ದೆಹಲಿಯಲ್ಲಿ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗಳು ಒಂದೆಡೆಯಾದರೆ, ಮತ್ತೊಂದೆಡೆ ಬಿಜೆಪಿ ಮತ್ತು ಆಪ್ ನಾಯಕರ ಧರಣಿ ಸಮರ ಮುಂದುವರೆದಿದೆ. ಉತ್ತರ ಮುನ್ಸಿಪಲ್ ಕಾರ್ಪೊರೇಷನ್ ಆಫ್ ದೆಹಲಿಯಲ್ಲಿ (MCD) 2,400 ಕೋಟಿ ರೂ.ಗಿಂತ ಅಧಿಕ ಹಣವನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಧರಣಿ ನಡೆಸುವುದಾಗಿ ಆಮ್ ಆದ್ಮಿ ಪಕ್ಷ ಪ್ರಕಟಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರ ಮನೆಗಳ ಮುಂದೆ ಧರಣಿ ನಡೆಸಲಾಗುವುದು ಎಂದು ಆಪ್ ಮುಖಂಡರು ತಿಳಿಸಿದ್ದಾರೆ.
ಪ್ರತಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಆಪ್ ನಾಯಕಿ ಅತೀಶಿ, “ಉತ್ತರ ಎಂಸಿಡಿಯು, ದಕ್ಷಿಣ ಎಂಸಿಡಿಯ 2,500 ಕೋಟಿ ರೂ. ಬಾಡಿಗೆ ಹಣವನ್ನು ಮನ್ನಾ ಮಾಡಿದೆ, ಇದರಿಂದಾಗಿ ಸಾರ್ವಜನಿಕ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ಈ ಭ್ರಷ್ಟಾಚಾರಕ್ಕೆ ಯಾರು ಕಾರಣ..?’ ಎಂದು ಪ್ರಶ್ನಿಸಿದ್ದಾರೆ.
“ಪಾಲಿಕೆಯಲ್ಲಿ 2,500 ಕೋಟಿ ರೂಪಾಯಿ ಹಣ ದುರುಪಯೋಗವಾಗಿದೆ. ಕೇಂದ್ರ ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ನಾಳೆ ಬೆಳಗ್ಗೆ 11 ಗಂಟೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಲೆಫ್ಟಿನೆಂಟ್ ಗವರ್ನರ್ ಅವರ ಮನೆ ಮುಂದೆ ಧರಣಿ ನಡೆಸಲಾಗುವುದರ. ಸಿಬಿಐ ವಿಚಾರಣೆಗೆ ಅವರು ಒಪ್ಪಿಗೆ ನೀಡುವವರೆಗೂ ನಾವು ಅಲ್ಲಿಯೇ ಕುಳಿತುಕೊಳ್ಳುತ್ತೇವೆ” ಎಂದು ಎಎಪಿ ಶಾಸಕಿ ಅತೀಶಿ ಹೇಳಿದ್ದಾರೆ.
ಇದನ್ನೂ ಓದಿ: ದೆಹಲಿ ಡಿಸಿಎಂ ಸಿಸೋಡಿಯಾ ಮನೆ ಮೇಲೆ ಬಿಜೆಪಿ ಗೂಂಡಾಗಳಿಂದ ಹಲ್ಲೆ: ಆಪ್ ಆರೋಪ
माननीय मंत्री @SatyendarJain जी ने सचिव स्तर की जाँच के आदेश दिए हैं। आम आदमी पार्टी इस घोटाले की CBI जाँच की मांग करती है।
AAP के सभी विधायक और पार्षद LG साहब और अमित शाह के घर के बाहर तब तक धरना देंगे जब तक सीबीआई की जाँच के आदेश नहीं हो जाते।- राष्ट्रीय प्रवक्ता @AtishiAAP pic.twitter.com/FMloz2Od30
— AAP (@AamAadmiParty) December 12, 2020
ಉತ್ತರ ಎಂಸಿಡಿ 2,400 ಕೋಟಿ ರೂ.ಗಳಿಗಿಂತ ಹೆಚ್ಚಿನ ಹಣವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಎಎಪಿ ಆರೋಪಿಸಿದೆ. ಈ ಕುರಿತು ದೆಹಲಿ ಸರ್ಕಾರ ಈಗಾಗಲೇ ತನಿಖೆ ಆರಂಭಿಸಿದೆ ಎಂದು ತಿಳಿಸಿದ್ದಾರೆ.
ದೆಹಲಿಯ ಎಲ್ಲಾ ಮೂರು ಮಹಾನಗರ ಪಾಲಿಕೆಗಳನ್ನು (ಎಂಸಿಡಿ) ಆಳುವ ಬಿಜೆಪಿ ಪಕ್ಷ ಆಡಳಿತರೂಢ ಆಪ್ ಆರೋಪಗಳನ್ನು ಅಲ್ಲಗೆಳೆದಿದ್ದು, ರಾಜಕೀಯ ಎಂದಿದೆ.
ಇತ್ತ ಮೂರು ಮಹಾನಗರ ಪಾಲಿಕೆಗಳ ಮೇಯರ್‌ಗಳು ಸರ್ಕಾರದಿಂದ ತಮಗೆ ಬರಬೇಕಾದ ಹಣವನ್ನು ನೀಡಬೇಕು ಎಂದು ಆಗ್ರಹಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ.
ಎಲ್ಲಾ ಮೂರು ಮಹಾನಗರ ಪಾಲಿಕೆಗಳು ತಮ್ಮ ಸಿಬ್ಬಂದಿಗೆ ನಿಯಮಿತವಾಗಿ ಸಂಬಳ ನೀಡಲು ಸಾಧ್ಯವಾಗದ ಕಾರಣ ಆರ್ಥಿಕ ಕುಸಿತವನ್ನು ಎದುರಿಸುತ್ತಿವೆ. ಇದು ಪುರಸಭೆ, ಎಂಜಿನಿಯರ್‌ಗಳು, ವೈದ್ಯರು ಮತ್ತು ಇತರ ಸಿಬ್ಬಂದಿಗಳ ಪ್ರತಿಭಟನೆಗೆ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ಆಪ್ ಸರ್ಕಾರ ಎಂಸಿಡಿ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಆಗ್ರಹಿಸಿ, ಧರಣಿ ನಡೆಸಲು ನಿರ್ಧರಿಸಿದೆ.


