ಅಮೆರಿಕಾ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಚುನಾಯಿತರಾದ ಜೋ ಬೈಡೆನ್ ಮತ್ತು ಕಮಲಾ ಹ್ಯಾರಿಸ್ ಅವರಿಗೆ ಅಭಿನಂದನ ಪತ್ರ ಬರೆದ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ, “ಜೋ ಬೈಡೆನ್ ಮತ್ತು ಕಮಲಾ ಹ್ಯಾರಿಸ್ ನಾಯಕತ್ವದಲ್ಲಿ ಭಾರತವು ನಿಕಟ ಬಾಂಧವ್ಯವನ್ನು ಎದುರು ನೋಡುತ್ತಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಸೋನಿಯಾ ಗಾಂಧಿ ಬರೆದ ಪತ್ರದಲ್ಲಿ, “ಜೋ ಬೈಡೆನ್, ತಮ್ಮ ಪ್ರಚಾರದ ಸಮಾವೇಶಗಳಲ್ಲಿ ಅಳತೆಯ ಭಾಷಣಗಳ ಮೂಲಕ ಜನರನ್ನು ಒಗ್ಗೂಡಿಸುವ, ಲಿಂಗ ಮತ್ತು ಜನಾಂಗೀಯ ಸಮಾನತೆ, ಜಾಗತಿಕ ಸಹಕಾರ ಮತ್ತು ಎಲ್ಲಾ ದೇಶಗಳ ಸುಸ್ಥಿರ ಅಭಿವೃದ್ಧಿಯ ವಿಷಯವು ಬಹಳಷ್ಟು ಧೈರ್ಯ ತುಂಬಿದೆ ಮತ್ತು ಹೆಚ್ಚಿನ ಭರವಸೆ ನೀಡಿದೆ. ಹಾಗಾಗಿ ನಮಗೆ ಮತ್ತು ಇಡೀ ಜಗತ್ತಿನಲ್ಲಿ ಶಾಂತಿ ಮತ್ತು ಅಭಿವೃದ್ಧಿಗೆ ಬೈಡೆನ್ ಅವರಂತಹ ಬುದ್ಧಿವಂತ ಮತ್ತು ಪ್ರಭುದ್ಧ ನಾಯಕತ್ವದ ಅವಶ್ಯಕತೆಯಿದೆ” ಎಂದು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಶ್ವೇತಭವನ ಕಚೇರಿಯ ಮೊದಲ ಮಹಿಳೆ ನಾನಾಗಿರಬಹುದು, ಆದರೆ ಕೊನೆಯವಳಲ್ಲ: ಕಮಲಾ ಹ್ಯಾರಿಸ್
ಕಮಲಾ ಹ್ಯಾರಿಸ್‌ಗೆ ಬರೆದ ಪತ್ರದಲ್ಲಿ, ಚುನಾವಣೆಯಲ್ಲಿ ಅವರು ತೋರಿದ ಅಚಲ ಧೈರ್ಯವನ್ನು ಶ್ಲಾಘಿಸಿ, “ಮಿಸ್ ಹ್ಯಾರಿಸ್ ಅಮೆರಿಕಾ ಮತ್ತು ಭಾರತದ ನಡುವಿನ ಸ್ನೇಹವನ್ನು ಬಲಪಡಿಸುತ್ತಾರೆ. ಕಮಲಾ ಹ್ಯಾರಿಸ್ ಅವರ ಯಶಸ್ಸು ಕಪ್ಪು ಅಮೆರಿಕನ್ನರು ಮತ್ತು ಭಾರತೀಯ ಅಮೆರಿಕನ್ನರ ಯಶಸ್ಸು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ಅಮೆರಿಕಾದ ಉಪಾಧ್ಯಕ್ಷರಾಗಿ ವಿಭಜಿತ ರಾಷ್ಟ್ರವನ್ನು ಒಗ್ಗೂಡಿಸಲು ಕಮಲಾ ಹ್ಯಾರಿಸ್ ಪ್ರಯತ್ನಪಡುತ್ತಾರೆ ಎನ್ನುವ ನಂಬಿಕೆಯಿದೆ. ಅವರು ಭಾರತದ ಸ್ನೇಹ ಸಂಬಂಧವನ್ನು ಬಲಪಡಿಸಿ, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಮಾನವ ಹಕ್ಕುಗಳನ್ನು ಬೆಂಬಲಿಸುತ್ತಾರೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೋದಿ ಘೋರವಾಗಿ ಸಾಯುತ್ತಾರೆ; ಕರ್ನಾಟಕ ವಿಭಜನೆಯಾತ್ತದೆ: ಬ್ರಹ್ಮಾಂಡ ಗುರೂಜಿ
“ಭಾರತಕ್ಕೆ ನಿಮ್ಮನ್ನು ಸ್ವಾಗತಿಸಲು ನಮಗೆ ಶೀಘ್ರದಲ್ಲೇ ಅವಕಾಶ ಸಿಗಲಿದೆ ಎಂದು ನಾವು ಭಾವಿಸುತ್ತೇವೆ. ಇಲ್ಲಿ ನಿಮ್ಮನ್ನು, ಮಹಾನ್ ಪ್ರಜಾಪ್ರಭುತ್ವದ ಮೆಚ್ಚುಗೆ ಪಡೆದ ನಾಯಕಿಯಾಗಿ ಮಾತ್ರವಲ್ಲ, ಪ್ರೀತಿಯ ಮಗಳಾಗಿಯೂ ಅಕ್ಕರೆಯಿಂದ ಪ್ರಶಂಸಿಸಲಾಗುತ್ತದೆ” ಎಂದು ಸೋನಿಯಾ ಗಾಂಧಿ ಹೇಳಿದರು.
ಕಠಿಣ ಪೈಪೋಟಿಯ ನಡುವೆ ಅಮೆರಿಕಾದ 46 ನೇ ಅಧ್ಯಕ್ಷರಾಗಿ ಜೋ ಬೈಡೆನ್ ಆಯ್ಕೆಯಾಗಿದ್ದಾರೆ. ಕಮಲಾ ಹ್ಯಾರಿಸ್ ಅಮೆರಿಕಾದ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿದ್ದಾರೆ.
ಇದನ್ನೂ ಓದಿ: ಅಮೆರಿಕದ 46 ನೇ ಅಧ್ಯಕ್ಷರಾಗಿ ಜೋ ಬಿಡೆನ್ – ಯಾರಿವರು? ; ಸಂಕ್ಷಿಪ್ತ ಪರಿಚಯ


