2022 ರಲ್ಲಿ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಭಾಗವಹಿಸುತ್ತೇವೆ ಎಂದು ಆಮ್ ಆದ್ಮಿ ಪಕ್ಷದ (AAP) ಮುಖಂಡ ಮತ್ತು ದೆಹಲಿ ಮುಖ್ಯಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಹೇಳಿದ್ದಾರೆ.
ಗೋವಾದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ AAP ಒಂದು ಸ್ಥಾನ ಗೆಲ್ಲುವ ಮೂಲಕ ಖಾತೆ ತೆರೆದಿತ್ತು. ಇದು ಕೇವಲ ಪ್ರಾರಂಭ ಮಾತ್ರ ಎಂದು ಕೇಜ್ರಿವಾಲ್ ಹೆಳಿದ್ದರು.
ಇದನ್ನೂ ಓದಿ: ಕೊರೆಯುವ ಚಳಿಯಲ್ಲಿ ರೈತ ಹೋರಾಟಗಾರರು; ಕರುಣೆ ಇಲ್ಲದ ಸರ್ಕಾರ!
ಈ ಗೆಲುವಿನಿಂದ ಉತ್ತೇಜಿತರಾದ ಕೇಜ್ರಿವಾಲ್, “ದೇಶದ ಅತಿದೊಡ್ಡ ರಾಜ್ಯದಲ್ಲಿ ಆರೋಗ್ಯ ಮತ್ತು ಶಿಕ್ಷಣ ಮೂಲಸೌಕರ್ಯಗಳ ಕಳಪೆ ಸ್ಥಿತಿಯಿಂದಾಗಿ ಉತ್ತರ ಪ್ರದೆಶದ ಜನರು ದೆಹಲಿ ಮಾದರಿ ಆಡಳಿತವನ್ನು ಬಯಸುತ್ತಿದ್ದಾರೆ. ದೇಶದಲ್ಲೇ ಅತೀದೊಡ್ಡ ರಾಜ್ಯವಾಗಿರುವ ಉತ್ತರಪ್ರದೇಶವು ಉತ್ತಮ ಅಭಿವೃದ್ಧಿ ಹೊಂದಿರುವ ರಾಜ್ಯವಾಗಿ ಮಾರ್ಪಾಡುಗೊಳ್ಳಲು ಸಾಧ್ಯವಿಲ್ಲವೇ?” ಎಂದು ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಉಪಸಭಾಪತಿಯನ್ನು ಎಳೆದಾಡಿದ ಕಾಂಗ್ರೆಸ್-ಬಿಜೆಪಿ ಸದಸ್ಯರು: ವಿಧಾನ ಪರಿಷತ್‌ನಲ್ಲಿ ಭಾರಿ ಗದ್ದಲ
“ಎಂಟು ವರ್ಷಗಳ ಅವಧಿಯಲ್ಲಿ ಒಟ್ಟು ಮೂರು ಬಾರಿ ನಮ್ಮ ಪಕ್ಷ ದೆಹಲಿಯಲ್ಲಿ ಅಧಿಕಾರಕ್ಕೇರಿದೆ. ಪಂಜಾಬ್ ನಲ್ಲಿ AAP ಪ್ರಬಲ ವಿರೋಧ ಪಕ್ಷವಾಗಿ ಮೂಡಿ ಬಂದಿದೆ. ಮುಂದೆ ಉತ್ತರಪ್ರದೇಶದಲ್ಲಿ 2022ರಲ್ಲಿ ನಡೆಯಲಿರುವ ಚುನಾವಣೆಯಲ್ಲಿಯೂ ನಾವು ಸ್ಪರ್ಧಿಸಲಿದ್ದೇವೆ. ಸದ್ಯ ದೆಹಲಿಯಲ್ಲಿರುವಂತೆಯೇ ಉತ್ತಮ ಮತ್ತು ಭ್ರಷ್ಟಾಚಾರ ರಹಿತ ಆಡಳಿತವನ್ನು ನಮ್ಮ ನೆರೆಯ ರಾಜ್ಯದಲ್ಲೂ ಸ್ಥಾಪಿಸುವ ಉದ್ದೇಶವನ್ನು ಹೊಂದಿದ್ದೇವೆ” ಎಂದು ಅವರು ತಿಳಿಸಿದರು.
ಇದನ್ನೂ ಓದಿ: ತುಮಕೂರು: ವಕೀಲರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ -ಸಬ್‌ಇನ್ಸ್‌ಪೆಕ್ಟರ್ ವಿರುದ್ದ ಕ್ರಮಕ್ಕೆ ವಕೀಲರ ಆಗ್ರಹ


