ವಿಜಯ್ ಫೋಟೋಗಳನ್ನು ಪೋಸ್ಟರ್ ಮತ್ತು ಬ್ಯಾನರ್‌ಗಳಲ್ಲಿ ಬಳಸಿದ್ದಕ್ಕಾಗಿ ನಟ ವಿಜಯ್ ಅಭಿಮಾನಿ ಸಂಘದ ಸದಸ್ಯರಿಂದ ಕೊಲೆ ಬೆದರಿಕೆ ಬಂದಿರುವುದಾಗಿ ಅಖಿಲ ಭಾರತ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ ಅಧ್ಯಕ್ಷ ಆರ್.ಕೆ.ರಾಜ ಅಲಿಯಾಸ್ ಪದ್ಮನಾಥನ್ ಅವರು ಮಾತನಾಡಿರುವ, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಆರೋಪಿಸಿದ್ದಾರೆ.
ಈ ಹಿಂದೆ ವಿಜಯ್ ತಂದೆ ಎಸ್.ಎ.ಚಂದ್ರಶೇಖರ್, ಅಖಿಲ ಭಾರತ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ ರಾಜಕೀಯ ಪಕ್ಷವನ್ನು ನೋಂದಾಯಿಸಲು ಭಾರತದ ಚುನಾವಣಾ ಆಯೋಗಕ್ಕೆ ಪತ್ರಗಳನ್ನು ಸಲ್ಲಿಸಿ, ಆರ್.ಕೆ.ರಾಜ ಅವರನ್ನು ಅದರ ಅಧ್ಯಕ್ಷರನ್ನಾಗಿ ಹೆಸರಿಸಿದ್ದರು.
ಇದನ್ನೂ ಓದಿ: ತಮಿಳು ನಟ ವಿಜಯ್ ಹೆಸರಿನಲ್ಲಿ ರಾಜಕೀಯ ಪಕ್ಷ ನೋಂದಣಿ: ವಿಜಯ್ ಪ್ರತಿಕ್ರಿಯೆ ಏನು?
ಈ ಬೆಳವಣಿಗೆಯ ವರದಿಗಳ ನಂತರ ಹೇಳಿಕೆ ನೀಡಿದ ವಿಜಯ್, ಪಕ್ಷಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿ, ಅವರ ಅಭಿಮಾನಿಗಳನ್ನು ಅದರಿಂದ ದೂರವಿರಲು ಕೇಳಿಕೊಂಡಿದ್ದರು. ಮತ್ತು ಅವರ ಹೆಸರು ಅಥವಾ ಚಿತ್ರಗಳನ್ನು ಬಳಸಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದರು.
ಆರ್.ಕೆ.ರಾಜ ಬಿಡುಗಡೆ ಮಾಡಿರುವ 50 ಸೆಕೆಂಡುಗಳ ವಿಡಿಯೋದಲ್ಲಿ, ವಿಜಯ್ ಮಕ್ಕಳ್ ಇಯಕ್ಕಂ ಅಧ್ಯಕ್ಷ ಬುಸ್ಸಿ ಆನಂದ್ ತಮ್ಮ ವಿರುದ್ಧ ಮಾರಣಾಂತಿಕ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಎಂಬುದಾಗಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ಬಯೋಪಿಕ್ ವಿವಾದ: ‘800’ ಚಿತ್ರ ಕೈಬಿಡುವಂತೆ ವಿಜಯ್ ಸೇತುಪತಿಗೆ ಪತ್ರ ಬರೆದ ಮುತ್ತಯ್ಯ ಮುರುಳೀಧರನ್!
“ನನಗೆ ಏನಾದರೂ ಸಂಭವಿಸಿದಲ್ಲಿ, ಅದಕ್ಕೆ ಆನಂದ್ ಜವಾಬ್ದಾರನಾಗಿರುತ್ತಾನೆ” ಎಂದು ಅವರು ವೈರಲ್ ವೀಡಿಯೊದಲ್ಲಿ ಹೇಳಿದ್ದಾರೆ. ಪೊಲೀಸರು ನನ್ನ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದೂ ಹೇಳಿದ್ದಾರೆ.
ಆದಾಗ್ಯೂ, ರಾಜಾ ವಿರುದ್ಧ ರಿಯಲ್ ಎಸ್ಟೇಟ್ ವಂಚನೆ ಪ್ರಕರಣ ದಾಖಲಾಗಿದ್ದು, ಆತನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ ಆತ ಎಲ್ಲಿಯೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ತಾವು ಅಧ್ಯಕ್ಷರಾಗಿ ಘೋಷಣೆಯಾದಾಗಿನಿಂದ ಬೇರೆ-ಬೇರೆ ಕಡೆಗಳಿಂದ ತೊಂದರೆ ಎದುರಿಸುತ್ತಿದ್ದಾರೆ ಎಂದು ರಾಜಾ ಹೇಳಿದ್ದಾರೆ.
ಇದನ್ನೂ ಓದಿ: ಸಾಲ ತೀರಿಸುತ್ತೇನೆ, ನನ್ನ ವಿರುದ್ಧದ ಪ್ರಕರಣ ಕೈಬಿಡಿ: ವಿಜಯ್ ಮಲ್ಯ ಮನವಿ


