ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತ ಕುಟುಂಬ ತಮ್ಮನ್ನು ದೆಹಲಿಗೆ ಸ್ಥಳಾಂತರಿಸುವಂತೆ ಮನವಿ ಮಾಡಿರುವ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ ಮುಖಂಡ ಸಂಜಯ್ ಸಿಂಗ್, “ಕುಟುಂಬವನ್ನು ನನ್ನ ನಿವಾಸಕ್ಕೆ ಸ್ಥಳಾಂತರಿಸಲು ಸಿದ್ಧ ಎಂದು ನಿನ್ನೆ ಹೇಳಿದ್ದಾರೆ.
“ನಾನು ಹತ್ರಾಸ್ ಸಂತ್ರಸ್ತೆಯ ಕುಟುಂಬವನ್ನು ನನ್ನ ನಿವಾಸಕ್ಕೆ ಕರೆದೊಯ್ಯಲು ಸಿದ್ಧನಿದ್ದೇನೆ. ಅವರು ಆದಿತ್ಯನಾಥ್ ಸರ್ಕಾರದ ಭಯದಿಂದ ಬದುಕುವ ಅಗತ್ಯವಿಲ್ಲ. ನನ್ನ ಅಭಿಪ್ರಾಯವನ್ನು ಸಂತ್ರಸ್ತೆಯ ಚಿಕ್ಕಪ್ಪನಿಗೆ ತಿಳಿಸಿದ್ದೇನೆ” ಎಂದು ಸಂಜಯ್ ಸಿಂಗ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಸಿಎಂ ಮಗ ವಿಜಯೇಂದ್ರ ಮೇಲೆ FIR ದಾಖಲಿಸದ ಇನ್ಸ್‌ಪೆಕ್ಟರ್ ವಿರುದ್ದ ನ್ಯಾಯಾಲಯದಲ್ಲಿ ದೂರು
मैं हाथरस की गुड़िया के परिवार को दिल्ली स्थित अपने आवास पर साथ रखने को तैयार हूँ उन्हें आदित्यनाथ राज के ख़ौफ़ में रहने की ज़रूरत नही मैंने गुड़िया के चाचा से फ़ोन पर बात करके अनुरोध किया है। https://t.co/K2oqv9cSgz
— Sanjay Singh AAP (@SanjayAzadSln) October 17, 2020
ಇದನ್ನೂ ಓದಿ: ಉತ್ತರಪ್ರದೇಶ: ಮಹಿಳೆಯರ ಭದ್ರತೆಗಾಗಿ “ಮಿಷನ್ ಶಕ್ತಿ” ಅಭಿಯಾನ ಆರಂಭಿಸಿದ ಸರ್ಕಾರ
ಇದಕ್ಕೆ ಪ್ರತಿಕ್ರಿಯಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಸಂಜಯ್ ಸಿಂಗ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
19 ವರ್ಷದ ದಲಿತ ಯುವತಿಯನ್ನು ಸೆಪ್ಟೆಂಬರ್ 14 ರಂದು ಹತ್ರಾಸ್ ಗ್ರಾಮದಲ್ಲಿ ನಾಲ್ಕು ಮೇಲ್ಜಾತಿಯ ಪುರುಷರು ಅತ್ಯಾಚಾರ ಎಸಗಿ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಆಕೆಯ ಸ್ಥಿತಿ ಹದಗೆಟ್ಟ ನಂತರ, ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಆಕೆ ಕೊನೆಯುಸಿರೆಳೆದಳು.
ನಂತರ, ಪೊಲೀಸರು ಸಂತ್ರಸ್ತೆಯ ಕುಟುಂಬಕ್ಕೆ ಅಂತಿಮ ವಿಧಿವಿಧಾನಗಳನ್ನೂ ನೆರವೇರಿಸಲು ಅವಕಾಶ ಕೊಡದೇ, ಮುಖವನ್ನೂ ತೋರಿಸದೇ ಶವವನ್ನು ಸುಟ್ಟುಹಾಕಿದ್ದರು.
ಇದರ ವಿರುದ್ಧ ದೇಶದಾದ್ಯಂತ ಆಕ್ರೋಶ ಮುಗಿಲುಮುಟ್ಟಿತ್ತು. ಸರ್ಕಾರ ಮತ್ತು ಆದಿತ್ಯನಾಥ್ ದೇಶದ ಜನತೆ ಮತ್ತು ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಬೇಕಾಯಿತು. ಈ ಎಲ್ಲಾ ಬೆಳವಣಿಗೆಗಳ ನಂತರ, ಈ ಘಟನೆಯ ವಿರುದ್ಧ ಸ್ವಯಂ ಪ್ರಕರಣವನ್ನು ಕೋರ್ಟ್ ದಾಖಲಿಸಿಕೊಂಡಿತ್ತು. ನಂತರ ರಾಜ್ಯ ಸರ್ಕಾರ ಇದನ್ನು ಸಿಬಿಐಗೆ ವಹಿಸಿತ್ತು.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಬಿಹಾರ ಚುನಾವಣೆಗಾಗಿ ಪ್ರಿಯಾಂಕಾ ಇಂದಿರಾ ಗಾಂಧಿಯವರ ಸೀರೆ ಧರಿಸಿದ್ದಾರೆಯೇ?



ನಿವಾಸ(ಸಂಸ್ಕ್ರುತ).. ಮನೆ
ಪ್ರತಿಪಕ್ಷ(ಸಂಸ್ಕ್ರುತ).. ಎದುರುಪಾಳೆಯ(ಕನ್ನಡ)
ಲಿಂಕ್..ಕೊಂಡಿ
ಆಕ್ರೋಶ… ಸಿಟ್ಟು
ಜಾತಿ(ಸಂಸ್ಕ್ರುತ).. ಪಂಗಡ(ಕನ್ನಡ)
ಸಾಮೂಹಿಕ.. ಗುಂಪು