ಕರ್ನಾಟಕ ಉಪಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಮೊದಲು ಅಂಚೆ ಮತಗಳನ್ನು ಎಣಿಕೆ ಮಾಡಿದ ನಂತರ ಇವಿಎಂ ಮತಗಳನ್ನು ಎಣಿಕೆ ಮಾಡಲಾಗುತ್ತಿದೆ. ಎರಡೂ ಕ್ಷೇತ್ರಗಳಲ್ಲಿಯೂ ಅಂಚೆ ಮತಗಳ ಎಣಿಕೆ ನಡೆಯುತ್ತಿದ್ದು, ಎರಡೂ ಕಡೆ ಬಿಜೆಪಿ ಮುನ್ನಡೆಯಲ್ಲಿದೆ. ಇದೀಗ ಮೊದಲ ಹಂತದ ಎಣಿಕೆ ಮುಗಿದಿದ್ದು, ಬಿಜೆಪಿಯ ಮುನಿರತ್ನ ಅವರಿಗೆ 3000 ಮತಗಳ ಮುನ್ನಡೆಯಿದೆ.
ಇನ್ನು ಸಿರಾದಲ್ಲಿಯೂ ಬಿಜೆಪಿಯ ರಾಜೇಶ್‌ಗೌಡ ಅವರಿಗೆ ಮುನ್ನಡೆಯಿದೆ. 3324 ಮತಗಳನ್ನು ಪಡೆದು ಮುನ್ನಡೆಯಲ್ಲಿದ್ದಾರೆ.
ಮುನಿರತ್ನ 6164 ಮತಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ 2915 ಮತಗಳನ್ನು ಪಡೆದುಕೊಂಡಿದ್ದಾರೆ.
ಅಂಚೆ ಮತಗಳಲ್ಲಿಯೂ ಮುನಿರತ್ನ ಅವರಿಗೆ ಮುನ್ನಡೆಯಿದೆ. ಮುನಿರತ್ನ (ಬಿಜೆಪಿ)– 253, ಕುಸುಮಾ (ಕಾಂಗ್ರೆಸ್)– 112, ಕೃಷ್ಣಮೂರ್ತಿ (ಜೆಡಿಎಸ್)– 6.
ನವೆಂಬರ್ 3ರಂದು ಆರ್.ಆರ್. ನಗರ ಮತ್ತು ಶಿರಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು, ಹಾಗೂ ವಿಧಾನ ಪರಿಷತ್‌ನ ನಾಲ್ಕು ಸ್ಥಾನಗಳಿಗೆ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಿಂದ ಅಕ್ಟೋಬರ್ 28ರಂದು ಚುನಾವಣೆ ನಡೆದಿತ್ತು. ಈ ಎರಡೂ ಚುನಾವಣೆಗಳ ಮತ ಎಣಿಕೆ ಕಾರ್ಯ ಈಗಾಗಲೇ ಆರಣಭವಾಗಿದ್ದು, ಕ್ಷೇತ್ರದ ಮತದಾರರು, ಕೈ ಹಿಡಿಯಲಿದ್ದಾರಾ, ತೆನೆ ಹೊರಲಿದ್ದಾರಾ ಅಥವಾ ಕಮಲ ಮುಡಿಯಲಿದ್ದಾರಾ ಎಂಬುದು ಇನ್ನೇನು ಕೆಲವೇ ಕ್ಷಣಗಳಿಂದ ತಿಳಿಯುತ್ತಾ ಹೋಗುತ್ತದೆ. ಮಧ್ಯಾಹ್ನದ ವೇಳೆಗೆ ಗೆಲುವು ಯಾರಿಗೆಂದು ಬಹುಪಾಲು ತಿಳಿಯಲಿದೆ.
ಇದನ್ನೂ ಓದಿ: ಬಿಹಾರ ಚುನಾವಣೆ: ಕಣದಲ್ಲಿರುವ 1157 ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿ!


