Homeಅಂತರಾಷ್ಟ್ರೀಯಕೊರೊನಾ ಸಾಮುದಾಯಿಕ ಸೋಂಕು ಪ್ರಸರಣವಿಲ್ಲದೇ 100 ದಿನ ಪೂರೈಸಿದ ನ್ಯೂಜಿಲ್ಯಾಂಡ್

ಕೊರೊನಾ ಸಾಮುದಾಯಿಕ ಸೋಂಕು ಪ್ರಸರಣವಿಲ್ಲದೇ 100 ದಿನ ಪೂರೈಸಿದ ನ್ಯೂಜಿಲ್ಯಾಂಡ್

ಸಮುದಾಯ ಪ್ರಸರಣವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಈ ದೇಶವನ್ನು ಇತರೆ ದೇಶಗಳಿಗೆ ಮಾದರಿಯೆಂದು ಶ್ಲಾಘಿಸಿದೆ.

- Advertisement -
- Advertisement -

ಸಮುದಾಯದಲ್ಲಿ ಸೋಂಕು ಪ್ರಸರಣವಿಲ್ಲದೇ 100 ದಿನಗಳನ್ನು ಪೂರೈಸಿ ನ್ಯೂಜಿಲ್ಯಾಂಡ್ ಮಹತ್ವದ ಮೈಲಿಗಲ್ಲನ್ನು ಸೃಷ್ಟಿಸಿದೆ. ಆದರೆ ಈಗಲೇ ತೃಪ್ತಿಪಡುವಂತಿಲ್ಲ ಎಂದು ಆರೋಗ್ಯ ಅಧಿಕಾರಗಳು ಎಚ್ಚರಿಸಿದ್ದಾರೆ.

ಸದ್ಯಕ್ಕೆ ವಿದೇಶಿಗರು ನ್ಯೂಜಿಲ್ಯಾಂಡನ್ನು ಪ್ರವೇಶಿಸುವಾಗ ಹೊಸದಾಗಿ 23 ಪ್ರಕರಣಗಳು ಮಾತ್ರ ಪತ್ತೆಯಾಗಿದ್ದು ಅವರನ್ನು ಪ್ರತ್ಯೇಕ ಸೌಲಭ್ಯ ಕೇಂದ್ರಗಳಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

“ಸಮುದಾಯ ಪ್ರಸರಣವಿಲ್ಲದೆ 100 ದಿನಗಳನ್ನು ಪೂರೈಸುವುದು ಮಹತ್ವದ ಮೈಲಿಗಲ್ಲು. ಆದರೂ ನಾವೆಲ್ಲರೂ ತಿಳಿದಿರುವಂತೆ ಇಷ್ಟಕ್ಕೆ ನಾವು ತೃಪ್ತಿ ಹೊಂದಲು ಸಾಧ್ಯವಿಲ್ಲ” ಎಂದು ಆರೋಗ್ಯ ಮಹಾನಿರ್ದೇಶಕ ಆಶ್ಲೇ ಬ್ಲೂಮ್‌ಫೀಲ್ಡ್ ಹೇಳಿದ್ದಾರೆ.

“ಈ ಹಿಂದೆ ವೈರಸ್ ನಿಯಂತ್ರಣದಲ್ಲಿದ್ದ ಸ್ಥಳಗಳಲ್ಲಿ ವೈರಸ್ ಎಷ್ಟು ಬೇಗನೆ ಮತ್ತೆ ಹರಡಬಹುದು ಎಂಬುದನ್ನು ನಾವು ವಿದೇಶಗಳಲ್ಲಿ ನೋಡಿದ್ದೇವೆ. ಹಾಗಾಗಿ ನ್ಯೂಜಿಲೆಂಡ್‌ನಲ್ಲಿ ಭವಿಷ್ಯದ ಯಾವುದೇ ಪ್ರಕರಣಗಳನ್ನು ತ್ವರಿತವಾಗಿ ನಿವಾರಿಸಲು ನಾವು ಸಿದ್ಧರಾಗಿರಬೇಕು” ಎಂದು ಅವರು ಹೇಳಿದ್ದಾರೆ.

50 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ನ್ಯೂಜಿಲೆಂಡ್, ಮಾರ್ಚ್ 19 ರಂದು ತನ್ನ ಗಡಿಗಳನ್ನು ನಿರ್ಬಂಧಿಸಿದಾಗಿನಿಂದ ಕೊರೊನಾ ವೈರಸ್ ಅನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದಕ್ಕಾಗಿ ಜಗತ್ತಿನಾದ್ಯಂತ ವ್ಯಾಪಕ ಪ್ರಶಂಸೆ ಗಳಿಸಿದೆ.

ಸಮುದಾಯ ಪ್ರಸರಣವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಈ ದೇಶವನ್ನು ಇತರೆ ದೇಶಗಳಿಗೆ ಮಾದರಿಯೆಂದು ಶ್ಲಾಘಿಸಿದೆ.

ಫೆಬ್ರವರಿಯಲ್ಲಿ ಮೊದಲ ಸೋಂಕಿತನನ್ನು ಪತ್ತೆಹಚ್ಚಿದಾಗಿನಿಂದ, ನ್ಯೂಜಿಲೆಂಡ್‌ನಲ್ಲಿ 1,569 ವೈರಸ್‌ ಪ್ರಕರಣಗಳು ದೃಢಪಟ್ಟಿದ್ದು, 1524 ಜನ ಚೇತರಿಸಿಕೊಂಡಿದ್ದಾರೆ. 22 ಸಾವುಗಳು ವರದಿಯಾಗಿದ್ದು, 23 ಸಕ್ರಿಯ ಪ್ರಕರಣಗಳಿವೆ. ಮೇ 1 ಸಮುದಾಯ ಪ್ರಸರಣದ ಕೊನೆಯ ಪ್ರಕರಣ ದಾಖಲಾಗಿದೆ. ಅಂದಿನಿಂದ ಇಂದಿನವರೆಗೂ ಸಮುದಾಯ ಹರಡುವಿಕೆಯನ್ನು ನ್ಯೂಜಿಲೆಂಡ್ ಪರಿಣಾಮಕಾರಿಯಾಗಿ ನಿಭಾಯಿಸಿದೆ.

ಇದರ ಫಲವಾಗಿ, ನ್ಯೂಜಿಲೆಂಡ್‌ ಜನತೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರ ಮತ್ತು ಪ್ರೇಕ್ಷಕರಿಗೆ ತೊಂದರೆಯಿಲ್ಲದೇ, ಕೊರೊನಾ ಸಾಂಕ್ರಾಮಿಕದ ಪೂರ್ವ ಜೀವನ ಶೈಲಿಯನ್ನೇ ಮರಳಿ ಪಡೆದಿದ್ದಾರೆ.

ಆದರೆ ಗಡಿಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತಿದೆ. ಹೊರಗಿನಿಂದ ಬರುವ ಎಲ್ಲರೂ 14 ದಿನಗಳ ಸಂಪರ್ಕತಡೆಯಲ್ಲಿರಬೇಕಾದ ನಿಬಂಧನೆಗಳನ್ನು ವಿಧಿಸಲಾಗಿದೆ.

ಅಲ್ಲಿನ ಸರ್ಕಾರವು ಎರಡನೇ ಅಲೆಯ ನಿರೀಕ್ಷೆಯನ್ನಿಟ್ಟುಕೊಂಡಿದೆ. ಹಾಗಾಗಿ ಎಲ್ಲಾ ಮನೆಗಳಿಗೆ ಮಾಸ್ಕ್ ಸೇರಿದಂತೆ ತುರ್ತು ಪೂರೈಕೆ ಕಿಟ್‌ಗಳನ್ನು ಇರಿಸಿಕೊಳ್ಳಲು ಒತ್ತಾಯಿಸಿದೆ.


ಇದನ್ನೂ ಓದಿ: ನ್ಯೂಜಿಲೆಂಡ್: ಕೊರೊನಾ ವಿರುದ್ದದ ಸಮರದಲ್ಲಿ ಗೆಲುವಿನತ್ತ ದಾಪುಗಾಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...