ಸೈಬರ್ ಬೆದರಿಕೆಗಳನ್ನು ಎದುರಿಸುವ ಮೊಬೈಲ್ ಅಪ್ಲಿಕೇಶನ್ ರಚಿಸಿದ್ದಕ್ಕಾಗಿ ಬಾಂಗ್ಲಾದೇಶದ ಯುವಕ ಸಾದತ್ ರಹಮಾನ್‌ಗೆ ಈ ವರ್ಷದ ಅಂತರರಾಷ್ಟ್ರೀಯ ಮಕ್ಕಳ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದೆ. ಈ ಪ್ರಶಸ್ತಿಯನ್ನು ನೋಬೆಲ್ ಪ್ರಶಸ್ತಿ ವಿಜೇತರಾದ ಯೂಸುಫ್ ಮಲಾಲ ಘೋಷಿಸಿದರು.
ಸೈಬರ್ ಬೆದರಿಕೆಯನ್ನು ತಡೆಯಲು ಸಾಮಾಜಿಕ ಸಂಸ್ಥೆಯೊಂದನ್ನು ಕಟ್ಟಿ, ಮೊಬೈಲ್ ಅಪ್ಲಿಕೇಶನ್ “ಸೈಬರ್ ಟೀನ್ಸ್” ಅನ್ನು ಸ್ಥಾಪಿಸುವಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಶುಕ್ರವಾರ 17 ವರ್ಷದ ಯುವಕನಿಗೆ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ನ್ಯೂಸ್ ಸರ್ವಿಸ್ ಡಿವಿಷನ್ ವರದಿ ಮಾಡಿದೆ.
ಇದನ್ನೂ ಓದಿ: ಸೈಬರ್ ದಾಳಿಯ ಬಗ್ಗೆ 20 ಲಕ್ಷ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಮಕ್ಕಳ ಹಕ್ಕುಗಳಿಗಾಗಿ ಹೋರಾಡುವ ಮಗುವಿಗೆ ಅಂತರರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂಸ್ಥೆ ಕಿಡ್ಸ್ ರೈಟ್ಸ್ ಈ ಬಹುಮಾನವನ್ನು ನೀಡುತ್ತದೆ.
42 ದೇಶಗಳ 142 ಅರ್ಜಿದಾರರಲ್ಲಿ ಸದತ್ ರಹಮಾನ್ ಆಯ್ಕೆಯಾಗಿದ್ದಾರೆ. ಸೈಬರ್ ಬೆದರಿಕೆಯಿಂದ ಬಳಲುತ್ತಿರುವ ಹದಿಹರೆಯದವರಿಗೆ ಸಹಾಯ ಮಾಡಲು ಅವರು ‘ಸೈಬರ್ ಟೀನ್ಸ್’ ಆಪ್ ಅನ್ನು ರಚಿಸಿದ್ದಾರೆ. ಈ ಅಪ್ಲಿಕೇಶನ್ ಯುವಜನರಿಗೆ ಇಂಟರ್ನೆಟ್ ಸುರಕ್ಷತೆಯ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಸೈಬರ್ ಬೆದರಿಕೆಯನ್ನು ಸುರಕ್ಷಿತವಾಗಿ ವರದಿ ಮಾಡಲು ಇದು ಅವರಿಗೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: ದೇಶದಲ್ಲಿ ೨೦೨೦ಕ್ಕೆ ಹೊಸ ರಾಷ್ಟ್ರೀಯ ಸೈಬರ್ ಭದ್ರತಾ ನೀತಿ ಜಾರಿಗೆ ತರಲು ಚಿಂತನೆ..!
ಸೈಬರ್ ತಜ್ಞರು, ಸಾಮಾಜಿಕ ಕಾರ್ಯಕರ್ತರು ಮತ್ತು ಪೊಲೀಸರನ್ನು ಒಟ್ಟುಗೂಡಿಸಲು ಸದಾತ್ ಒಂದು ಸಂಘಟನೆಯನ್ನು ರಚಿಸಿದ್ದರು. ಸೈಬರ್ ಬೆದರಿಕೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಅವರು ಸೆಮಿನಾರ್ ಮತ್ತು ಸಭೆಗಳ ಮೂಲಕ ಶಾಲೆಗಳು ಮತ್ತು ಕಾಲೇಜುಗಳಲ್ಲಿ ಯುವಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕಿಡ್ಸ್ ರೈಟ್ಸ್ ಸಂಘಟನೆಯ ಪ್ರಕಾರ, ಸೈಬರ್ ಬೆದರಿಕೆಗೆ ಒಳಗಾದ 300 ಕ್ಕೂ ಹೆಚ್ಚು ಸಂತ್ರಸ್ತರಿಗೆ ಈ ಅಪ್ಲಿಕೇಶನ್ ಸಹಕರಿಸಿದೆ. ಜೊತೆಗೆ ಇದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸಹಕರಿಸಿದೆ. ಇದರಿಂದ ಯುವಜನರು ಡಿಜಿಟಲ್ ಸಾಕ್ಷರತೆಯ ಶಿಕ್ಷಣವನ್ನು ಹೊಂದಿರುವ ತಮ್ಮ ಪ್ರದೇಶದ ಶಾಲೆಗಳಲ್ಲಿ ಸೈಬರ್ ಕ್ಲಬ್‌ಗಳನ್ನು ಸಹ ರಚಿಸಿದ್ದಾರೆ.
ಇದನ್ನೂ ಓದಿ: ಆರೋಗ್ಯ ಸೇತು ಆಪ್ ಕುರಿತ ಮಾಹಿತಿ ಇಲ್ಲ: ಕೇಂದ್ರ ಸರ್ಕಾರಕ್ಕೆ ನೋಟಿಸ್!
ಮಿಖಾಯಿಲ್ ಗೋರ್ಬಚೇವ್ ಅವರ ಅಧ್ಯಕ್ಷತೆಯಲ್ಲಿ 2005 ರಲ್ಲಿ ರೋಮ್‌ನಲ್ಲಿ ನಡೆದ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರ ವಿಶ್ವ ಶೃಂಗಸಭೆಯಲ್ಲಿ, ಕಿಡ್ಸ್ ರೈಟ್ಸ್ ಈ ಬಹುಮಾನವನ್ನು ನೀಡಲು ಪ್ರಾರಂಭಿಸಿತು. ಅಂದಿನಿಂದ, ಪ್ರತಿವರ್ಷ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರಿಂದ ಈ ಬಹುಮಾನವನ್ನು ನೀಡಲಾಗುತ್ತದೆ.
ಅತ್ಯುತ್ತಮ ಕೆಲಸಗಳನ್ನು ಮಾಡುತ್ತಿರುವ ಯುವಜನರನ್ನು ಗುರುತಿಸಿ, ಅವರ ಆಲೋಚನೆಗಳನ್ನು ಉತ್ತೇಜಿಸಲು ಮತ್ತು ಅವರ ಕೆಲಸವನ್ನು ಮತ್ತಷ್ಟು ಹೆಚ್ಚಿಸಲು ಒಂದು ವೇದಿಕೆಯನ್ನು ಒದಗಿಸಲಾಗುತ್ತದೆ. ವಿಜೇತರು ವಿಶ್ವವಿದ್ಯಾಲಯದ ಪದವಿ ತನಕ ಶಿಕ್ಷಣ ಪಡೆಯಲು ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ.
ಇದನ್ನೂ ಓದಿ: ವಿಕೃತ ಲೈಂಗಿಕ ಸಂತೃಪ್ತಿಗಾಗಿ ಮಕ್ಕಳ ದುರ್ಬಳಕೆ: ಒಂದೇ ವಾರದಲ್ಲಿ 41 ಮಂದಿ ಬಂಧನ!


