Homeಅಂತರಾಷ್ಟ್ರೀಯಸೋಶಿಯಲಿಸಂ-ಕಮ್ಯುನಿಸಂ ವಿರುದ್ಧದ ಹೋರಾಟದಲ್ಲಿ ಭಾರತ-ಅಮೇರಿಕಾ ಒಂದಾಗಬೇಕು: Jr. ಟ್ರಂಪ್

ಸೋಶಿಯಲಿಸಂ-ಕಮ್ಯುನಿಸಂ ವಿರುದ್ಧದ ಹೋರಾಟದಲ್ಲಿ ಭಾರತ-ಅಮೇರಿಕಾ ಒಂದಾಗಬೇಕು: Jr. ಟ್ರಂಪ್

ಜೋ ಬಿಡನ್ ಚೀನಾದ ಬಗ್ಗೆ ಮೃಧು ದೋರಣೆಯುಳ್ಳವರಾಗಿರುವ ಕಾರಣ ಅವರು ಭಾರತಕ್ಕೆ ಒಳ್ಳೆಯದಾಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ Jr. ಟ್ರಂಪ್ ಆರೋಪಿಸಿದ್ದಾರೆ.

- Advertisement -
- Advertisement -

ಅಮೇರಿಕಾ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡನ್ ಚೀನಾದ ಬಗ್ಗೆ ಮೃಧು ದೋರಣೆಯುಳ್ಳವರಾಗಿರುವ ಕಾರಣ ಅವರು ಗೆದ್ದರೆ, ಭಾರತಕ್ಕೆ ಒಳ್ಳೆಯದಾಗುವುದಿಲ್ಲ ಎಂದು, ಜೋ ಬಿಡೆನ್ ವಿರುದ್ಧದ ಆರೋಪಗಳ ಕುರಿತ ಪುಸ್ತಕದ ಯಶಸ್ಸಿನ ಬಗ್ಗೆ ಮಾತನಾಡುವಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ Jr. ಟ್ರಂಪ್ ಈ ಮಾತನ್ನು ಹೇಳಿದ್ದಾರೆ.

ಡೊನಾಲ್ಡ್‌ ಟ್ರಂಪ್ ಮಗ ತಮ್ಮ ತಂದೆಯ ಪರವಾಗಿ ಮರು ಚುನಾವಣಾ ಪ್ರಚಾರಕ್ಕೆ ಮುಂದಾಗಿದ್ದಾರೆ. ಅಮೇರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ನವೆಂಬರ್ 3 ರಂದು ನಡೆಯಲಿದೆ.

“ನಾವು ಚೀನಾದ ಬೆದರಿಕೆಯನ್ನು ಅರ್ಥಮಾಡಿಕೊಳ್ಳಬೇಕು. ಬಹುಶಃ ಇದು ಭಾರತೀಯ-ಅಮೆರಿಕನ್ನರಿಗೆ ಚೆನ್ನಾಗಿ ತಿಳಿದಿರಬಹುದು” ಎಂದು ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನ ಕಾರ್ಯಕ್ರಮದಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಹೇಳಿದರು ಎಂದು ಡೆಕ್ಕನ್ ಹೆರಾಲ್ಡ್‌ ವರದಿ ಮಾಡಿದೆ.

ಇದನ್ನೂ ಓದಿ: ಅಮೆರಿಕಾ ಚುನಾವಣೆ: ಚರ್ಚೆಯಲ್ಲಿ ಭಾಗವಹಿಸಲು ನಿರಾಕರಿಸಿದ ಟ್ರಂಪ್

ಅವರು ತಮ್ಮ ಲಿಬರಲ್ ಪ್ರಿವಿಲೇಜ್ ಎಂಬ ಪುಸ್ತಕದಲ್ಲಿ, ಜೋ ಬಿಡೆನ್ ಕುಟುಂಬದ ವಿರುದ್ಧ, ವಿಶೇಷವಾಗಿ ಅವರ ಮಗ ಹಂಟರ್ ಬಿಡೆನ್ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ದಾಖಲಿಸಿದ್ದಾರೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್‌ ಟ್ರಂಪ್ ಅತ್ಯುತ್ತಮವಾದ ಸಂಬಂಧ ಹೊಂದಿದ್ದಾರೆ. ಅಮೇರಿಕಾದಲ್ಲಿ ನಡೆಯುವ ಟ್ರಂಪ್ ರ್ಯಾಲಿಗಳನ್ನೇ ದೊಡ್ಡದು ಎಂದುಕೊಂಡಿದ್ದೆ. ಆದರೆ ಭಾರತದಲ್ಲಿ ಅದಕ್ಕಿಂತಲೂ ದೊಡ್ಡ ರ್ಯಾಲಿ ನಡೆದಿತ್ತು. ಸೋಶಿಯಲಿಸಂ ಮತ್ತು ಕಮ್ಯುನಿಸಂ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಅಮೇರಿಕಾ ಜೊತೆಯಾಗಿರಬೇಕೆಂಬುದು ಎರಡೂ ದೇಶದ ನಾಯಕರ ಅಭಿಲಾಷೆಯಾಗಿದೆ ಎಂದು ಜೂನಿಯರ್ ಟ್ರಂಪ್ ಹೇಳಿದ್ದಾರೆ.


ಇದನ್ನೂ ಓದಿ: ಜನಾಂಗೀಯ ದಾಳಿಯನ್ನು ಹಿಮ್ಮೆಟ್ಟಿಸುವ ಹೋರಾಟಕ್ಕೆ ಸಿದ್ದಳಾಗಿದ್ದೇನೆ: ಕಮಲಾ ಹ್ಯಾರಿಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...