Homeಮುಖಪುಟ2020ರ ಭೌತ ವಿಜ್ಞಾನದ ನೊಬೆಲ್ ಪ್ರಶಸ್ತಿ | ಕಪ್ಪು ರಂಧ್ರ

2020ರ ಭೌತ ವಿಜ್ಞಾನದ ನೊಬೆಲ್ ಪ್ರಶಸ್ತಿ | ಕಪ್ಪು ರಂಧ್ರ

1915ರಲ್ಲಿ ಪ್ರಕಟವಾದ ಒಂದು ಸಂಶೋಧನಾ ಪತ್ರಿಕೆಯು, ವಿಶ್ವದ ಉಗಮ, ಇರುವಿಕೆ ಮತ್ತು ನಭೋಮಂಡಲದ ಕಾಯಗಳ ಅಧ್ಯಯನದ ದೃಷ್ಠಿಕೋನವನ್ನೇ ಬದಲಿಸಿತು. ಅಲ್ಲಿಯವರೆಗೂ ಬ್ರಿಟಿಷ್ ವಿಜ್ಞಾನಿ ಸರ್ ಐಸಾಕ್ ನ್ಯೂಟನ್‍ರವರ ಗುರತ್ವ ಸಿದ್ಧಾಂತವನ್ನು ಒಪ್ಪಿಕೊಂಡಿದ್ದ ವಿಜ್ಞಾನ ಲೋಕಕ್ಕೆ ಈ ಸಂಶೋಧನಾ ಪತ್ರಿಕೆಯಿಂದ ಒಂದು ಅಚ್ಚರಿಯೇ ಕಾದಿತ್ತು. ನ್ಯೂಟನ್‍ನ ಗುರುತ್ವ ಸಿದ್ಧಾಂತದ ಒಳಗೆ ಅಡಗಿದ್ದ ನ್ಯೂನತೆಯನ್ನು ಗಣಿತದ ಸಮೀಕರಣಗಳ ಮುಲಕ ಪರಿಚಯಿಸಿ, ಹೊಸ ಗುರುತ್ವ ಸಿದ್ಧಾಂತಕ್ಕೆ ನಾಂದಿ ಹಾಡಿತು.

- Advertisement -
- Advertisement -

ಅಂದು ಏಪ್ರಿಲ್ 10, 2019. ಪ್ರತಿದಿನದಂತೆ ಎಲ್ಲರೂ ತಮ್ಮ ತಮ್ಮ ದಿನನಿತ್ಯದ ಚಟುವಟಿಕೆಗಳು ತೊಡಗಿದ್ದ ಸಾಮಾನ್ಯ ದಿನ. ಆದರೆ, ವಿಜ್ಞಾನ ಪ್ರಪಂಚದಲ್ಲಿ ಒಂದು ಸುದ್ದಿ ಒಡಾಡುತ್ತಿತ್ತು. ಭಾರತೀಯ ಕಾಲಮಾನ ಅಂದಾಜು ಏಳು ಗಂಟೆಗೆ, ಯೂರೋಪಿಯನ್ ಸದರನ್ ಅಬ್ಸ್‌ಸರ್‌ವೇಟರಿಯವರು ಇವೆಂಟ್ ಹೊರೈಸನ್ ದೂರದರ್ಶಕದ ಸಹಾಯದಿಂದ ಕೈಗೊಂಡ ಸಂಶೋಧನೆಯ ಪ್ರಮುಖವಾದ ಫಲಿತಾಂಶವನ್ನು ಅಧಿಕೃತವಾಗಿ ಪತ್ರಿಕಾಗೋಷ್ಠಿ ಮೂಲಕ ಪ್ರಕಟಿಸಲಿದ್ದಾರೆ ಎನ್ನುವ ಸುದ್ದಿ ಇತ್ತು.

ವಿಜ್ಞಾನಿಗಳು, ವಿಜ್ಞಾನ ಆಸಕ್ತರು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪತ್ರಿಕಾ ವೃಂದದವರೆಲ್ಲರೂ, ಯಾವ ಸಂಶೋಧನೆಯದು ಎಂದು ಊಹಿಸಿಕೊಳ್ಳುವುದರಲ್ಲಿಯೇ ತಮ್ಮ ಕುತೂಹಲವನ್ನು ತಣಿಸಿಕೊಳ್ಳುತ್ತಿದ್ದರು. ಅಂದು ನಡೆದ ಪತ್ರಿಕಾಗೋಷ್ಠಿಯಲ್ಲಿ, ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ವಿಶೇಷ ಮತ್ತು ಕಲ್ಪನೆಗೂ ನಿಲುಕದ ನಭೋಮಂಡಲದ ವಿಸ್ಮಯವಾದ ಕಾಯದ (body) ಮೊದಲ ಚಿತ್ರ ವಿಜ್ಞಾನಿಗಳಿಗೆ ದೊರಕಿತ್ತು, ಇವೆಂಟ್ ಹೊರೈಸನ್ ದೂರದರ್ಶಕ ಅದನ್ನು ಸೆರೆಹಿಡಿದಿತ್ತು. ಅದು ಮತ್ತೇನು ಅಲ್ಲ, ಮಾನವನಿಗೆ ದೊರೆತ ಮೊದಲ ಕಪ್ಪು ರಂಧ್ರದ (Black Hole) ಚಿತ್ರವಾಗಿತ್ತು.

ರಾಯಲ್ ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸ್‌ರವರ ಪ್ರತಿ ವರ್ಷದ ವೇಳಾಪಟ್ಟಿಯಂತೆಯೇ ಈ ವರ್ಷವು ಅಕ್ಟೋಬರ್ ತಿಂಗಳಿನಲ್ಲಿ ಎಲ್ಲಾ ವಿಭಾಗದ ನೊಬೆಲ್ ಪ್ರಶಸ್ತಿಯನ್ನು ಘೋಷಿಸಿದ್ದಾರೆ. ಈ ಬಾರಿಯ ಭೌತ ವಿಜ್ಞಾನದ ಪ್ರಶಸ್ತಿಯು ಕಪ್ಪು ರಂಧ್ರದ ಇರುವಿಕೆಯನ್ನು ರೂಪಿಸಿದ 104 ವರ್ಷದ ಹಳೆಯದಾದ ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತದ ಮುಂದುವರಿದ ಅಧ್ಯಯನ ನಡೆಸಿದ ಬ್ರಿಟನ್‍ನ ಸರ್ ರೋಜರ್ ಪೆನ್ರೋಸ್ ಮತ್ತು ಕಪ್ಪು ರಂಧ್ರವನ್ನು ಪರೋಕ್ಷವಾಗಿ ದೂರದರ್ಶಕದಿಂದ ವೀಕ್ಷಿಸಿ, ನಿರೂಪಿಸಿದಕ್ಕಾಗಿ ಜರ್ಮನಿಯ ರೀಹಾರ್ಡ್ ಗೆನ್ಸಲ್ ಮತ್ತು ಅಮೇರಿಕಾದ ಆ್ಯಂಡ್ರಿಯಾ ಘೆಜ್  ರವರಿಗೆ ನೀಡಲಾಗಿದೆ.

1915ರಲ್ಲಿ ಪ್ರಕಟವಾದ ಒಂದು ಸಂಶೋಧನಾ ಪತ್ರಿಕೆಯು, ವಿಶ್ವದ ಉಗಮ, ಇರುವಿಕೆ ಮತ್ತು ನಭೋಮಂಡಲದ ಕಾಯಗಳ ಅಧ್ಯಯನದ ದೃಷ್ಠಿಕೋನವನ್ನೇ ಬದಲಿಸಿತು. ಅಲ್ಲಿಯವರೆಗೂ ಬ್ರಿಟಿಷ್ ವಿಜ್ಞಾನಿ ಸರ್ ಐಸಾಕ್ ನ್ಯೂಟನ್‍ರವರ ಗುರತ್ವ ಸಿದ್ಧಾಂತವನ್ನು ಒಪ್ಪಿಕೊಂಡಿದ್ದ ವಿಜ್ಞಾನ ಲೋಕಕ್ಕೆ ಈ ಸಂಶೋಧನಾ ಪತ್ರಿಕೆಯಿಂದ ಒಂದು ಅಚ್ಚರಿಯೇ ಕಾದಿತ್ತು. ನ್ಯೂಟನ್‍ನ ಗುರುತ್ವ ಸಿದ್ಧಾಂತದ ಒಳಗೆ ಅಡಗಿದ್ದ ನ್ಯೂನತೆಯನ್ನು ಗಣಿತದ ಸಮೀಕರಣಗಳ ಮೂಲಕ ಪರಿಚಯಿಸಿ, ಹೊಸ ಗುರುತ್ವ ಸಿದ್ಧಾಂತಕ್ಕೆ ನಾಂದಿ ಹಾಡಿತು. ಈ ಪತ್ರಿಕೆಯಲ್ಲಿ ಮಂಡಿಸಿದ ಸಿದ್ಧಾಂತ “ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತ” (General Theory of Relativity). 1905ರಲ್ಲಿ ಬೆಳಕಿನ ವೇಗ ಮತ್ತು ಚೌಕಟ್ಟು (frame of reference)ಗಳಿಗೆ ಸಂಬಂಧಪಟ್ಟಂತೆ ಮಂಡಿಸಿದ ವಿಶೇಷ ಸಾಪೇಕ್ಷ ಸಿದ್ಧಾಂತದಿಂದ (Special Theory of Relativity) ಜಗದ್ವಿಖ್ಯಾತಿ ಗಳಿಸಿದ್ದ ಜರ್ಮನಿಯ (ಅಂದಿಗೆ) ಐನ್‍ಸ್ಟೈನ್, ಹತ್ತು ವರ್ಷಗಳ ನಂತರ ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತವನ್ನು ರೂಪಿಸಿದರು.

ಈ ಸಿದ್ಧಾಂತ ಪ್ರಕಟಗೊಂಡ ಕಾಲ, ವಿಶ್ವದ ಮೊದಲನೇ ಮಹಾಯುದ್ಧದ ಕಾಲ. ಯುದ್ಧದಲ್ಲಿ ಜರ್ಮನಿ ಮತ್ತು ಬ್ರಿಟನ್ ವಿರುದ್ಧವಾಗಿ ಸೆಣಸಾಡುತ್ತಿದ್ದವು. ಒಂದು ಕಾಲಘಟ್ಟದಲ್ಲಿ ಬ್ರಿಟನ್ ಜರ್ಮನಿಗೆ ಸಂಬಂಧಪಟ್ಟ ಎಲ್ಲ ವಿಷಯ, ವಿಚಾರಗಳನ್ನು ನಿಷೇಧಿಸಿತು. ಅದರಲ್ಲಿ, ಅಂದು ವೈಜ್ಞಾನಿಕ ಸಿದ್ಧಾಂತಗಳ ಮೇಲೆ ವಿಜ್ಞಾನಿಗಳು ನಡೆಸುತ್ತಿದ್ದ ಸಕಂಥನಗಳನ್ನು, ವಿಚಾರ ವಿನಿಮಯ ಮತ್ತು ಪುಸ್ತಕಗಳನ್ನು ನಿಷೇಧಿಸಲಾಗಿತ್ತು. ಗಡಿರೇಖೆಗಳನ್ನು ಮೀರಿದ ವೈಜ್ಞಾನಿಕ ಚಿಂತನೆಗಳು, ಚರ್ಚೆಗಳನ್ನು, ಅಂದಿನ ರಾಜಕೀಯ ಚಿಂತನೆಗಳು ಸ್ವಲ್ಪ ಕಾಲದ ಮಟ್ಟಿಗೆ ಕಟ್ಟಿಹಾಕಿದ್ದಂತು ನಿಜ. ಆದರೂ 1919ರ ಮೊದಲ ಮಹಾಯುದ್ಧ ಮುಗಿದ ಒಂದು ವರ್ಷದಲ್ಲಿ ಸರ್ ಐಸಾಕ್ ನ್ಯೂಟನ್‍ರ ದೇಶದವರೇ ಆದ ಇಬ್ಬರು ಖಗೋಳ ವಿಜ್ಞಾನಿಗಳು – ಫ್ರಾಂಕ್ ಡೈಸನ್ ಮತ್ತು ಆರ್ಥರ್ ಎಡಿಂಗ್‍ಟನ್ 1919ರಂದು ಆಫ್ರಿಕಾದಲ್ಲಿ ಕಂಡ ಸಂಪೂರ್ಣ ಸೂರ್ಯ ಗ್ರಹಣದ ಸಂದರ್ಭದಲ್ಲಿ ಜರ್ಮನಿಯ ಐನ್‍ಸ್ಟೈನ್ ಸಿದ್ಧಾಂತವನ್ನು ಸಾಬೀತುಪಡಿಸಿದರು.

PC : amit b choudhury

ಐನ್‍ಸ್ಟೈನ್‍ರ ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತವು ಗುರುತ್ವ ಬಲದ ಆಗುಹೋಗುಗಳನ್ನು ಗಣಿತದ ಸಮೀಕರಣಗಳಲ್ಲಿ ನಿರೂಪಿಸಿ, ಇದರ ಮುಖಾಂತರ ‘ವಿಶ್ವ’ದ(Universe/Cosmic)ಬಗೆಗಿನ ಹಲವು ಮಹತ್ವದ ವಿಷಯಗಳನ್ನು ತಿಳಿಯುವುದಾಗಿತ್ತು. ಈ ಸಮೀಕರಣಗಳ ಒಂದು ಪರಿಣಾಮ ಎಂದರೆ, ನಭೋಮಂಡಲದಲ್ಲಿ, ಕೆಲವು ಕಾಯಗಳು ತನ್ನ ದ್ರವ್ಯರಾಶಿಯನ್ನು ಕಡಿಮೆ ಗಾತ್ರದಲ್ಲಿ ಸಂಕುಚಿತಗೊಳಿಸಿ, ಇದರಿಂದ ಉಂಟಾಗುವ ತೀವ್ರವಾದ ಗುರುತ್ವಬಲದಿಂದ ತನ್ನ ಮೇಲ್ಮೈಯಿಂದ ಯಾವ ವಸ್ತುವನ್ನು ಹೊರಹೋಗಲು ಬಿಡದಿರುವುದು ಮತ್ತು ತನ್ನ ಬಳಿ ಬರುವ ಎಲ್ಲ ವಸ್ತುವನ್ನು ನುಂಗಿಕೊಳ್ಳುವ ಹಾಗೆ ವರ್ತಿಸುವುದು ಎಂದಾಗಿತ್ತು. ಈ ಕಾಯಗಳಲ್ಲಿ, ಗುರುತ್ವ ಬಲವು ಎಷ್ಟು ತೀವ್ರವಾಗಿರುತ್ತದೆ ಎಂದರೆ, ಈ ಕಾಯದ ಮೇಲ್ಮೈ, ತನ್ನಿಂದ ಬೆಳಕನ್ನೂ ಹೊರಹೋಗಲು ಬಿಡದೆ ಬರವ ಎಲ್ಲಾ ಬೆಳಕನ್ನು ನುಂಗಿಕೊಳ್ಳುವುದಾಗಿತ್ತು. ನಾವು ನಭೋಮಂಡಲದ ಕಾಯಗಳನ್ನು ನೋಡಬೇಕೆಂದರೆ, ಅದು ಬೆಳಕನ್ನು ಹೊರಸೂಸಬೇಕು ಅಥವಾ ಬೆಳಕನ್ನು ಪ್ರತಿಫಲಿಸಬೇಕು. ಆದರೆ, ಐನ್‍ಸ್ಟೈನ್‍ನ ಸಿದ್ಧಾಂತ ಸೂಚಿಸುತ್ತಿರುವುದು ಕಾಯವು ತೀವ್ರವಾದ ಗುರುತ್ವ ಬಲ ಹೊಂದಿರುವುದರಿಂದ ಬೆಳಕನ್ನು ಹೊರಸೂಸುವುದಕ್ಕೆ ಮತ್ತು ಪ್ರತಿಫಲಿಸುವುದಕ್ಕೆ ಅವಕಾಶ ನೀಡುತ್ತಿರಲಿಲ್ಲ. ಇಂತಹ ಕಾಯಗಳನ್ನು ಕಪ್ಪು ರಂಧ್ರ (Black Hole) ಎಂದೇ ಹೆಸರಿಸಲಾಗಿತ್ತು. ಐನ್‍ಸ್ಟೈನ್‍ರವರೇ ನಿರೂಪಿಸಿದ ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತ ನಭೋಮಂಡಲದಲ್ಲಿ ಕಪ್ಪು ರಂಧ್ರದ ಇರುವಿಕೆಯನ್ನು ಸೂಚಿಸುತ್ತಿದ್ದರೂ, ಇದು ಕೇವಲ ಕಾಲ್ಪನಿಕ ಕಾಯ, ಈ ಕಾಯವು ನಭೋಮಂಡಲದಲ್ಲಿ ರೂಪುಗೊಳ್ಳಲು ಸಾಧ್ಯವಿಲ್ಲಾ, ಒಂದು ಪಕ್ಷ ರೂಪುಗೊಂಡರೂ, ಅದಕ್ಕೆ ಸ್ಥಿರತೆ ಇರದೆ ಬೇಗ ನಶಿಸಿಹೋಗುತ್ತದೆ ಎಂದೇ ಐನ್‍ಸ್ಟೈನ್ ವಾದಿಸಿದ್ದರು.

20ನೇ ಶತಮಾನದ ಅತ್ಯಂತ ಪ್ರಭಾವಿತ ಸಂಶೋಧನಾ ಲೇಖನ ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತವೇ ಆಗಿತ್ತು. ಈ ಸಿದ್ಧಾಂತದ ಮುಂದುವರಿದ ಅಧ್ಯಯನಗಳು ಮತ್ತು ಇದನ್ನು ಪರಿಶೀಲಿಸಲು ಅನೇಕ ಪ್ರಯೋಗಗಳನ್ನು ಹಲವು ವಿಜ್ಞಾನಿಗಳು ತಮ್ಮ ತಮ್ಮ ವಿಶ್ವ ವಿದ್ಯಾಲಯದಲ್ಲಿ ಕೈಗೊಂಡರು. ಸರ್.ರೋಜರ್ ಪೆನ್ರೋಸ್ ಕೂಡ ಇದರಲ್ಲಿ ಒಬ್ಬರು. ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತದ ಗಣಿತದ ಸಮೀಕರಣಗಳಿಂದ ಪ್ರೇರಣೆಗೊಳಗಾದ ಅವರು, ಈ ಸಿದ್ಧಾಂತವನ್ನು ಅರ್ಥ ಮಾಡಿಕೊಳ್ಳಲು Trapped Surfaces (ಬಲೆಯಂತಿರುವ ಮೇಲ್ಮೈ) ಎಂಬ ಕಾಲ್ಪನಿಕ ಮೇಲ್ಮೈಯನ್ನು ಉಹಿಸಿಕೊಂಡು, ಐನ್‍ಸ್ಟೈನ್ ಪ್ರಸ್ತುತ ಪಡಿಸಿದ ಕಪ್ಪು ರಂಧ್ರದ ಮೇಲೆ ತಮ್ಮ ಅಧ್ಯಯನ ನಡೆಸಿದರು. ಪೆನ್ರೋಸ್, ವಿಶ್ವದಲ್ಲಿ ಎಲ್ಲವನ್ನು ಹಿಡಿದಿಟ್ಟಿಕೊಳ್ಳುವ, ಅತೀ ಹೆಚ್ಚು ದ್ರವ್ಯರಾಶಿ ಮತ್ತು ಕಡಿಮೆ ಗಾತ್ರ ಹೊಂದಿದ ಬಲೆಯಂತಿರುವ ಮೇಲ್ಮೈ ಹೊಂದಿರುವ ಕಾಯ (ಕಪ್ಪು ರಂಧ್ರ) ನಭೋಮಂಡಲದಲ್ಲಿ ಇರಲೇಬೆಕು ಮತ್ತು ಇದು ವಿಶ್ವದಲ್ಲಿ ನಡೆಯುವ ಸಾಮಾನ್ಯ ಚಟುವಟಿಕೆಗಳಿಂದಲೇ ರೂಪುಗೊಂಡು ಸ್ಥಿರವಾಗುತ್ತದೆ ಎಂದು ಐನ್‍ಸ್ಟೈನ್‍ರ ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತದ ಸಮೀಕರಣದ ಮುಖಾಂತರವೇ ನಿರೂಪಿಸಿದರು. ಪೆನ್ರೋಸ್ ತಮ್ಮ ಈ ಅಧ್ಯಯನವನ್ನು 1965ರಲ್ಲಿ ಮಂಡಿಸಿದರು. ಅಂದಿಗೆ ಐನ್‍ಸ್ಟೈನ್ ತೀರಿಕೊಂಡು ಹತ್ತು ವರ್ಷಗಳು ಕಳೆದಿದ್ದವು. ಐನ್‍ಸ್ಟೈನ್ ತನ್ನ ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತ ಮಂಡಿಸುತ್ತಿದ್ದ ಕಾಯವು ನಭೋಮಂಡಲದಲ್ಲಿ ಇರಲು ಸಾಧ್ಯವೇ ಇಲ್ಲಾ ಎಂದು ವಾದಿಸಿದ್ದರೂ, ಅದೇ ಸಿದ್ಧಾಂತದ ಮೂಲಕ ಪೆನ್ರೋಸ್ ಅಂತಹ ಕಾಯ ಇರಲೇಬೆಕು ಎಂದು ನಿರೂಪಿಸಿದ್ದರು. ಇದು ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿತು, ಅಲ್ಲದೆ ಖಗೋಳ ವಿಜ್ಞಾನದ ಮತ್ತೊಂದು ಕ್ರಾಂತಿಕಾರಿ ಬೆಳವಣಿಯ ಘಟ್ಟವಾಯಿತು.

ಇಲ್ಲಿಯವರೆಗೂ ಕಪ್ಪು ರಂಧ್ರಗಳು, ಸಂಶೋಧನಾ ಲೇಖನದ ಗಣಿತದ ಸಮೀಕರಣಗಳ ಒಳಗೆ ಹೂತುಹೋಗಿದ್ದವು. ಯಾರೂ ಆಕಾಶ ವೀಕ್ಷಣೆಯ ಮುಖಾಂತರ ಕಪ್ಪು ರಂಧ್ರವನ್ನು ಕಂಡಿರಲಿಲ್ಲ. ಇದಕ್ಕಾಗಿ ಹಲವಾರು ವಿಜ್ಞಾನಿಗಳು ಅಂದಿನ ಪ್ರಬಲವಾದ ದೂರದರ್ಶಕಗಳನ್ನು ಉಪಯೋಗಿಸಿಕೊಂಡು ಅಧ್ಯಯನ ನಡೆಸತೊಡಗಿದರು. ಜರ್ಮನಿಯ ರಿಹಾರ್ಡ್ ಗೆನ್ಸಲ್‍ರವರು ಚಿಲಿಯಲ್ಲಿರುವ New Technology Telescope ಮತ್ತು ಅಮೇರಿಕಾದ ಆ್ಯಂಡ್ರಿಯ ಘೆಜ್ ರವರು ಅಮೇರಿಕಾದ Keck Telescope ಉಪಯೋಗಿಸಿಕೊಂಡು, ಇಬ್ಬರೂ ಸ್ವತಂತವಾಗಿ ಹಲವಾರು ವರ್ಷಗಳವರೆಗೆ, ನಾವಿರುವ ಹಾಲು ಹಾದಿ ಗ್ಯಾಲಾಕ್ಸಿಯ (Milky Way Galaxy) ಕೇಂದ್ರ ಭಾಗದಲ್ಲಿದ್ದ ನಕ್ಷತ್ರಗಳ ಚಲನವಲನದ ಬಗ್ಗೆ ನಿಗಾ ಇಟ್ಟಿದ್ದರು. ಅವರ ವೀಕ್ಷಣೆ ಮತ್ತು ದತ್ತಾಂಶಗಳ ಅಧ್ಯಯನದಿಂದ ಕಂಡುಕೊಂಡ ವಿಚಾರವೇನೆಂದರೆ, ಹಾಲು ಹಾದಿಯ ಕೇಂದ್ರ ಭಾಗದಲ್ಲಿದ್ದ ನಕ್ಷತ್ರಗಳ ವಿಲಕ್ಷಣ ರೀತಿಯ ಕ್ಷಿಪ್ರ ವೇಗದ ಚಲನೆಗಳು, ಗ್ಯಾಲಾಕ್ಸಿಯ ಕೇಂದ್ರ ಭಾಗದಲ್ಲಿ ಒಂದು ಬೃಹತ್ ದ್ರವ್ಯರಾಶಿ ಉಳ್ಳ ದಟ್ಟವಾದ ಕಾಯವಿರುವ ಬಗ್ಗೆ ಸೂಚಿಸುತ್ತಿದ್ದವು, ಆದರೆ ಈ ಕಾಯ ಕಾಣುತ್ತಿರಲಿಲ್ಲ. ಗೆನ್ಸಲ್ ಮತ್ತು ಘೆಜ್ ಇಬ್ಬರೂ, ಸ್ವತಂತ್ರವಾದ ತಂಡದೊಂದಿಗೆ ಕೈಗೊಂಡ ಅಧ್ಯಯನ ಇದಾಗಿದ್ದರೂ, ಇಬ್ಬರಿಗೂ ಒಂದೆ ಪಲಿತಾಂಶ ದೊರೆಯಿತು. ಈ ಕಾಯವನ್ನು ಅವರು Supermassive Compact Object ಎಂದು ಕರೆದರು. ಇದು ಐನ್‍ಸ್ಟೈನ್ ಮತ್ತು ಪೆನ್ರೊಸ್, ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತದ ಮೂಲಕ ಗಣಿತದ ಸಮೀಕರಣಗಳ ಸಹಾಯದಿಂದ ನಿರೂಪಿಸಿದ ಕಪ್ಪು ರಂಧ್ರದ ಗುಣ ಲಕ್ಷಣಗಳನ್ನೆ ಹೋಲುತ್ತಿತ್ತು ಮತ್ತು ಹಾಗೆಯೇ ವರ್ತಿಸುತ್ತಿತ್ತು. ಹಾಗಾಗಿ, ಈ ಕಾಯವು ಬೃಹತ್ ದ್ರವ್ಯರಾಶಿ ಹೊಂದಿದ ಕಪ್ಪು ರಂಧ್ರವೇ ಹೊರತು, ಇದಕ್ಕೆ ಬೇರಾವ ವಿವರಣೆಯೇ ಇರಲಿಲ್ಲ. ಈ ಸಂಶೋಧನೆಯು ಹಾಲು ಹಾದಿ ಗ್ಯಾಲಾಕ್ಸಿಯ ಕೇಂದ್ರ ಭಾಗದಲ್ಲಿ ಬೃಹತ್ ದ್ರವ್ಯರಾಶಿ ಹೊಂದಿದ ದಟ್ಟವಾದ ಕಪ್ಪು ರಂಧ್ರ ಇದೆ ಎಂಬುದನ್ನು ಖಾತ್ರಿಪಡಿಸಿತು. ಅಲ್ಲದೆ, ಐನ್‍ಸ್ಟೈನ್‍ನ ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತವನ್ನು ಮತ್ತುಷ್ಟು ಪುಷ್ಠೀಕರಿಸಿತು.

20ನೇ ಶತಮಾನದ ವೈಜ್ಞಾನಿಕ ಅಧ್ಯಯನಗಳು 21ನೇ ಶತಮಾನದಲ್ಲಿನ ತಂತ್ರಜ್ಞಾನಗಳನ್ನ ಕ್ಷಿಪ್ರಗತಿಯಲ್ಲಿ ಬೆಳಸುತ್ತಿದೆ ಮತ್ತು ದಿನದಿಂದ ದಿನಕ್ಕೆ ಬದಲಾಗಿಸುತ್ತಿದೆ. ಪ್ರಸ್ತುತದ ಖಗೋಳ ವಿಜ್ಞಾನದ ಅಧ್ಯಯನದಲ್ಲಿ ಮುಂದುವರೆದ ತಂತ್ರಜ್ಞಾನಗಳ ಸಹಾಯದಿಂದ, ಹಲವಾರು ದೂರದರ್ಶಕಗಳಿಂದ ಮತ್ತು ವಿವಿಧ ಅಧ್ಯಯನದ ವಿಧಾನಗಳಿಂದ ಹಲವಾರು ಕಪ್ಪು ರಂಧ್ರಗಳನ್ನು ನಮ್ಮ ಗ್ಯಾಲಾಕ್ಸಿಗಳಲ್ಲದೆ ಇತರ ಗ್ಯಾಲಾಕ್ಸಿಗಳಲ್ಲೂ ಪರೋಕ್ಷವಾಗಿ ವೀಕ್ಷಿಸಿ, ಪಟ್ಟಿ ಮಾಡಿದ್ದೇವೆ. ಇದಲ್ಲದೆ, 2019ರಲ್ಲಿ ಪ್ರಪ್ರಥಮವಾಗಿ ಕಪ್ಪು ರಂಧ್ರದ ಚಿತ್ರಪಟವನ್ನು ತೆಗೆದಿದ್ದೇವೆ. ಇವೆಲ್ಲವೂ ನಡೆಯಲು ಇನ್ನೂ ಅಧ್ಯಯನಗಳು ಮುಂದುವರಿಯಲು ಸಾಧ್ಯವಾಗಿಸಿದ್ದು, 104 ವರ್ಷಗಳ ಹಿಂದೆ ಯಾವುದೇ ಆಕಾಶ ವೀಕ್ಷಣೆಗಳಿಲ್ಲದೆ, ಗುರುತ್ವ ಬಲದ ಸಹಾಯದಿಂದ ಗಣಿತದ ಸಮೀಕರಣಗಳ ಮೂಲಕ ಸೈದ್ಧಾಂತಿಕವಾಗಿ ಕಪ್ಪು ರಂಧ್ರದ ಇರುವಿಕೆಯನ್ನು ಧೃಡ ಪಡಿಸಿದ ಐನ್‍ಸ್ಟೈನ್‍ನ ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತ. ಆದರೆ, ಅದೇ ಐನ್‍ಸ್ಟೈನ್, ಕಪ್ಪು ರಂಧ್ರ ಕಾಲ್ಪನಿಕ ಕಾಯ, ಇದು ನಭೋಮಂಡಲದಲ್ಲಿ ಇರಲು ಸಾಧ್ಯವಿಲ್ಲ ಎಂದಿದ್ದರು.

ಸಿ. ವಿ. ವಿಶ್ವೇಶ್ವರ | ಬ್ಲಾಕ್ ಹೋಲ್ ಮ್ಯಾನ್ ಆಫ್ ಇಂಡಿಯಾ

PC : Techkannada (ಸಿ. ವಿ. ವಿಶ್ವೇಶ್ವರ)

ಕಪ್ಪು ರಂಧ್ರದ ಅಧ್ಯಯನಕ್ಕೆ ಭಾರತಕ್ಕಿರುವ ಸಂಬಂಧ, ಪ್ರೊ ಸಿ. ವಿ. ವಿಶ್ವೇಶ್ವರ (ಸಿವಿವಿ). ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್‍ನಲ್ಲಿ ವ್ಯಾಸಂಗ ಮಾಡಿದ ಇವರು ಮೈಸೂರು ವಿಶ್ವವಿದ್ಯಾನಿಲಯದಿಂದ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು, ಅಮೆರಿಕಾದ ಮೇರಿಲ್ಯಾಂಡ್ ವಿಶ್ವವಿದ್ಯಾಲಯದಿಂದ ಪಿಹೆಚ್.ಡಿ. ಪದವಿಯನ್ನು ಪಡೆದರು. ತಮ್ಮ ಪಿಹೆಚ್.ಡಿ ವಿಷಯದ ಪ್ರಬಂಧ Stability of Schwarzschild Metric ಎಂಬ ವಿಷಯದ ಬಗ್ಗೆ ಮಂಡಿಸಿದರು. ಈ ವಿಷಯವು ಕಪ್ಪು ರಂಧ್ರಕ್ಕೆ ಸಂಭಂಧಿಸಿದ ವಿಷಯ. ಕಪ್ಪು ರಂಧ್ರ ಎಂಬ ಹೆಸರು ಬರುವದಕ್ಕೆ ಮುನ್ನವೇ ಸಿವಿವಿರವರು ಮೇರಿಲ್ಯಾಂಡ್ ವಿಶ್ವವಿದ್ಯಾಲಯದಲ್ಲಿ (1963) ಕಪ್ಪು ರಂಧ್ರದ ಬಗ್ಗೆ ಐನ್‍ಸ್ಟೈನ್‍ನ ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತದದ ಮೂಲಕ ತಮ್ಮ ಅಧ್ಯಯನವನ್ನು ನಡೆಸುತ್ತಿದ್ದರು. ಆ ದಿನಗಳಲ್ಲಿ ಕಪ್ಪು ರಂಧ್ರದ ಅಸ್ತಿತ್ವವನ್ನು ಎಲ್ಲರೂ ಪ್ರಶ್ನೆ ಮಾಡುವವರೆ ಆಗಿದ್ದರು. ಸಿವಿವಿರವರು ಕಪ್ಪು ರಂಧ್ರದ Gaussian Wave Packets ಬಗ್ಗೆ ವಿವರಿಸಿ ಮಂಡಿಸಿದ್ದ ಸಂಶೋಧನ ಲೇಖನದ ಅಂಶವನ್ನು 2015 ರಲ್ಲಿ LIGO (Laser Interferometry Gravitational Observatory) ಪತ್ತೆ ಮಾಡಿದ ಗುರುತ್ವ ಅಲೆಯ ಪ್ರಯೋಗದಲ್ಲಿ ಸಿವಿವಿ ಪ್ರತಿಪಾಸಿದ ಕಪ್ಪು ರಂಧ್ರದ Gaussian Wave Packets ಗುರುತುಗಳು ಕಂಡವು. ಸಿವಿವಿಯವರು ಕಪ್ಪು ರಂಧ್ರದ ಅಧ್ಯಯನ ಮತ್ತು ಐನ್‍ಸ್ಟೈನ್‍ನ ಸಾರ್ವತ್ರಿಕ ಸಾಪೇಕ್ಷ ಸಿದ್ಧಾಂತಕ್ಕೆ ನೀಡಿದ ಕೊಡುಗೆ ಅಪಾರ. ಈ ಕಾರಣಕ್ಕಾಗಿಯೇ ವಿಶ್ವೇಶ್ವರ ಅವರನ್ನು ಬ್ಲಾಕ್ ಹೋಲ್ ಮ್ಯಾನ್ ಆಫ್ ಇಂಡಿಯಾ ಎಂದೇ ಕರೆಯುತ್ತಾರೆ. ಬೆಂಗಳೂರಿನ ಜವಹರ್‌ಲಾಲ್ ನೆಹರೂ ತಾರಾಲಯದ ಸ್ಥಾಪಕ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ ಸಿವಿವಿಯವರು, ಹಲವಾರು ವಿದ್ಯಾರ್ಥಿ ಕೇಂದ್ರಿತ ಕಾರ್ಯಕ್ರಮಗಳನ್ನು ತಾರಾಲಯದಲ್ಲಿ ಆಯೋಜಿಸುತ್ತಿದ್ದರು. ಇಂದಿಗೂ ಅವರ ಮಾರ್ಗದರ್ಶನದಲ್ಲಿ ರೂಪುಗೊಂಡ ಕಾರ್ಯಕ್ರಮಗಳು ತಾರಾಲಯದಲ್ಲಿ ಮುಂದುವರೆಯುತ್ತಿವೆ.

ವಿಶ್ವ ಕೀರ್ತಿ ಎಸ್.

([email protected])
ವಿಜ್ಞಾನ ಮತ್ತು ಖಗೋಳ ವಿಜ್ಞಾನದಲ್ಲಿ ಆಸಕ್ತಿ, ಹವ್ಯಾಸಿ ಆಕಾಶ ವೀಕ್ಷಣೆಗಾರ. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಭೌತ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಂಸ್ಥೆಯಲ್ಲಿ ವೈಜ್ಞಾನಿಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

 


ಇದನ್ನೂ ಓದಿ: ಫ್ರಾನ್ಸ್‌ ಚರ್ಚ್‌ ದಾಳಿ: ಲಕ್ಷಾಂತರ ಜನರನ್ನು ಕೊಲ್ಲುವ ಹಕ್ಕು ಮುಸ್ಲಿಮರಿಗಿದೆ; ಮಲೇಷ್ಯಾ ಮಾಜಿ ಪ್ರಧಾನಿ!
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...