ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಇಂದು ದೇಶದಾದ್ಯಂತ ರೈತ-ಕಾರ್ಮಿಕ ಸಂಘಟನೆಗಳು ದೆಹಲಿ ಚಲೋ ಪ್ರತಿಭಟನೆಯನ್ನು ಹಮ್ಮಿಕೊಂಡಿವೆ. ಇದನ್ನು ಎದುರಿಸಲಾಗದೇ ಹರಿಯಾಣ ಸರ್ಕಾರ ತನ್ನೆಲ್ಲಾ ಗಡಿಗಳನ್ನು ಸೀಲ್ ಮಾಡಿಕೊಂಡಿದ್ದು, ರೈತರು ದೆಹಲಿಗೆ ತೆರಳದಂತೆ ತಡೆಯುತ್ತಿದೆ. ಮಧ್ಯಪ್ರದೇಶದಿಂದ ದೆಹಲಿಗೆ ರೈತರೊಂದಿಗೆ ತೆರಳುತ್ತಿದ್ದ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರನ್ನೂ ಸಹ ಬಂಧಿಸಲಾಗಿದೆ.
ಇದನ್ನೂ ಓದಿ: ಭರದಿಂದ ಸಾಗಿದ ತಯಾರಿಗಳು: ನವೆಂಬರ್ 26-27ಕ್ಕೆ ದೆಹಲಿ ಚಲೋ ನಿಶ್ಚಿತ
ಉತ್ತರ ಪ್ರದೇಶ, ಹರಿಯಾಣ, ಉತ್ತರಾಖಂಡ್, ರಾಜಸ್ಥಾನ, ಕೇರಳ ಮತ್ತು ಪಂಜಾಬ್ ಸೇರಿದಂತೆ ಆರು ರಾಜ್ಯಗಳಿಂದ ಸಾವಿರಾರು ರೈತರು ಕಾರ್ಮಿಕರು ಟ್ರ್ಯಾಕ್ಟರ್ ಮೂಲಕ, ಕಾಲ್ನಡಿಗೆಯ ಮೂಲಕ ಮತ್ತು ವಿವಿಧ ವಾಹನಗಳ ಮೂಲಕ ದೆಹಲಿಗೆ ತೆರಳುತ್ತಿದ್ದಾರೆ. ಇವರನ್ನು ತಡೆಯುವ ಸಲುವಾಗಿ ಹರಿಯಾಣ ಮತ್ತು ದೆಹಲಿ ಗಡಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಪೊಲೀಸ್ ಪಡೆಯನ್ನು ನೇಮಿಸಲಾಗಿದೆ. ದೆಹಲಿಯ ಗುರುಗ್ರಾಂ ಮತ್ತು ಫರೀದಾಬಾದ್ ಗಡಿಗಳಿಗೆ ಸೀಲ್ ಹಾಕಲಾಗಿದೆ. ಕೊರೊನಾ ಸೋಂಕಿನ ಹೆಚ್ಚಳದ ಕಾರಣ ನೀಡಿ ರಾಜಧಾನಿಯಲ್ಲಿ ಯಾವುದೆ ರ್ಯಾಲಿಗಳು ನಡೆಯಲು ಅವಕಾಶ ನೀಡುತ್ತಿಲ್ಲ ಎಂದು ಸರ್ಕಾರ ಹೇಳುತ್ತಿದೆ.
ಈ ಕುರಿತು ಟ್ವೀಟ್ ಮಾಡಿರುವ ಯೋಗೇಂದ್ರ ಯಾದವ್, “ಇದು ಹರಿಯಾಣದ ಪೊಲೀಸ್ ರಾಜ್ಯ. ರೈತರಿರುವ ವಾಹನಗಳನ್ನು ತಡೆಯುತ್ತಿದ್ದಾರೆ. ರೈತ ಹೋರಾಟಗಾರರನ್ನು ತಡೆಯಲು ಎಲ್ಲೆಡೆಯಿಂದ ಒತ್ತಡ ಬರುತ್ತಿದೆ. ಹರಿಯಾಣ ಏಕೆ ಹೆದರುತ್ತಿದೆ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ದೆಹಲಿ ಚಲೋಗೆ ಮುನ್ನ ಡಜನ್‌ಗಟ್ಟಲೇ ರೈತ ಮುಖಂಡರ ಬಂಧನ: ಯೋಗೇಂದ್ರ ಯಾದವ್ ಆರೋಪ
हरियाणा में आज पुलिस राज:
जो किसान साथी गिरफ्तार नहीं हुए हैं उनके घर के बाहर पुलिस का पहरा है।
जिस वाहन में किसान दिखाई देते हैं उसे रोका जा रहा है।
प्रदेश में चारों ओर से किसान जत्थे को रोकने की सूचनाएं मिल रही है।
हरियाणा सरकार इतनी डरी हुई क्यों है?#FarmersDilliChalo— Yogendra Yadav (@_YogendraYadav) November 26, 2020
ಇದನ್ನೂ ಓದಿ: ಕೃಷಿ ಕಾಯ್ದೆಗಳಿಗೆ ವಿರೋಧ: ದೇಶಾದ್ಯಂತ ರಸ್ತೆ ತಡೆ, ದೆಹಲಿ ಚಲೋಗೆ ನಿರ್ಧಾರ!
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಆದೇಶದ ಮೇರೆಗೆ ಪಂಜಾಬ್ ಮತ್ತು ಹರಿಯಾಣ ಗಡಿಯನ್ನು 2 ದಿನಗಳವರೆಗೆ ಸೀಲ್ ಮಾಡಲಾಗಿದೆ. ನಿನ್ನೆ ರಾತ್ರಿ ಮೆರವಣಿಗೆ ಹೊರಟಿದ್ದ ರೈತರ ಮೇಲೆ ಜಲಫಿರಂಗಿಯನ್ನು ಬಳಸಿ ಅವರನ್ನು ತಡೆಯಲು ಪ್ರಯತ್ನಿಸಿದರು. ಆದರೂ ರೈತರು ತಮ್ಮ ಪ್ರತಿಭಟನೆ ಕೈಬಿಡಲಿಲ್ಲ.
ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಸಿಸಿ), ರಾಷ್ಟ್ರೀಯ ಕಿಸಾನ್ ಮಹಾಸಂಘ ಮತ್ತು ಭಾರತೀಯ ಕಿಸಾನ್ ಒಕ್ಕೂಟದ ವಿವಿಧ ಬಣಗಳು ಒಟ್ಟಾಗಿ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು “ಸಂಯುಕ್ತಾ ಕಿಸಾನ್ ಮೋರ್ಚಾ”ವನ್ನು ರಚಿಸಿಕೊಂಡಿವೆ.
ಇದನ್ನೂ ಓದಿ: ಸೆಂಟ್ರಲ್ ವಿಸ್ತಾ ಹೊಸ ಸಂಸತ್ ಭವನಕ್ಕೆ ಡಿಸೆಂಬರ್‌ನಲ್ಲಿ ಪ್ರಧಾನಿಯಿಂದ ಅಡಿಪಾಯ!
ಈ ಒಕ್ಕೂಟಕ್ಕೆ 500 ಕ್ಕೂ ಹೆಚ್ಚು ರೈತ ಸಂಘಟನೆಗಳ ಬೆಂಬಲವಿದೆ. ನವೆಂಬರ್ 26 ರ “ದೆಹಲಿ ಚಲೋ” ಮೆರವಣಿಗೆಗೆ ಸಂಬಂಧಿಸಿದಂತೆ ವಿವಿಧ ರೈತ ಮುಖಂಡರು ಗುರುವಾರ ಇಲ್ಲಿ ಭೇಟಿಯಾದರು. ಒಕ್ಕೂಟದ ಕಾರ್ಯಾಚರಣೆಯನ್ನು ಸಂಘಟಿಸಲು ಏಳು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ.
ಕೇಂದ್ರದ ಮೂರು ಕೃಷಿ ಕಾಯ್ದೆಗಳು ಮತ್ತು ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ನವೆಂಬರ್ 26-27 ರಂದು ದೆಹಲಿ ಚಲೋ ನಡೆಯುತ್ತಿದ್ದು, ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಮುಷ್ಕರ ವಿಫಲಗೊಳಿಸಲು ಹರಿಯಾಣದ ಡಜನ್‌ಗಟ್ಟಲೇ ರೈತ ಮುಂಡರನ್ನು ಅಕ್ರಮವಾಗಿ ಬಂಧಿಸಲಾಗುತ್ತಿದೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಯೋಗೇಂದ್ರ ಯಾದವ್ ಆರೋಪಿಸಿದ್ದಾರೆ.
ಇದನ್ನೂ ಓದಿ: ವಿವಾದಾತ್ಮಕ ಕೃಷಿ ಕಾನೂನು: ರೈತರನ್ನು 2 ನೇ ಸುತ್ತಿನ ಚರ್ಚೆಗೆ ಆಹ್ವಾನಿಸಿದ ಕೇಂದ್ರ!
ನವೆಂಬರ್ 26-27 ರಂದು ’ದೆಹಲಿ ಚಲೋ’ ನಡೆಯಲಿದೆ. ಎಐಕೆಎಸ್‌ಸಿಸಿ ನೇತೃತ್ವದಲ್ಲಿ 500 ಕ್ಕೂ ಹೆಚ್ಚಿನ ಪ್ರಮುಖ ರೈತ ಸಂಘಟನೆಗಳು ಇದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ ಕಾರ್ಮಿಕ ಕಾನೂನಿನ ತಿದ್ದುಪಡಿ ವಿರೋಧಿಸಿ ಕಾರ್ಮಿಕ ಸಂಘಟನೆಗಳು ನೆವೆಂಬರ್ 26(ನಾಳೆ) ರಂದು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದೆ. ವಿದ್ಯಾರ್ಥಿ ಸಂಘಟನೆಗಳು ’ಹೊಸ ಶಿಕ್ಷಣ ನೀತಿ’ಯ ವಿರುದ್ದ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದೆ.
ಹರಿಯಾಣದ ರೈತ ಸಂಘಟನೆಗಳು ತೀವ್ರ ಪ್ರತಿಭಟನೆಗೆ ಸಿದ್ದತೆ ನಡೆಸಿದ ಬೆನ್ನಲ್ಲೆ ಸುಮಾರು 24 ರೈತ ಮುಖಂಡರನ್ನು ಬಂಧಿಸಲಾಗಿದೆ. ಪಂಜಾಬ್‌ನ ಹಲವು ಸಂಘಟನೆಗಳು ಈಗಾಗಲೇ ದೆಹಲಿಯಲ್ಲಿ ಹಲವು ಲಂಗರ್‌ಗಳನ್ನು ಸ್ಥಾಪಿಸಿದ್ದು ಆತಿಥ್ಯ ವಹಿಸಲು ಸಜ್ಜಾಗಿವೆ.
ಇದನ್ನೂ ಓದಿ: ನವೆಂಬರ್ 26-27 ಸಾರ್ವತ್ರಿಕ ಮುಷ್ಕರ: ಕೇಂದ್ರ ಮೊಂಡುತನ ಬಿಟ್ಟು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು


