Homeಮುಖಪುಟಹಿಂದಿ ತಿಳಿದಿದ್ದವರು ಮಾತ್ರ ಭಾರತೀಯರೆ?: ಡಿಎಂಕೆ ಸಂಸದೆ ಕನಿಮೊಳಿ ಪ್ರಶ್ನೆ

ಹಿಂದಿ ತಿಳಿದಿದ್ದವರು ಮಾತ್ರ ಭಾರತೀಯರೆ?: ಡಿಎಂಕೆ ಸಂಸದೆ ಕನಿಮೊಳಿ ಪ್ರಶ್ನೆ

ನಿಮ್ಮ ಅಹಿತಕರ ಅನುಭವವನ್ನು ನಾವು ಪ್ರಾಮಾಣಿಕವಾಗಿ ಅಂಗೀಕರಿಸುತ್ತೇವೆ. ಸೂಕ್ತ ಕ್ರಮ ತೆಗೆದುಕೊಳ್ಳಲು ದಯವಿಟ್ಟು ನಿಮ್ಮ ಪ್ರಯಾಣದ ವಿವರಗಳಾದ ವಿಮಾನ ನಿಲ್ದಾಣ, ಸ್ಥಳ, ಪ್ರಮಾಣದ ದಿನಾಂಕ ಮತ್ತು ಸಮಯವನ್ನು ಒದಗಿಸಿ ಎಂದು ಸಿಐಎಸ್‌ಎಫ್‌ ಟ್ವೀಟ್‌ ಮಾಡಿದೆ.

- Advertisement -
- Advertisement -

ಹಿಂದಿ ತಿಳಿದಿದ್ದವರು ಮಾತ್ರ ಭಾರತೀಯರೆ? ಹಿಂದಿ ಭಾಷೆ ತಿಳಿದಿದ್ದವರು ಮಾತ್ರ ಭಾರತೀಯರು ಎಂದು ಯಾವಾಗಿನಿಂದ ಆಗಿದೆ ಎಂದು ತಮಿಳುನಾಡಿ ಡಿಎಂಕೆ ಸಂಸದೆ ಕನಿಮೊಳಿ ಪ್ರಶ್ನಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿನ ಅಧಿಕಾರಿಯೊಬ್ಬರು ನಾನು ಹಿಂದಿಯಲ್ಲಿ ಮಾತನಾಡದ ಕಾರಣಕ್ಕೆ ನೀವು ಭಾರತೀಯರೆ? ಎಂದು ಹೇಳುವ ಮೂಲಕ ಅವಮಾನಿಸಿದ್ದಾರೆ ಎಂದು ಆರೋಪಿಸಿರುವ ಸಂಸದೆ ಹಿಂದಿ ಹೇರಿಕೆ ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು “ವಿಮಾನ ನಿಲ್ದಾಣದ ಸಿಐಎಸ್‌ಎಫ್‌ ಅಧಿಕಾರಿಯೊಬ್ಬರ ಬಳಿ ನನಗೆ ಹಿಂದಿ ಬಾರದ ಕಾರಣ ತಮಿಳು ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡಿ ಎಂದು ಕೇಳಿದೆ. ಅಷ್ಟಕ್ಕೆ ಅವರು ನೀವು ಭಾರತೀಯರೆ ಎಂದು ಕೇಳಿದ್ದಾರೆ. ಹಿಂದಿ ತಿಳಿದಿರುವುದು ಭಾರತೀಯರಾಗಿರುವುದಕ್ಕೆ ಸಮಾನ ಎಂದು ಯಾವಾಗಿನಿಂದ ಜಾರಿಗೆ ಬಂದಿದೆ?” ಎಂದು ಕನಿಮೊಳಿ ಟ್ವೀಟ್‌ ಮಾಡಿದ್ದಾರೆ. ಅಲ್ಲದೇ #hindiimposition ಎಂಬ ಹ್ಯಾಸ್‌ಟ್ಯಾಗ್‌ ಸೇರಿಸಿದ್ದಾರೆ.

ನಿಮ್ಮ ಅಹಿತಕರ ಅನುಭವವನ್ನು ನಾವು ಪ್ರಾಮಾಣಿಕವಾಗಿ ಅಂಗೀಕರಿಸುತ್ತೇವೆ. ಸೂಕ್ತ ಕ್ರಮ ತೆಗೆದುಕೊಳ್ಳಲು ದಯವಿಟ್ಟು ನಿಮ್ಮ ಪ್ರಯಾಣದ ವಿವರಗಳಾದ ವಿಮಾನ ನಿಲ್ದಾಣ, ಸ್ಥಳ, ಪ್ರಮಾಣದ ದಿನಾಂಕ ಮತ್ತು ಸಮಯವನ್ನು ಒದಗಿಸಿ ಎಂದು ಸಿಐಎಸ್‌ಎಫ್‌ ಟ್ವೀಟ್‌ ಮಾಡಿದೆ.

ಕನಿಮೊಳಿಯವರ ಪ್ರಶ್ನೆಗೆ ಹಲವರು ದನಿಗೂಡಿಸಿದ್ದಾರೆ. ಆ ಮೂಲಕ ಮತ್ತೆ ಹಿಂದಿ ಹೇರಿಕೆಯ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದಾರೆ.

ಇತ್ತೀಚೆಗೆ ಕೇಂದ್ರ ಕ್ಯಾಬಿನೆಟ್ ಹೊಸ ಶಿಕ್ಷಣ ನೀತಿಯನ್ನು ಅಂಗೀಕರಿಸಿದ ನಂತರ ತಮಿಳುನಾಡು ರಾಜ್ಯವು ತ್ರಿಭಾಷಾ ಸೂತ್ರ ಹೇರಿಕೆಯನ್ನು ವಿರೋಧಿಸಿತ್ತು. ಆಡಳಿತ ಮತ್ತು ವಿಪಕ್ಷಗಳು ತೀವ್ರ ಪ್ರತಿರೋಧ ತೋರಿದ್ದವು.


ಇದನ್ನೂ ಓದಿ: ಹಿಂದಿ ಹೇರಿಕೆ ಸಹಿಸುವುದಿಲ್ಲ; ಹಿಂದಿ ಭಾಷಾ ದಿನಾಚರಣೆಗೆ ಆಸ್ಪದವಿಲ್ಲ. ಹಿಂದಿ ದಿನದ ವಿರುದ್ಧ ಕರಾಳ ದಿನ ಆಚರಣೆಗೆ ಕನ್ನಡಿಗರ ಸಜ್ಜು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದ 2,200ಕ್ಕೂ...

0
ರಾಜಸ್ಥಾನದ ಬನ್ಸ್ವಾರದಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ಹೇಳಿಕೆಗಳನ್ನು ನೀಡಿದ ಬಿಜೆಪಿಯ ಸ್ಟಾರ್ ಪ್ರಚಾರಕ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ 2,200ಕ್ಕೂ ಹೆಚ್ಚು ನಾಗರಿಕರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆದರೆ...