Homeಮುಖಪುಟಗೌರಿ ಲಂಕೇಶರಂತೆ ಈಗ ನನ್ನನ್ನೂ ಕೊಲ್ಲಬಹುದು ಎಂದು ಭಯವಾಗಿತ್ತು: ವಕೀಲೆ ದೀಪಿಕಾ ಸಿಂಗ್

ಗೌರಿ ಲಂಕೇಶರಂತೆ ಈಗ ನನ್ನನ್ನೂ ಕೊಲ್ಲಬಹುದು ಎಂದು ಭಯವಾಗಿತ್ತು: ವಕೀಲೆ ದೀಪಿಕಾ ಸಿಂಗ್

ಜನಸಮೂಹವೊಂದು ನನ್ನ ನಿವಾಸದ ಹೊರಗೆ ಜಮಾಯಿಸಿ, ಘೋಷಣೆಗಳನ್ನು ಕೂಗುತ್ತಾ, ದೀಪಿಕಾ ನಿಮ್ಮ ಸಮಾಧಿಯನ್ನು ಜಮ್ಮು ಮತ್ತು ಕಾಶ್ಮೀರದ ಭೂಮಿಯಲ್ಲಿ ಅಗೆಯಲಾಗುವುದು ಎಂದು ಕೂಗುತ್ತಿತ್ತು.

- Advertisement -
- Advertisement -

ಜಮ್ಮುವಿನಲ್ಲಿರುವ ವಕೀಲೆ ದೀಪಿಕಾ ಸಿಂಗ್ ರಾಜಾವತ್, ಮೈಕ್ರೊ ಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನಲ್ಲಿ ಕಾರ್ಟೂನ್ ಒಂದನ್ನು ಪೋಸ್ಟ್ ಮಾಡಿದ ನಂತರ, ಪುರುಷರ ಗುಂಪೊಂದು ಮಂಗಳವಾರ ತಡರಾತ್ರಿ ಅವರ ನಿವಾಸದ ಹೊರಗೆ ಘೋಷಣೆಗಳನ್ನು ಕೂಗುತ್ತಾ ಜಮಾಯಿಸಿತ್ತು ಎಂದು ವರದಿಯಾಗಿದೆ.

“ಜನಸಮೂಹವೊಂದು ನನ್ನ ನಿವಾಸದ ಹೊರಗೆ ಜಮಾಯಿಸಿ, ಘೋಷಣೆಗಳನ್ನು ಕೂಗುತ್ತಾ ನನ್ನನ್ನು ಸಾಯಿಸುವುದಾಗಿ ಬೆದರಿಕೆ ಹಾಕಿತು. ದೀಪಿಕಾ ನಿಮ್ಮ ಸಮಾಧಿಯನ್ನು ಜಮ್ಮು ಮತ್ತು ಕಾಶ್ಮೀರದ ಭೂಮಿಯಲ್ಲಿ ಅಗೆಯಲಾಗುವುದು” ಎಂದು ಕೂಗುತ್ತಿದ್ದರು ಎಂದು ದೀಪಿಕಾ ಸಿಂಗ್ ನ್ಯೂಸ್‌ಕ್ಲಿಕ್‌ಗೆ ತಿಳಿಸಿದ್ದಾರೆ.

“ಕೆಲವರು ನನ್ನ ಹೆಸರನ್ನು ಕೂಗಿದಾಗ ರಾತ್ರಿ 12.30 ಆಗಿತ್ತು. ನಾನು ಸಾವಿಗೆ ಹೆದರುತ್ತಿದ್ದೆ. ನಾನು ನನ್ನ ಪಿಎಸ್‌ಒಗಳನ್ನು ಎಚ್ಚರಿಸಿದೆ. ನಂತರ ತಕ್ಷಣ ಪ್ರತಿಕ್ರಿಯಿಸಿದ ಐಜಿಗೆ ಫೋನ್ ಮಾಡಿದೆ. ಆಗ ಕೆಲವು ಪೊಲೀಸರು ಬಂದು ಜನಸಮೂಹವನ್ನು ಚದುರಿಸಿದರು” ಎಂದು ಅವರು ವಿವರಿಸಿದರು.

ಇದನ್ನೂ ಓದಿ: ಡಿಜೆ ಹಳ್ಳಿ ಗಲಭೆ ಪ್ರಕರಣ: ಆರೋಪಿ ನವೀನ್‌ಗೆ ಜಾಮೀನು

“ವ್ಯಂಗ್ಯ” ಎಂಬ ಶೀರ್ಷಿಕೆಯೊಂದಿಗೆ ದೀಪಿಕಾ ಸಿಂಗ್ ಪೋಸ್ಟ್ ಮಾಡಿದ ವ್ಯಂಗ್ಯ ಚಿತ್ರವು ಎರಡು ವಿರೋಧಾಭಾಸದ ದೃಶ್ಯಗಳನ್ನು ಸಾರಾಸಗಟಾಗಿ ತೋರಿಸಿದೆ. ಒಂದು ಚಿತ್ರದಲ್ಲಿ, ನವರಾತ್ರಿಯ ಒಂಬತ್ತು ದಿನಗಳ ಹಿಂದೂ ಹಬ್ಬದ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಸ್ತ್ರೀ ಹಿಂದೂ ದೇವತೆಯ ಪಾದಗಳನ್ನು ಸ್ಪರ್ಶಿಸುತ್ತಾನೆ. ಇತರದ  ಚಿತ್ರದಲ್ಲಿ, “ಇತರೆ ದಿನಗಳು” ಎಂಬ ಶೀರ್ಷಿಕೆಯೊಂದಿಗೆ, ಅದೇ ಪುರುಷನು ಮಹಿಳೆಯ ಎರಡೂ ಕಾಲುಗಳನ್ನು ಆಕ್ರಮಣಕಾರಿಯಾಗಿ ಹಿಡಿದುಕೊಂಡಿರುತ್ತಾನೆ. ಇದು ಮಹಿಳೆಯ ಮೇಲಿನ ಲೈಂಗಿಕ ದೌರ್ಜನ್ಯವನ್ನು ಧ್ವನಿಸುತ್ತದೆ.

ಇದನ್ನೂ ಓದಿ: ಕಟೀಲ್ ವಿರುದ್ಧ ಟೀಕಾಸ್ತ್ರ: ಸಿದ್ದರಾಮಯ್ಯ ಕಾಂಗ್ರೆಸ್ ’ವಿದೂಷಕ’ ಎಂದ ಬಿಜೆಪಿ!

ಈ ಕಾರ್ಟೂನ್ ಹಿಂದೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಆರೋಪಿಸಿ, ಇದರ ಪರಿಣಾಮವಾಗಿ ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ದೀಪಿಕಾ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ಅಂದಿನಿಂದ, ಅವರು ಮತ್ತು ಅವರ ಕುಟುಂಬವು ಕಾರ್ಟೂನ್ ತೆಗೆದುಹಾಕಿ ಮತ್ತು ಕ್ಷಮೆಯಾಚಿಸುವಂತೆ ಬೆದರಿಕೆ ಹಾಕುವ ಕರೆಗಳನ್ನು ಸ್ವೀಕರಿಸುತ್ತಿದೆ ಎಂದು ದೀಪಿಕಾ ಸಿಂಗ್ ಹೇಳಿದ್ದಾರೆ.

ಇವುಗಳಿಗೆ ಪ್ರತಿಕ್ರಿಯಿಸಿದ ಅವರು “ಇಲ್ಲಿ ಅತ್ಯಾಚಾರಗಳು ನಡೆಯುವುದಿಲ್ಲವೇ? ಭಾರತದಲ್ಲಿ ಅತ್ಯಾಚಾರಗಳು ನಡೆಯುವುದಿಲ್ಲ ಎಂದು ಸಾಬೀತುಪಡಿಸಿದರೆ ನಾನು ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತೇನೆ. ನಾನು ವ್ಯಂಗ್ಯಚಿತ್ರವನ್ನು ತೆಗೆದುಹಾಕಿಲ್ಲ. ಏಕೆಂದರೆ ಅದು ಧಾರ್ಮಿಕ ಭಾವನೆಗಳನ್ನು ನೋಯಿಸುವುದಿಲ್ಲ. ಆದರೆ ಮಹಿಳೆಯರ ಬಗ್ಗೆ ಸಮಾಜದ ಬೂಟಾಟಿಕೆಗಳನ್ನು ಎತ್ತಿ ತೋರಿಸುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಬೀದಿ ಅಲೆಯುತ್ತಿದ್ದವ ಬಿಜೆಪಿ ರಾಜ್ಯಾಧ್ಯಕ್ಷ- ಸಿದ್ದರಾಮಯ್ಯ ವ್ಯಂಗ್ಯ

“ಈ ಜನಸಮೂಹ ಬಲಪಂಥೀಯ ಹಿಂದೂ ಗುಂಪುಗಳಿಗೆ ಸಂಬಂಧಿಸಿದವರು ಎಂದು ದೀಪಿಕಾ ಸಿಂಗ್ ಗುರುತಿಸಿದ್ದು, ಇದು ನನ್ನನ್ನು ಶಮನಗೊಳಿಸುವ ಪ್ರಯತ್ನವಾಗಿದ್ದು, ಆ ಸಮಯದಲ್ಲಿ, ನನಗೆ ಗೌರಿ ಲಂಕೇಶ್ ನೆನಪಾದರು. ಅವರ ಚಿತ್ರ ನನ್ನ ಮನಸ್ಸಿನಲ್ಲಿ ಸುಳಿಯುತ್ತಲೇ ಇತ್ತು. ನಾನು ನಡುಗುತ್ತಿದ್ದೆ. ಪತ್ರಕರ್ತೆ ಗೌರಿ ಲಂಕೇಶ್ ಅವರು ಬಲಪಂಥೀಯರನ್ನು ಟೀಕಿಸಿದ್ದರು ಎಂಬ ಆರೋಪದ ಮೇಲೆ ಅವರನ್ನು ಸೆಪ್ಟೆಂಬರ್ 5, 2017 ರಂದು ಗುಂಡಿಕ್ಕಿ ಕೊಲ್ಲಲಾಯಿತು. ಮೋದಿ ಸರ್ಕಾರ ಮತ್ತು ಅದರ ನೀತಿಗಳ ವಿರುದ್ಧ ನಾನು ಧ್ವನಿ ಎತ್ತಿದ್ದರಿಂದ ನನ್ನ ಮೇಲೆ ಇಂತಹ ಬೆದರಿಕೆಗಳು ಸಹಜವಾಗಿವೆ” ಎಂದು ಹೇಳಿದರು.

#IStandWithDeepikaRajawat ಎಂಬ ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್ ಮಾಡುತ್ತಿರುವ ಬಾಲಿವುಡ್ ನಟರು, ನಿರ್ದೇಶಕರು, ವಕೀಲರು ಮತ್ತು ವಿರೋಧ ಪಕ್ಷದ ನಾಯಕರು ಸೇರಿದಂತೆ ಹಲವಾರು ವಿಭಾಗಗಳಿಂದ ದೀಪಿಕಾ ಸಿಂಗ್ ಅವರಿಗೆ ಹೆಚ್ಚಿನ ಬೆಂಬಲ ಸೂಚಿಸಲಾಗಿದೆ.

ಈ ಹಿಂದೆಯೂ ಕೂಡ ಅತ್ಯಾಚಾರ ಪ್ರಕರಣವೊಂದರಲ್ಲಿ ಸಂತ್ರಸ್ತರ ಪರವಾಗಿ ಹಾಜರಾಗಿದ್ದಕ್ಕೆ ಇದೇ ರೀತಿಯ ತೊಂದರೆಗಳನ್ನು ಇವರು ಅನುಭವಿಸಬೇಕಾಯಿತು.


ಇದನ್ನೂ ಓದಿ: ಇನ್ನೂ ಆವಿಷ್ಕಾರವಾಗದ ಕೊರೊನಾ ಲಸಿಕೆಯನ್ನು ಉಚಿತ ನೀಡುತ್ತೇವೆಂದ BJP!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...