ರಾಜ್ಯ ಸಾಕ್ಷರತಾ ಮಿಷನ್ ಅಡಿಯಲ್ಲಿ ನೀಡುವ ಸಮಾನ ಶಿಕ್ಷಣ ಕಾರ್ಯಕ್ರಮದ ಅಡಿಯಲ್ಲಿ 12ನೇ ತರಗತಿಯನ್ನು ಯಶಸ್ವಿಯಾಗಿ ಪೂರೈಸಿದ ನಂತರ 18 ಮಂದಿ ಮಂಗಳಮುಖಿಯರು ಉನ್ನತ ವ್ಯಾಸಂಗಕ್ಕೆ ಅರ್ಹತೆ ಪಡೆದಿದ್ದಾರೆ.
ಈ ಕಾರ್ಯಕ್ರಮದಡಿಯಲ್ಲಿ ಶಿಕ್ಷಣವಂಚಿತರಿಗೆ ಮಾಸಿಕ ವಿದ್ಯಾರ್ಥಿವೇತನ ನೀಡುವುದರೊಂದಿಗೆ ಪಿಯುಸಿವರೆಗಿನ ಉಚಿತ ಶಿಕ್ಷಣವನ್ನೂ ನೀಡಲಾಗುತ್ತಿದೆ.
ಈ 18 ಜನ ಮಂಗಳಮುಖಿಯರು, ಮಾಸಿಕ ವಿದ್ಯಾರ್ಥಿವೇತನದೊಂದಿಗೆ 6 ನೇ ತರಗತಿಯಿಂದ 12ನೇ ತರಗತಿವರೆಗೆ ಉಚಿತವಾಗಿ ಸಮಾನ ಶಿಕ್ಷಣ ನೀಡುವ ‘ಸಮನ್ವಯ’ ಯೋಜನೆಯ ಭಾಗವಾಗಿದ್ದರು.
ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಮಾಸಿಕ 1,000 ವಿದ್ಯಾರ್ಥಿವೇತನವನ್ನು ನೀಡಿದರೆ, ಉನ್ನತ ಮಾಧ್ಯಮಿಕ ವಿದ್ಯಾರ್ಥಿಗಳು ಪ್ರತಿ ತಿಂಗಳು 1,250 ರೂ. ವಿದ್ಯಾರ್ಥಿ ವೇತನ ಪಡೆಯುತ್ತಾರೆ.
ಹನ್ನೆರಡನೇ ತರಗತಿಯ ಸಮಾನ ಶಿಕ್ಷಣ ಕಾರ್ಯಕ್ರಮವನ್ನು ಉನ್ನತ ಮಾಧ್ಯಮಿಕ ಕೋರ್ಸ್‌ಗೆ ಸಮನಾಗಿ ಮಾಡಲಾಗಿರುವುದರಿಂದ, ಇದರಲ್ಲಿ ಪಾಸಾದ ಎಲ್ಲಾ ಅಭ್ಯರ್ಥಿಗಳು ಉನ್ನತ ವ್ಯಾಸಂಗಕ್ಕೆ ದಾಖಲಾಗಬಹುದು.
ಇದನ್ನೂ ಓದಿ: ಇವರ ಹೋರಾಟದ ಬದುಕಿಗೆ ನಮ್ಮದೊಂದು ಸಲಾಮ್
ಪರೀಕ್ಷೆಗೆ ಒಟ್ಟು 22 ಅಭ್ಯರ್ಥಿಗಳು ಹಾಜರಾಗಿದ್ದು, 18 ಮಂದಿ ಯಶಸ್ವಿಯಾಗಿ ಪಾಸಾಗಿದ್ದಾರೆ. ಪಥನಂತಿಟ್ಟಾದಲ್ಲಿ 8 ಅಭ್ಯರ್ಥಿಗಳು ಪರೀಕ್ಷೆ ಬರೆದು ಪಾಸಾಗಿದ್ದರೆ, ತಿರುವನಂತಪುರಂ ನಲ್ಲಿ 5, ಕೊಲ್ಲಂನಲ್ಲಿ 2 ಮತ್ತು ತ್ರಿಶೂರ್, ಕೋಝಿಕೋಡ್ ಕಣ್ಣೂರ್‌ನಲ್ಲಿ ತಲಾ ಒಬ್ಬರು ಪಾಸಾಗಿದ್ದಾರೆ.
ಪಥನಂತಿಟ್ಟಾ ಜಿಲ್ಲೆಯಲ್ಲಿ, ರಾಜ್ಯ ಸಾಕ್ಷರತಾ ಮಿಷನ್ ಸಮಾನ ಶಿಕ್ಷಣ ಕಾರ್ಯಕ್ರಮಕ್ಕೆ ಸೇರಿಕೊಂಡವರಿಗೆ ಉಚಿತ ಆಹಾರ ಮತ್ತು ವಸತಿ ಸೌಲಭ್ಯಗಳನ್ನು ಒದಗಿಸಿತ್ತು.
ಈ ಸಮನ್ವಯ ಯೋಜನೆ 2018 ರಲ್ಲಿ ಪ್ರಾರಂಭವಾದಾಗಿನಿಂದ, 39 ಮಂದಿ ಮಂಗಳಮುಖಿಯರು ಉನ್ನತ ವ್ಯಾಸಂಗಕ್ಕೆ ಅರ್ಹರಾಗಿದ್ದಾರೆ. ಪ್ರಸ್ತುತ 30 ಮಂಗಳಮುಖಿಯರು ಹತ್ತನೇ ತರಗತಿಯ ಈ ಕಾರ್ಯಕ್ರಮದಡಿಯಲ್ಲಿ ದಾಖಲಾಗಿದ್ದರೆ, ಹನ್ನೆರಡನೇ ತರಗತಿಗೆ 62 ದಾಖಲಾತಿಗಳು ಆಗಿವೆ.
ಬಾಲ್ಯದಲ್ಲಿಯೇ ಲಿಂಗ ಗುರುತಿಸುವಿಕೆಯ ಕಾರಣದಿಂದ ಔಪಚಾರಿಕ ಶಿಕ್ಷಣ ಮತ್ತು ಅನೌಪಚಾರಿಕ ಶಿಕ್ಷಣ ಎರಡರಿಂದಲೂ ವಂಚಿತವಾಗುವ ಲೈಂಗಿಕ ಅಲ್ಪಸಂಖ್ಯಾತ ಸಮುದಾಯ ಇತ್ತೀಚೆಗೆ ತನ್ನೆಲ್ಲಾ ಸಂಕಷ್ಟಗಳನ್ನೂ ಮೀರಿಕೊಂಡು ಮುನ್ನೆಲೆಗೆ ಬರುತ್ತಿದೆ. ಇದಕ್ಕೆ ಕರ್ನಾಟಕ ಮತ್ತು ಕೇರಳದಂತಹ ರಾಜ್ಯಗಳೇ ಉತ್ತಮ ಉದಾಹರಣೆಗಳು. ಅದಾಗ್ಯೂ ಇಂದಿಗೂ ಅಸುರಕ್ಷಿತ ವಾತಾವರಣದಲ್ಲಿ ಮತ್ತು ಅಪಾಯಕಾರಿಯಾಗಿಯಾಗಿ ಬದುಕು ಅನೇಕ ಮಂಗಳಮುಖಿಯರು ನಮ್ಮ ಸುತ್ತಲೇ ಇದ್ದಾರೆ.
ಇಂತಹವರ ನಡುವೆ ಸಾಧನೆ ಮಾಡುವ ಮಂಗಳಮುಖಿಯರು ನಿಜಕ್ಕೂ ಆಶಾದಾಯಕವಾಗಿ ಕಾಣುತ್ತಾರೆ.
ಇದನ್ನೂ ಓದಿ: ಟ್ರಾನ್ಸ್‌ಜೆಂಡರ್ ಸಮುದಾಯದ ಹೋರಾಟಗಾರ್ತಿ ಅಖೈ ಪದ್ಮಶಾಲಿ ಇಂದು ಕಾಂಗ್ರೆಸ್‌ಗೆ ಸೇರ್ಪಡೆ


