ಅಮೇರಿಕನ್ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್‌ಮೆಂಟ್ ಆಫ್ ಸೈನ್ಸ್ (ಎಎಎಎಸ್) ನ ವಿಜ್ಞಾನ ನಿಯತಕಾಲಿಕೆಯು, ಕೇರಳ ಆರೋಗ್ಯ ಸಚಿವ ಕೆ.ಕೆ.ಶೈಲಜಾ ಅವರನ್ನು “ಭಾರತದ ಕೋವಿಡ್ ಟೀಚರ್” ಎಂದು ಬಣ್ಣಿಸಿದೆ.
ಅಮೆರಿಕ ವಿಜ್ಞಾನ ನಿಯತಕಾಲಿಕದ ವರದಿಯು, “ಸಚಿವೆ ಕೆ.ಕೆ.ಶೈಲಜಾ ಕೊರೊನಾ ಸಾಂಕ್ರಮಿಕವನ್ನು ಸರಿಯಾದ ಸಿದ್ಧತೆ ಮತ್ತು ಆತ್ಮವಿಶ್ವಾಸದಿಂದ ಎದುರಿಸಿದ್ದಾರೆ. ರಾಜ್ಯದ ಕೊರೊನಾ ನಿರ್ವಹಣಾ ಸಾಧನೆಯ ಹಿಂದೆ ಅವರ ಪಾತ್ರ ಬಹಳ ದೊಡ್ಡದಾಗಿದ್ದು, ಸೋಂಕಿನ ವಿರುದ್ದ ಹೋರಾಡಲು ಕೇರಳವು ಹೆಚ್ಚು ಸಾಕ್ಷರತೆ ಪಡೆದಿದೆ. ಅಲ್ಲದೆ ಕೇರಳವು ಉತ್ತಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಹೊಂದಿದೆ” ಎಂದು ಹೇಳಿದೆ.
ಇದನ್ನೂ ಓದಿ: ಆರೋಗ್ಯ ಕ್ಷೇತ್ರದಲ್ಲಿ ಕೇರಳದ ದಣಿವರಿಯದ ಸೇವೆಗೆ ವಿಶ್ವಸಂಸ್ಥೆಯ ಪ್ರಶಸ್ತಿ
ಮಾಜಿ ಪ್ರೌಡ ಶಾಲಾ ವಿಜ್ಞಾನ ಶಿಕ್ಷಕಿಯಾಗಿರುವ ಶೈಲಾಜಾ ಅವರ ನಾಯಕತ್ವವು ರಾಜ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ನಿಯತಕಾಲಿಕೆಯು ಗಮನಸೆಳೆದಿದೆ. 2018 ರಲ್ಲಿ ನಿಪಾ ವೈರಸ್ ಅನ್ನು ನಿಭಾಯಿಸಿದ ಸಚಿವೆಯ ಅನುಭವವು ಕೊರೊನಾ ವಿರುದ್ದದ ಹೋರಾಟಕ್ಕೆ ಬಲನೀಡಿತು ಎಂದು ಅದು ಹೇಳಿದೆ.
ಕೊರೊನಾ ವಿರುದ್ಧ ರಾಜ್ಯದ ಹೋರಾಟವನ್ನು ಮುನ್ನಡೆಸಿದ್ದಕ್ಕಾಗಿ ವಿಶ್ವದಾದ್ಯಂತ ಶ್ಲಾಘಿಸಲ್ಪಟ್ಟ ಸಚಿವೆಯನ್ನು ಈ ಹಿಂದೆ ಬ್ರಿಟಿಷ್ ನಿಯತಕಾಲಿಕೆ ಪ್ರಾಸ್ಪೆಕ್ಟ್ ವಿಶ್ವದ ‘ಟಾಪ್ ಥಿಂಕರ್-2020’ ಎಂದು ಗೌರವಿಸಿತ್ತು.
ಇದನ್ನೂ ಓದಿ:’2020 ರ ಸರಿಯಾದ ಸ್ಥಳದಲ್ಲಿರುವ ಸರಿಯಾದ ಮಹಿಳೆ’; ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಟಾಪ್ ಥಿಂಕರ್-2020 ಗೌರವ


