ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಪಂಜಾಬ್‌ನ ಮಾಜಿ ಸಚಿವ ಬಿಕ್ರಂ ಸಿಂಗ್ ಮಜಿತಿಯಾ ಅವರಿಗೆ ನೀಡಲಾಗಿದ್ದ Z-ಪ್ಲಸ್ ಭದ್ರತಾ ಪಡೆಯನ್ನು ಹಿಂತೆಗೆದುಕೊಂಡಿದೆ ಎಂದು ಶಿರೋಮಣಿ ಅಕಾಲಿ ದಳ ಆರೋಪಿಸಿದ್ದು, ವಾಗ್ದಾಳಿ ನಡೆಸಿದೆ.
ಮಾಜಿ ಸಚಿವ ಮತ್ತು ಅಕಾಲಿ ದಳದ ಹಿರಿಯ ನಾಯಕ ಬಿಕ್ರಮ್ ಸಿಂಗ್ ಮಜಿತಿಯಾ ಅವರಿಗೆ ನೀಡಿದ್ದ Z-ಪ್ಲಸ್ ಭದ್ರತೆಯನ್ನು ಹಿಂಪಡೆದಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸರ್ವಾಧಿಕಾರಿ ಮತ್ತು ರಾಜಕೀಯ ಪ್ರೇರಿತವಾದ ಈ ನಿರ್ಧಾರವನ್ನು ಅಕಾಲಿ ದಳವು ಖಂಡಿಸುತ್ತದೆ ಎಂದು ಪಕ್ಷದ ವಕ್ತಾರ ದಲ್ಜಿತ್ ಸಿಂಗ್ ಚೀಮಾ ಹೇಳಿದ್ದಾರೆ.
ಇದನ್ನೂ ಓದಿ: ಕಾಯ್ದೆ ವಿರೋಧಿ ಮೋದಿ ಸರ್ಕಾರದ ಕಾಯ್ದೆ ತಿದ್ದುಪಡಿಗಳು!
ಕೇಂದ್ರದ ಕೃಷಿ ಕಾನೂನುಗಳ ಪರವಾಗಿ ಮತ್ತು ಜಮ್ಮು-ಕಾಶ್ಮೀರದಲ್ಲಿ ಪಂಜಾಬಿ ಭಾಷೆಗೆ ಅಧಿಕೃತ ಸ್ಥಾನಮಾನವನ್ನು ನಿರಾಕರಿಸಿರುವುದರ ವಿರುದ್ಧ ಹಾಗೂ ಅಕಾಲಿ ದಳ ಪಕ್ಷವು ರೈತರೊಂದಿಗೆ ದೃಢವಾಗಿ ನಿಂತಿದೆ ಎಂಬ ಕಾರಣಕ್ಕೆ ಹಿರಿಯ ನಾಯಕ ಮಜಿತಿಯಾ ಅವರ ಭದ್ರತಾ ರಕ್ಷಣೆಯನ್ನು ಹಿಂಪಡೆಯಲಾಗಿದೆ ಎಂದು ಪಕ್ಷದ ಹಿರಿಯ ಮುಖಂಡ ಚೀಮಾ ಆರೋಪಿಸಿದ್ದಾರೆ.
“ಸಂಸತ್ತಿನಲ್ಲಿ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ನಮ್ಮ ಪಕ್ಷವು ಮತ ಚಲಾಯಿಸಿತ್ತು. ಈ ಭಾಗವಾಗಿಯೇ ಕೇಂದ್ರ ಕ್ಯಾಬಿನೆಟ್ ಮತ್ತು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು ತ್ಯಜಿಸಿದ್ದೆವು” ಎಂದು ಹೇಳಿದರು.
ಇದನ್ನೂ ಓದಿ: ಕೃಷಿ ಮಸೂದೆಯನ್ನು ವಿರೋಧಿಸಿ ರಾಜಿನಾಮೆ ನೀಡಿದ ಕೇಂದ್ರ ಸಚಿವೆ!
ಇಂತಹ ರಾಜಕಾರಣವು ರಾಜ್ಯದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತದೆ ಎಂದು ಹೇಳಿದ ಚೀಮಾ, “ಹಿರಿಯ ಎಡಪಂಥೀಯ ನಾಯಕ ಮತ್ತು ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಬಲ್ವಿಂದರ್ ಸಿಂಗ್ ಅವರ ಭದ್ರತಾ ಪಡೆಯನ್ನು ಹಿಂತೆಗೆದುಕೊಂಡ ನಂತರ ಇತ್ತೀಚೆಗೆ ತಾರ್ನ್ ತರಣ್‌ನಲ್ಲಿ ಅವರನ್ನು ಹೇಗೆ ಹತ್ಯೆ ಮಾಡಲಾಯಿತು ಎಂಬುದನ್ನು ನಾವು ಈಗಾಗಲೇ ನೋಡಿದ್ದೇವೆ” ಎಂದು ಹೇಳಿದರು.
ಇದನ್ನೂ ಓದಿ: ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಿರೋಧಿಸಿ ಎನ್‌ಡಿಎ ಮೈತ್ರಿಕೂಟ ತೊರೆದ ಪಂಜಾಬ್‌ನ ಅಕಾಲಿ ದಳ!
“ಸರ್ಕಾರದ ಗುಣಗಾನ ಮಾಡುವ ಜನರಿಗೆ ಅಪೇಕ್ಷೆ ಮತ್ತು ಮನೋಭಾವದ ಮೇಲೆ ಭದ್ರತೆಯನ್ನು ನೀಡಬಾರದು. ಕೃಷಿ ಸಮುದಾಯವನ್ನು ಬೆಂಬಲಿಸುವ ಸಲುವಾಗಿ ಅಕಾಲಿದಳ ಕೇಂದ್ರದ ವಿರುದ್ಧ ದನಿಯೆತ್ತಿದ್ದಕ್ಕೆ ಇದ್ದಕ್ಕಿದ್ದಂತೆ ಮಜಿತಿಯಾ ಅವರ ಭದ್ರತಾ ಪಡೆಯನ್ನು ಹಿಂಪಡೆಯಲಾಗಿದೆ. ಈ ಕ್ರಮ ಯಾವ ಆಧಾರದ ಮೇಲೆ ತೆಗೆದುಕೊಳ್ಳಲಾಗಿದೆ ಎಂದು ಗೃಹ ಸಚಿವಾಲಯ ವಿವರಿಸುತ್ತದೆಯೇ?” ಎಂದು ಅವರು ಪ್ರಶ್ನಿಸಿದರು.
ಮಜಿತಿಯಾ ಅವರನ್ನು ಪಾಕಿಸ್ತಾನ ಮೂಲದ ಭಯೋತ್ಪಾದಕರು ಗುರಿಯಾಗಿಸಿಕೊಂಡಿದ್ದು, ಇವರನ್ನು ಕೊಲೆ ಮಾಡುವುದಾಗಿ ಬಹಿರಂಗ ಬೆದರಿಕೆ ಹಾಕಿದ್ದಾರೆ. ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕೂಡ ಇತ್ತೀಚೆಗೆ ಪಂಜಾಬ್‌ನಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚಾಗುತ್ತಿದೆ ಎಂದಿದ್ದರು.
ಹಾಗಾಗಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶಗೊಂಡಿರುವ ಅಕಾಲಿದಳ ತೀವ್ರ ವಾಗ್ದಾಲಿ ನಡೆಸಿದೆ.
ಇದನ್ನೂ ಓದಿ: ಕೃಷಿ ಮಸೂದೆ: ಪಂಜಾಬ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಪ್ ಶಾಸಕರ ಅಹೋರಾತ್ರಿ ಪ್ರತಿಭಟನೆ!


