ಪರ್ಷಿಯನ್ ಕೊಲ್ಲಿಯಲ್ಲಿ ಫರ್ಜಾದ್-ಬಿ ಅನಿಲ ಕ್ಷೇತ್ರದ ಅಭಿವೃದ್ಧಿಯಿಂದ ಭಾರತವನ್ನು ಇರಾನ್ ಹೊರಹಾಕಿದೆ ಎಂದು ಟೆಹ್ರಾನ್‌ನ ಉನ್ನತ ಸರ್ಕಾರಿ ಮೂಲವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಅನಾಡೋಲು ಏಜೆನ್ಸಿ ವರದಿ ಮಾಡಿದೆ.
ಮೂರು ಭಾರತೀಯ ಕಂಪನಿಗಳಾದ ಒಎನ್‌ಜಿಸಿ, ಆಯಿಲ್ ಇಂಡಿಯಾ ಲಿಮಿಟೆಡ್ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ಒಕ್ಕೂಟದಿಂದ 2008 ರಲ್ಲಿ ಪರ್ಷಿಯನ್ ಕೊಲ್ಲಿಯ ಫಾರ್ಸಿ ಕಡಲಾಚೆಯ ಪ್ರದೇಶದಲ್ಲಿ ಫರ್ಜಾದ್-ಬಿ ಅನಿಲ ಕ್ಷೇತ್ರವನ್ನು ಕಂಡುಹಿಡಿದಿತ್ತು. ಇರಾನ್ ಮತ್ತು ಭಾರತ ಈ ಕ್ಷೇತ್ರದ ಅಭಿವೃದ್ಧಿಯ ನಿಯಮಗಳನ್ನು ಹಲವು ವರ್ಷಗಳಿಂದ ಮಾತುಕತೆ ನಡೆಸುತ್ತಿದೆ.
ಇದನ್ನೂ ಓದಿ: ದೇಶವನ್ನುದ್ದೇಶಿಸಿ ಮೋದಿ ಭಾಷಣಕ್ಕೆ ಟ್ರೋಲ್: ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ!
ವರ್ಷಗಳ ಹಿಂದೆ ಇರಾನ್ ಹೊರಡಿಸಿದ “ಬಹು ನಿಯಮಗಳಿಗೆ(ಮಲ್ಟಿಪಲ್ ಅಲ್ಟಿಮೇಟಮ್)” ಪ್ರತಿಕ್ರಿಯಿಸಲು ಭಾರತವು ವಿಫಲವಾದ ಕಾರಣ ಅನಿಲ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಇರಾನ್ ಸ್ಥಳೀಯ ಸಂಸ್ಥೆಗಳನ್ನು ಬಳಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
“ನಾವು ಕಳೆದ ವರ್ಷ ಸೇರಿದಂತೆ ಅನೇಕ ಅಲ್ಟಿಮೇಟಮ್‌ಗಳನ್ನು ನೀಡಿದ್ದೇವೆ, ಆದರೆ ಬಹುಶಃ ಯೋಜನೆಯನ್ನು ಕಳೆದುಕೊಳ್ಳುವಲ್ಲಿ ಮತ್ತು ಅಮೆರಿಕಾ ಅಧೀನರಾಗಿರುವುದರಲ್ಲಿ ಅವರಿಗೆ ಯಾವುದೇ ಸಮಸ್ಯೆ ಇರಲಿಲ್ಲ” ಎಂದು ಮೂಲವೊಂದು ಹೇಳಿದೆ.
ಯೋಜನೆಯ ಅಭಿವೃದ್ಧಿಯ ಕುರಿತು ಮಾತುಕತೆಗಾಗಿ ಇರಾನ್ ಭಾರತಕ್ಕೆ ಹಲವಾರು ಆಹ್ವಾನಗಳನ್ನು ಕಳುಹಿಸಿದೆ ಎಂದು ಮೂಲಗಳು ತಿಳಿಸಿವೆ. ಅಮೆರಿಕದ ನಿರ್ಬಂಧದಿಂದಾಗಿ ಭಾರತವು ವಿಳಂಬ ಮಾಡುತ್ತಿರುವುದರಿಂದ ಫರ್ಜಾದ್-ಬಿ ಅನಿಲ ಕ್ಷೇತ್ರ ಯೋಜನೆಯನ್ನು ಕಳೆದುಕೊಳ್ಳಲು ಸಜ್ಜಾಗಿದೆ ಎಂದು ಸುದ್ದಿ ಸಂಸ್ಥೆ ಅನಾಡೋಲು ಏಜೆನ್ಸಿ ಜುಲೈನಲ್ಲಿ ವರದಿ ಮಾಡಿತ್ತು.

ಇದನ್ನೂ ಓದಿ: ಮೋದಿಗೆ 8,400 ಕೋಟಿ ರೂ. ವಿಮಾನ; ಸೈನಿಕರಿಗೆ ಬುಲ್ಲೆಟ್‌ಪ್ರೂಫ್ ರಹಿತ ಟ್ರಕ್!: ರಾಹುಲ್ ಗಾಂಧಿ
ಕಳೆದ ತಿಂಗಳು, ಇರಾನ್‌ನ ಪೆಟ್ರೋಲಿಯಂ ಸಚಿವ ಬಿಜಾನ್ ಜಂಗಾನೆಹ್ ಭಾರತೀಯ ಒಕ್ಕೂಟವಿಲ್ಲದೆ ಅನಿಲ ಕ್ಷೇತ್ರವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ದೃಪಡಿಸಿದ್ದರು.
“2.2 ಬಿಲಿಯನ್ ಡಾಲರ್ ಮೌಲ್ಯದ ಫರ್ಜಾದ್-ಬಿ ಅಭಿವೃದ್ಧಿಯ ಮೊದಲ ಹಂತವು ಮುಂದಿನ ದಿನಗಳಲ್ಲಿ ಸಹಿ ಮಾಡಲಾಗುವುದು” ಎಂದು ಅವರು ಸಂಸತ್ತಿನಲ್ಲಿ ಹೇಳಿದ್ದರು.
ಅವಕಾಶವನ್ನು ಕಳೆದುಕೊಂಡ ಭಾರತ
ದೈತ್ಯ ಅನಿಲ ಕ್ಷೇತ್ರವು 21.7 ಟ್ರಿಲಿಯನ್ ಘನ ಅಡಿ ಅನಿಲ ನಿಕ್ಷೇಪ ಹೊಂದಿದ್ದು, 12.8 ಟ್ರಿಲಿಯನ್ ಘನ ಅಡಿ ನೈಸರ್ಗಿಕ ಅನಿಲ ಮತ್ತು 212 ಮಿಲಿಯನ್ ಬ್ಯಾರೆಲ್ ಅನಿಲ ಕಂಡೆನ್ಸೇಟ್ಗಳನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ.
ಇರಾನ್ ಭಾರತಕ್ಕೆ ಅನೇಕ ರಿಯಾಯಿತಿಗಳನ್ನು ನೀಡಿದ್ದು, ಯೋಜನೆಗೆ ಸೇರಲು ಬಹಳ ಸಮಯ ಕಾಯುತ್ತಿತ್ತು. ಆದರೆ ಅಮೆರಿಕಾದೊಂದಿಗೆ ದ್ವೇಷ ಕಟ್ಟಿಕೊಳ್ಳಲು ತಯಾರಿರದ ಭಾರತ ಇದನ್ನು ಕಳೆದು ಕೊಂಡಿದೆ ಎನ್ನಲಾಗಿದೆ.
ಮೂಲದ ಪ್ರಕಾರ, ಇರಾನ್ ಕಳೆದ ವರ್ಷ ಭಾರತಕ್ಕೆ ತನ್ನ ಅಂತಿಮ ಅಲ್ಟಿಮೇಟಮ್ ಅನ್ನು ಬಿಡುಗಡೆ ಮಾಡಿದ್ದು, ಇನ್ನು ಮುಂದೆ ಕಾಯಲು ಸಾಧ್ಯವಿಲ್ಲ ಎಂದು ಇರಾನ್ ಹೇಳಿದೆ.
“ಹಲವು ವರ್ಷದಿಂದ ಗ್ಯಾಸ್ ಹೊರತೆಗೆಯುತ್ತಿರುವ ಕತಾರ್‌ನಂತಹ ಇತರ ದೇಶಗಳೊಂದಿಗೆ ಅನಿಲ ಕ್ಷೇತ್ರಗಳನ್ನು (ಪರ್ಷಿಯನ್ ಕೊಲ್ಲಿಯಲ್ಲಿ) ಹಂಚಿಕೊಳ್ಳುತ್ತೇವೆ. ಅಮೆರಿಕಾದ ನಿರ್ಬಂಧಗಳು ಮತ್ತು ಭಯದಿಂದ ಭಾರತವು ಅವಕಾಶವನ್ನು ಕಳೆದುಕೊಂಡಿದೆ ಎಂದು ತಿಳಿಸಿದೆ.
ಈ ದೈತ್ಯ ಗ್ಯಾಸ್ ಕ್ಷೇತ್ರದಲ್ಲಿ ಸುಮಾರು 100 ಮಿಲಿಯನ್ ಆರಂಭಿಕ ಹೂಡಿಕೆಯ ಹೊರತಾಗಿಯೂ, ಅಮೆರಿಕಾದ ನಿರ್ಬಂಧಗಳಿಂದಾಗಿ ಭಾರತ ಹಿಂದೆ ಸರಿದಿದೆ.
ಇದನ್ನೂ ಓದಿ: ಚೀನಿಯರನ್ನು ಭಾರತದಿಂದ ಯಾವಾಗ ಹೊರಹಾಕುತ್ತೀರಿ? ಮೋದಿ ಭಾಷಣಕ್ಕೆ ರಾಹುಲ್ ಪ್ರಶ್ನೆ


