Homeಮುಖಪುಟಭರದಿಂದ ಸಾಗಿದ ತಯಾರಿಗಳು: ನವೆಂಬರ್ 26-27ಕ್ಕೆ ದೆಹಲಿ ಚಲೋ ನಿಶ್ಚಿತ

ಭರದಿಂದ ಸಾಗಿದ ತಯಾರಿಗಳು: ನವೆಂಬರ್ 26-27ಕ್ಕೆ ದೆಹಲಿ ಚಲೋ ನಿಶ್ಚಿತ

ಪಂಜಾಬ್‌ನ ಹಲವು ಸಂಘಟನೆಗಳು ಈಗಾಗಲೇ ದೆಹಲಿಯಲ್ಲಿ ಹಲವು ಲಂಗರ್‌ಗಳನ್ನು ಸ್ಥಾಪಿಸಿದ್ದು ಆತಿಥ್ಯ ವಹಿಸಲು ಸಜ್ಜಾಗಿವೆ. 

- Advertisement -
- Advertisement -

ಭಾರತ ಒಂದ ಕೃಷಿ ಪ್ರಧಾನ ದೇಶ, ಕೃಷಿ ಭಾರತದ ಬೆನ್ನೆಲುಬು ಎಂದು ಹಿಂದಿನಿಂದಲೂ ಇರುವ ಒಂದು ಮಾತು. ಹಾಗೆ ದೇಶದ 50% ಕ್ಕಿಂತ ಹೆಚ್ಚು ಜನರು ಕೃಷಿಯನ್ನು ಅವಲಂಭಿಸಿದ್ದಾರೆ. ಆದರೆ ವಿಶ್ವದಾದ್ಯಂತ ಕೊರೊನಾ ಸಮಯದಲ್ಲಿ ಎಲ್ಲಾ ಆರ್ಥಿಕ ಚಟುವಟಿಕೆಗಳು ನಿಂತು ಹೋದರೂ ಕೃಷಿ ಚಟುವಟಿಕೆ ಮಾತ್ರ ಮುಂದುವರೆದಿತ್ತು. ಕೃಷಿಯಿಂದ ಬೇಸತ್ತು ಉದ್ಯೋಗ ಅರಸಿಕೊಂಡು ಪೇಟೆಗೆ ಹೊರಟಿದ್ದ ಯುವಜನರು ಮರಳಿ ತಮ್ಮ ಹಳ್ಳಿಗೆ ತೆರಳಿ ಕೃಷಿ ಪ್ರಾರಂಭಿಸಿದ್ದರು.

ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಸರ್ಕಾರಗಳು ಜನರ ಪರವಾಗಿ ನಿಂತು ಜನಪರವಾಗಿ ಕೆಲಸ ಮಾಡಬೇಕಿತ್ತು. ಜನರ ಹಸಿವು ಸೇರಿದಂತೆ ಅವರ ಸಂಕಷ್ಟಗಳ ಪರಿಹಾರಕ್ಕೆ ಬೇಕಾಗಿ ಯೋಜನೆಗಳನ್ನು ತರಬೇಕಾಗಿತ್ತು. ಆದರೆ ಸರ್ಕಾರಗಳು ಏನು ಮಾಡಿದ್ದಾರೆ ಎಂದು ನೋಡಿದರೆ ನಿರಾಸೆ ಮೂಡುತ್ತದೆ. ಕೊರೊನಾ ನಿರ್ವಹಣೆಯಲ್ಲಿನ ಲೋಪದೋಷಗಳನ್ನು ಸರಿಪಡಿಸದೆ, ಅದರಲ್ಲಿ ನಡೆಯುತ್ತಿರುವ ಸಾಲು ಸಾಲು ಭ್ರಷ್ಟಾಚಾರ ಆರೋಪಗಳ ಬಗ್ಗೆ ಕಿವಿಕೊಡದೆ ಪ್ರಸ್ತುತ ಬಿಕ್ಕಟ್ಟಿಗೆ ಸಂಬಂಧವೆ ಇಲ್ಲದೆ ಹಲವಾರು ಕಾಯ್ದೆಗಳನ್ನು-ತಿದ್ದುಪಡಿಗಳನ್ನು ತಂದಿತು. ಮೂರು ಕೃಷಿ ಮಸೂದೆಗಳನ್ನು ಸುಗ್ರೀವಾಜ್ಞೆಗಳ ಮೂಲಕ ಹೊರಡಿಸಿ ಯಾವುದೇ ಚರ್ಚೆ ನಡೆಸದೇ ಸಂಸತ್ತಿನಲ್ಲಿ ಅಂಗೀಕರಿಸಿದೆ. ಈ ಕಾಯ್ದೆಗಳು ರೈತವಿರೋಧಿ ಎಂದು ರೈತ ಸಂಘಟನೆಗಳು ಹಲವು ದಿನಗಳಿಂದ ಹೋರಾಟಕ್ಕಿಳಿದಿವೆ.

ಅಲ್ಲದೆ ಕೊರೊನಾದಿಂದಾಗಿ ಕಂಗೆಟ್ಟ ಆರ್ಥಿಕತೆಯನ್ನು ಸರಿಯಾಗಿಸುವ ನೆಪದಲ್ಲಿ ಕಾರ್ಮಿಕ ಕಾನೂನುಗಳನ್ನೇ ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಹೊರಟಿದೆ. ಈ ಕಾನೂನುಗಳ ವಿರುದ್ದ ಈಗಾಗಲೇ ನಿರಂತರ ಪ್ರತಿಭಟನೆ ನಡೆಯುತ್ತಲೇ ಇದ್ದರೂ ಸರ್ಕಾರಕ್ಕೆ ಈ ಧ್ವನಿ ಕೇಳಿಸುತ್ತಿಲ್ಲ ಅಥವಾ ಕೇಳಿಸದಂತೆ ನಟನೆ ಮಾಡುತ್ತಿದೆ.

ಸರ್ಕಾರ ತಾನು ರೈತರಿಗೆ ಒಳಿತು ಮಾಡುತ್ತಿದ್ದೇನೆ ಎಂದು ಹೇಳುತ್ತಲೇ ಕೃಷಿ ವಲಯದಲ್ಲೂ ಬೃಹತ್‌ ಬಂಡವಾಳಶಾಹಿಗಳನ್ನು ಇಳಿಸಲು ಹೊರಟಿದೆ. ಆರ್ಥಿಕತೆ ಮೇಲೆತ್ತುತ್ತೇವೆ ಎಂಬ ಹೆಸರಿನಲ್ಲಿ ಸುಮಾರು 200 ವರ್ಷಗಳ ಕಾಲ ಸಂಘರ್ಷ, ಹೋರಾಟ, ತ್ಯಾಗ ಮತ್ತು ಬಲಿದಾನಗಳಿಂದ ಪಡೆದ ಕಾರ್ಮಿಕರ ಹಕ್ಕುಗಳನ್ನು, ಕಾನೂನುಗಳನ್ನೇ ಸರ್ಕಾರ ಇಲ್ಲವಾಗಿಸಲು ಹೊರಟಿದೆ ಎಂಬುದು ರೈತ-ಕಾರ್ಮಿಕ ಸಂಘಟನೆಗಳ ಆರೋಪ.

ಈ ದೇಶದ ಸಂಪತ್ತನ್ನು ಸೃಷ್ಟಿಸುವ ಮೂಲಕ ಸುಭದ್ರ ದೇಶವನ್ನು ಕಟ್ಟುವ ರೈತ ಹಾಗೂ ಕಾರ್ಮಿಕರನ್ನು ಬಂಡವಾಳಶಾಹಿಗಳ ಗುಲಾಮರನ್ನಾಗಿಸಲು ಸರ್ಕಾರ ಹೊರಟಿದೆ. ಕೃಷಿ ನೀತಿಗಳ ಹೆಸರಿನಲ್ಲಿ ಕೃಷಿಯನ್ನು, ಆಹಾರ ಉತ್ಪನ್ನಗಳನ್ನು, ಅವುಗಳ ಮಾರುಕಟ್ಟೆಗಳನ್ನು ಬೃಹತ್ ಬಂಡವಾಳ ಶಾಹಿಗಳಿಗೆ ಪರಭಾರೆ ಮಾಡುತ್ತಲೆ, ಕಾರ್ಮಿಕರನ್ನು ಶೋಷಣೆ ಮಾಡುವ ಶತಮಾನಗಳಷ್ಟು ಹಿಂದೆ ಇದ್ದ ಕಾನೂನಗಳಿಗೆ ಮತ್ತೇ ಜಾರಿಗೆ ತರುತ್ತಿದೆ ಎಂದು ಹಲವು ಸಂಘಟನೆಗಳು ಹೋರಾಟಕ್ಕಿಳಿದಿವೆ.

ಈ ಹಿನ್ನಲೆಯಲ್ಲಿ ನವೆಂಬರ್‌ 26-27 ರಂದು ’ದೆಹಲಿ ಚಲೋ’ ನಡೆಯಲಿದೆ. ಎಐಕೆಎಸ್‌ಸಿಸಿ ನೇತೃತ್ವದಲ್ಲಿ 500 ಕ್ಕೂ ಹೆಚ್ಚಿನ ಪ್ರಮುಖ ರೈತ ಸಂಘಟನೆಗಳು ಇದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ ಕಾರ್ಮಿಕ ಕಾನೂನಿನ ತಿದ್ದುಪಡಿ ವಿರೋಧಿಸಿ ಕಾರ್ಮಿಕ ಸಂಘಟನೆಗಳು ನೆವೆಂಬರ್‌ 26(ನಾಳೆ) ರಂದು ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದೆ. ವಿದ್ಯಾರ್ಥಿ ಸಂಘಟನೆಗಳು ’ಹೊಸ ಶಿಕ್ಷಣ ನೀತಿ’ಯ ವಿರುದ್ದ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದೆ.

ಈಗಾಗಲೇ ಕರ್ನಾಟಕದಿಂದ ಒಂದು ತಂಡ ದೆಹಲಿಗೆ ಹೊರಟಿದೆ. ಅಲ್ಲದೇ ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಮುಷ್ಕರಗಳು ನಡೆಯಲಿದೆ. ಹರಿಯಾಣದ ರೈತ ಸಂಘಟನೆಗಳು ತೀವ್ರ ಪ್ರತಿಭಟನೆಗೆ ಸಿದ್ದತೆ ನಡೆಸಿದ ಬೆನ್ನಲ್ಲೆ ಸುಮಾರು 24 ರೈತ ಮುಖಂಡರನ್ನು ಬಂಧಿಸಲಾಗಿದೆ. ಪಂಜಾಬ್‌ನ ಹಲವು ಸಂಘಟನೆಗಳು ಈಗಾಗಲೇ ದೆಹಲಿಯಲ್ಲಿ ಹಲವು ಲಂಗರ್‌ಗಳನ್ನು ಸ್ಥಾಪಿಸಿದ್ದು ಆತಿಥ್ಯ ವಹಿಸಲು ಸಜ್ಜಾಗಿವೆ.


ಇದನ್ನೂ ಓದಿ: ದೆಹಲಿ ಚಲೋಗೆ ಮುನ್ನ ಡಜನ್‌ಗಟ್ಟಲೇ ರೈತ ಮುಖಂಡರ ಬಂಧನ: ಯೋಗೇಂದ್ರ ಯಾದವ್ ಆರೋಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...