬೇಕು ಎಂದು ಟ್ರೋಲ್ ಮಾಡಲಾಗಿತ್ತು. ಈ ಜಾಹೀರಾತಿನ ಮೂಲಕ ತನಿಷ್ಕ್ ‘ಲವ್ ಜಿಹಾದ್’ ಹಾಗೂ ‘ನಕಲಿ ಜಾತ್ಯತೀತತೆ’ಯನ್ನು ಪ್ರೋತ್ಸಾಹಿಸುತ್ತಿದೆ ಎಂದು ಹಲವು ಟ್ವಿಟ್ಟಿರಿಗರು ಆರೋಪಿಸಿದ್ದರು.
ಅದೇ ಸಮಯದಲ್ಲಿ ಬಹಳಷ್ಟು ಮಂದಿ ತನಿಷ್ಕ್ ಪರ ನಿಂತಿದ್ದಾರೆ. ಸೌಹಾರ್ದತೆ ಸಾರುವ ಆ ಜಾಹೀರಾತಿನಲ್ಲಿ ಆಕ್ಷೇಪಾರ್ಹವಾದುದು ಯಾವುದು ಇಲ್ಲ. ಇನ್ನು ಲವ್ ಜಿಹಾದ್ ಎಂಬ ಪರಿಕಲ್ಪನೆ ಅಸ್ತಿತ್ವದಲ್ಲಿಲ್ಲ ಎಂದು ಕೇಂದ್ರ ಸರ್ಕಾರವೇ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಿದೆ. ಹೀಗಿರುವಾಗ ಮತಾಂಧವಾದಿಗಳ ಟ್ರೋಲ್‌ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂಬಂತಹ ಅಭಿಪ್ರಾಯಗಳು ವ್ಯಕ್ತವಾಗಿವೆ.
ಏಕತ್ವಂ ಎಂಬ ಶೀರ್ಷಿಕೆಯೊಂದಿಗೆ ತನಿಷ್ಕ್ ತನ್ನ ಹೊಸ ಆಭರಣವನ್ನು ಬಿಡುಗಡೆ ಮಾಡಿತ್ತು. ಅ.9ರಂದು ಬಿಡುಗಡೆಯಾದ 45 ಸೆಕೆಂಡ್‌ನ ಈ ಜಾಹೀರಾತಿನಲ್ಲಿ ಅಂತರ್-ಧರ್ಮೀಯ ಕುಟುಂಬಗಳನ್ನು ಒಳಗೊಂಡ ಸೌಹಾರ್ದತೆ ಸಾರುವುದಾಗಿದೆ.
ಇದನ್ನೂ ಓದಿ: ಇದುವರೆಗೂ ಯಾವುದೇ ಲವ್ ಜಿಹಾದ್ ನಡೆದಿಲ್ಲವೆಂದ ಮೋದಿ ಸರ್ಕಾರ : ಇದು ಬಿಜೆಪಿ V/S ಬಿಜೆಪಿಯ ಕದನ..
ತನಿಷ್ಕ್ ಹೊಸ ಜಾಹೀರಾತಿನಲ್ಲಿ ಇರುವುದೇನು..?
ಮುಸ್ಲಿಂ ಕುಟುಂಬದ ವರನನ್ನು ಮದುವೆಯಾದ ಹಿಂದೂ ಮಹಿಳೆಯ ಕಥೆಯನ್ನು ಸುಂದರವಾದ ಜಾಹೀರಾತಾಗಿ ತನಿಷ್ಕ್ ಚಿತ್ರಿಸಿದ್ದಾರೆ. ಜಾಹೀರಾತಿನಲ್ಲಿ, ಹಿಂದೂ ಮಹಿಳೆಯು ಬಸುರಿಯಾಗಿದ್ದು, ತನ್ನ ಮೊದಲ ಮಗುವಿನ ನಿರೀಕ್ಷೆಯಲ್ಲಿರುತ್ತಾರೆ. ಸೀಮಂತ ಸಮಾರಂಭಕ್ಕಾಗಿ ಅತ್ತೆ ಆಕೆಯನ್ನು ಕೈಹಿಡಿದು ಕರೆದೊಯ್ಯುತ್ತಾರೆ. ಸಂಭ್ರಮಾಚರಣೆಯ ಸ್ಥಳವನ್ನು ನೋಡಿ ಗರ್ಭಿಣಿ ಆಶ್ಚರ್ಯಪಡುತ್ತಾಳೆ. ಏಕೆಂದರೆ ಸಮಾರಂಭವನ್ನು ಹಿಂದೂ ಸಂಪ್ರದಾಯಗಳ ಪ್ರಕಾರ ಆಯೋಜಿಸಲಾಗಿರುತ್ತದೆ. ಗರ್ಭಿಣಿ ಅದರ ಬಗ್ಗೆ ತನ್ನ ಅತ್ತೆಯನ್ನು ’ಈ ರೀತಿಯ ಸಮಾರಂಭವನ್ನು ನಿಮ್ಮ ಮನೆಗಳಲ್ಲಿ ಆಚರಿಸಲಾಗುವುದಿಲ್ಲ, ಅಲ್ಲವೇ? ಎಂದು ಕೇಳುತ್ತಾಳೆ. ಆಗ ಆಕೆಯ ಅತ್ತೆ ’ಮಗಳನ್ನು ಸಂತೋಷಪಡಿಸುವ ಸಮಾರಂಭವನ್ನು ಪ್ರತಿ ಮನೆಯಲ್ಲಿಯೂ ನಡೆಸಲಾಗುತ್ತದೆ, ಅಲ್ಲವೇ..?’ ಎಂದು ಉತ್ತರಿಸುತ್ತಾರೆ.
ತನಿಷ್ಕ್ ಹೊಸ ಆಭರಣ ‘ಏಕತ್ವಂ’ಗಾಗಿ ಈ ವೀಡಿಯೋ ಜಾಹೀರಾತು ತಯಾರಿಸಲಾಗಿದೆ. ಯುಟ್ಯೂಬ್‍ನಲ್ಲಿ ವೀಡಿಯೊದ ವಿವರಣೆಯಲ್ಲಿ “ಆಕೆಯನ್ನು ತನ್ನ ಸ್ವಂತ ಮಗಳಂತೆ ಪ್ರೀತಿಸುವ ಕುಟುಂಬದಲ್ಲಿ ಆಕೆಯ ವಿವಾಹ ಮಾಡಿಕೊಡಲಾಗಿದೆ. ಆಕೆಗಾಗಿಯೇ ಅವರು ತಾವು ಸಾಮಾನ್ಯವಾಗಿ ಆಚರಿಸದ ಪದ್ಧತಿಯನ್ನು ಅನುಸರಿಸಿ ಸಂಭ್ರಮಿಸುತ್ತಿದ್ದಾರೆ. ಎರಡು ಧರ್ಮಗಳು, ಪದ್ಧತಿಗಳು ಹಾಗೂ ಸಂಸ್ಕೃತಿಗಳ ಸುಂದರವಾದ ಸಂಗಮ” ಎಂದು ಬರೆಯಲಾಗಿದೆ.
ತನಿಷ್ಕ್ ಜಾಹೀರಾತು ತೆಗೆದುಹಾಕಿದರೂ ಹಲವಾರು ಟ್ವಿಟ್ಟರ್ ಬಳಕೆದಾರರು ತಮ್ಮ ಟೈಮ್‌ಲೈನ್‌ಗಳಲ್ಲಿ ಆ ಜಾಹೀರಾತನ್ನು ಹಂಚಿಕೊಂಡು, ಈ ಸುಂದರ ಜಾಹೀರಾತನ್ನು ಇಷ್ಟಪಟ್ಟಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಜಾಹೀರಾತು ಬಹಳ ಇಷ್ಟವಾಯಿತು. ತಲೆಯಿಲ್ಲದ ದ್ವೇಷ ತುಂಬಿಕೊಂಡವರು ಮಾತ್ರ ಇದನ್ನು ಹಿಂದೂ ಮುಸ್ಲಿಂ ಕುಟುಂಬ ಎಂದು ನೋಡುತ್ತಾರೆ. ಆಭರಣ ಕಂಪನಿ ಜಾಹೀರಾತನ್ನು ಹಿಂತೆಗೆದುಕೊಂಡಿರುವುದು ವಿಷಕಾರುವವರಿಗೆ ಬೆಲೆ ಕೊಟ್ಟಂತೆ ಕಾಣುತ್ತದೆ. ಜೀವನ ಪೂರ್ತಿ ಟೈಟನ್ ವಾಚ್ ಧರಿಸಿರುವ ನಾನು ನಿಮ್ಮಿಂದ ಇದಕ್ಕಿಂತ ಉತ್ತಮವಾಗಿರುವುದನ್ನು ನಿರೀಕ್ಷಿಸಿದ್ದೆ. ಬನ್ನಿ ದ್ವೇಷದ ವಿರುದ್ಧ ಸೌಹಾರ್ದತೆಯಿಂದ ಹೋರಾಡೋಣ ಎಂದು ಖ್ಯಾತ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಟ್ವೀಟ್ ಮಾಡಿದ್ದಾರೆ.
Really lovely ad from @TanishqJewelry .. only a mindless bigot would see it in context of Hindu Muslim relations. By withdrawing the ad, you are succumbing to the hate mongers. As a lifelong Titan watch man, I expect better! Let’s fight hate with harmony.. ??
— Rajdeep Sardesai (@sardesairajdeep) October 13, 2020
So Hindutva bigots have called for a boycott of @TanishqJewelry for highlighting Hindu-Muslim unity through this beautiful ad. If Hindu-Muslim “ekatvam” irks them so much, why don’t they boycott the longest surviving symbol of Hindu-Muslim unity in the world — India? pic.twitter.com/cV0LpWzjda
— Shashi Tharoor (@ShashiTharoor) October 13, 2020
’ಈ ಸುಂದರವಾದ ಜಾಹೀರಾತಿನ ಮೂಲಕ ಹಿಂದೂ-ಮುಸ್ಲಿಂ ಐಕ್ಯತೆಯನ್ನು ಎತ್ತಿ ತೋರಿಸುವುದಕ್ಕಾಗಿ ಹಿಂದುತ್ವವಾದಿಗಳು ಜಾಹೀರಾತು ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ. ಹಿಂದೂ-ಮುಸ್ಲಿಂ “ಏಕತ್ವಂ” ಜಾಹೀರಾತು ಅವರನ್ನು ಇಷ್ಟು ಕೆರಳಿಸುವುದಾದರೆ ಹಿಂದೂ ಮುಸ್ಲಿಂ ಏಕತೆಯ ಪ್ರತೀಕವಾಗಿರುವ ಭಾರತವನ್ನೇಕೆ ಅವರು ಬಾಯ್ಕಾಟ್ ಮಾಡಬಾರದು” ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ವಿಷಕಾರುವ, ದ್ವೇಷ ಹರಡುವ ಚಾನೆಲ್‌ಗಳಿಗೆ ಜಾಹೀರಾತು ನೀಡುವುದಿಲ್ಲ: ರಾಜೀವ್ ಬಜಾಜ್
Sad that this was pulled out. Instead Tanishq should have more of this inter cast inter religious theme adverts. Trolls cannot be given legitimacy ?? https://t.co/4mX35CnMCx
— Krishna Kumar V (@Vadakkepat_kris) October 13, 2020
This ad is beautiful. Opposite of what it's being accused of, it actually shows accepting cultures. #Tanishq shouldn't have to bow down to nonsense. Disgusting.@TanishqJewelry https://t.co/h8iX6JefIg
— Neelangana (@neelangana) October 12, 2020
@TanishqJewelry ♥️♥️♥️! You deserve more. Rest is bigatory, don't pay attention to ₹2 tweets. https://t.co/QmGv6lsbvO
— Ajaz Lone (@ajazlone) October 12, 2020
It's really sad to watch what kind of country we are turning into. An ad uniting two religions has to be taken down in the country which used to be called secular since forever.??♀️#tanishq pic.twitter.com/0iPngDuzus
— Greeshma Shukla? (@GreeshmaShukla) October 12, 2020


