Homeಅಂತರಾಷ್ಟ್ರೀಯಪ್ರಜಾಪ್ರಭುತ್ವ ಏರಬಹುದಾದ ಎತ್ತರ ತೋರಿಸಿಕೊಟ್ಟ ನ್ಯೂಜಿಲ್ಯಾಂಡ್ ಪ್ರಧಾನಿ ’ಜಸಿಂಡಾ’

ಪ್ರಜಾಪ್ರಭುತ್ವ ಏರಬಹುದಾದ ಎತ್ತರ ತೋರಿಸಿಕೊಟ್ಟ ನ್ಯೂಜಿಲ್ಯಾಂಡ್ ಪ್ರಧಾನಿ ’ಜಸಿಂಡಾ’

ವೈವಿಧ್ಯತೆಯಿಂದ ಕೂಡಿದ ಪ್ರಧಾನಿ ಜಸಿಂಡಾ ಅವರ ಹೊಸ ಮಂತ್ರಿ ಮಂಡಲದ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ ವಿಷಯಗಳು ಇಲ್ಲಿವೆ

- Advertisement -
- Advertisement -

ನ್ಯೂಜಿಲೆಂಡ್‌ನ ಅತ್ಯಂತ ಕಿರಿಯ ಪ್ರಧಾನ ಮಂತ್ರಿ ಆಗಿದ್ದ ಜಸಿಂಡಾ ಅರ್ಡೆರ್ನ್ ಕಳೆದ ತಿಂಗಳು ಎರಡನೇ ಬಾರಿಗೆ ದೇಶದ ಪ್ರಧಾನಿ ಗದ್ದುಗೆಗೆ ಏರಿದ್ದಾರೆ. ಜಸಿಂಡಾ ಅವರ ಎಡಪಂಥೀಯ ಲೇಬರ್ ಪಕ್ಷವು ಚುನಾವಣೆಯಲ್ಲಿ ಚಲಾವಣೆಯಾದ 87% ದಷ್ಟು ಮತಗಳಲ್ಲಿ 48.9% ಮತವನ್ನು ಪಡೆದು ವಿಜಯಿಯಾಗಿದೆ. ತನ್ನ ಭರ್ಜರಿ ವಿಜಯದ ನಂತರ ಜಸಿಂಡಾ ಮತ್ತೇ ಸುದ್ದಿಯಲ್ಲಿದ್ದು, ದೇಶದ ಮಂತ್ರಿ ಮಂಡಲ ರಚನೆಯಲ್ಲಿ ವೈವಿಧ್ಯತೆಯನ್ನು ತೋರಿದ್ದು ವಿಶ್ವದಾದ್ಯಂತ ಜನರ ಮನಸ್ಸನ್ನು ಗೆದ್ದಿದ್ದಾರೆ.

ಇದನ್ನೂ ಓದಿ: ಕೊರೊನಾ ಸಾಮುದಾಯಿಕ ಸೋಂಕು ಪ್ರಸರಣವಿಲ್ಲದೇ 100 ದಿನ ಪೂರೈಸಿದ ನ್ಯೂಜಿಲ್ಯಾಂಡ್

ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರ ಹೊಸ ಮಂತ್ರಿಗಳ ಸಾಲಿನ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳು ಇಲ್ಲಿವೆ:

  • ಮಾಜಿ ಹಣಕಾಸು ಸಚಿವ ಗ್ರಾಂಟ್ ರಾಬರ್ಟ್ಸನ್ ಅವರನ್ನು ಉಪ ಪ್ರಧಾನ ಮಂತ್ರಿಯಾಗಿ ನೇಮಿಸಲಾಗಿದೆ. ಪ್ರತಿಷ್ಠಿತ ಸ್ಥಾನವನ್ನು ಅಲಂಕರಿಸಿದ ಮೊದಲ ಸಲಿಂಗ ವಿವಾಹಿತ ವ್ಯಕ್ತಿ ಇವರಾಗಿದ್ದಾರೆ.
ಗ್ರಾಂಟ್ ರಾಬರ್ಟ್ಸನ್ PC: labour.org.nz
  • ದೇಶದ ಹೊಸ ವಿದೇಶಾಂಗ ವ್ಯವಹಾರಗಳ ಸಚಿವೆಯಾಗಿ ನ್ಯಾನಿಯಾ ಮಾಹುತಾ ಅವರನ್ನು ಆಯ್ಕೆ ಮಾಡಲಾಗಿದ್ದು, ಇವರು ಈ ಸ್ಥಾನವನ್ನು ಅಲಂಕರಿಸಿದ ಮೊದಲ ಮೂಲನಿವಾಸಿ ಮಹಿಳೆಯಾಗಿದ್ದಾರೆ. ಮಾವೋರಿ ಜನಾಂಗ ನ್ಯೂಜಿಲ್ಯಾಂಡಿನ ಮೂಲನಿವಾಸಿಗಳಾಗಿದ್ದು, ಯುರೋಪಿಯನ್ನರ ಆಕ್ರಮಣಕ್ಕೆ ಒಳಗಾಗಿ ತಮ್ಮ ಅಸ್ತಿತ್ವವವನ್ನೇ ಕಳೆದುಕೊಂಡಿದ್ದರು. ಈ ಜನಾಂಗದ ಸ್ತ್ರೀಯರು ತಮ್ಮ ಗದ್ದದ ಮೇಲೆ ’ಮೋಕೋ ಕೌಯ’ ಎಂದು ಕರೆಯಲ್ಪಡುವ ಹಚ್ಚೆಯನ್ನು ಹಾಕಿಕೊಳ್ಳುತ್ತಾರೆ.
ನ್ಯಾನಿಯಾ ಮಾಹುತಾ PC: Hagen Hopkins/Getty Images

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್: ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಶ್ರೀಕೃಷ್ಟ ಹಾಗೂ ಭಗವದ್ಗೀತೆಯನ್ನು ಹೊಗಳಿದರೆ?

  • ದೇಶದ ಹೊಸ ಸಚಿವ ಸಂಪುಟದಲ್ಲಿ ಮಹಿಳೆಯರು 50% ದಷ್ಟಿದ್ದಾರೆ. ಈ ಅಂಕಿ ಅಂಶವು ಜಾಗತಿಕ ಸರಾಸರಿ ಶೇಕಡಾ 25 ಕ್ಕಿಂತ ಹೆಚ್ಚಾಗಿದೆ.
  • ನ್ಯೂಜಿಲ್ಯಾಂಡ್ ಸದನದಲ್ಲಿ 10% ಸದಸ್ಯರು ತಾವು ಎಲ್ಜಿಬಿಟಿಕ್(LGBTQ) ಸಮುದಾಯಕ್ಕೆ ಸೇರಿದವರು ಎಂದು ಬಹಿರಂಗವಾಗಿ ಘೋಷಿಸಿದವರಾಗಿದ್ದಾರೆ.
  • ಕೇರಳ ಮೂಲದ ಪ್ರಿಯಾಂಕಾ ರಾಧಾಕೃಷ್ಣನ್ ಅವರನ್ನು ನ್ಯೂಜಿಲೆಂಡ್‌ನ ಮೊದಲ ಭಾರತೀಯ ಮೂಲದ ಮಂತ್ರಿಯಾಗಿ ನೇಮಕ ಮಾಡಲಾಗಿದೆ. ಅವರು ಈ ಕೆಳಗಿನ ಖಾತೆಗಳನ್ನು ನಿರ್ವಹಿಸುತ್ತಾರೆ: ವೈವಿಧ್ಯತೆ ಸಚಿವೆ, ಸೇರ್ಪಡೆ ಮತ್ತು ಜನಾಂಗೀಯ ಸಮುದಾಯಗಳ ಸಚಿವೆ, ಸಮುದಾಯ ಮತ್ತು ಸ್ವಯಂಪ್ರೇರಿತ ವಲಯದ ಸಚಿವೆ ಮತ್ತು ಸಾಮಾಜಿಕ ಅಭಿವೃದ್ಧಿ ಮತ್ತು ಉದ್ಯೋಗದ ಸಹಾಯಕ ಸಚಿವೆ.
ಪ್ರಿಯಾಂಕಾ ರಾಧಾಕೃಷ್ಣನ್  PC: Priyanka Radhakrishnan Camp / Facebook

ಇದನ್ನು ಓದಿ: ಹಾಡಬೇಕು ಕರಾಳತೆಯ ಬಗ್ಗೆಯೇ ಹಾಡುಗಳನ್ನು

  • ಸಂಸತ್ತಿನ ಹೊಸ ಸದಸ್ಯೆ ಮತ್ತು ಸಾಂಕ್ರಾಮಿಕ ರೋಗ ವೈದ್ಯರಾದ ಆಯೆಷಾ ವೆರಾಲ್ ಅವರನ್ನು ನೇರವಾಗಿ ಸಚಿವ ಸಂಪುಟಕ್ಕೆ ಕರೆತರಲಾಗಿದೆ. ವಿಶೇಷವಾಗಿ ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ದ ಹೋರಾಡಲು ಪ್ರಧಾನಿಯ ವೈಜ್ಞಾನಿಕ ಸಲಹೆಗಾರಾಗಿ ಅವರು ಸೇವೆ ಸಲ್ಲಿಸಿದ್ದರು.
ಆಯೆಷಾ ವೆರಾಲ್  PC: labour.org.nz
  • ಮಾಜಿ ಆರೋಗ್ಯ ಸಚಿವ ಕ್ರಿಸ್ ಹಿಪ್ಕಿನ್ಸ್ ಅವರು ಹೊಸ ಸಚಿವ ಸಂಪುಟದಲ್ಲಿ ಕೊರೊನಾ ನಿಯಂತ್ರಿಸುವ ಹುದ್ದೆಯ ಸಚಿವ ಸ್ಥಾನವನ್ನು ವಹಿಸಿಕೊಂಡಿದ್ದಾರೆ.
  • ಜಸಿಂಡಾ ಎರಡು ಗ್ರೀನ್ ಪಾರ್ಟಿ ಶಾಸಕರನ್ನು ಸಚಿವ ಸಂಪುಟದ ಹೊರಗಿನ ಸಚಿವಾಲಯಗಳಿಗೆ ನೇಮಕ ಮಾಡಿದ್ದಾರೆ.
  • ಒಟ್ಟು 20 ಸದಸ್ಯರಿಂದ ರಚಿಸಲಾದ ಸಂಪುಟದಲ್ಲಿ ಐದು ಮಾವೋರಿ ಮತ್ತು ಮೂವರು ಪಾಸಿಫಿಕಾ ಸಂಸದರು ಸೇರಿದ್ದಾರೆ.

ಇದನ್ನೂ ಓದಿ: ಕೊರೊನಾ ವಿರುದ್ಧ ಹೋರಾಟ: ಅಲ್ಲಿ ಬಿಲಿಯನ್ ಡಾಲರ್‌, ಇಲ್ಲಿ ಚಪ್ಪಾಳೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತವು ‘ಪೊಲೀಸ್ ರಾಜ್’ ಅಲ್ಲ: ಜಮ್ಮು ಕಾಶ್ಮೀರ ಹೈಕೋರ್ಟ್

0
ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ 26 ವರ್ಷದ ಯುವಕನ ಬಂಧನವನ್ನು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ರದ್ದುಗೊಳಿಸಿದ್ದು, 'ಭಾರತವು ಪೊಲೀಸ್ ರಾಜ್' ಅಲ್ಲ ಎಂದಿದೆ. ನ್ಯಾಯಮೂರ್ತಿ ರಾಹುಲ್ ಭಾರ್ತಿ ಅವರು ಮಾರ್ಚ್ 22 ರಂದು ನೀಡಿದ್ದ...