Homeಮುಖಪುಟ43 ಅಪ್ಲಿಕೇಶನ್‌ಗಳ ಬ್ಯಾನ್: ಇದು WTO ನಿಯಮಗಳ ಉಲ್ಲಂಘನೆ ಎಂದ ಚೀನಾ

43 ಅಪ್ಲಿಕೇಶನ್‌ಗಳ ಬ್ಯಾನ್: ಇದು WTO ನಿಯಮಗಳ ಉಲ್ಲಂಘನೆ ಎಂದ ಚೀನಾ

"ಚೀನಾ ಒಡೆತನದ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ಸಲುವಾಗಿ ಭಾರತವು ರಾಷ್ಟ್ರೀಯ ಭದ್ರತೆಯ ನೆಪವೊಡ್ಡುವುದನ್ನು ನಾವು ಖಂಡಿಸುತ್ತೇವೆ" ಎಂದು ಚೀನಾ ರಾಯಭಾರ ಕಛೇರಿಯ ವಕ್ತಾರ ಜಿ ರೊಂಗ್ ಹೇಳಿದ್ದಾರೆ

- Advertisement -
- Advertisement -

ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆಯುಂಟಾಗುತ್ತದೆ ಎಂಬ ಕಾರಣಕ್ಕೆ ಚೀನಾ ಒಡೆತನದ ಕೆಲವು ಮೊಬೈಲ್ ಅಪ್ಲಿಕೇಶನ್‌ಗಳೂ ಸೇರಿದಂತೆ ಸುಮಾರು 43 ಅಪ್ಲಿಕೇಶನ್‌ಗಳನ್ನು ನಿನ್ನೆ ಕೇಂದ್ರ ಸರ್ಕಾರ ನಿಷೇಧಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಚೀನಾ, “ಭಾರತದ ಈ ಕ್ರಮವು ವಿಶ್ವ ವ್ಯಾಪಾರ ಸಂಸ್ಥೆಯ (WTO) ನಿಯಮಗಳನ್ನು ಉಲ್ಲಂಘಿಸಿದೆ” ಎಂದು ಆರೋಪಿಸಿದೆ.

ಚೀನಾ-ಭಾರತದ ವಾಸ್ತವಿಕ ಗಡಿ ರೇಖೆಯಿರುವ ಲಡಾಖ್ ಬಳಿ ನಡೆದ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು. ಇದರಿಂದ ಎರಡೂ ದೇಶಗಳಿಗೂ ಸಾಕಷ್ಟು ನಷ್ಟವಾಗಿತ್ತು. ಇದಾದ ನಂತರ ಭಾರತ ಚೀನಾ ಒಡೆತನದ ಅಪ್ಲಿಕೇಶನ್‌ಗಳನ್ನು ನಿಷೇಧಿಸುತ್ತಿರುವುದು ಇದು 4 ನೇ ಬಾರಿ. ಇದುವರೆಗೂ ಒಟ್ಟು 267 ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ.

“ಚೀನಾ ಒಡೆತನದ ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸುವ ಸಲುವಾಗಿ ಭಾರತವು ರಾಷ್ಟ್ರೀಯ ಭದ್ರತೆಯ ನೆಪವೊಡ್ಡುವುದನ್ನು ನಾವು ಖಂಡಿಸುತ್ತೇವೆ” ಎಂದು ಚೀನಾ ರಾಯಭಾರ ಕಛೇರಿಯ ವಕ್ತಾರ ಜಿ ರೊಂಗ್ ಹೇಳಿದ್ದಾರೆ.

ಇದನ್ನೂ ಓದಿ: ನೀತಿ ಉಲ್ಲಂಘನೆ: ಗೂಗಲ್ ಪ್ಲೇ ಸ್ಟೋರ್‌ನಿಂದ Paytm ಹೊರಕ್ಕೆ

ಭಾರತದ ಈ ಕ್ರಮ WTO ನಿಯಮಗಳಿಗೆ ವಿರುದ್ಧವಾಗಿರುವುದರಿಂದ ಈ ಆದೇಶವನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

“ಚೀನಾ ಸೇರಿದಂತೆ ವಿವಿಧ ದೇಶಗಳ ಮಾರುಕಟ್ಟೆ ಭಾಗಿದಾರರಿಗೆ ನ್ಯಾಯಯುತ, ನಿಸ್ಪಕ್ಷಪಾತ ಮತ್ತು ತಾರತಮ್ಯರಹಿತವಾದ ವ್ಯಾಪಾರ ವಾತಾವರಣವನ್ನು ಭಾರತವು ಒದಗಿಸಿಕೊಡುತ್ತದೆ ಮತ್ತು WTO ನಿಯಮಗಳನ್ನು ಉಲ್ಲಂಘಿಸುವ ಕ್ರಮಗಳನ್ನು ಸರಿಪಡಿಸಿಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸ್ವದೇಶಿ ಆಪ್‌ಗಳನ್ನು ತಯಾರಿಸಲು ಐಟಿ ಮಂದಿ ಸವಾಲು ಸ್ವೀಕರಿಸಿ: ಮೋದಿ

“ಎರಡೂ ಕಡೆಯವರು ಪರಸ್ಪರ ಲಾಭಕ್ಕಾಗಿ ದ್ವಿಪಕ್ಷೀಯ ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳನ್ನು ಸರಿಯಾದ ಹಾದಿಗೆ ತರಬೇಕು. ಸಂವಾದ ಮತ್ತು ಸಮಾಲೋಚನೆಯ ಆಧಾರದ ಮೇಲೆ ಫಲಿತಾಂಶಗಳನ್ನು ಪಡೆಯಬೇಕು” ಎಂದು ಅವರು ಹೇಳಿದರು.

ಭಾರತವು ಆರಂಭದಲ್ಲಿ 59 ಚೀನಾ ಮೂಲದ ಅಪ್ಲಿಕೇಶನ್‌ಗಳನ್ನು ಜೂನ್ 29 ರಂದು ನಿಷೇಧಿಸಿತ್ತು. ನಂತರ ಜುಲೈ 28 ರಂದು 47, ​​ಸೆಪ್ಟೆಂಬರ್ 2 ರಂದು 118 ಮತ್ತು ನವೆಂಬರ್ 24 ರಂದು 43 ಅಪ್ಲಿಕೇಶನ್‌ಗಳನ್ನು ನಿಷೇಧಿಸಿತು. ಮಂಗಳವಾರ ನಿಷೇಧಿಸಲಾದ ಅಪ್ಲಿಕೇಶನ್‌ಗಳಲ್ಲಿ ಚೀನಾದ ಅತಿದೊಡ್ಡ ಇ-ಕಾಮರ್ಸ್ ಅಲಿಬಾಬಾದ ಅಲಿ ಎಕ್ಸ್‌ಪ್ರೆಸ್ ಅಪ್ಲಿಕೇಶನ್ ಕೂಡಾ ಒಂದು.


ಇದನ್ನೂ ಓದಿ: Fact check: ಕೇಂದ್ರ ಸರ್ಕಾರ ನಮ್ಮ ಮೊಬೈಲ್‌ಗಳನ್ನು ಮೇಲ್ವಿಚಾರಣೆ ಮಾಡುತ್ತಿದೆಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...