ಅರ್ಜೆಂಟೀನಾದ ಪುಟ್ಬಾಲ್ ದಂತಕಥೆ – ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರ ಡಿಯಾಗೋ ಮರಡೋನ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮಿದುಳಿನ ಮೇಲೆ ರಕ್ತ ಹೆಪ್ಪುಗಟ್ಟುವಿಕೆಗಾಗಿ ಶಸ್ತ್ರಚಿಕಿತ್ಸೆ ನಡೆಸಿದ ನಂತರ ಮರಡೋನಾ ಅವರನ್ನು ಈ ತಿಂಗಳ ಆರಂಭದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆ ಯಶಸ್ವಿಯಾದರೂ ಸಹ ಕೆಲವೇ ವಾರಗಳ ನಂತರ ಮರಡೋನಾ ಕೊನೆಯುಸಿರೆಳೆದಿದ್ದಾರೆ.
1986 ರಲ್ಲಿ ಮೆಕ್ಸಿಕೊದಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನಾ ಗೆಲುವು ಸಾಧಿಸುವಲ್ಲಿ ಮರಡೋನಾ ಪ್ರಮುಖ ಪಾತ್ರ ವಹಿಸಿದ್ದರು.

ಫುಟ್ಬಾಲ್ ಹೊರತಾಗಿ ಮರಡೋನ ಕಮ್ಯುನಿಷ್ಟ್ ಬೆಂಬಲಿಗನಾಗಿ ಗಮನಸೆಳೆದಿದ್ದರು. ಅವರು ಕ್ಯೂಬಾದ ಮಾಜಿ ಅಧ್ಯಕ್ಷ ಫಿಡಲ್ ಕ್ಯಾಸ್ಟ್ರೋರವರನ್ನು ಹಲವು ಬಾರಿ ಭೇಟಿಯಾಗಿದ್ದರು. ಅಲ್ಲದೆ ತಮ್ಮ ತೋಳಿನ ಮೇಲೆ ಬೊಲಿವಿಯಾದ ಹೋರಾಟಗಾರ ಚೇ ಗುವಾರರವರ ಭಾವಚಿತ್ರವನ್ನು ಅಚ್ಚೆ ಹಾಕಿಸಿಕೊಂಡಿದ್ದರು.

ಇದನ್ನೂ ಓದಿ: ಕೇಂದ್ರ ಸರ್ಕಾರದೊಂದಿಗೆ ರೈತ ಮುಖಂಡರ ಮಾತುಕತೆ ವಿಫಲ: ನ.26,27ಕ್ಕೆ ದೆಹಲಿ ಚಲೋ


