ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣದ ಮೇಲೆ ವಾಗ್ದಾಳಿ ನಡೆಸಿದ ಶಿವಸೇನೆ, “ಅಮಾನ್ಯೀಕರಣವನ್ನು ಸಂಭ್ರಮಿಸಿವುದು, ಸಮಾಧಿಯ ಮೇಲೆ ಕೇಕ್ ಕತ್ತರಿಸಿದಂತೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ. ಶಿವಸೇನೆಯ ಪತ್ರಿಕೆ ‘ಸಾಮನ’ದ ಸಂಪಾದಕೀಯದಲ್ಲಿ 2016ರಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ಈ ನಿರ್ಧಾರವನ್ನು ‘ಕಪ್ಪು ಅಧ್ಯಾಯ’ ಎಂದು ಬಣ್ಣಿಸಿದೆ.
“ನೋಟು ಅಮಾನ್ಯೀಕರಣದಿಂದ ಲಕ್ಷಾಂತರ ಜನರ ವ್ಯವಹಾರಗಳು ನೆಲಕಚ್ಚಿದವು, ನೂರಾರು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನೇಕರ ಬದುಕು ಬೀದಿಪಾಲಾಗಿದೆ. ಇಂತಹ ಕ್ರಮವನ್ನು ಸಂಭ್ರಮಿಸುತ್ತಿರುವು ರಾಕ್ಷಸೀಯವಾಗಿದೆ” ಎಂದು ಹೇಳಿದೆ.
ನವೆಂಬರ್ 8 ರಂದು ಮಾಡಿದ ₹ 500 ಮತ್ತು ₹ 1,000 ಕರೆನ್ಸಿ ನೋಟುಗಳ ಅಮಾನ್ಯೀಕರಣದ ನಾಲ್ಕನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಈ ಕ್ರಮವು ಕಪ್ಪು ಹಣವನ್ನು ಕಡಿಮೆ ಮಾಡಲು ಸಹಾಯ ಮಾಡಿದ್ದು, ಪಾರದರ್ಶಕತೆಗೆ ಉತ್ತೇಜನ ನೀಡಿದೆ” ಎಂದು ಹೇಳಿದ್ದರು.
ಇದನ್ನೂ ಓದಿ: ಅಮೆರಿಕದಲ್ಲಿ ಟ್ರಂಪ್ ಸೋತಂತೆ ಬಿಹಾರದಲ್ಲಿ ಬಿಜೆಪಿ ಸೋಲುತ್ತದೆ: ಶಿವಸೇನೆ
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಮ ದೇವಸ್ಥಾನ ನಿರ್ಮಾಣ ಮತ್ತು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನಂತಹ ವಿಷಯಗಳನ್ನು ಬಿಜೆಪಿ ಮುಂದಿಟ್ಟುಕೊಂಡಿದೆ. ಆದರೆ ಅವರು ಜನರ ಮಟ್ಟಿಗೆ ಅವರು ವಿಫಲರಾಗಿದ್ದಾರೆ ಎಂದು ಸೇನಾ ಹೇಳಿದೆ.
“ಆದರೆ (ಆರ್‌ಜೆಡಿ ನಾಯಕ) ತೇಜಸ್ವಿ ಯಾದವ್, 10 ಲಕ್ಷ ಉದ್ಯೋಗಗಳಿಗೆ ಭರವಸೆ ನೀಡಿದ ನಂತರ ಬಿಹಾರದ ವಾತಾವರಣ ಬದಲಾಯಿತು. ಅವರ ರ್ಯಾಲಿಗಳಲ್ಲಿ ಭಾರಿ ತಿರುವು ಸಿಕ್ಕಿತು. ಇದರಲ್ಲಿ ನಿರುದ್ಯೋಗಿ ಯುವಕರು ಹೆಚ್ಚಾಗಿ ಸೇರಿದ್ದಾರೆ. ಇದು ಏನನ್ನು ಸೂಚಿಸುತ್ತದೆ?” ಎಂದು ಶಿವಸೇನೆ ಪ್ರಶ್ನಿಸಿದೆ.
ಇದನ್ನೂ ಓದಿ: BJP ಇನ್ನೂ ಯಾಕೆ ಸಾವರ್ಕರ್‌ಗೆ ಭಾರತ ರತ್ನ ನೀಡಿಲ್ಲ: ಶಿವಸೇನೆ ಪ್ರಶ್ನೆ


