ಮಧುಬನಿ ಜಿಲ್ಲೆಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮೇಲೆ ಕಲ್ಲು ಮತ್ತು ಈರುಳ್ಳಿ ಎಸೆದು ಅಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ಈ ಹಿಂದೆ ನಿತೀಶ್ ಕುಮಾರ್ ರ್ಯಾಲಿಯಲ್ಲಿ ಜನರು ‘ತೇಜಸ್ವಿ ಯಾದವ್ ಜಿಂದಾಬಾದ್’ ಎಂದು ಘೋಷಣೆ ಹಾಕುವುದರ ಮೂಲಕ ನಿತೀಶ್ ಕುಮಾರ್ ಅವರನ್ನು ಮುಜುಗರಕ್ಕೆ ಈಡು ಮಾಡಿದ್ದರು.
ಸಿಎಂ ನಿತೀಶ್ ಕುಮಾರ್ ಹರ್ಲಾಕಿಯ ಸಾರ್ವಜನಿಕ ಶಾಲೆಯಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅಲ್ಲಿ ನಿರುದ್ಯೋಗದ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಿದ್ದಂತೆ, ಗುಂಪಿನಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬರು ವೇದಿಕೆಯ ಕಡೆಗೆ ಕಲ್ಲು ಮತ್ತು ಈರುಳ್ಳಿ ಎಸೆಯಲು ಪ್ರಾರಂಭಿಸಿದರು ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
I condemn the Onion Attack on Nitish Kumar. Physical attacks are never the answer for anger.
Also, why are people wasting such a costly vegetable by throwing it?
? Onions at ₹100 is Modi's fault. Poor Nitish Kumar is bearing the brunt.pic.twitter.com/1KWVckU8uh
— Kedar Ch Rout (@KedarChRout1) November 3, 2020
ಇದನ್ನೂ ಓದಿ: ಕಂಗನಾ ವಿರುದ್ಧ ವಿಡಿಯೋ ಮಾಡಲು 65 ಲಕ್ಷ ಹಣ ಪಡೆಯಲಾಗಿದೆ: ಧೃವ್ ರಾಠೀ ಕೊಟ್ಟ…
ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಆತನನ್ನು ತಡೆಯಲು ಪ್ರಯತ್ನಿಸುತ್ತಿದ್ದಾಗ, ನಿಷೇಧದ ಹೊರತಾಗಿಯೂ ರಾಜ್ಯದಲ್ಲಿ ಮದ್ಯವನ್ನು ಮುಕ್ತವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ವ್ಯಕ್ತಿ ಕಿರುಚುತ್ತಲೇ ಇದ್ದರು.
ಬಿಹಾರದಲ್ಲಿ ಅಕ್ರಮ ಮದ್ಯ ವ್ಯಾಪಾರವನ್ನು ತಡೆಯಲು ನಿತೀಶ್ ಕುಮಾರ್ ಸರ್ಕಾರ ವಿಫಲವಾಗಿದೆ ಎಂದು ಅಲ್ಲಿದ್ದ ಕೆಲವರು ಆರೋಪಿಸಿದ್ದಾರೆ. ವೇದಿಕೆಯಲ್ಲಿ ಮುಖ್ಯಮಂತ್ರಿಯ ಭದ್ರತಾ ಸಿಬ್ಬಂದಿ ಅವರನ್ನು ಸುತ್ತುವರೆದಿದ್ದರಿಂದ ಈ ದಾಳಿಯಲ್ಲಿ ಮುಖ್ಯಮಂತ್ರಿಗೆ ಯಾವುದೇ ಗಾಯಗಳಾಗಿಲ್ಲ.
ಇದನ್ನೂ ಓದಿ: ಛತ್ತಿಸ್‌ಘಡದ ರೈತರಿಗೆ 2,500 ರೂ. ಬಿಹಾರದವರಿಗೆ 700 ರೂ. ಏಕೆ ಈ ಅನ್ಯಾಯ?: ರಾಹುಲ್…
ಇದರಿಂದ ಕೋಪಗೊಂಡ ನಿತೀಶ್ ಕುಮಾರ್ ಆ ವ್ಯಕ್ತಿಗೆ “ಎಸೆಯಿರಿ, ಎಸೆಯಿರಿ” ಎಂದು ಕೂಗುತ್ತಲೇ ಹೇಳಿದರು.
ಬಿಹಾರ ಚುನಾವಣಾ ರ್ಯಾಲಿಗಳಲ್ಲಿ ನಿತೀಶ್ ಕುಮಾರ್ ಪ್ರೇಕ್ಷಕರಿಂದ ತೊಂದರೆ ಎದುರಿಸುತ್ತಿರುವುದು ಇದೇ ಮೊದಲಲ್ಲ. ಈ ಮೊದಲು, ಅವರ ರ್ಯಾಲಿಗಳಲ್ಲಿ ಜನಸಮೂಹವು ಆರ್‌ಜೆಡಿಯನ್ನು ಬೆಂಬಲಿಸುವಂತೆ ಘೋಷಣೆಗಳನ್ನು ಕೂಗಿತ್ತು.
ಇದನ್ನೂ ಓದಿ: ’ಜಿನ್ನಾ’ ಕಲ್ಲಡ್ಕ ಪ್ರಭಾಕರ ಭಟ್ಟರ ಗುರು ಎಂಬ ಸಂಶಯವಿದೆ: ಯು. ಟಿ. ಖಾದರ್


