Homeಕರೋನಾ ತಲ್ಲಣ’ಭಾರತದ ಕೋವಿಡ್ ಟೀಚರ್‌’ - ಕೆ.ಕೆ. ಶೈಲಜಾರನ್ನು ಬಣ್ಣಿಸಿದ ಅಂತರಾಷ್ಟ್ರೀಯ ವಿಜ್ಞಾನ ನಿಯತಕಾಲಿಕೆ

’ಭಾರತದ ಕೋವಿಡ್ ಟೀಚರ್‌’ – ಕೆ.ಕೆ. ಶೈಲಜಾರನ್ನು ಬಣ್ಣಿಸಿದ ಅಂತರಾಷ್ಟ್ರೀಯ ವಿಜ್ಞಾನ ನಿಯತಕಾಲಿಕೆ

ಕೇರಳದ ಆರೋಗ್ಯ ಸಚಿವೆಯಾಗಿರುವ ಇವರನ್ನು ಬ್ರಿಟಿಷ್ ನಿಯತಕಾಲಿಕೆ ಪ್ರಾಸ್ಪೆಕ್ಟ್ ವಿಶ್ವದ ‘ಟಾಪ್ ಥಿಂಕರ್-2020’ ಎಂದು ಗೌರವಿಸಿತ್ತು.

- Advertisement -
- Advertisement -

ಅಮೇರಿಕನ್ ಅಸೋಸಿಯೇಷನ್ ​​ಫಾರ್ ದಿ ಅಡ್ವಾನ್ಸ್‌ಮೆಂಟ್ ಆಫ್ ಸೈನ್ಸ್ (ಎಎಎಎಸ್) ನ ವಿಜ್ಞಾನ ನಿಯತಕಾಲಿಕೆಯು, ಕೇರಳ ಆರೋಗ್ಯ ಸಚಿವ ಕೆ.ಕೆ.ಶೈಲಜಾ ಅವರನ್ನು “ಭಾರತದ ಕೋವಿಡ್ ಟೀಚರ್” ಎಂದು ಬಣ್ಣಿಸಿದೆ.

ಅಮೆರಿಕ ವಿಜ್ಞಾನ ನಿಯತಕಾಲಿಕದ ವರದಿಯು, “ಸಚಿವೆ ಕೆ.ಕೆ.ಶೈಲಜಾ ಕೊರೊನಾ ಸಾಂಕ್ರಮಿಕವನ್ನು ಸರಿಯಾದ ಸಿದ್ಧತೆ ಮತ್ತು ಆತ್ಮವಿಶ್ವಾಸದಿಂದ ಎದುರಿಸಿದ್ದಾರೆ. ರಾಜ್ಯದ ಕೊರೊನಾ ನಿರ್ವಹಣಾ ಸಾಧನೆಯ ಹಿಂದೆ ಅವರ ಪಾತ್ರ ಬಹಳ ದೊಡ್ಡದಾಗಿದ್ದು, ಸೋಂಕಿನ ವಿರುದ್ದ ಹೋರಾಡಲು ಕೇರಳವು ಹೆಚ್ಚು ಸಾಕ್ಷರತೆ ಪಡೆದಿದೆ. ಅಲ್ಲದೆ ಕೇರಳವು ಉತ್ತಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಹೊಂದಿದೆ” ಎಂದು ಹೇಳಿದೆ.

ಇದನ್ನೂ ಓದಿ: ಆರೋಗ್ಯ ಕ್ಷೇತ್ರದಲ್ಲಿ ಕೇರಳದ ದಣಿವರಿಯದ ಸೇವೆಗೆ ವಿಶ್ವಸಂಸ್ಥೆಯ ಪ್ರಶಸ್ತಿ

ಮಾಜಿ ಪ್ರೌಡ ಶಾಲಾ ವಿಜ್ಞಾನ ಶಿಕ್ಷಕಿಯಾಗಿರುವ ಶೈಲಾಜಾ ಅವರ ನಾಯಕತ್ವವು ರಾಜ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ನಿಯತಕಾಲಿಕೆಯು ಗಮನಸೆಳೆದಿದೆ. 2018 ರಲ್ಲಿ ನಿಪಾ ವೈರಸ್ ಅನ್ನು ನಿಭಾಯಿಸಿದ ಸಚಿವೆಯ ಅನುಭವವು ಕೊರೊನಾ ವಿರುದ್ದದ ಹೋರಾಟಕ್ಕೆ ಬಲನೀಡಿತು ಎಂದು ಅದು ಹೇಳಿದೆ.

ಕೊರೊನಾ ವಿರುದ್ಧ ರಾಜ್ಯದ ಹೋರಾಟವನ್ನು ಮುನ್ನಡೆಸಿದ್ದಕ್ಕಾಗಿ ವಿಶ್ವದಾದ್ಯಂತ ಶ್ಲಾಘಿಸಲ್ಪಟ್ಟ ಸಚಿವೆಯನ್ನು ಈ ಹಿಂದೆ ಬ್ರಿಟಿಷ್ ನಿಯತಕಾಲಿಕೆ ಪ್ರಾಸ್ಪೆಕ್ಟ್ ವಿಶ್ವದ ‘ಟಾಪ್ ಥಿಂಕರ್-2020’ ಎಂದು ಗೌರವಿಸಿತ್ತು.

ಇದನ್ನೂ ಓದಿ:’2020 ರ ಸರಿಯಾದ ಸ್ಥಳದಲ್ಲಿರುವ ಸರಿಯಾದ ಮಹಿಳೆ’; ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಟಾಪ್ ಥಿಂಕರ್-2020 ಗೌರವ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾಗರಿಕ ಸಂಸ್ಥೆಗಳು, ಕಾಳಜಿಯುಳ್ಳ ನಾಗರಿಕರಿಂದ ಚುನಾವಣಾ ಆಯೋಗಕ್ಕೆ...

0
ರಾಜಸ್ಥಾನದಲ್ಲಿ ಭಾನುವಾರ (ಏ.21) ನಡೆದ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಸುದ್ದಿ ಮತ್ತು ದ್ವೇಷ ಹರಡಿದ್ದಾರೆ. ಈ ಹಿನ್ನೆಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಾಗರಿಕ ಸಂಸ್ಥೆಗಳು...